ಚಿಮ್ಮಡ: ಗ್ರಾಮದ ಆರಾಧ್ಯ ದೈವ ಶ್ರೀ ಪ್ರಭುಲಿಂಗೇಶ್ವರ ಸೇವಾ ಸಮೀತಿಯ ನೂತನ ಕಾರ್ಯಾಲಯ ಮತ್ತು ಸಮುದಾಯ ಭವನವನ್ನು ಊರಿಗೆ ಊಟ ಹಾಕುವ ಮೂಲಕ ಗುರುವಾರದಂದು ಲೋಕಾರ್ಪಣೆ ಗೊಳಿಸಲಾಯಿತು.
ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿಗಳಲ್ಲಿ ನಿರ್ಮಾಣವಾಗಿರುವ ಈ ಕಟ್ಟಡದ ಉದ್ಘಾಟನೆಯನ್ನು ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು ನೆರವೇರಿಸಿದರು.
ಸಾನಿಧ್ಯವನ್ನು ಸ್ಥಳಿಯ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು, ಬೂದಿಹಾಳ ಫಕೀರೇಶ್ವರ ಮಠದ ಪ್ರಭು ಮಹಾಸ್ವಾಮಿಗಳು ಹಾಗೂ ರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಜನಾರ್ಧನ ಮಹಾರಾಜರು ವಹಿಸಿದ್ದರು.
ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಅಣ್ಣಪ್ಪಗೌಡ ಪಾಟೀಲ, ಬಾಳಪ್ಪಾ ಹಳಿಂಗಳಿ, ಪುಂಡಲಿಕಪ್ಪಾ ಪೂಜಾರಿ, ರಾಮಣ್ಣ ಬಗನಾಳ, ಬಿ.ಎಸ್. ಪಾಟೀಲ, ರಾಚಯ್ಯ ಮಠಪತಿ, ದುಂಡಪ್ಪಾ ಪಾಟೀಲ, ಅಶೋಕ ಧಡೂತಿ, ಪಿಕೆಪಿಎಸ್ ಅಧ್ಯಕ್ಷ ಶಂಕರ ಬಟಕುರ್ಕಿ, ಪರಪ್ಪ ಪಾಲಭಾವಿ, ಬೀರಪ್ಪಾ ಹಳೆಮನಿ, ಉಮೇಶ ಪೂಜಾರಿ, ಪ್ರಭು ಮುಧೋಳ, ಈಶ್ವರ ಬಡಿಗೇರ ಬಸವರಾಜ ಕುಂಚನೂರ ಸೇರಿದಂತೆ ಹಲವಾರು ಜನ ಪ್ರಮುಖರು ಆಗಮಿಸಿದ್ದರು.
ಸದರೀ ಕಟ್ಟಡಕ್ಕೆ ಭೂಮಿಯನ್ನು ಬೆಳಗಾವಿಯಲ್ಲಿ ವಾಸ್ತವ್ಯವಿರುವ ಮುರುಗೇಶ ರುದ್ರಪ್ಪಾ ಡಪಳಾಪೂರ ದಾನವಾಗಿ ನೀಡಿದ್ದು ಕಟ್ಟಡಕ್ಕೆ ಗ್ರಾಮದ ದೊಡ್ಡನಂದಿಕೋಲ ಸೇವಾ ಸಮೀತಿಯಿಂದ, ಸಣ್ಣ ನಂದಿಕೋಲ ಸೇವಾ ಸಮೀತಿಯಿಂದ, ಹಾಗೂ ಶ್ರೀ ಪ್ರಭುಲಿಂಗೇಶ್ವರ ಪಾದರಕ್ಷೆ ಸೇವಾ ಸಮೀತಿಯಿಂದ ತಲಾ ಹತ್ತು ಲಕ್ಷ ರೂಪಾಯಿಗಳು ಹಾಗೂ ಸುಮಾರು ತೊಂಬತ್ತು ಲಕ್ಷರೂ.ಗಳು ಗ್ರಾಮಸ್ಥರಿಂದ ಸಂಗ್ರಹಿಸಲಾಗಿರುವ ಪ್ರಭುಲಿಂಗೇಶ್ವರ ಸೇವಾ ಸಮೀತಿಯ ಹಣವನ್ನು ಬಳಕೆ ಮಾಡಲಾಗಿದೆಯಂದು ಪ್ರಮುಖರು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

