ಚಡಚಣ: ನೆಹರು ಯುವಕ ಕೇಂದ್ರ, ಎಂಇಎಸ್ ಶಿಕ್ಷಣ ಸಂಸ್ಥೆ ಮತ್ತು ಸಂಗೋಳ್ಳಿ ರಾಯಣ್ಣ ಬಿಗ್ರೇಡ್ ನಿವರಗಿ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ಹಮ್ಮಿಕೊಳಲಾಯಿತು.
ಇದೇ ಸಂಧರ್ಭದಲ್ಲಿ ಮುಖ್ಯ ಗುರುಮಾತೆ ಗಚ್ಚಿನಕಟ್ಟಿ ಮಾತನಾಡಿ, ಮಕ್ಕಳು ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು, ಕ್ರೀಡೆಯಿಂದ ಮಕ್ಕಳ ಮನಸ್ಸು ಪರಿಶುದ್ಧವಾಗುವುದು ಎಂದರು.
ಐಟಿಐ ಕಾಲೇಜಿನ ಪ್ರಾಚಾರ್ಯ ಹಿರೇಮಠ ಮಾತನಾಡಿದರು. ಸಂಸ್ಥೆಯ ಜನ ಸಂಪರ್ಕಾಧಿಕಾರಿ ಗಚ್ಚಿನಕಟ್ಟಿ ಮಾತನಾಡಿ, ಶಾರೀರಿಕ ಹಾಗೂ ಮಾನಸಿಕವಾಗಿ ಸದೃಢವಾಗಲು ಕ್ರೀಡೆ ಅತೀ ಮುಖ್ಯ ಎಂದರು.
ಮಾಳಿ ಸರ್, ಶಿಕ್ಷಕಿಯರಾದ ವೈಶಾಲಿ ಪಾಟೀಲ, ಎಮ್ ಎಸ್ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.
ಶಿಕ್ಷಕರಾದ ಮಾನೆ ನಿರೂಪಣೆ ಮಾಡಿದರು. ನೆಹರು ಯುವಕ ಕೇಂದ್ರದ ಸ್ವಯಂ ಸೇವಕ ಬೀರಪ್ಪ ಕಲಕುಟಗಿ ಕ್ರಾರ್ಯಕ್ರಮ ನಡೆಸಿಕೊಟ್ಟರು.
Subscribe to Updates
Get the latest creative news from FooBar about art, design and business.
Related Posts
Add A Comment

