ದೇವರಹಿಪ್ಪರಗಿ: ವಿದ್ಯಾರ್ಥಿಗಳು ಸತತ ಅಧ್ಯಯನ, ಗುರಿ ಹಾಗೂ ಪ್ರಯತ್ನಗಳ ಮೂಲಕ ಸಾಧನೆ ಮಾಡಿದಲ್ಲಿ ನಿಶ್ಚಿತವಾಗಿಯೂ ಅವರ ಭವಿಷ್ಯ ಬದಲಾಗುತ್ತದೆ ಎಂದು ಎಮ್.ಜಿ.ಎಮ್ ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಎ.ಎಮ್.ತಾಂಬೋಳಿ ಹೇಳಿದರು.
ಪಟ್ಟಣದ ಎಂ.ಜಿ.ಎಮ್ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ಜರುಗಿದ ೨೦೨೩-೨೪ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಧನೆಯ ಹಿಂದೆ ಸಾಧಿಸುವ ಛಲ ಹಾಗೂ ಪರಿಶ್ರಮವಿರುತ್ತದೆ. ಸಾಧಕರ ಸಾಲಿನಲ್ಲಿ ಗುರುತಿಸುವಂತಾಗಲು ಪ್ರತಿ ವಿದ್ಯಾರ್ಥಿ ಶಿಕ್ಷಣದ ಜೊತೆಗೆ ಸಂಸ್ಕಾರಗಳನ್ನು ತಮ್ಮ ಜೀವನದಲ್ಲಿ ರೂಪಿಸಿಕೊಳ್ಳಬೇಕು ಎಂದರು.
ಚಾಣಕ್ಯ ಕೆರಿಯರ್ ಅಕಾಡೆಮಿಯ ಉಪನ್ಯಾಸಕರಾದ ಶಿವಕುಮಾರ ಹಿರೇಮಠ, ಪ್ರಕಾಶ ಜಾಧವ ಮಾತನಾಡಿದರು.
ಶಿಕ್ಷಕ ಕೆ.ಆರ್.ಕೊಕಟನೂರ ಹಾಗೂ ಸಿಂದಗಿ ಪಿಇಎಸ್ ಕಾಲೇಜು ಪ್ರಾಂಶುಪಾಲ ರವಿ ಗೋಡಕರ್ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬಂದು ಓದಿನ ಕಡೆಗೆ ಹೆಚ್ಚು ಲಕ್ಷ್ಯ ವಹಿಸುವಂತೆ ಕಿವಿಮಾತು ಹೇಳಿದರು.
ನಂತರ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿನೀಯರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ೨೦೨೨-೨೩ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿನೀಯರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ಎಚ್.ಎಮ್.ಕಮತಗಿ, ಎಮ್.ಎಚ್.ಪಾನಪರೋಷ್, ಎಮ್.ಎಮ್. ವಾಲಿಕಾರ, ಹಿದಾಯತ್ ಮಾಶಾಳಕರ್, ಸಲೀಮ್ ಶೇಖ್, ಶಾಹೀನ್ ಬಾಗವಾನ, ತಸ್ಲೀಮ್ ಮೋಮಿನ್ ಸೇರಿದಂತೆ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

