Author: editor.udayarashmi@gmail.com

ಮುದ್ದೇಬಿಹಾಳ: ವಿದ್ಯೆ ಇಲ್ಲದೇ ಯಾವ ಸಾಧನೆಯನ್ನೂ ಸಾಧಿಸಲು ಸಾಧ್ಯವಿಲ್ಲ. ವಿದ್ಯೆ ಪಡೆದ ವ್ಯಕ್ತಿ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಬಲ್ಲ ಶಕ್ತಿ ಹೊಂದಿರುತ್ತಾನೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಪರಶುರಾಮ ಕೊಣ್ಣೂರ ಹೇಳಿದರು.ಪಟ್ಟಣದ ಪೊಲೀಸ್ ಠಾಣೆ ಎದುರು ಇರುವ ಆಕ್ಸ್ಫರ್ಡ ಪಬ್ಲಿಕ್ ಸ್ಕೂಲ್ ಹಾಗೂ ಹೇಮರಡ್ಡಿ ಮಲ್ಲಮ್ಮ ಹಿ.ಪ್ರಾ.ಶಾಲೆ ವತಿಯಿಂದ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಹಿಂದಿನ ಕಾಲದಲ್ಲಿ ವಿದ್ಯೆ ಪಡೆಯಲು ಅದೆಷ್ಟೋ ಪರದಾಡುವ ಪರಿಸ್ಥಿತಿ ಇತ್ತು. ಸಧ್ಯ ಯಾವ ಮಗುವೂ ವಿದ್ಯೆಯಿಂದ ವಂಚಿತರಾಗಬಾರದೆಂದು ಶೈಕ್ಷಣಿವಾಗಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ. ಎಲ್ಲ ಪಾಲಕರೂ ತಮ್ಮ ಮಕ್ಕಳಿಗೆ ವಿದ್ಯೆ ಕೊಡಿಸುವಲ್ಲಿ ಹಿಂದೇಟು ಹಾಕಬಾರದು ಎಂದರು.ನ್ಯಾಯವಾದಿ ಚೇತನ ಶಿವಶಿಂಪಿ ಮಾತನಾಡಿ, ಪಾಲಕರಾದವರು ಹಣಕ್ಕಿಂತ ವಿದ್ಯೆ, ಸಂಸ್ಕಾರಕ್ಕೆ ಹೆಚ್ಚಿನ ಮಹತ್ವ ಕೊಡಬೇಕು. ತಮ್ಮ ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯಾಗಿ ಬೆಳೆಸಬೇಕು. ಮಕ್ಕಳಿಗೆ ಹಣ ಹೇಗೆ ಸಂಪಾದನೆ ಮಾಡಬೇಕು ಎಂದು ಕಲಿಸುವದಕ್ಕಿಂತ ಉತ್ತಮ ಗುಣಗಳನ್ನು ಬೆಳೆಸಿ ನೊಂದವರ ದನಿಯಾಗಿ ನಿಲ್ಲುವ ಗಟ್ಟಿ…

Read More

ರೇಲ್ವೆ ನಿಲ್ದಾಣಗಳ ಪುನರಾಭಿವೃದ್ದಿಗೆ ಪ್ರಧಾನಿ ಚಾಲನೆ :ಸಂಸದ ಜಿಗಜಿಣಗಿ ವಿಜಯಪುರ: ದೇಶದ ಪ್ರಧಾನಮಂತ್ರಿಗಳು ಸಾಮಾಜಿಕ ಜಾಲತಾಣ ಮೂಲಕ ಅಮೃತ ಭಾರತ ಯೋಜನೆ ಮೂಲಕ ದೇಶದ ವಿವಿಧ ನಿಲ್ದಾಣಗಳ ಪುನರಾಭಿವೃದ್ದಿ, ರಸ್ತೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಸಮರ್ಪಣೆ, ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದ್ದು, ದೇಶದ ರೈಲು ನಿಲ್ದಾಣಗಳು ಅತ್ಯಾಧುನಿಕ ತಂತ್ರಜ್ಞಾನದಿಂದ ಸುಂದರ, ಸ್ವಚ್ಚ ಅಂತರಾಷ್ಟ್ರೀಯ ಗುಣಮಟ್ಟದ ಸಾರ್ವಜನಿಕರಿಗೆ ಉತ್ತಮ ಮೂಲಭೂತ ಸೌಕರ್ಯಗಳಿಂದ ಕೂಡಿದ ರೈಲು ನಿಲ್ಧಾಣವಾಗಿ ರೂಪಗೊಳ್ಳಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಅವರು ಹೇಳಿದರು.ಸೋಮವಾರ ನಗರದ ರೈಲ್ವೇ ನಿಲ್ಧಾಣದಲ್ಲಿ ಏರ್ಪಡಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹುಬ್ಬಳ್ಳಿ ವಿಭಾಗದ ನವೀಕರಣಗೊಂಡಿರುವ ೭ ನಿಲ್ಧಾಣಗಳು ಮತ್ತು ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿಗಳು ಲೋಕಾರ್ಪಣೆಗೊಳಿಸಿದ್ದಾರೆ. ಜಿಲ್ಲೆಯ ವಿಜಯಪುರ ಮತ್ತು ಆಲಮಟ್ಟಿ ರೇಲ್ವೆ ನಿಲ್ದಾಣಗಳ ಪುನರ್‌ಅಭಿವೃದ್ದಿಗೆ ಶಂಕು ಸ್ಥಾಪನೆ ಹಾಗೂ ಮಿಂಚನಾಳ, ಕ್ಯಾತನಕೇರಿ ಮತ್ತು ನಿಂಬಾಳ ರೇಲ್ವೆ ಅಂಡರ್‌ಪಾಸ್‌ಗಳನ್ನು ಇಂದು ಸಮರ್ಪಿಸಲಾಗಿದೆ ಎಂದು ಹೇಳಿದರು.ವಿಜಯಪುರ ಜಿಲ್ಲೆಗೆ ಈಗಾಗಲೇ…

Read More

ಬೆಂಗಳೂರು: ರೈತ ಪರವಾಗಿ ಎಪಿಎಂಸಿ ಕಾಯ್ದೆಗೆ ಹಲವು ತಿದ್ದುಪಡಿ ತಂದಿರುವುದು ಸೂಕ್ತವಾಗಿದೆ. ಕೃಷಿ ಮಾರುಕಟ್ಟೆ ವ್ಯವಸ್ಥೆಯನ್ನು ಬಲಪಡಿಸಲು ಕೆಲವು ಸುಧಾರಣೆಗಳನ್ನು ತರಬೇಕಿದ್ದು, ಈ ಸಂಬಂಧ ರೈತ ಸಂಘ ಶೀಘ್ರದಲ್ಲಿ ಸುಧಾರಣೆಗೆ ಪೂರಕ ಅಂಶಗಳನ್ನು ತಮ್ಮ ಗಮನಕ್ಕೆ ತರಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರಿಗೆ ತಿಳಿಸಿದ್ದಾರೆ.ಬಿಜೆಪಿ ಸರ್ಕಾರದ ಅವಧಿಯಲ್ಲಿ ತಂದಿದ್ದ ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ವಾಪಸ್ ಪಡೆದಿರುವುದಕ್ಕೆ ಸಚಿವ ಶಿವಾನಂದ ಪಾಟೀಲ ಅವರಿಗೆ ಕೃತಜ್ಞತೆ ಸಲ್ಲಿಸಿ ಪತ್ರ ಬರೆದಿರುವ ಅವರು, ಎಂ.ಎಸ್. ಸ್ವಾಮಿನಾಥನ್ ವರದಿ ಪ್ರಕಾರ ಕನಿಷ್ಟ ಬೆಂಬಲ ಬೆಲೆಯಲ್ಲಿ ಖರೀದಿಸುವ ನೀತಿ ರೂಪಿಸಿದರೆ ರೈತರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ತಿದ್ದುಪಡಿ ಕಾಯಿದೆಯನ್ನು ವಾಪಸ್ಸು ಪಡೆದಿರುವುದು ಅಭಿನಂದನಾರ್ಹ. ಇದಕ್ಕಾಗಿ ವಿಶೇಷವಾಗಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರಿಗೆ ರೈತ ಸಂಘ ಕೃತಜ್ಞತೆ ಸಲ್ಲಿಸುತ್ತದೆ. ಎಪಿಎಂಸಿ ಕಾಯ್ದೆಗೆ ಕೆಲವು…

Read More

ಬಿಚ್ಚಿಬಿದ್ದಿರುವ ಸಲಕರಣೆಗಳು | ಪುಂಡರ ಕಾಟ | ಪುರಸಭೆ ಕಡೆಗಣನೆ *- ಚೇತನ ಶಿವಶಿಂಪಿ*ಮುದ್ದೇಬಿಹಾಳ: ಮುರಿದು ಹೋದ ಜಾರುಬಂಡೆಯ ಮುಖ್ಯ ಪ್ಲಾಸ್ಟಿಕ್, ಕಬ್ಬಿಣದ ಸಳಿಗಳು ಕಿತ್ತಿದ ಜೋಕಾಲಿಗೆ ಅವೈಜ್ಞಾನಿಕ ವೈರ್ ಬಿಗಿತ, ಬಿಚ್ಚಿಬಿದ್ದಿರುವ ನಟ್ಟನ್ನು ಫಿಟ್ ಮಾಡೋರಿಲ್ಲ, ಮತ್ತೊಂದು ಜೋಕಾಲಿಗೆ ಕಟ್ಟಿಗೆಯ ತುಂಡನ್ನು ಬಳಸಿ ಆಟಕ್ಕೆ ನಿಲ್ಲೋ ಮಕ್ಕಳು, ಒಂದು ಕಡೆ ಕೂರುವ ಸೀಟೆ ಇಲ್ಲದ ಮತ್ತೊಂದು ಆಟದ ಸಲಕರಣೆ, ದಿನನಿತ್ಯ ನೂರಾರು ಮಕ್ಕಳು ಆಟವಾಡಿ ಸುಸ್ತಾಗಿ ಆನಂದ ಪಡೋದು ಇದೇ ಉದ್ಯಾನವನದಲ್ಲಿ.ಪಟ್ಟಣಕ್ಕೇ ಒಂದೇ ಇರೋ ಪ್ರಸಿದ್ಧ ಉದ್ಯಾನವನ ಹುಡ್ಕೋ ಬಡಾವಣೆಯದ್ದು. ಕಳೆದ ನಾಲ್ಕು ವರ್ಷಗಳ ಹಿಂದೆ ಅಭಿವೃದ್ಧಿಗೊಂಡು ಜನಪ್ರೀಯತೆ ಪಡೆದಿತ್ತು. ಇಂದಿಗೂ ಸಾಕಷ್ಟು ಜನಪ್ರೀಯತೆ ಪಡೆದಿದೆ. ಆದರೆ ಸಧ್ಯ ನಿರ್ವಹಣೆಯ ಕೊರತೆಯಿಂದಾಗಿ ಈ ಉದ್ಯಾನವನ ಸಂಪೂರ್ಣ ನಿರ್ಲಕ್ಷಕ್ಕೊಳಗಾಗಿ ಅನಾಥ ಸ್ಥಿತಿಗೆ ಬಂದು ತಲುಪಿದೆ.ನಿರೀಕ್ಷಿತ ಮಟ್ಟದ ನಿರ್ವಹಣೆ ಸೇರಿದಂತೆ ಅಭಿವೃದ್ಧಿಯಿಂದ ಸಂಪೂರ್ಣ ವಂಚನೆಗೊಂಡಿದೆ. ಇನ್ನು ಕುಡಿಯುವ ನೀರಂತೂ ಇಲ್ಲಿಯವರೆಗೂ ಕಂಡಿಲ್ಲ ಈ ಉದ್ಯಾನವನದ ದಿನನಿತ್ಯದ ಭೇಟಿಕಾರರು. ಸಂಜೆಯಾದರೆ ಸಾಕು ಪುಂಡ ಪೋಕರಿಗಳ…

Read More

ದೇವರಹಿಪ್ಪರಗಿ: ವಿದ್ಯಾರ್ಥಿಗಳು ಸತತ ಅಧ್ಯಯನ, ಗುರಿ ಹಾಗೂ ಪ್ರಯತ್ನಗಳ ಮೂಲಕ ಸಾಧನೆ ಮಾಡಿದಲ್ಲಿ ನಿಶ್ಚಿತವಾಗಿಯೂ ಅವರ ಭವಿಷ್ಯ ಬದಲಾಗುತ್ತದೆ ಎಂದು ಎಮ್.ಜಿ.ಎಮ್ ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಎ.ಎಮ್.ತಾಂಬೋಳಿ ಹೇಳಿದರು.ಪಟ್ಟಣದ ಎಂ.ಜಿ.ಎಮ್ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ಜರುಗಿದ ೨೦೨೩-೨೪ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಧನೆಯ ಹಿಂದೆ ಸಾಧಿಸುವ ಛಲ ಹಾಗೂ ಪರಿಶ್ರಮವಿರುತ್ತದೆ. ಸಾಧಕರ ಸಾಲಿನಲ್ಲಿ ಗುರುತಿಸುವಂತಾಗಲು ಪ್ರತಿ ವಿದ್ಯಾರ್ಥಿ ಶಿಕ್ಷಣದ ಜೊತೆಗೆ ಸಂಸ್ಕಾರಗಳನ್ನು ತಮ್ಮ ಜೀವನದಲ್ಲಿ ರೂಪಿಸಿಕೊಳ್ಳಬೇಕು ಎಂದರು.ಚಾಣಕ್ಯ ಕೆರಿಯರ್ ಅಕಾಡೆಮಿಯ ಉಪನ್ಯಾಸಕರಾದ ಶಿವಕುಮಾರ ಹಿರೇಮಠ, ಪ್ರಕಾಶ ಜಾಧವ ಮಾತನಾಡಿದರು.ಶಿಕ್ಷಕ ಕೆ.ಆರ್.ಕೊಕಟನೂರ ಹಾಗೂ ಸಿಂದಗಿ ಪಿಇಎಸ್ ಕಾಲೇಜು ಪ್ರಾಂಶುಪಾಲ ರವಿ ಗೋಡಕರ್ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬಂದು ಓದಿನ ಕಡೆಗೆ ಹೆಚ್ಚು ಲಕ್ಷ್ಯ ವಹಿಸುವಂತೆ ಕಿವಿಮಾತು ಹೇಳಿದರು.ನಂತರ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿನೀಯರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ೨೦೨೨-೨೩ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ…

Read More

ಸಿಂದಗಿ ಜಿಲ್ಲಾ ಹೋರಾಟ ಸಮಿತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರಿಗೆ ಮನವಿ ಸಿಂದಗಿ: ಜಿಲ್ಲೆಯನ್ನು ವಿಭಜಿಸುವುದಾದಲ್ಲಿ ಸಿಂದಗಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿ ಸಿಂದಗಿ ಜಿಲ್ಲಾ ಹೋರಾಟ ಸಮಿತಿಯಿಂದ ವಿಜಯಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರಿಗೆ ಶನಿವಾರ ಸಂಜೆ ಮನವಿ ಸಲ್ಲಿಸಲಾಯಿತು.ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕರಾದ ರಮೇಶ ಭೂಸನೂರ ಹಾಗೂ ಅರುಣ ಶಹಾಪೂರ ಅವರು ಸಚಿವರಿಗೆ ಇಂಡಿ ಜಿಲ್ಲೆಯನ್ನಾಗಿ ಸೃಜಿಸುವ ನಿಟ್ಟಿನಲ್ಲಿ, ಇಂಡಿ ಬದಲಾಗಿ ಸಿಂದಗಿಯನ್ನು ಪರಿಗಣಿಸಿ ಎಂಬ ರಾಜಕೀಯ ಕೂಗು ನಮ್ಮದಾಗಿಲ್ಲ. ಈ ವಿಷಯದಲ್ಲಿ ನಾವು ರಾಜಕೀಯ ಮಾಡಲಾರೆವು. ಒಂದು ವೇಳೆ ವಿಜಯಪುರ ಜಿಲ್ಲೆಯನ್ನು ಇಬ್ಭಾಗಿಸುವ ಇರಾದೆ ಸರ್ಕಾರದದ್ದಾರೆ, ಜಿಲ್ಲೆಯಾಗುವ ಎಲ್ಲ ಅರ್ಹತೆಗಳನ್ನು ಹೊಂದಿರುವ ಸಿಂದಗಿಯನ್ನು ಆಧ್ಯತೆಯನ್ನಾಗಿಸಿ ಜಿಲ್ಲೆ ಮಾಡಬೇಕು ಎಂದು ಸಚಿವರಿಗೆ ಮನವಿ ಮಾಡಿ, ಈ ಹೋರಾಟ ಸಮಿತಿಯಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ತಾವುಗಳು ಅವಕಾಶ ಒದಗಿಸುವುದರೊಂದಿಗೆ ನಮ್ಮ ಬೇಡಿಕೆಯನ್ನು ಬೆಂಬಲಿಸಬೇಕು ಎಂದು ಒತ್ತಾಯಿಸಿದರು.ಸಮಿತಿಯ ಮನವಿ ಸ್ವೀಕರಿಸಿದ ಸಚಿವರು, ಸಧ್ಯ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಜಿಲ್ಲಾ…

Read More

ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಅಶೋಕ ಮನಗೂಳಿ ಸೂಚನೆ ಸಿಂದಗಿ: ಚಿಮ್ಮಲಗಿ ಏತ ನೀರಾವರಿ ಕಾಲುವೆಯಿಂದ ಸಿಂದಗಿ, ದೇವರ ಹಿಪ್ಪರಗಿ ಮತ್ತು ಆಲಮೇಲ ತಾಲೂಕಿನಲ್ಲಿನ ಕಾಲುವೆಗಳಿಗೆ ಕೆಲವೆ ದಿನದಲ್ಲಿ ನೀರು ಹರಿದು ಬರುತ್ತದೆ. ಅಧಿಕಾರಿಗಳು ಎಚ್ಚೆತ್ತು ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ ಕುಡಿಯುವ ನೀರು, ಮೇವು ಸಂಗ್ರಹಣೆ ಹಾಗೂ ಕೆರೆಗಳಿಗೆ ನೀರು ತುಂಬಿಸುವ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಬೇಸಿಗೆಯ ತೀವ್ರತೆ ಹೆಚ್ಚುತ್ತಿದೆ. ಹರಿದು ಬರುವ ನೀರು ಕೃಷಿ ಕಾರ್ಯಗಳಿಗೆ ಬಳಸದೇ ಜನ ಜಾನುವಾರುಗಳಿಗೆ ಪೂರೈಕೆಯಾಗುವ ಕ್ರಮವನ್ನು ಸಂಬಂಧಿಸಿದ ಅಧಿಕಾರಿಗಳು ನಿರ್ವಹಿಸಬೇಕು. ಫೆ.೧೯ರಂದು ಚಿಮ್ಮಲಗಿ ಏತ ನೀರಾವರಿಯಿಂದ ನೀರನ್ನು ಹರಿಬಿಡಲಾಗಿದೆ. ಕಾರ್ಯನಿಯೋಜನೆ ಮಾಡಿದ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ನೀರನ್ನು ಕೃಷಿಗೆ ಬಳಸದಂತೆ ರೈತರಿಗೆ ತಿಳಿ ಹೇಳಬೇಕು. ಯಾವುದೇ ಕಾಲಕ್ಕೂ…

Read More

ಪ್ರೇರಣಾ ಸಂಸ್ಥೆಗೆ ಶಾಸಕರ ಅನುದಾನದಲ್ಲಿ ೧೦ಲಕ್ಷ ರೂ. ನೀಡುವ ಭರವಸೆ ಸಿಂದಗಿ: ಶಿಕ್ಷಣ ಸಮಾಜಕ್ಕೆ ಉಪಯೋಗವಾಗಬೇಕು ಹಾಗೂ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಪ್ರಸ್ತುತ ಸಮಾಜದ ಏಳಿಗೆಗೆ ಅಭೂತಪೂರ್ವ ಕೊಡುಗೆ ನೀಡುತ್ತಿವೆ ಎಂದು ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಶ್ರೀ ಸಮರ್ಥ ವಿದ್ಯಾ ವಿಕಾಸ ವಿವಿದೋದ್ದೇಶ ಸಂಸ್ಥೆಯ ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢಶಲೆಯ ವತಿಯಿಂದ ಹಮ್ಮಿಕೊಂಡ ಶಾಸಕರ ಸನ್ಮಾನ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶುಭ ಕೋರುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾ ಸಂಸ್ಥೆಯನ್ನು ಪ್ರಾರಂಭ ಮಾಡಿ ವಿದ್ಯಾ ಸಂಸ್ಥೆಗಳ ಬೆಳೆಸುವಲ್ಲಿ ಕುಲಕರ್ಣಿ ಸಹೋದರರ ತ್ಯಾಗ ಅಪರಿಮಿತ. ಮನೆತನದ ಏಳಿಗೆಗೆ ಕುಲಕರ್ಣಿ ಸಹೋದರರ ತ್ಯಾಗ ಅವಿಸ್ಮರಣೀಯ ಎಂದು ಶ್ಲಾಘಿಸಿದರು.ಸಿಂದಗಿ ಕ್ಷೇತ್ರಕ್ಕೆ ಶಿಕ್ಷಣ ಸಂಸ್ಥೆಯ ಕೊಡುಗೆ ಅನನ್ಯವಾಗಿದೆ. ಈ ಪ್ರೇರಣಾ ಸಂಸ್ಥೆಯ ಮೂಲಭೂತ ಸೌಕರ್ಯಕ್ಕಾಗಿ ಶಾಸಕರ ಅನುದಾನದಲ್ಲಿ ೧೦ಲಕ್ಷ ರೂ. ಅನುದಾನ ನೀಡುವುದಾಗಿ ಹೇಳಿದರು.ಈ ವೇಳೆ ಸಂಸ್ಥೆಯ ಅಧ್ಯಕ್ಷ ಆರ್.ಡಿ ಕುಲಕರ್ಣಿ ಅವರು ಶಾಸಕ ಅಶೋಕ ಮನಗೂಳಿ ಒಳಗೊಂಡಂತೆ ಬಸನವ ಬಾಗೇವಾಡಿಯ ನೇತಾಜಿ…

Read More

ಸಿಂದಗಿ: ಲಿಟಲ್‌ವಿಂಗ್ಸ್ ವಿದ್ಯಾ ಸಂಸ್ಥೆಯು ಪಠ್ಯದ ಜೊತೆ ಸಂಸ್ಕಾರಯುತ ಶಿಕ್ಷಣ ಕೊಡುತ್ತಿರುವುದು ಶ್ಲಾಘನೀಯ ಎಂದು ಉಪನ್ಯಾಸಕ ಸಿದ್ದಲಿಂಗ ಕಿಣಗಿ ಹೇಳಿದರು.ನಗರದ ಮಂಗಲ್ಯ ಭವನದಲ್ಲಿ ನಡೆದ ಲಿಟಲ್ ವಿಂಗ್ಸ್ ಶಾಲೆಯ ಪ್ರಥಮ ವಾರ್ಷಿಕೋತ್ಸವದಲ್ಲಿ ಅತಿಥಿಯಾಗಿ ಮಾತನಾಡಿದ ಅವರು, ಓದುವ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆ ಇರುವ ಸಂಸ್ಕಾರದ ಭಾವನೆಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು. ಈ ಶಾಲೆಯ ಚಟುವಟಿಕೆ ಆಧಾರಿತ ಶಿಕ್ಷಣ ಕಲಿಯುತ್ತಿರುವ ವಿದ್ಯಾರ್ಥಿಗಳು ಪುಣ್ಯವಂತರು ಎಂದರು.          ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಸಾಪ ನಿಕಟ ಪೂರ್ವ ಅಧ್ಯಕ್ಷ ರಾಜಶೇಖರ ಕೂಚಬಾಳ, ವಿದ್ಯಾರ್ಥಿಗಳಿಗೆ ಪೊಷಕರು ಒತ್ತಡವನ್ನು ಹಾಕಬಾರದು. ಅವರಿಗೆ ಅವರ ಜೀವನದಲ್ಲಿ ಓದಬೇಕಾದ ಆಸಕ್ತಿಯ ವಿಷಯವನ್ನು ಕಲಿಯಲು ಬಿಡಬೇಕೆಂದು ಹೇಳಿದರು. ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿದಾಗ ಮಾತ್ರ ಇಂತಹ ಒಳ್ಳೆಯ ಸಂಸ್ಕಾರಯುತ ವಿದ್ಯಾರ್ಥಿಗಳಾಗಿ ನಿರ್ಮಾಣವಾಗಲು ಸಾಧ್ಯವಿದೆ ಎಂದು ಹೇಳಿದರು. ಸಾನಿಧ್ಯ ವಹಿಸಿ ಮಾತನಾಡಿದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪವಿತ್ರಾಜೀ ಈ ಸಂಸ್ಥೆಯು ಭಾರತೀಯ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸುವ ಕೆಲಸ ಮಾಡುತ್ತಿದೆ. ಬೆಳಗಿನ ಪ್ರಾರ್ಥನೆಯ…

Read More

ಯಡ್ರಾಮಿ: ಮಕ್ಕಳನ್ನು ಅಂಕಪಟ್ಟಿಗಳ ತಯಾರಿಕೆಯ ಯಂತ್ರವನ್ನಾಗಿಸದೇ ಅವರಲ್ಲಿನ ನಿಜವಾದ ಪ್ರತಿಭೆ ಗುರುತಿಸಿ ಅವರನ್ನು ಸ್ವಾವಲಂಬಿಗಳನ್ನಾಗಿಸಿ ಜೀವನಕ್ಕೆ ಅಣಿಗೊಳಿಸುವಂತ ಶಿಕ್ಷಣ ನಮ್ಮದಾಗಬೇಕು ಎಂದು ಸಾಹಿತಿ, ಸಂಶೋಧಕ ಮುಡಬಿ ಗುಂಡೇರಾವ್ ಸೇಡಂ ಅವರು ಹೇಳಿದರು.ಪಟ್ಟಣದ ಜ್ಞಾನೋದಯ ಶಿಕ್ಷಣ ಸಂಸ್ಥೆಯ ಜ್ಞಾನಭಾರತಿ ಪ್ರಾಥಮಿಕ, ಪ್ರೌಢ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಯಲ್ಲಿ ಶುಕ್ರವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷೀಕ ಸ್ನೇಹ ಸಮ್ಮೇಳನ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.ಮಕ್ಕಳಲ್ಲಿ ಟಾಟಾ, ಬಾಯ್ ಬಾಯ್, ಅಂಕಲ್, ಅಂಟಿ ಸಂಸ್ಕೃತಿಯಿಂದ ದೂರವಾಗಿರಿಸಿ ಅಪ್ಪಟ ನಮ್ಮ ದೇಶಿ ಸಂಸ್ಕೃತಿಯ ಉದಾತ್ತ ಮೌಲ್ಯಗಳನ್ನು ಬಿತ್ತಬೇಕಾಗಿದೆ. ಡಾ| ಬಾಬಾಸಾಹೇಬ ಅಂಬೇಡ್ಕರ್, ಅಬ್ದುಲ್ ಕಲಾಂ, ಸಂಗೊಳ್ಳಿ ರಾಯಣನಂಥ ಮಹಾನ್ ಪುರುಷರ ಜೀವನ ಚರಿತ್ರೆ ನಮ್ಮ ಮಕ್ಕಳಿಗೆ ಆದರ್ಶವಾಗಬೇಕಿದೆ. ಈ ನಿಟ್ಟಿನಲ್ಲಿ ಪಾಲಕ-ಪೋಷಕರು ತಮ್ಮ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಿ ರಾಷ್ಟ್ರ ಪ್ರೇಮ, ನಾಡ ಅಭಿಮಾನ ಬೆಳೆಸುವಂತೆ ಸಜ್ಜುಗೊಳಿಸಬೇಕೆಂದರು.ನಂತರ ಯುವ ಸಾಹಿತಿ ಡಾ| ಸಂತೋಷ ನವಲಗುಂದ ಮಾತನಾಡಿದರು.ಕಾರ‍್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಯಡ್ರಾಮಿ ವಿರಕ್ತಮಠದ ಸಿದ್ಧಲಿಂಗ ಮಹಾಸ್ವಾಮಿಗಳು…

Read More