ಮುದ್ದೇಬಿಹಾಳ: ವಿಕಸಿತ ಭಾರತದ ನಿರ್ಮಾಣವಾಗಬೇಕಾದಲ್ಲಿ ಮಾತೆಯರ ಪಾತ್ರ ಬಹಳ ಪ್ರಮುಖವಾಗಿದೆ ಎಂದು ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರ ಹೆಗಡೆ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಮಾತೃ ಭಾರತಿ ಪರಿಷತ್ ಪದಾಧಿಕಾರಿಗಳ ಪುನರ್ ರಚನೆ ಸಭೆಯಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಶಾಂತಿ, ಸಂಸ್ಕೃತಿ, ಸುವ್ಯವಸ್ಥೆ ಕಾಣಬೇಕಾದಲ್ಲಿ ಮೊದಲು ಮನೆಯಿಂದಲೇ ಸಂಸ್ಕಾರಯುತ ವಿದ್ಯೆ ದೊರೆಯುವ ಕಾರ್ಯವಾಗಬೇಕು. ಅದು ಮಾತೆಯಿಂದ ಮಾತ್ರ ಸಾಧ್ಯ. ಸಂಸ್ಕಾರಯುತ ವಿದ್ಯೆಯನ್ನು ಕಲಿತ ಮಗು ಮುಂದಿನ ಹಂತದಲ್ಲಿ ದಾರಿತಪ್ಪುವದಿಲ್ಲ. ಭಾರತದ ಸಮಗ್ರ ವಿಕಾಸವಾಗ ಬೇಕಾದಲ್ಲಿ ಸಮಾಜದ ಪ್ರತಿಯೊಂದು ಕ್ಷೇತ್ರ ಸುಧಾರಣೆಯಾಗುವುದು ಅವಶ್ಯವಿದೆ ಎಂದರು.
ಮಾತೃ ಭಾರತಿ ಪರಿಷತ್ತಿನ ಮಾರ್ಗದರ್ಶಕರುಗಳಾದ ಲೀಲಾ ಭಟ್ಟ ಮತ್ತು ಶಾಂತಾ ಭಟ್ಟ ಮಾತಾಜೀಯವರು ಮಾತನಾಡಿ, ಮಾತೆಯರು ಕೆಲಸವನ್ನು ಸುಗಮವಾಗಿ ಮನೆಯಲ್ಲಿ ನಡೆಸಿಕೊಟ್ಟರೆ ಶಾಲೆಯಲ್ಲಿ ನಮ್ಮ ಪ್ರಯತ್ನ ಸರಳವಾಗುತ್ತದೆ ಎಂದರು.
ಅಧ್ಯಕ್ಷರಾಗಿ ಶ್ರೀದೇವಿ ಪತ್ತಾರ, ಉಪಾಧ್ಯಕ್ಷರಾಗಿ ಅಕ್ಕಮಹಾದೇವಿ ಪೊಲೇಶಿ ಕಾರ್ಯದರ್ಶಿಯಾಗಿ ರಶ್ಮಿ ತೇಲಂಗಿ, ಸಹಕಾರ್ಯದರ್ಶಿಯಾಗಿ ಶಾರದಾ ಗಸ್ತಿಗಾರ, ಖಜಾಂಚಿಯಾಗಿ ವಿಜಯಲಕ್ಷ್ಮೀ ಸಾಸನೂರ ಸದಸ್ಯರಾಗಿ ರೇಖಾ ಹುದ್ದಾರ, ಕವಿತಾ ರಾಠೋಡ, ಲಾಲಬಿ ಮುಜಾವರ, ಬಸಮ್ಮ ಕೆಂಧೂಳಿ, ಸುನಿತಾ ವಡ್ಡರ, ಕಾವೇರಿ ಜೋಶಿ, ಗುರುಬಾಯಿ ತಂಗಡಗಿ, ಶಾಹಿನ ನಾಲತವಾಡ ಶಾಲಾ ಮಕ್ಕಳ ಎಲ್ಲ ಪಾಲಕ ತಾಯಂದಿರನ್ನು ಸರ್ವಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಈ ವೇಳೆ ಶೀಕ್ಷಕಿಯರಾದ ಸರಸ್ವತಿ ಮಡಿವಾಳರ್, ಅನ್ನಪೂರ್ಣ ನಾಗರಾಳ, ರಂಜಿತಾ ಭಟ್ಟ, ಗೀತಾ ಇಲ್ಲೂರ, ಭಾಗ್ಯ ಸಿದ್ದಾಪೂರ, ರೂಪಾ ನಾಟೆಕರ್, ಮಂಜುಳಾ ದಶರಥ, ಸುಮಾ ಬಳಗಾನೂರ, ಮೀನಾಕ್ಷಿ ಗಣಾಚರಿ, ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

