ದೇವರಹಿಪ್ಪರಗಿ: ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಕರ ಹಾಗೂ ಪಾಲಕರ ಪಾತ್ರ ಅತ್ಯಂತ ಮಹತ್ವಪೂರ್ಣವಾಗಿದೆ ಎಂದು ವಿಜಯಪುರ ಅನುಗ್ರಹ ಆಸ್ಪತ್ರೆಯ ಖ್ಯಾತ ನೇತ್ರತಜ್ಞ ಪ್ರಭುಗೌಡ ಬಿ.ಎಲ್(ಚಬನೂರ) ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಇಂದುಮತಿ ಸಾವಳಗಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿದ್ಯೆಯೇ ನಿಜವಾದ ಸಂಪತ್ತು. ಮಕ್ಕಳಿಗಾಗಿ ನೀವು ಪಾಲಕರು ಯಾವದೇ ಸ್ಥಿರವಾದ ಆಸ್ತಿಗಳನ್ನು ಮಾಡದೇ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ ಉತ್ತಮ ಪ್ರಜೆಗಳನ್ನಾಗಿ ಮಾಡಿದರೇ ಅದುವೇ ಮಕ್ಕಳ ಪಾಲಿನ ದೊಡ್ಡ ಆಸ್ತಿ ಎಂದರು.
ಕನ್ನೋಳ್ಳಿ ಹಿರೇಮಠದ ಶ್ರೀಸಿದ್ಧಲಿಂಗಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ಮಕ್ಕಳ ಕಲಿಕೆಗೆ ಇಂದು ಪಾಲಕರು ಹೆಚ್ಚಿನ ಆಸಕ್ತಿ, ಜವಾಬ್ದಾರಿ ವಹಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳುತ್ತಾ, ಮುಂದಿನ ದಿನಗಳಲ್ಲಿ ಸಂಸ್ಥೆ ಇನ್ನೂ ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಶಾಂತಪ್ಪ ಸಾವಳಗಿ ವಹಿಸಿಕೊಂಡು ಮಕ್ಕಳಿಗೆ ಪಾರಿತೋಷಕ ವಿತರಿಸಿದರು. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಗೀತೆಗಳ ಮನರಂಜನೆಯ ಕಾರ್ಯಕ್ರಮಗಳು ಜರುಗಿದವು.
ಸಂಸ್ಥೆಯ ಕಾರ್ಯದರ್ಶಿ ಸಂತೋಷ ಸಾವಳಗಿ, ಶಂಕರಗೌಡ ಪಾಟೀಲ, ಸಂಗಮೇಶ ಪಾಟೀಲ, ಪ್ರವೀಣ ಕುಲಕರ್ಣಿ, ಶಶಿಕಾಂತ, ಸಚೀನ ಸಾವಳಗಿ, ಸಿಬ್ಬಂದಿ ಭಾಗ್ಯಶ್ರೀ ಹಂಚಾಟೆ, ಪವಿತ್ರಾ ಹಳಿಮನಿ, ಪೂಜಾ ಹಿರೇಮಠ ಸೇರಿದಂತೆ ಮಕ್ಕಳು, ಪಾಲಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

