ಕೆಂಭಾವಿ: ನಮ್ಮ ಸಂವಿಧಾನ ಜಗತ್ತಿನ ಶ್ರೇಷ್ಠ ಸಂವಿಧಾನವಾಗಿದೆ ಎಂದು ಮುಖ್ಯ ಗುರು ಮಲ್ಲಿಕಾರ್ಜುನ್ ಪಾಟೀಲ ಹೇಳಿದರು.
ಅವರು ಮುದನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾ ನಿಮಿತ್ಯವಾಗಿ ಪ್ರೌಢ ಶಾಲಾ ಮಕ್ಕಳಿಗೆ ಏರ್ಪಡಿಸಿದ ವಿವಿಧ ಭಾಷಣ, ರಸಪ್ರಶ್ನೆ, ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ನಿಂಗನಗೌಡ ದೇಸಾಯಿ ಮಾತನಾಡುತ್ತಾ” ನಮ್ಮ ಸಂವಿಧಾನ ನಮ್ಮ ಹೆಮ್ಮೆ” ನಮ್ಮ ಸಂವಿಧಾನ ನಮಗೆ ಮೂಲಭೂತ ಹಕ್ಕುಗಳು ನೀಡುವುದರ ಜೊತೆಗೆ, ಕರ್ತವ್ಯಗಳು ಕೂಡ ಕೊಟ್ಟಿದೆ. ಸಂವಿಧಾನದ ಶಿಲ್ಪಿಯಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಸಂವಿಧಾನ ರಚನೆಯಲ್ಲಿ ಅಪಾರವಾಗಿದೆ. ಶ್ರೀಸಾಮಾನ್ಯನು ಕೂಡ ಅಸಾಮಾನ್ಯ ವ್ಯಕ್ತಿಯಾಗಿ ಬೆಳೆಯಲು ನಮ್ಮ ಸಂವಿಧಾನದಲ್ಲಿ ಅವಕಾಶವಿದೆ. ನಮ್ಮ ಸಂವಿಧಾನ ಸರ್ವರಿಗೂ ಸಮಾನತೆ ಸರ್ವರಿಗೂ ಸಹಭಾಗಿತ್ವದಕ್ಕೆ ಅವಕಾಶ ಮಾಡಿಕೊಟ್ಟಿದೆ. ಇಂತಹ ಮಹತ್ವಪೂರ್ಣ ಸಂವಿಧಾನವನ್ನು ಗೌರವಿಸುವುದರ ಜೊತೆಗೆ ಸದುಪಯೋಗ ಮಾಡಿಕೊಂಡು ತಾವು ಮುಂದೆ ಬರುವುದರ ಜೊತೆಗೆ ನಮ್ಮ ದೇಶಕ್ಕೆ ಒಳ್ಳೆಯ ಹೆಸರನ್ನು ತರಬೇಕೆಂದು ಮಕ್ಕಳಿಗೆ ಶಿಕ್ಷಕರು ಸಲಹೆ ನೀಡಿದರು.
ಸಮಾರಂಭದಲ್ಲಿ ಶಿಕ್ಷಕರಾದ ಅಬ್ದುಲ್ ಕಹಿಮ್, ಶರಣಬಸಯ್ಯ ಹಿರೇಮಠ, ನಿರ್ಣಾಯಕರಾಗಿ ಭಾಗವಹಿಸಿದ್ದರು.
ಶಿಕ್ಷಕರಾದ ಈರಣ್ಣ ಪತ್ತಾರ್, ಗುರುಸ್ವಾಮಿ ಶ್ರೀಮತಿ ಭುವನೇಶ್ವರಿ ಅಂಗಡಿ ಉಪಸ್ಥಿತರಿದ್ದರು.
ಈರಣ್ಣ ಪತ್ತಾರ್ ನಿರೂಪಿಸಿದರು. ಶರಣಯ್ಯ ಸ್ವಾಗತಿಸಿ ವಂದಿಸಿದರು. ಹಲವು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು,
Subscribe to Updates
Get the latest creative news from FooBar about art, design and business.
Related Posts
Add A Comment

