ಬಸವನಬಾಗೇವಾಡಿ: ಬದುಕಿನ ಬಹುಮುಖ್ಯ ಭಾಗವಾಗಿ ರೂಪುಗೊಂಡ ಹಂತಿ ಹೊಡೆಯುವದು ಇಂದು ಮಾಯವಾಗಿದೆ. ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ವೈಜ್ಞಾನಿಕ ಮತ್ತು ಕಾರ್ಮಿಕ ವ್ಯವಸ್ಥೆಯಲ್ಲಿ ಬೆಳೆದು ಬಂದು ಮಾನವರ ಬದುಕು ಕಟ್ಟಿಕೊಟ್ಟ ಹಂತಿ ಹೊಡೆಯುವದು ಶ್ರೇಷ್ಠವಾದ ಜಾನಪದ ಸಂಸ್ಕೃತಿಯಾಗಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಎಸ್ ಬಾಲಾಜಿ ಹೇಳಿದರು.
ತಾಲೂಕಿನ ನರಸಲಗಿ ಗ್ರಾಮದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ, ತಾಲೂಕು ಘಟಕ ಸಹಯೋಗದಲ್ಲಿ ದೇವೇಂದ್ರ ಗೋನಾಳ ಅವರ ಹೊಲದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಹಂತಿ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ಬದುಕಿಗೆ ಬೇಕಾಗಿರುವ ಜೀವನಾಂಶಗಳು ಹಂತಿ ಆಚರಣೆಯಲ್ಲಿ ಕಾಣ ಸಿಗುತ್ತವೆ. ಇಂಥ ಒಕ್ಕಲು ಸಂಸ್ಕೃತಿಯನ್ನು ಕುರಿತು ವಿಶ್ವವಿದ್ಯಾಲಯಗಳು ಸಂಶೋಧನೆ ಕೈಗೊಂಡು ಕೃತಿ ರೂಪದಲ್ಲಿ ತಂದು ಮುಂದಿನ ಜನಾಂಗಕ್ಕೆ ಜಾನಪದದ ಗತಕಾಲದ ವೈಭವ ಪರಿಚಯಿಸಲಿ ಎಂದು ಸರಕಾರಕ್ಕೆ ಮನವಿ ಮಾಡಿದರು.
ಹಂತಿ ಹಬ್ಬ ಕುರಿತು ಉಪನ್ಯಾಸ ನೀಡಿದ ಜನಪದ ಸಾಹಿತಿ ಶಂಕರ ಬೈಚಬಾಳ ಮಾತನಾಡಿ, ಜಾನಪದ ಸಂಸ್ಕೃತಿಯನ್ನು ವಿಶಾಲವಾಗಿ ವ್ಯಾಪಿಸಿಕೊಂಡಿರುವ ಒಕ್ಕಲುತನ ಭಾರತದ ಮೂಲ ಸಂಸ್ಕೃತಿಯನ್ನು ಜೋಪಾನವಾಗಿಟ್ಟಿದೆ. ಸನಾತನ ವಿಚಾರಧಾರೆಯನ್ನು ಇಂದಿನ ವೈಜ್ಞಾನಿಕ ವಿಚಾರಧಾರೆಗಳೊಂದಿಗೆ ತುಲನೆ ಮಾಡಬೇಕಾದ ಅಗತ್ಯವಿದೆ ಎಂದರು.
ವಿಜಯಪುರ ಜಿಲ್ಲೆಯಲ್ಲಿ ಕನ್ನಡ ಜಾನಪದ ಪರಿಷತ್ತು ಜಾನಪದ ಕಲೆ, ಸಾಹಿತ್ಯ,ಆಚರಣೆ, ಸಂಪ್ರದಾಯ ಉಳಿಸುವ ನಿಟ್ಟಿನಲ್ಲಿ ನಾಗಾಲೋಟದಲ್ಲಿ ಕೆಲಸ ಮಾಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಮಾತನಾಡಿದರು.
ಬಸವನಬಾಗೇವಾಡಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ, ಬಸವತತ್ವ ಚಿಂತಕ ಮೋಹನ ಕಟ್ಟಿಮನಿ, ಸರಕಾರಿ ನೌಕರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಹಂಡೆವಜೀರ ಸಮಾಜದ ರಾಜ್ಯಾಧ್ಯಕ್ಷ ಡಾ ಎಸ್. ಎಸ್. ಪಾಟೀಲ, ಕೃಷಿಕ ಆರ್ .ಎಸ್. ಪಾಟೀಲ, ಚುಸಾಪ ಅಧ್ಯಕ್ಷ ಪ್ರಭಾಕರ ಖೇಡದ, ಕೃಷಿಕ ಶಾಂತಗೌಡ ಹೊಸಳ್ಳಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಪದಾಧಿಕಾರಿಗಳಾದ ಪುಂಡಲೀಕ ಮುರಾಳ, ಪ್ರೊ ಜಿ ಎಂ ಹಳ್ಳೂರ, ಮೌಲಾಸಾಹೇಬ ಜಹಾಗೀರದಾರ, ಕಜಾಪ ಅಧ್ಯಕ್ಷರಾದ ಎಂ ಆರ್ ಮುಲ್ಲಾ, ಸಿದ್ದನಗೌಡ ಕಾಶಿನಕುಂಟಿ, ಪ್ರಭು ಅರಳಿಚಂಡಿ , ಚಾಂದಸಾಬ ವಾಲಿಕಾರ , ಶಸಾಪ ಅಧ್ಯಕ್ಷ ನ್ಯಾಯವಾದಿ ವೀರಣ್ಣ ಮರ್ತೂರ, ಕಸಾಪ ಮಾಜಿ ಅಧ್ಯಕ್ಷ ಆರ್. ಜಿ .ಅಳ್ಳಗಿ, ರವಿ ಚಿಕ್ಕೊಂಡ, ಕೆ ಎಸ್ ಅವಟಿ, ಎನ್. ಎಸ್. ಹೂಗಾರ, ಶ್ರೀಶೈಲಗೌಡ ಹೊಸಳ್ಳಿ, ಮಾಂತಪ್ಪ ಹಾಲ್ಯಾಳ, ಗಿರೆಪ್ಪ ಸಾಹುಕಾರ ಗೋನಾಳ, ಬಸವರಾಜ ಸಗರನಾಳ, ಶರಣಪ್ಪ ಗೋನಾಳ ಇತರರು ಇದ್ದರು.
ಹಂತಿ ಹೊಡೆಯುವ ಮುಂಚೆ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ಮಾಡಲಾಯಿತು. ನರಸಲಗಿ, ಇವಣಗಿ, ಬಸವನಬಾಗೇವಾಡಿ, ಡೋಣೂರ, ನಾಗೂರ ಜನಪದ ಕಲಾವಿದರು ಹಂತಿ ಹಾಡು ಹಾಡಿ ಗತಕಾಲದ ಹಂತಿ ವೈಭವ ಅನಾವರಣಗೊಳಿಸಿದರು.
ಕನ್ನಡ ಜಾನಪದ ಪರಿಷತ್ ತಾಲೂಕಾಧ್ಯಕ್ಷ ದೇವೇಂದ್ರ ಗೋನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಲಾವಿದರಾದ ಬಸವರಾಜ ಹಾರಿವಾಳ, ಬಸಣ್ಣ ಪೂಜಾರಿ ಪ್ರಾರ್ಥನೆ ಮಾಡಿದರು. ಮುತ್ತುರಾಜ ಹಾಲ್ಯಾಳ ಸ್ವಾಗತಿಸಿದರು. ಬಿ. ಎಂ .ಮುತ್ತತ್ತಿ ನಿರೂಪಿಸಿದರು. ಗುರು ದಳವಾಯಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

