ಬಸವನಬಾಗೇವಾಡಿ: ಪಟ್ಟಣದ ಕೂಡಲಸಂಗಮ ಅಭಿವೃದ್ಧಿ ಮಂಡಳಿಯಡಿಯಲ್ಲಿರುವ ಬಸವೇಶ್ವರ ದೇವಾಲಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸನ್ ೨೦೨೩-೨೪ ನೇ ಸಾಲಿನ ೭ ನೇ ವರ್ಗದ ವಿದ್ಯಾರ್ಥಿಗಳ ಶುಭಕೋರುವ ಸಮಾರಂಭವನ್ನು ಮಾ.೨ ರಂದು ಬೆಳಗ್ಗೆ ೯ ಗಂಟೆಗೆ ಬಸವೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತ ಬಸಪ್ಪ ಪೂಜಾರಿ ವಹಿಸುವರು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಅನಿಲ ಅಗರವಾಲ ಸಮಾರಂಭ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳ ನಿರ್ದೇಶಕ ಐ.ಸಿ.ಪಟ್ಟಣಶೆಟ್ಟಿ ಆಗಮಿಸುವರು.ಶಾಲೆಯ ಎಸ್ಡಿಎಂಸಿ ಉಪಾಧ್ಯಕ್ಷ ಎಸ್.ಎಸ್.ಝಳಕಿ ಘನ ಉಪಸ್ಥಿತಿ ಇರುವರು. ಅತಿಥಿಗಳಾಗಿ ಸಿಆರ್ಸಿ ಬಸವರಾಜ ಚನಗೊಂಡ ಆಗಮಿಸುವರು. ಇದೇ ಸಂದರ್ಭದಲ್ಲಿ ಸನ್ ೨೦೨೨-೨೩ ನೇ ಸಾಲಿನ ೭ ನೇ ವರ್ಗದ ಪ್ರತಿಭಾನ್ವಿತ ವಿದ್ಯಾರ್ಥಿಯ ಸನ್ಮಾನ ನಡೆಯಲಿದೆ ಎಂದು ಶಾಲೆಯ ಮುಖ್ಯಗುರು ವೈ.ಎನ್.ಮಿಣಜಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
