Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ಪಟ್ಟಣದ ಕೂಡಲಸಂಗಮ ಅಭಿವೃದ್ಧಿ ಮಂಡಳಿಯಡಿಯಲ್ಲಿರುವ ಬಸವೇಶ್ವರ ದೇವಾಲಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸನ್ ೨೦೨೩-೨೪ ನೇ ಸಾಲಿನ ೭ ನೇ ವರ್ಗದ ವಿದ್ಯಾರ್ಥಿಗಳ ಶುಭಕೋರುವ ಸಮಾರಂಭವನ್ನು ಮಾ.೨ ರಂದು ಬೆಳಗ್ಗೆ ೯ ಗಂಟೆಗೆ ಬಸವೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದೆ.ಸಮಾರಂಭದ ಅಧ್ಯಕ್ಷತೆಯನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತ ಬಸಪ್ಪ ಪೂಜಾರಿ ವಹಿಸುವರು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಅನಿಲ ಅಗರವಾಲ ಸಮಾರಂಭ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳ ನಿರ್ದೇಶಕ ಐ.ಸಿ.ಪಟ್ಟಣಶೆಟ್ಟಿ ಆಗಮಿಸುವರು.ಶಾಲೆಯ ಎಸ್ಡಿಎಂಸಿ ಉಪಾಧ್ಯಕ್ಷ ಎಸ್.ಎಸ್.ಝಳಕಿ ಘನ ಉಪಸ್ಥಿತಿ ಇರುವರು. ಅತಿಥಿಗಳಾಗಿ ಸಿಆರ್ಸಿ ಬಸವರಾಜ ಚನಗೊಂಡ ಆಗಮಿಸುವರು. ಇದೇ ಸಂದರ್ಭದಲ್ಲಿ ಸನ್ ೨೦೨೨-೨೩ ನೇ ಸಾಲಿನ ೭ ನೇ ವರ್ಗದ ಪ್ರತಿಭಾನ್ವಿತ ವಿದ್ಯಾರ್ಥಿಯ ಸನ್ಮಾನ ನಡೆಯಲಿದೆ ಎಂದು ಶಾಲೆಯ ಮುಖ್ಯಗುರು ವೈ.ಎನ್.ಮಿಣಜಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವನಬಾಗೇವಾಡಿ: ಬದುಕಿನ ಬಹುಮುಖ್ಯ ಭಾಗವಾಗಿ ರೂಪುಗೊಂಡ ಹಂತಿ ಹೊಡೆಯುವದು ಇಂದು ಮಾಯವಾಗಿದೆ. ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ವೈಜ್ಞಾನಿಕ ಮತ್ತು ಕಾರ್ಮಿಕ ವ್ಯವಸ್ಥೆಯಲ್ಲಿ ಬೆಳೆದು ಬಂದು ಮಾನವರ ಬದುಕು ಕಟ್ಟಿಕೊಟ್ಟ ಹಂತಿ ಹೊಡೆಯುವದು ಶ್ರೇಷ್ಠವಾದ ಜಾನಪದ ಸಂಸ್ಕೃತಿಯಾಗಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಎಸ್ ಬಾಲಾಜಿ ಹೇಳಿದರು.ತಾಲೂಕಿನ ನರಸಲಗಿ ಗ್ರಾಮದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ, ತಾಲೂಕು ಘಟಕ ಸಹಯೋಗದಲ್ಲಿ ದೇವೇಂದ್ರ ಗೋನಾಳ ಅವರ ಹೊಲದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಹಂತಿ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ಬದುಕಿಗೆ ಬೇಕಾಗಿರುವ ಜೀವನಾಂಶಗಳು ಹಂತಿ ಆಚರಣೆಯಲ್ಲಿ ಕಾಣ ಸಿಗುತ್ತವೆ. ಇಂಥ ಒಕ್ಕಲು ಸಂಸ್ಕೃತಿಯನ್ನು ಕುರಿತು ವಿಶ್ವವಿದ್ಯಾಲಯಗಳು ಸಂಶೋಧನೆ ಕೈಗೊಂಡು ಕೃತಿ ರೂಪದಲ್ಲಿ ತಂದು ಮುಂದಿನ ಜನಾಂಗಕ್ಕೆ ಜಾನಪದದ ಗತಕಾಲದ ವೈಭವ ಪರಿಚಯಿಸಲಿ ಎಂದು ಸರಕಾರಕ್ಕೆ ಮನವಿ ಮಾಡಿದರು.ಹಂತಿ ಹಬ್ಬ ಕುರಿತು ಉಪನ್ಯಾಸ ನೀಡಿದ ಜನಪದ ಸಾಹಿತಿ ಶಂಕರ ಬೈಚಬಾಳ ಮಾತನಾಡಿ, ಜಾನಪದ ಸಂಸ್ಕೃತಿಯನ್ನು ವಿಶಾಲವಾಗಿ ವ್ಯಾಪಿಸಿಕೊಂಡಿರುವ ಒಕ್ಕಲುತನ ಭಾರತದ ಮೂಲ…
ಮುದ್ದೇಬಿಹಾಳ: ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಮಾ.೯ ರಂದು ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಕೌಂಪೌಂಡೇಬಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಭಯ ಪಕ್ಷಗಾರರಿಗೆ ನೊಟೀಸು ಜಾರಿ ಮಾಡಿದ್ದು ಅವುಗಳನ್ನು ಮಾ.೨ ರಂದು ನಿಗದಿಪಡಿಸಲಾಗಿದೆ. ಅಂದು ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಪಟ್ಟಣದ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದಲ್ಲಿ ಆರೋಪಿ ಪರ ವಕೀಲರು ಹಾಜರಾಗಿ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರೂ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀ ನಿಂಗಪ್ಪ ಗರಗ ತಿಳಿಸಿದ್ದಾರೆ.
ಮುದ್ದೇಬಿಹಾಳ: ವಿಕಸಿತ ಭಾರತದ ನಿರ್ಮಾಣವಾಗಬೇಕಾದಲ್ಲಿ ಮಾತೆಯರ ಪಾತ್ರ ಬಹಳ ಪ್ರಮುಖವಾಗಿದೆ ಎಂದು ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರ ಹೆಗಡೆ ಹೇಳಿದರು.ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಮಾತೃ ಭಾರತಿ ಪರಿಷತ್ ಪದಾಧಿಕಾರಿಗಳ ಪುನರ್ ರಚನೆ ಸಭೆಯಲ್ಲಿ ಅವರು ಮಾತನಾಡಿದರು.ಸಮಾಜದಲ್ಲಿ ಶಾಂತಿ, ಸಂಸ್ಕೃತಿ, ಸುವ್ಯವಸ್ಥೆ ಕಾಣಬೇಕಾದಲ್ಲಿ ಮೊದಲು ಮನೆಯಿಂದಲೇ ಸಂಸ್ಕಾರಯುತ ವಿದ್ಯೆ ದೊರೆಯುವ ಕಾರ್ಯವಾಗಬೇಕು. ಅದು ಮಾತೆಯಿಂದ ಮಾತ್ರ ಸಾಧ್ಯ. ಸಂಸ್ಕಾರಯುತ ವಿದ್ಯೆಯನ್ನು ಕಲಿತ ಮಗು ಮುಂದಿನ ಹಂತದಲ್ಲಿ ದಾರಿತಪ್ಪುವದಿಲ್ಲ. ಭಾರತದ ಸಮಗ್ರ ವಿಕಾಸವಾಗ ಬೇಕಾದಲ್ಲಿ ಸಮಾಜದ ಪ್ರತಿಯೊಂದು ಕ್ಷೇತ್ರ ಸುಧಾರಣೆಯಾಗುವುದು ಅವಶ್ಯವಿದೆ ಎಂದರು.ಮಾತೃ ಭಾರತಿ ಪರಿಷತ್ತಿನ ಮಾರ್ಗದರ್ಶಕರುಗಳಾದ ಲೀಲಾ ಭಟ್ಟ ಮತ್ತು ಶಾಂತಾ ಭಟ್ಟ ಮಾತಾಜೀಯವರು ಮಾತನಾಡಿ, ಮಾತೆಯರು ಕೆಲಸವನ್ನು ಸುಗಮವಾಗಿ ಮನೆಯಲ್ಲಿ ನಡೆಸಿಕೊಟ್ಟರೆ ಶಾಲೆಯಲ್ಲಿ ನಮ್ಮ ಪ್ರಯತ್ನ ಸರಳವಾಗುತ್ತದೆ ಎಂದರು.ಅಧ್ಯಕ್ಷರಾಗಿ ಶ್ರೀದೇವಿ ಪತ್ತಾರ, ಉಪಾಧ್ಯಕ್ಷರಾಗಿ ಅಕ್ಕಮಹಾದೇವಿ ಪೊಲೇಶಿ ಕಾರ್ಯದರ್ಶಿಯಾಗಿ ರಶ್ಮಿ ತೇಲಂಗಿ, ಸಹಕಾರ್ಯದರ್ಶಿಯಾಗಿ ಶಾರದಾ ಗಸ್ತಿಗಾರ, ಖಜಾಂಚಿಯಾಗಿ ವಿಜಯಲಕ್ಷ್ಮೀ ಸಾಸನೂರ ಸದಸ್ಯರಾಗಿ ರೇಖಾ ಹುದ್ದಾರ, ಕವಿತಾ ರಾಠೋಡ, ಲಾಲಬಿ ಮುಜಾವರ,…
ಸಿಂದಗಿ: ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಮೌಲಾಲಿ ಕೆ.ಆಲಗೂರ ಇವರು ಕಾಯಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇಂಡಿ ತಾಲೂಕಿನ ಹರಳಯ್ಯನಹಟ್ಟಿ (ಬೆನಕನಹಳ್ಳಿ) ಗ್ರಾಮದ ಅಪ್ಪ ಅವ್ವ ಪ್ರತಿಷ್ಠಾನ ವತಿಯಿಂದ ಇದೇ ಮಾ.೬ರಂದು ಪರಮಪೂಜ್ಯ ಶ್ರೀ ಸಿದ್ಧೇಶ್ವರ ಅಪ್ಪಾಜಿ ರವರ ನುಡಿನಮನ ಮತ್ತು ದಿ.ಚಂದ್ರಾಮ (ಮಾಸ್ತರ) ಹೊನಕಟ್ಟಿ ಇವರ ೨೨ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದ ಜರುಗಲಿದ್ದು, ಕಲೆ, ಸಾಹಿತ್ಯ, ಸಂಗೀತ, ಜನಪದ ಸೇರಿದಂತೆ ಇತರೆ ಸಾಧಕರಿಗೆ ಕಾಯಕ ಪ್ರಶಸ್ತಿ ಪ್ರದಾನ ಮಾಡಲಿದ್ದು, ಇದೇ ವೇಳೆ ಸಾಹಿತ್ಯ ಸೇವೆಯನ್ನು ಗುರುತಿಸಿ ಮೌಲಾಲಿ ಕೆ. ಆಲಗೂರ ಇವರಿಗೆ ಕಾಯಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರತಿಷ್ಠಾನದ ಜ್ಯೋತಿರ್ಲಿಂಗ ಹೊನ್ನಕಟ್ಟಿ (ಸಿಪಿಐ ಬೆಂಗಳೂರು) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಸ್ಲಿಂ ಬಾಗವಾನ ಜಮಾತನಿಂದ ನೂತನ ಶಾಸಕರಿಗೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಿಂದಗಿ: ಮನಗೂಳಿ ಮನೆತನಕ್ಕೂ ಹಾಗೂ ಮುಸ್ಲಿಂ ಬಾಗವಾನ ಜಮಾತ್‌ಗೂ ನಮ್ಮ ತಂದೆಯವರ ಕಾಲದಿಂದಲೂ ಒಂದು ಅವಿನಾಭಾವ ಸಂಬಂಧವಿದೆ. ಪ್ರಥಮವಾಗಿ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ತಂದೆ ದಿ.ಎಂ.ಸಿ.ಮನಗೂಳಿ ಅವರ ಚುನಾವಣೆಯಲ್ಲಿ ಸೈಕಲ್ ಮೂಲಕ ಪ್ರಚಾರ ಮಾಡಿದ ಕೀರ್ತಿ ಭಾಗವಾನ ಸಮುದಾಯದ ಹಿರಿಯರಿಗೆ ಸಲ್ಲುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಮುಸ್ಲಿಂ ಬಾಗವಾನ ಜಮಾತ್, ಡಾ. ಎಪಿಜೆ ಅಬ್ದುಲ್‌ಕಲಾಂ ತರಕಾರಿ ಮಾರುಕಟ್ಟೆ ಆವರಣದಲ್ಲಿ ಹಮ್ಮಿಕೊಂಡ ನೂತನ ಶಾಸಕರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಕ್ಷೇತ್ರದ ಜನತೆ ಮನಗೂಳಿ ಮನೆತನದ ಮೇಲೆ ಅಪಾರವಾದ ಅಭಿಮಾನವನ್ನು ಇಟ್ಟು ನಿರೀಕ್ಷೆಗಿಂತಲೂ ಹೆಚ್ಚು ಮತಗಳಿಂದ ಆಯ್ಕೆ ಮಾಡಿ ಶಾಸಕನಾಗಿ ಆಯ್ಕೆ ಮಾಡಿ ವಿಧಾನ ಸಭೆಗೆ ಕಳುಹಿಸಿ ಮತಕ್ಷೇತ್ರದ ಸೇವೆ ಮಾಡಲು ಅವಕಾಶ ನೀಡಿದ್ದೀರಿ. ತಮ್ಮೆಲ್ಲರಿಗೆ ಕೊಟ್ಟ ಭರವಸೆಗಳನ್ನು ಹುಸಿ ಹೋಗದಂತೆ ಅಭಿವೃದ್ಧಿ ಕಾಮಗಾರಿಗಳನ್ನು…
ಮಾಜಿ ಶಾಸಕ ರಮೇಶ ಭೂಸನೂರ ಗೆ ಶಾಸಕ ಅಶೋಕ ಮನಗೂಳಿ ಸವಾಲು ಸಿಂದಗಿ: ಜನತೆ ನನ್ನನ್ನು ಆರಿಸಿದ್ದು ಶಾಸಕರಾಗಿ ಮೆರೆಯಲು ಅಲ್ಲ, ಕ್ಷೇತ್ರದ ಅಭಿವೃದ್ಧಿಗಾಗಿ. ಗ್ಯಾರಂಟಿಗಳಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂಬುದು ಸುಳ್ಳು. ಇದರಿಂದ ಸಾಕಷ್ಟು ಬಡ ಕುಟುಂಬಗಳು ನೆಮ್ಮದಿಯ ನಿಟ್ಟುಸಿರಿನ ಜೀವನ ನಡೆಸುತ್ತಿವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಎಪಿಎಂಸಿ ಯಾರ್ಡನಲ್ಲಿರುವ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೧೨೫ಕೋಟಿ ಅನುದಾನ ತಂದಿರುವುದು ಸುಳ್ಳು ಎಂದು ಹೇಳಿ ದಾಖಲೆಗಳನ್ನು ಸಾಬೀತುಪಡಿಸಲಿ ಎಂದು ಮಾಜಿ ಶಾಸಕರು ಸವಾಲು ಹಾಕಿದ್ದನ್ನು ಪಕ್ಷದ ಮುಖಂಡರು ಸವಾಲಾಗಿ ಸ್ವೀಕರಿಸಿ, ಸಿಂದಗಿ ಮತಕ್ಷೇತ್ರಕ್ಕೆ ತಂದಿರುವ ೧೨೫ ಕೋಟಿ ಅನುದಾನದ ದಾಖಲೆಗಳನ್ನು ಮಾಧ್ಯಮದ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ಅವರು ೨೦೦೮-೨೦೧೩, ೨೦೧೩-೨೦೧೮, ೨೦೨೧-೨೩ ೧೭೬ ತಿಂಗಳ ಅಧಿಕಾರ ಮಾಡಿದ್ದಾರೆ. ಆದರೆ ನಾನು ಇನ್ನೂ ೯ ತಿಂಗಳ ಅಧಿಕಾರ ಹಿಡಿದ ಕೂಸು. ರಾಜಕೀಯ ಅನುಭವವಿರುವ ಭೂಸನೂರ ಇಂತಹ ಹೇಳಿಕೆ ಕೊಡುವುದು ಸೂಕ್ತವಲ್ಲ ಎಂದು ಹರಿಹಾಯ್ದರು.ಸಿಂದಗಿ ಮತಕ್ಷೇತ್ರಕ್ಕೆ…
ಮುದ್ದೇಬಿಹಾಳ: ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ವಿವಿಧ ದಲಿಪರ ಸಂಘಟನೆಗಳ ನೇತೃತ್ವದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಡಿಎಸ್‌ಎಸ್ ಮುಖಂಡರಾದ ಹರೀಶ ನಾಟೆಕಾರ, ಬಸವರಾಜ ಸಿದ್ದಾಪೂರ, ಪರಶುರಾಮ ಮುರಾಳ, ಪ್ರಶಾಂತ ಕಾಳೆ, ಪ್ರಕಾಶ ಸರೂರ ಸೇರಿದಂತೆ ಮತ್ತೀತರರು ಇದ್ದರು.
ಮುದ್ದೇಬಿಹಾಳ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಎಪಿಎಂಸಿ ನಿದೇಶಕ ವಾಯ್.ಎಚ್.ವಿಜಯಕರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ, ಕಾಂಗ್ರೇಸ್ ಮುಖಂಡ ಸಿ.ಜಿ.ವಿಜಯಕರ, ಮಾಜಿ ಸೈನಿಕ ರೇವಣಪ್ಪ ಅಜಮನಿ, ಪ್ರಮುಖರಾದ ಶರಣು ಚಲವಾದಿ, ಪ್ರಶಾಂತ ಕಾಳೆ, ಅನೀಲ ಅಜಮನಿ ಸೇರಿದಂತೆ ವಿವಿಧಪರ ಸಂಘಟನೆಗಳ ಮುಖಂಡರು ಇದ್ದರು.
ವಿಜಯಪುರ: ಜಿಲ್ಲೆಯಲ್ಲಿ ಇಂದು ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ೨೭೪೬೧ ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು, ೨೬೨೭೫ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ೧೧೮೬ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರ ಹಾಜರಾಗಿದ್ದರು. ಅದರಂತೆ ಅರೇಬಿಕ್ ಭಾಷಾ ಪರೀಕ್ಷೆಗೆ ಜಿಲ್ಲೆಯಲ್ಲಿ ೧೧೬ ವಿದ್ಯಾರ್ಥಿಗಳು ನೊಂದಾಯಿಸಿಕೊಂಡು ೧೧೬ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಕೆ.ಹೊಸಮನಿ ಅವರು ತಿಳಿಸಿದ್ದಾರೆ.
