Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ಫೆ.26ರಂದು ಸಿಂದಗಿ ಪಟ್ಟಣದ ಎಚ್.ಜಿ ಹೈಸ್ಕೂಲ್ ಮೈದಾನದಲ್ಲಿ ನಡೆಯಬೇಕಾಗಿರುವ 6 ನೇ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ ಕಾರಣಾಂತರಗಳಿಂದ ಫೆ.29ಕ್ಕೆ ಮುಂದೂಡಲಾಗಿದೆ. ಸಾಹಿತ್ಯ ಆಸಕ್ತರು, ಕನ್ನಡ ಅಭಿಮಾನಿಗಳು, ಶಿಕ್ಷಕ ಸಮೂಹ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಹಕರಿಸಬೇಕಾಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಾನಂದ ಬಡಾನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಂದಗಿ: ಫೆ.26ರಂದು ಸಿಂದಗಿ ಪಟ್ಟಣದ ಎಚ್.ಜಿ ಹೈಸ್ಕೂಲ್ ಮೈದಾನದಲ್ಲಿ ನಡೆಯಬೇಕಾಗಿರುವ 6 ನೇ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ ಕಾರಣಾಂತರಗಳಿಂದ ಫೆ.29ಕ್ಕೆ ಮುಂದೂಡಲಾಗಿದೆ. ಸಾಹಿತ್ಯ ಆಸಕ್ತರು, ಕನ್ನಡ ಅಭಿಮಾನಿಗಳು, ಶಿಕ್ಷಕ ಸಮೂಹ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಹಕರಿಸಬೇಕಾಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಾನಂದ ಬಡಾನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುದ್ದೇಬಿಹಾಳ: ರಕ್ತದಾನ ಶ್ರೇಷ್ಠವಾದದ್ದು. ರಕ್ತದಾನದಿಂದ ಒಬ್ಬರ ಜೀವ ಉಳಿಯುವದಾದರೆ ಹಿಂದೂ ಮುಂದು ನೋಡದೇ ರಕ್ತದಾನಕ್ಕೆ ಮುಂದಾಗಬೇಕು ಎಂದು ಉಪನ್ಯಾಸಕ ವಿ.ವಿ.ಪಾಟೀಲ ಹೇಳಿದರು.ಪಟ್ಟಣದ ಜ್ಞನ ಭಾರತಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಏಡ್ಸ್ ಮತ್ತು ರಕ್ತದಾನ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅಪಘಾತ ಸೇರಿದಂತೆ ಹಲವು ಸಂದರ್ಭಗಳಲ್ಲಿ ರಕ್ತದ ಕೊರತೆಯಿಂದಾಗಿ ಅನೇಕರು ಸಾವನ್ನಪ್ಪುತ್ತಿದ್ದಾರೆ. ನಮ್ಮಲ್ಲಿ ಅಧಿಕವಾಗಿರುವ ರಕ್ತವನ್ನು ದಾನ ಮಾಡುವದರಿಂದ ಪ್ರಾಣಗಳನ್ನು ಉಳಿಸಬಹುದು ಎಂದರು.ಪ್ರಾಚಾರ್ಯ ಎ.ಕೆ.ಹುನಗುಂದ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಆರೋಗ್ಯವಂತ ಮನುಷ್ಯ ಪ್ರತೀ ೬ ತಿಂಗಳಿಗೊಮ್ಮೆ ರಕ್ತ ದಾನ ಮಾಡಬಹುದು ಎಂದರು.ಸಂಸ್ಥೆಯ ಆಡಳಿತ ಅಧಿಕಾರಿ ಶಾಂತಾ ಭಟ್, ಶೋಭಾ ನಾಗೂರ, ಆರ್.ಎಸ್.ಮುತಾಲಿಕ್, ಎಸ್ ಹೂಗಾರ್, ವಿ.ಎಸ್.ಚಿತ್ರಗಾರ, ಆರ್.ಕೆ.ಕುಲಕರ್ಣಿ, ಮನೋಜ ಸಜ್ಜನ ಇದ್ದರು. ಸುಮಿತಾ ಪೂಜಾರಿ, ಅನಿಲ್ ಮಂಕಣಿ ಕಾರ್ಯಕ್ರಮ ನಿರ್ವಹಿಸಿದರು.
ಮುದ್ದೇಬಿಹಾಳ: ಜಂತುಹುಳ ಭಾದೆಯಿಂದ ಮಕ್ಕಳು ರೋಗಗ್ರಸ್ಥರಾಗದಂತೆ, ಆಲ್ಬಂಡಝೋಲ್ ಮಾತ್ರೆ ನೀಡುವುದರ ಮೂಲಕ ಜಂತುಹುಳ ನಿವಾರಣೆ ಮಾಡಬಹುದೆಂದು ವೈದ್ಯಾಧಿಕಾರಿ ಡಾ.ಸಂಗಮೇಶ್ ದಶವಂತ್ ಹೇಳಿದರು.ಪಟ್ಟಣದ ಎಂ.ಜಿ.ವಿ.ಸಿ ಮಹಾವಿದ್ಯಾಲಯದಲ್ಲಿ ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.೧ರಿಂದ ೧೯ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತು ಹುಳು ನಿವಾರಣಾ ಮಾತ್ರೆಗಳನ್ನು ವಿತರಣೆ ಮಾಡಲಾಗುತ್ತಿದೆ. ೧ರಿಂದ ೨ ವರ್ಷ ದೊಳಗಿನ ಮಕ್ಕಳು ಅರ್ಧ ಮಾತ್ರೆ ಸೇವನೆ ಮಾಡಬೇಕು. ಅದೇ ರೀತಿ ೨ರಿಂದ ೧೯ ವರ್ಷದೊಳಗಿನ ಮಕ್ಕಳು ಒಂದು ಮಾತ್ರೆ ಸೇವಿಸಬೇಕು. ಇವು ಚೀಪುವ ಮಾತ್ರೆಗಳಾಗಿದ್ದು, ಈ ಮಾತ್ರೆಗಳಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಮಕ್ಕಳು ಮತ್ತು ಪೋಷಕರಲ್ಲಿ ಯಾವುದೇ ಆತಂಕ ಬೇಡ ಎಂದರು.ಕಾಲೇಜಿನ ಉಪನ್ಯಾಸಕ ಎಸ್.ಎಸ್.ಹೂಗಾರ್ ಮಾತನಾಡಿದರು.ಕಾಲೇಜಿನ ಪ್ರಾಚಾರ್ಯ ಐ.ಎಸ್.ತಳವಾರ್, ದೈಹಿಕ ಶಿಕ್ಷಕ ಉಮೇಶ್ ಕೋನರೆಡ್ಡಿ, ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಗೌಡರ, ಎಸ್.ಆರ್.ಸಜ್ಜನ, ಇಸ್ಮಾಯಿಲ್ ವಾಲಿಕಾರ, ಆಶಾ ಕಾರ್ಯಕರ್ತೆ ಶಿವಮ್ಮ ಮೇಟಿ, ಗುರುಬಾಯಿ ತೊಂಡಿಹಾಳ ಸೇರಿದಂತೆ…
ಮುದ್ದೇಬಿಹಾಳ: ಲೋಕಸಭಾ ಚುನಾವಣೆಯ ವಿಜಯಪುರ ಜಿಲ್ಲಾ ಭಾರತೀಯ ಜನತಾ ಪಕ್ಷದ ಟಿಕೆಟ್ ನ್ನು ಬಂಜಾರಾ ಸಮಾಜಕ್ಕೆ ನೀಡಬೇಕು ಎಂದು ಬಂಜಾರಾ ಸಮಾಜದ ಯುವ ಮುಖಂಡರು ಒತ್ತಾಯಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಮುಖರಾದ ರವಿ ಪವಾರ, ಸೋಮು ಲಮಾಣಿ, ಶ್ರೀಕಾಂತ ನಾಯಕ ಮತ್ತೀತರರು ಮಾತನಾಡಿ, ನಮ್ಮ ಸಮಾಜ ಬಾಂಧವರಲ್ಲಿ ಹಲವರು ಟಿಕೆಟ್ ಆಕಾಂಕ್ಷಿಗಳಿದ್ದು, ಅವರಲ್ಲಿ ಡಾ.ಬಾಬು ರಾಜೇಂದ್ರ ನಾಯಕ ಅವರು ಸಮಾಜದ ಬಗ್ಗೆ ಹೆಚ್ಚಿನ ಕಳಕಳಿ ಉಳ್ಳವರಾಗಿದ್ದಾರೆ. ಅಲ್ಲದೇ ಕಳೆದ ೨೫ ವರ್ಷಗಳಿಂದ ಭಾಜಪಾ ದಲ್ಲಿಯೇ ಇದ್ದು ಪಕ್ಷದ ಸರ್ವತೋಮುಖ ಬೆಳವಣಿಗೆಯಲ್ಲಿ, ಮತಾಂತರಗೊಂಡ ಅದೆಷ್ಟೋ ಹಿಂದೂಗಳನ್ನು ಘರವಾಪಸಿ ಮಾಡಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಇವರಿಗೇ ಟಿಕೆಟ್ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದರು. ಈ ವೇಳೆ ಸಂತೋಷ ದಾಸರ, ಭೀಮುಲು ನಾಯಕ ಸೇರಿದಂತೆ ಮತ್ತೀತರರು ಇದ್ದರು.
ವಿಜಯಪುರ: ದೇಶದಾದ್ಯಂತ ಸಕಲ ಸೌಲಭ್ಯಗಳೊಂದಿಗೆ ನವೀಕೃತಗೊಂಡಿರುವ ೫೫೪ ರೈಲ್ವೇ ನಿಲ್ದಾಣ ಹಾಗೂ ೧೫೦೦ ರೈಲ್ವೇ ಮೇಲ್ಸೆತುವೆ, ಕೆಳಸೇತುವೆಗಳ ಲೋಕಾರ್ಪಣೆ ಇದೇ ದಿ. ೨೬ ರಂದು ಬೆಳಿಗ್ಗೆ ೧೧ ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.ಈ ರೈಲ್ವೇ ನಿಲ್ದಾಣಗಳಲ್ಲಿ ವಿಜಯಪುರ ರೈಲ್ವೆ ನಿಲ್ದಾಣ ಸಹ ಲೋಕಾರ್ಪಣೆಯಾಗಲಿದ್ದು, ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ವಿಜಯಪುರ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ವಿಜಯಪುರ ರೈಲ್ವೇ ನಿಲ್ದಾಣಕ್ಕೆ ಆಗಮಿಸಿ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಕೋರಿದ್ದಾರೆ.
ಚಿಮ್ಮಡ: ಗ್ರಾಮದ ಆರಾಧ್ಯ ದೈವ ಶ್ರೀ ಪ್ರಭುಲಿಂಗೇಶ್ವರ ಸೇವಾ ಸಮೀತಿಯ ನೂತನ ಕಾರ್ಯಾಲಯ ಮತ್ತು ಸಮುದಾಯ ಭವನವನ್ನು ಊರಿಗೆ ಊಟ ಹಾಕುವ ಮೂಲಕ ಗುರುವಾರದಂದು ಲೋಕಾರ್ಪಣೆ ಗೊಳಿಸಲಾಯಿತು.ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿಗಳಲ್ಲಿ ನಿರ್ಮಾಣವಾಗಿರುವ ಈ ಕಟ್ಟಡದ ಉದ್ಘಾಟನೆಯನ್ನು ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು ನೆರವೇರಿಸಿದರು.ಸಾನಿಧ್ಯವನ್ನು ಸ್ಥಳಿಯ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು, ಬೂದಿಹಾಳ ಫಕೀರೇಶ್ವರ ಮಠದ ಪ್ರಭು ಮಹಾಸ್ವಾಮಿಗಳು ಹಾಗೂ ರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಜನಾರ್ಧನ ಮಹಾರಾಜರು ವಹಿಸಿದ್ದರು.ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಅಣ್ಣಪ್ಪಗೌಡ ಪಾಟೀಲ, ಬಾಳಪ್ಪಾ ಹಳಿಂಗಳಿ, ಪುಂಡಲಿಕಪ್ಪಾ ಪೂಜಾರಿ, ರಾಮಣ್ಣ ಬಗನಾಳ, ಬಿ.ಎಸ್. ಪಾಟೀಲ, ರಾಚಯ್ಯ ಮಠಪತಿ, ದುಂಡಪ್ಪಾ ಪಾಟೀಲ, ಅಶೋಕ ಧಡೂತಿ, ಪಿಕೆಪಿಎಸ್ ಅಧ್ಯಕ್ಷ ಶಂಕರ ಬಟಕುರ್ಕಿ, ಪರಪ್ಪ ಪಾಲಭಾವಿ, ಬೀರಪ್ಪಾ ಹಳೆಮನಿ, ಉಮೇಶ ಪೂಜಾರಿ, ಪ್ರಭು ಮುಧೋಳ, ಈಶ್ವರ ಬಡಿಗೇರ ಬಸವರಾಜ ಕುಂಚನೂರ ಸೇರಿದಂತೆ ಹಲವಾರು ಜನ ಪ್ರಮುಖರು ಆಗಮಿಸಿದ್ದರು.ಸದರೀ ಕಟ್ಟಡಕ್ಕೆ ಭೂಮಿಯನ್ನು ಬೆಳಗಾವಿಯಲ್ಲಿ ವಾಸ್ತವ್ಯವಿರುವ ಮುರುಗೇಶ ರುದ್ರಪ್ಪಾ ಡಪಳಾಪೂರ…
ಸಿಂದಗಿ: ಕೂಸಿನ ಮನೆಗಳು ಮಕ್ಕಳ ಆಕರ್ಷಣೆಯ ಕೇಂದ್ರಗಳಾಗಬೇಕು ಎಂದು ವಿಜಯಪುರ ಜಿಲ್ಲಾ ಪಂಚಾಯತ್ ಸಿಇಓ ರಿಷಿ ಆನಂದ ಹೇಳಿದರು.ತಾಲೂಕಿನ ಕೊಕಟನೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಸಿನ ಮನೆಗೆ ಭೆತಿ ನೀಡಿದ ಅವರು, ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಕೂಸಿನ ಮನೆ (ಶಿಶು ಪಾಲನ ಕೇಂದ್ರ)ಕ್ಕೆ ಭೇಟಿ, ಮಕ್ಕಳ ಕಲಿಕಾ ಗುಣಮಟ್ಟ ಪರಿಶೀಲನೆ, ಆರೈಕೆದಾರರಿಗೆ ಮಕ್ಕಳ ಊಟದ ಪದ್ಧತಿ ಮತ್ತು ಸಮಯ, ಲಾಲನೆ ಪಾಲನೆ, ಮಕ್ಕಳ ದಾಖಲಾತಿ, ಹಾಜರಾತಿ ಸಂಖ್ಯೆ ಸೇರಿದಂತೆ ಇನ್ನಿತರ ಕಾರ್ಯಗಳನ್ನು ಪರಿಶೀಲಿಸಿದರು.ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗ ರಾಮು ಅಗ್ನಿ, ನರೇಗಾ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಜಿ.ವಾಯ್.ಮುರಾಳ, ಸಿಡಿಪಿಒ ಶಂಭುಲಿಂಗ ಹಿರೇಮಠ, ವಸಂತ ಅಮೀನಗಡ ಸೇರಿದಂತೆ ಕೊಕಟನೂರ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸಿಬ್ಬಂದಿಗಳು ಇದ್ದರು.
ಜ್ಞಾನ ಭಾರತಿ ಶಾಲೆಯ ೩೦ನೆಯ ವಾರ್ಷಿಕೋತ್ಸವದಲ್ಲಿ ಶಾಸಕ ಅಶೋಕ ಮನಗೂಳಿ ಭರವಸೆ ಸಿಂದಗಿ: ಜ್ಞಾನ ಭಾರತಿ ಸಂಸ್ಥೆಯ ಕಟ್ಟಡಕ್ಕೆ ಸರಕಾರದಿಂದ ೨೫ಲಕ್ಷ ರೂ. ಅನುದಾನ ಮಂಜೂರು ಮಾಡಿಸಿ ಕೊಡುವೆ ಎಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.ಪಟ್ಟಣದ ಜ್ಞಾನ ಭಾರತಿ ಶಾಲಾ ಆವರಣದಲ್ಲಿ ಹಮ್ಮಿಕೊಂಡ ಲಿಂ.ಮಡಿವಾಳಯ್ಯ ಹಿರೇಮಠ ಮೂರ್ತಿ ಅನಾವರಣ, ಜ್ಞಾನ ಭಾರತಿ ಶಾಲೆಯ ೩೦ನೆಯ ವಾರ್ಷಿಕೋತ್ಸವ ಹಾಗೂ ಪದವಿ ಪೂರ್ವ ಕಾಲೇಜಿನ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸಿಂದಗಿ ಶಿಕ್ಷಣ ಕಾಶಿ ಎಂದು ಪ್ರಖ್ಯಾತಿ ಪಡೆದಿದೆ. ನಮ್ಮ ತಂದೆಯವರಾದ ದಿ.ಎಂ.ಸಿ.ಮನಗೂಳಿ ಅವರ ಕಾಲದಲ್ಲಿ ಮಂಜೂರಾದ ತೋಟಗಾರಿಕಾ ಕಾಲೇಜು ನೆನೆಗುದಿಗೆ ಬಿದ್ದಿತ್ತು. ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಸಿಎಂ ಸಿದ್ದರಾಮಯ್ಯನವರು ಪುನಃ ಮಂಜೂರು ಮಾಡಿದ್ದಾರೆ ಎಂದರು.ಈ ವೇಳೆ ಮೂರ್ತಿ ಅನಾವರಣಗೊಳಿಸಿದ ಮಾಜಿ ವಿಪ ಸದಸ್ಯ ಅರುಣ ಶಹಾಪುರ ಮಾತನಾಡಿದರು.ಇದೇ ಸಂದರ್ಭದಲ್ಲಿ ರಾಮನಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಬಿ.ಪಿ.ಕರ್ಜಗಿ, ಅಶೋಕ ವಾರದ, ಅಶೋಕ ಅಲ್ಲಾಪೂರ ಮಾತನಾಡಿದರು.ಕಾರ್ಯಕ್ರಮದಲ್ಲಿ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಸೊನ್ನ ದಾಸೋಹ ಮಠದ…
ದೇವರಹಿಪ್ಪರಗಿ: ಚನ್ನಬಸವಣ್ಣನವರು ಸಾಮಾಜಿಕ ಬದಲಾವಣೆಯ ಹರಿಕಾರರಾಗಿ “ಚಿನ್ಮಯಜ್ಞಾನಿ’ ಎನಿಸಿದ್ದಾರೆ ಎಂದು ಶರಣಸಂಗಮ ಸೇವಾ ಸಮೀತಿ ತಾಲ್ಲೂಕು ಅಧ್ಯಕ್ಷ ಸಂಗಪ್ಪ ತಡವಲ್ ಹೇಳಿದರು.ಪಟ್ಟಣದ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಶನಿವಾರ ಚನ್ನಬಸವಣ್ಣನವರ ೮೫೨ನೇ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಅನುಭವ ಮಂಟಪದ ಎರಡನೆಯ ಶೂನ್ಯ ಪೀಠಾಧೀಶರಾಗಿದ್ದ ಚನ್ನಬಸವಣ್ಣ ಪ್ರತಿಯೊಂದು ವಚನಗಳಿಗೆ ಅಂತಿಮವಾಗಿ ಒಪ್ಪಿಗೆಯನ್ನು ಕೊಡುವ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಅಂತೆಯೇ ತಮ್ಮ ೨೧ನೇ ವರ್ಷದಲ್ಲಿ ಖಡ್ಗ ಹಿಡಿದು ಕನ್ನಡ ಶರಣರ ವಚನ ಸಾಹಿತ್ಯವನ್ನು ರಕ್ಷಣೆ ಮಾಡುವುದರ ಮೂಲಕ ಷಟಸ್ಥಲಜ್ಞಾನಿ ಎನಿಸಿದ್ದರು. ಇವರ ಜೀವಿತ ಕಾಲಾವಧಿ ತೀರಾ ಕಡಿಮೆ. ಬದುಕಿದ್ದು ಕೇವಲ ಇಪ್ಪತ್ತನಾಲ್ಕು ವರ್ಷಗಳು ಮಾತ್ರ. ಕೊನೆಗೆ ಉಳವಿಯಲ್ಲಿಯೇ ಲಿಂಗೈಕ್ಯರಾದರು ಎಂದು ೧೨ನೇ ಶತಮಾನದ ಅಸಂಖ್ಯಾತ ಶರಣರಲ್ಲಿ ಪ್ರಮುಖರಾದ ಚನ್ನಬಸವಣ್ಣನವರ ಹಿರಿಮೆಯ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪದವಿ ಮತ್ತು ಆರೂಢಶ್ರೀ ಪ್ರಶಸ್ತಿಗೆ ಭಾಜನರಾದ ಬಸವರಾಜ ಹಡಪದ(ಹುಣಶ್ಯಾಳ) ಇವರನ್ನು ಸನ್ಮಾನಿಸಲಾಯಿತು.ವಚನ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಜೆ.ಆರ್.ಬಿರಾದಾರ, ಮಲ್ಲು ಹಳಿಮನಿ,…
