ಮುದ್ದೇಬಿಹಾಳ: ರಕ್ತದಾನ ಶ್ರೇಷ್ಠವಾದದ್ದು. ರಕ್ತದಾನದಿಂದ ಒಬ್ಬರ ಜೀವ ಉಳಿಯುವದಾದರೆ ಹಿಂದೂ ಮುಂದು ನೋಡದೇ ರಕ್ತದಾನಕ್ಕೆ ಮುಂದಾಗಬೇಕು ಎಂದು ಉಪನ್ಯಾಸಕ ವಿ.ವಿ.ಪಾಟೀಲ ಹೇಳಿದರು.
ಪಟ್ಟಣದ ಜ್ಞನ ಭಾರತಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಏಡ್ಸ್ ಮತ್ತು ರಕ್ತದಾನ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಪಘಾತ ಸೇರಿದಂತೆ ಹಲವು ಸಂದರ್ಭಗಳಲ್ಲಿ ರಕ್ತದ ಕೊರತೆಯಿಂದಾಗಿ ಅನೇಕರು ಸಾವನ್ನಪ್ಪುತ್ತಿದ್ದಾರೆ. ನಮ್ಮಲ್ಲಿ ಅಧಿಕವಾಗಿರುವ ರಕ್ತವನ್ನು ದಾನ ಮಾಡುವದರಿಂದ ಪ್ರಾಣಗಳನ್ನು ಉಳಿಸಬಹುದು ಎಂದರು.
ಪ್ರಾಚಾರ್ಯ ಎ.ಕೆ.ಹುನಗುಂದ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಆರೋಗ್ಯವಂತ ಮನುಷ್ಯ ಪ್ರತೀ ೬ ತಿಂಗಳಿಗೊಮ್ಮೆ ರಕ್ತ ದಾನ ಮಾಡಬಹುದು ಎಂದರು.
ಸಂಸ್ಥೆಯ ಆಡಳಿತ ಅಧಿಕಾರಿ ಶಾಂತಾ ಭಟ್, ಶೋಭಾ ನಾಗೂರ, ಆರ್.ಎಸ್.ಮುತಾಲಿಕ್, ಎಸ್ ಹೂಗಾರ್, ವಿ.ಎಸ್.ಚಿತ್ರಗಾರ, ಆರ್.ಕೆ.ಕುಲಕರ್ಣಿ, ಮನೋಜ ಸಜ್ಜನ ಇದ್ದರು. ಸುಮಿತಾ ಪೂಜಾರಿ, ಅನಿಲ್ ಮಂಕಣಿ ಕಾರ್ಯಕ್ರಮ ನಿರ್ವಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

