ಮುದ್ದೇಬಿಹಾಳ: ಲೋಕಸಭಾ ಚುನಾವಣೆಯ ವಿಜಯಪುರ ಜಿಲ್ಲಾ ಭಾರತೀಯ ಜನತಾ ಪಕ್ಷದ ಟಿಕೆಟ್ ನ್ನು ಬಂಜಾರಾ ಸಮಾಜಕ್ಕೆ ನೀಡಬೇಕು ಎಂದು ಬಂಜಾರಾ ಸಮಾಜದ ಯುವ ಮುಖಂಡರು ಒತ್ತಾಯಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಮುಖರಾದ ರವಿ ಪವಾರ, ಸೋಮು ಲಮಾಣಿ, ಶ್ರೀಕಾಂತ ನಾಯಕ ಮತ್ತೀತರರು ಮಾತನಾಡಿ, ನಮ್ಮ ಸಮಾಜ ಬಾಂಧವರಲ್ಲಿ ಹಲವರು ಟಿಕೆಟ್ ಆಕಾಂಕ್ಷಿಗಳಿದ್ದು, ಅವರಲ್ಲಿ ಡಾ.ಬಾಬು ರಾಜೇಂದ್ರ ನಾಯಕ ಅವರು ಸಮಾಜದ ಬಗ್ಗೆ ಹೆಚ್ಚಿನ ಕಳಕಳಿ ಉಳ್ಳವರಾಗಿದ್ದಾರೆ. ಅಲ್ಲದೇ ಕಳೆದ ೨೫ ವರ್ಷಗಳಿಂದ ಭಾಜಪಾ ದಲ್ಲಿಯೇ ಇದ್ದು ಪಕ್ಷದ ಸರ್ವತೋಮುಖ ಬೆಳವಣಿಗೆಯಲ್ಲಿ, ಮತಾಂತರಗೊಂಡ ಅದೆಷ್ಟೋ ಹಿಂದೂಗಳನ್ನು ಘರವಾಪಸಿ ಮಾಡಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಇವರಿಗೇ ಟಿಕೆಟ್ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದರು. ಈ ವೇಳೆ ಸಂತೋಷ ದಾಸರ, ಭೀಮುಲು ನಾಯಕ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

