Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ೨೦೨೪-೨೫ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ೧೦ ತಿಂಗಳುಗಳ ಕಾಲ ತೋಟಗಾರಿಕೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಆಸಕ್ತ ರೈತರ ಮಕ್ಕಳಿಂದ ಅರ್ಜಿಯನ್ನು ಅಹ್ವಾನಿಸಲಾಗಿದೆ.ವಿಜಯಪುರ ಜಿಲ್ಲೆಯಿಂದ ಒಟ್ಟು ೧೭ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಳಗಾವಿಯ ಹಿಡಕಲ್ ಡ್ಯಾಂ ತೋಟಗಾರಿಕೆ ಇಲಾಖೆಯಲ್ಲಿ ತರಬೇತಿ ನೀಡಲಾಗುತ್ತದೆ.ಅರ್ಜಿಯನ್ನು ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಅಥವಾ ಇಲಾಖೆ ವೆಬ್ ಸೈಟ್ www://horticulturedir.kar.gov.in ನಲ್ಲಿ ಪಡೆದುಕೊಳ್ಳಬಹುದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ೧೫ ಸಾಮಾನ್ಯ ವರ್ಗದವರಿಗೆ ೩೦ರೂ ಅರ್ಜಿ ಶುಲ್ಕ ಇರುತ್ತದೆ. ಅರ್ಜಿ ಸಲ್ಲಿಸಲು ದಿನಾಂಕ : ೦೧-೦೪-೨೦೨೪ ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಸಂದರ್ಶನ ಎಪ್ರಿಲ್ ೬ ರಂದು ನಡೆಯಲಿದೆ. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ೧೭೫೦ರೂ ಶಿಷ್ಯವೇತನ ನೀಡಲಾಗುತ್ತದೆ. ತರಬೇತಿಯ ಅವಧಿಯಲ್ಲಿ ಇಲಾಖೆಯ ವಸತಿಗೃಹದಲ್ಲಿ ತಂಗುವುದು ಕಡ್ಡಾಯವಾಗಿರುತ್ತದೆ. ಅಭ್ಯರ್ಥಿಗಳು ಎಸೆಸೆಲ್ಸಿ ಪಾಸ್ ಆಗಿರಬೇಕು. ತಂದೆ ಅಥವಾ ತಾಯಿ ಅಥವ ಸ್ವತಹ ತಮ್ಮ ಹೆಸರಿನಲ್ಲಿ ಜಮಿನು ಇರುವ ದಾಖಲೆ ಹೊಂದಿರಬೇಕು.ಹೆಚ್ಚಿನ ಮಾಹಿತಿಗಾಗಿ ಹಿರಿಯ ತೋಟಗಾರಿಕೆ…
ವಿಜಯಪುರ: ಕೆಪಿಟಿಸಿಎಲ್ ಮೂಲಕ ೧೧೦/೧೧ ಕೆವಿ ಬಬಲೇಶ್ವರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಾಲ್ಕನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.ಈ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲ ೧೧ಕೆವಿ ಮಾರ್ಗಗಳಲ್ಲಿ ಮಾರ್ಚ್ ೨ರ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂನ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಕೆಪಿಟಿಸಿಎಲ್ ಮೂಲಕ ೧೧೦/೧೧ ಕೆವಿ ತೊರವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಾಲ್ಕನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲ ೧೧ಕೆವಿ ಮಾರ್ಗಗಳಲ್ಲಿ ಫೆ.೨೯ರ ಬೆಳಿಗ್ಗೆ ೯ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು,ಗ್ರಾಹಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂನ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಡಿಸಿ ಟಿ.ಭೂಬಾಲನ್ ಸೂಚನೆ ವಿಜಯಪುರ: ವಿಜಯಪುರ ಜಿಲ್ಲೆಯ ಒಟ್ಟು ೫೯ ಪರೀಕ್ಷಾ ಕೇಂದ್ರಗಳಲ್ಲಿ ಮಾರ್ಚ್ ೦೧ ರಿಂದ ೨೨ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ಜರುಗಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು, ಮಾರ್ಗಸೂಚಿಗಳನ್ವಯ ಪಾರದರ್ಶಕತೆಯಿಂದ ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದ್ದಾರೆ.ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ : ಜಿಲ್ಲೆಯ ೫೯ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರದ ಸುತ್ತಲಿನ ೨೦೦ ಮೀಟರ್ ಪ್ರದೇಶವನ್ನು ಪರೀಕ್ಷೆ ಮುಗಿಯುವರೆಗೆ ಕಲಂ ೧೪೪ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.ಪರೀಕ್ಷೆಯಲ್ಲಿ ತೊಡಗಿರುವ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ಇತರರು ಮೊಬೈಲ್ ಫೋನ್ ತರುವುದನ್ನು ಹಾಗೂ ಬಳಸುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸಮೀಪದಲ್ಲಿರುವ ಝರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಸೆಂಟರ್‌ಗಳು, ಸೈಬರ್ ಕೆಫೆಗಳು, ಕೋಚಿಂಗ್…
ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಜಾಗೃತಿ ಸಭೆಯಲ್ಲಿ ಜಿಲ್ಲಾಧ್ಯಕ್ಷ ರಾಜು ಆಲಗೂರ ಕರೆ ದೇವರಹಿಪ್ಪರಗಿ: ದೇಶದಲ್ಲಿ ಐದು ಜನಪರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಏಕೈಕ ರಾಜ್ಯ ಕರ್ನಾಟಕವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜು ಆಲಗೂರ ಹೇಳಿದರು.ಪಟ್ಟಣದಲ್ಲಿ ಬುಧವಾರ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಜರುಗಿದ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತಾದ ಜಾಗೃತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮುಖ್ಯಮಂತ್ರಿ ಸಿದ್ಧರಾಮಯ್ಯ ಚುನಾವಣೆ ಪೂರ್ವದಲ್ಲಿ ನುಡಿದಂತೆ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದು ಅನುಷ್ಠಾನಗೊಳಿಸಿದ್ದಾರೆ. ಇದನ್ನು ಲೋಕಸಭೆ ಚುನಾವಣೆಗೆ ಮುನ್ನ ಪ್ರತಿ ಮನೆಮನೆಗೆ ತಲುಪಿಸುವ ಕಾರ್ಯವಾಗಬೇಕು ಎಂದರು.ಸಿಂದಗಿ ಕ್ಷೇತ್ರದ ಮಾಜಿಶಾಸಕ ಶರಣಪ್ಪ ಸುಣಗಾರ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸಂಗನಗೌಡ ಹರನಾಳ, ಬ್ಲಾಕ್ ಕಾಂಗ್ರೆಸ್ಸಿನ ಮಹಿಳಾ ಘಟಕದ ಅಧ್ಯಕ್ಷೆ ಸರಿತಾ ನಾಯಿಕ್, ಮಡಿವಾಳಪ್ಪ ಬ್ಯಾಲ್ಯಾಳ, ಜಹಾಂಗೀರ ಶಿರಸಗಿ ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದರು. ಪರಶುರಾಮ ದಿಂಡವಾರ ಪ್ರಾಸ್ತಾವಿಕವಾಗಿ ಮಾತನಾಡಿದರು.ದೇವರಹಿಪ್ಪರಗಿ ಹಾಗೂ ಹೂವಿನಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬಶೀರ್ ಅಹ್ಮದ್…
ದೇವರಹಿಪ್ಪರಗಿ: ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಕರ ಹಾಗೂ ಪಾಲಕರ ಪಾತ್ರ ಅತ್ಯಂತ ಮಹತ್ವಪೂರ್ಣವಾಗಿದೆ ಎಂದು ವಿಜಯಪುರ ಅನುಗ್ರಹ ಆಸ್ಪತ್ರೆಯ ಖ್ಯಾತ ನೇತ್ರತಜ್ಞ ಪ್ರಭುಗೌಡ ಬಿ.ಎಲ್(ಚಬನೂರ) ಹೇಳಿದರು.ಪಟ್ಟಣದಲ್ಲಿ ಮಂಗಳವಾರ ಇಂದುಮತಿ ಸಾವಳಗಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.ವಿದ್ಯೆಯೇ ನಿಜವಾದ ಸಂಪತ್ತು. ಮಕ್ಕಳಿಗಾಗಿ ನೀವು ಪಾಲಕರು ಯಾವದೇ ಸ್ಥಿರವಾದ ಆಸ್ತಿಗಳನ್ನು ಮಾಡದೇ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ ಉತ್ತಮ ಪ್ರಜೆಗಳನ್ನಾಗಿ ಮಾಡಿದರೇ ಅದುವೇ ಮಕ್ಕಳ ಪಾಲಿನ ದೊಡ್ಡ ಆಸ್ತಿ ಎಂದರು.ಕನ್ನೋಳ್ಳಿ ಹಿರೇಮಠದ ಶ್ರೀಸಿದ್ಧಲಿಂಗಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ಮಕ್ಕಳ ಕಲಿಕೆಗೆ ಇಂದು ಪಾಲಕರು ಹೆಚ್ಚಿನ ಆಸಕ್ತಿ, ಜವಾಬ್ದಾರಿ ವಹಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳುತ್ತಾ, ಮುಂದಿನ ದಿನಗಳಲ್ಲಿ ಸಂಸ್ಥೆ ಇನ್ನೂ ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಶಾಂತಪ್ಪ ಸಾವಳಗಿ ವಹಿಸಿಕೊಂಡು ಮಕ್ಕಳಿಗೆ ಪಾರಿತೋಷಕ ವಿತರಿಸಿದರು. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಗೀತೆಗಳ ಮನರಂಜನೆಯ ಕಾರ್ಯಕ್ರಮಗಳು ಜರುಗಿದವು.ಸಂಸ್ಥೆಯ ಕಾರ್ಯದರ್ಶಿ ಸಂತೋಷ ಸಾವಳಗಿ, ಶಂಕರಗೌಡ…
ಬಸವನಬಾಗೇವಾಡಿ: ಆರೂಢ ಮಹಾರಾಜಿ ಕೀ ಜೈ… ಎನ್ನುವ ಮುಗಿಲು ಮುಟ್ಟುವ ಜಯಘೋಷದೊಂದಿಗೆ ಭಕ್ತಾಧಿಗಳ ಸಮ್ಮುಖದಲ್ಲಿ ತಾಲ್ಲೂಕಿನ ಸುಕ್ಷೇತ್ರ ಆರೂಢರ ಐಕ್ಯಸ್ಥಳ ಆರೂಢ ನಂದಿಹಾಳದ ಬ್ರಹ್ಮಸ್ವರೂಪಿ ಶ್ರೀಗುರು ಆರೂಢರ ೪೨ನೇ ಜಾತ್ರಾ ಮಹೋತ್ಸವ ನಿಮಿತ್ಯ ರಥೋತ್ಸವ ಭಾರತ ಹುಣ್ಣಿಮೆಯ ದ್ವಿತೀಯ ದಿನವಾದ ಸೋಮವಾರ ಸಂಜೆ ವಿಜೃಂಭಣೆಯಿಂದ ಜರುಗಿತು.ಜಾತ್ರಾ ದಿನದಂದು ಶ್ರೀಗುರು ಆರೂಢರ ಐಕ್ಯ ಮಂಟಪಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅಭೀಷೇಕದ ನಂತರ ಕಳಸವನ್ನು ಹೆಂಗಳೆಯರಿಂದ ಕಳಸದೊಂದಿಗೆ ಗಂಗಾಸ್ಥಳಕ್ಕೆ ಕೊಂಡೊಯ್ದು ಪೂಜೆ ಸಲ್ಲಿಸಿ ಡೊಳ್ಳಿನ ಮೇಳದೊಂದಿಗೆ ಗ್ರಾಮದ ತುಂಬೆಲ್ಲಾ ಪಲ್ಲಕ್ಕಿ ಹಾಗೂ ಮಹಿಳೆಯರಿಂದ ಕುಂಭ ಮೆರವಣಿಗೆ ನಡೆಸಿ ಆರೂಢರು ಸಾಧನೆಗೈದ ಕೊಂಪಿಗೆ ಸಾಗಿ ಶ್ರೀಮಠಕ್ಕೆ ಆಗಮಿಸಿತು.ಗ್ರಾಮದ ಗುರುನಗೌಡ ಪಾಟೀಲ, ಬಸಯ್ಯ ಹಿರೇಮಠ, ರಾಮನಗೌಡ ಹಳ್ಳಿ, ಕೆಂಚು ವಾಲೀಕಾರ, ನಿಂಗಣ್ಣ ಮದರಿ ಅವರ ಮನೆಗಳಿಂದ ಕಳಸ, ಹಗ್ಗ, ಛತ್ರಿ ಛಾಮರಗಳನ್ನು ವಾದ್ಯ ವೈಭವಗಳೊಂದಿಗೆ ತರಲಾಯಿತು.ಸಂಜೆ ಪುಣೆ, ಗೋವಾ, ಮೈಸೂರು, ಹುಬ್ಬಳ್ಳಿ, ಬೆಂಗಳೂರು, ಬಳ್ಳಾರಿ, ಯಾದಗಿರಿ, ಕಲಬುರ್ಗಿ, ಬಾಗಲಕೋಟೆ, ರಾಯಚೂರು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ಸಹಸ್ರ ಸಂಖ್ಯೆಯ…
’ವ್ಯಂಗೋತ್ಸವ’- ಶ್ರೀನಿವಾಸ ಜಾಲವಾದಿ, ಸುರಪುರ ‘ರೆಡ್ಡಿನ್ನ ನಿಂದರಿಸಿ ಕೆಡವಿದ್ರಲೋ ತಮ್ಮಾ?’ ಕೇಳಿದ ಕಾಕಾ ಗುಡುಮ್ಯಾಗ’ಏನಪಾ ಕಾಕಾ ಯಾವಾಗ ಬಂದಿ? ನೋಡ್ಲೆ ಇಲ್ಲಲಾ?’ ಅಂದ ಗುಡುಮ್ಯಾ’ನಾ ವೋಟಿಂಗ್ ಮುಗದ ಮ್ಯಾಕ ಬಂದೆ’ ಅಂದ ಕಾಕಾ’ಯಾವ ವೋಟಿಂಗ? ಈಗ ಯಾವ್ದು ಎಲೆಕ್ಷನ್ಕ ವೋಟ ಹಾಕಾಕ ಹೋಗಿದ್ದೇಪಾ ಯಪ್ಪಾ?’ ಕೇಳಿದಳು ರಾಣಿ ಕುತೂಹಲದಿಂದ’ಏ ಅದೇ ರಾಜ್ಯಸಭಾ ಎಲೆಕ್ಷನ್ ಆತಲಾ, ಗೊತ್ತಿಲ್ಲೇನ ನಿಂಗ?’ ಎಂದ ಕಾಕಾ’ಅರೇ ಅದು ಹ್ಯಾಂಗ ನಿನ್ಗ ಗೊತ್ತಾತೈಪಾ?’ ಅಂದಳು ರಾಶಿ’ಏ ಮನಷಾ ಅಂದ ಮ್ಯಾಕ ಎಲ್ಲಾ ತಿಳ್ಕಂಡಿರಬೇಕು ತಿಳಿತಿಲ್ಲೋ?’ ಅಂತ ನಕ್ಕ ಕಾಕಾ’ಹೌದಾ?’ ಅಂತ ಬಾಯ್ತೆರೆದ ಗುಂಡ್ಯಾ’ಅದು ಸರಿ, ನೀ ಯಾಕ ಆ ಎಲೆಕ್ಷನ್ಕ ವೋಟ ಹಾಕಾಕ ಹೋಗಿದ್ದಿ?’ ಅಂತ ಎನ್ಕ್ವೈರಿ ಮಾಡಿದಳು ರಾಶಿ’ಯಾಕ, ಹೋಗಬಾರದಿತ್ತೇನು?’ ಅಂದ ಕಾಕಾ’ನಿಂಗ ಅಲ್ಲಿ ಒಳಾಕ ಬಿಟ್ರೇನು?’ ಅಂದ ಶೌರಿ’ಏ ಅಲ್ಲಿ ಬರೇ ಎಂಎಲ್ಎಯವರು ವೋಟ ಹಾಕುದಿತ್ತು, ನೀ ಯಾಕ ಅಲ್ಲಿ ಹೋಗಿದ್ದಿ?’ ಅಂದ ಕಾಳ್ಯಾ’ಅಲ್ಲಾ ಕಾಳ್ಯಾಗ ಸೈತ ಈ ವಿಷಯದಾಗ ತಿಳಿತೈತಿ,ನಿಂಗ ತಿಳೇಣಿಲ್ಲಾ?’ ಅಂದ ರಬಡ್ಯಾ’ಅಂದ್ರs…
ವಿಜಯಪುರ: ಪಾಕ್ ಪರ ಘೋಷಣೆ ಕೂಗಿದ ತಮ್ಮ ಬೆಂಬಲಿಗರ ಮೇಲೆ ಕ್ರಮ ಕೈಗೊಳ್ಳಿ ಎಂದು ಹೇಳುವುದನ್ನು ಬಿಟ್ಟು ಈ ವಿದ್ಯಮಾನದ ಕುರಿತು ಪ್ರಶ್ನೆ ಮಾಡಿದ ಪತ್ರಕರ್ತರ ಮೇಲೆ ಹರಿಹಾಯ್ದಿರುವ ರಾಜ್ಯ ಸಭಾ ಸದಸ್ಯ ನಾಸಿರ ಹುಸೇನ್ ಅವರ ಸದಸ್ಯತ್ವವನ್ನು ಅನುರ್ಜಿತಗೊಳಿಸಬೇಕು ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ ಒತ್ತಾಯಿಸಿದ್ದಾರೆ.ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಾಕ್ ಪರ ಘೋಷಣೆ ಮೊಳಗಿರುವುದೇ ದೊಡ್ಡ ದುರಂತ, ಇದನ್ನು ಖಂಡಿಸಬೇಕಾದ ಸಂಸದರು ಮಾಧ್ಯಮಗಳ ಮೇಲೆ ಏಕವಚನ ಪದ ಪ್ರಯೋಗಿಸಿ ನಿಂದಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ದೊಡ್ಡ ಅಪಮಾನ, ಕೂಡಲೇ ಅವರು ದೇಶದಜನತೆ ಹಾಗೂ ಮಾಧ್ಯಮ ವರ್ಗದ ಕ್ಷಮೆ ಕೋರಬೇಕು. ಈ ರೀತಿ ಒಬ್ಬ ಸಂಸದ ಬೇಜವಾಬ್ದಾರಿಯಿಂದ ವರ್ತನೆ ಮಾಡಿರುವುದು ಖಂಡನೀಯ. ಕೂಡಲೇ ಅವರನ್ನು ರಾಜ್ಯ ಸಭಾ ಸದಸ್ಯ ಸ್ಥಾನದಿಂದ ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
‘ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಮಾಲಿಕೆ) – ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರು, ಸ ಪ ಪೂ ಕಾಲೇಜು ಹಿರೇಬಾಗೇವಾಡಿ, ತಾ:ಜಿ: ಬೆಳಗಾವಿ ೯೪೪೯೨೩೪೧೪೨ ಹೋದ ವರ್ಷದಂತೆ ಪರೀಕ್ಷೆ ಸಮಯದಲ್ಲಿ ಕೊನೆ ಗಳಿಗೆಯಲ್ಲಿ ಒತ್ತಡದ ಓದನ್ನು ಈ ವರ್ಷ ಮುಂದುವರಿಸುವುದು ಬೇಡ ಅಂತ ದಿನಾಲೂ ಅಂದುಕೊಳ್ತಿನಿ. ಇವತ್ತಿನಿಂದ ಅಭ್ಯಾಸ ಪ್ರಾರಂಬಿಸಬೇಕು, ಗುರುಗಳು ಹೇಳಿದಂತೆ ಅಂದಂದಿನ ಅಭ್ಯಾಸ ಮಾಡಬೇಕಂತಾನೂ ಅಂದುಕೊಳ್ತಿನಿ. ಅಪ್ಪ ಅವ್ವನ ಒತ್ತಾಯಕ್ಕೆ ಶಾಲೆಯಲ್ಲಿ ಕೊಟ್ಟ ಮನೆಗೆಲಸ ಅನಿವಾರ್ಯವೆಂಬಂತೆ ಮುಗಿಸ್ತಿನಿ. ಟಿವಿ ಮೊಬೈಲ್‌ನೊಳಗ ಸಿಕ್ಕಿ ಹಾಕಿಕೊಂಡು ಸಮಯ ಸರಿದಿದ್ದೇ ಗೊತ್ತಾಗಲ್ಲ. ತಲೆದಿಂಬಿಗೆ ತಲೆ ಇಟ್ಟಾಗ ಮತ್ತೆ ಪಶ್ಚಾತ್ತಾಪವೆನಿಸುತ್ತದೆ. ನಾಳೆಯಿಂದ ಮೊದಲನೇ ಅಧ್ಯಾಯದಿಂದ ಎಲ್ಲ ವಿಷಯಗಳ ಓದನ್ನು ಪ್ರಾರಂಭಿಸ್ತಿನಿ ಅಂದುಕೊಂಡು ಮಲಗ್ತಿನಿ. ಮತ್ತೆ ಮರುದಿನವೂ ಇದೇ ಗೋಳು. ಇದಕ್ಕೆ ಏನು ಮಾಡಬೇಕು ಅಂತ ತಿಳಿತಿಲ್ಲ ಅನ್ನೋದು ರಾಜುವಿನ ಚಿಂತೆ. ಇದನ್ನು ತನ್ನ ಆತ್ಮೀಯ ಗೆಳೆಯ ಶಶಿ ಜೊತೆ ಹಂಚಿಕೊಳ್ಳುತ್ತಾನೆ. ನನ್ನ ಪರಿಸ್ಥತಿಯೇನೂ ಬೇರೆ ಇಲ್ಲ ಎನ್ನುವುದು ಶಶಿಯ ಉತ್ತರ. ಇವು ಕೇವಲ ರಾಜು ಮತ್ತು…
