ದೇವರಹಿಪ್ಪರಗಿ: ಚನ್ನಬಸವಣ್ಣನವರು ಸಾಮಾಜಿಕ ಬದಲಾವಣೆಯ ಹರಿಕಾರರಾಗಿ “ಚಿನ್ಮಯಜ್ಞಾನಿ’ ಎನಿಸಿದ್ದಾರೆ ಎಂದು ಶರಣಸಂಗಮ ಸೇವಾ ಸಮೀತಿ ತಾಲ್ಲೂಕು ಅಧ್ಯಕ್ಷ ಸಂಗಪ್ಪ ತಡವಲ್ ಹೇಳಿದರು.
ಪಟ್ಟಣದ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಶನಿವಾರ ಚನ್ನಬಸವಣ್ಣನವರ ೮೫೨ನೇ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಅನುಭವ ಮಂಟಪದ ಎರಡನೆಯ ಶೂನ್ಯ ಪೀಠಾಧೀಶರಾಗಿದ್ದ ಚನ್ನಬಸವಣ್ಣ ಪ್ರತಿಯೊಂದು ವಚನಗಳಿಗೆ ಅಂತಿಮವಾಗಿ ಒಪ್ಪಿಗೆಯನ್ನು ಕೊಡುವ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಅಂತೆಯೇ ತಮ್ಮ ೨೧ನೇ ವರ್ಷದಲ್ಲಿ ಖಡ್ಗ ಹಿಡಿದು ಕನ್ನಡ ಶರಣರ ವಚನ ಸಾಹಿತ್ಯವನ್ನು ರಕ್ಷಣೆ ಮಾಡುವುದರ ಮೂಲಕ ಷಟಸ್ಥಲಜ್ಞಾನಿ ಎನಿಸಿದ್ದರು. ಇವರ ಜೀವಿತ ಕಾಲಾವಧಿ ತೀರಾ ಕಡಿಮೆ. ಬದುಕಿದ್ದು ಕೇವಲ ಇಪ್ಪತ್ತನಾಲ್ಕು ವರ್ಷಗಳು ಮಾತ್ರ. ಕೊನೆಗೆ ಉಳವಿಯಲ್ಲಿಯೇ ಲಿಂಗೈಕ್ಯರಾದರು ಎಂದು ೧೨ನೇ ಶತಮಾನದ ಅಸಂಖ್ಯಾತ ಶರಣರಲ್ಲಿ ಪ್ರಮುಖರಾದ ಚನ್ನಬಸವಣ್ಣನವರ ಹಿರಿಮೆಯ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪದವಿ ಮತ್ತು ಆರೂಢಶ್ರೀ ಪ್ರಶಸ್ತಿಗೆ ಭಾಜನರಾದ ಬಸವರಾಜ ಹಡಪದ(ಹುಣಶ್ಯಾಳ) ಇವರನ್ನು ಸನ್ಮಾನಿಸಲಾಯಿತು.
ವಚನ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಜೆ.ಆರ್.ಬಿರಾದಾರ, ಮಲ್ಲು ಹಳಿಮನಿ, ಗೊಲ್ಲಾಳ ಬಿರಾದಾರ, ಸೋಮು ಹಡಪದ, ಮುದುಕಪ್ಪ ಹಡಪದ, ದೇವಾನಂದ ಹಡಪದ, ಪರಶುರಾಮ ಹಡಪದ, ಮಡಿವಾಳಪ್ಪ ಹಡಪದ, ರಾಘವೇಂದ್ರ ತಳವಾರ, ಮಲ್ಲು ಅವಟಿ, ಶಿವಾನಂದ ಹಡಪದ, ನಿಂಗು ದಾನಗೊಂಡ, ಆಮಪ್ಪ ನಂದ್ಯಾಳ ಸೇರಿದಂತೆ ಮಕ್ಕಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

