ಮುಸ್ಲಿಂ ಬಾಗವಾನ ಜಮಾತನಿಂದ ನೂತನ ಶಾಸಕರಿಗೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ
ಸಿಂದಗಿ: ಮನಗೂಳಿ ಮನೆತನಕ್ಕೂ ಹಾಗೂ ಮುಸ್ಲಿಂ ಬಾಗವಾನ ಜಮಾತ್‌ಗೂ ನಮ್ಮ ತಂದೆಯವರ ಕಾಲದಿಂದಲೂ ಒಂದು ಅವಿನಾಭಾವ ಸಂಬಂಧವಿದೆ. ಪ್ರಥಮವಾಗಿ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ತಂದೆ ದಿ.ಎಂ.ಸಿ.ಮನಗೂಳಿ ಅವರ ಚುನಾವಣೆಯಲ್ಲಿ ಸೈಕಲ್ ಮೂಲಕ ಪ್ರಚಾರ ಮಾಡಿದ ಕೀರ್ತಿ ಭಾಗವಾನ ಸಮುದಾಯದ ಹಿರಿಯರಿಗೆ ಸಲ್ಲುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಮುಸ್ಲಿಂ ಬಾಗವಾನ ಜಮಾತ್, ಡಾ. ಎಪಿಜೆ ಅಬ್ದುಲ್‌ಕಲಾಂ ತರಕಾರಿ ಮಾರುಕಟ್ಟೆ ಆವರಣದಲ್ಲಿ ಹಮ್ಮಿಕೊಂಡ ನೂತನ ಶಾಸಕರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕ್ಷೇತ್ರದ ಜನತೆ ಮನಗೂಳಿ ಮನೆತನದ ಮೇಲೆ ಅಪಾರವಾದ ಅಭಿಮಾನವನ್ನು ಇಟ್ಟು ನಿರೀಕ್ಷೆಗಿಂತಲೂ ಹೆಚ್ಚು ಮತಗಳಿಂದ ಆಯ್ಕೆ ಮಾಡಿ ಶಾಸಕನಾಗಿ ಆಯ್ಕೆ ಮಾಡಿ ವಿಧಾನ ಸಭೆಗೆ ಕಳುಹಿಸಿ ಮತಕ್ಷೇತ್ರದ ಸೇವೆ ಮಾಡಲು ಅವಕಾಶ ನೀಡಿದ್ದೀರಿ. ತಮ್ಮೆಲ್ಲರಿಗೆ ಕೊಟ್ಟ ಭರವಸೆಗಳನ್ನು ಹುಸಿ ಹೋಗದಂತೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತೇನೆ. ಮತ್ತು ಇನ್ನೂ ೬ ತಿಂಗಳಲ್ಲಿ ಶಾದಿ ಮಹಲ್ ಕಾಮಗಾರಿಯನ್ನು ಪೂರ್ಣಗೊಳಿಸಿ ವಿಜಯಪುರ ಮಾಜಿ ಶಾಸಕ ಮಕಬುಲ್ ಭಾಗವಾನ ಅವರನ್ನು ಕರೆಸಿ ಭೂಮಿ ಪೂಜೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಲಿಂಪಟೇಲ್ ಮರ್ತೂರ ಒಳಗೊಂಡು ಅನೇಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಮೌಲಾನ ಮೊಹಮದ್ ಹುಸೇನ್ ಉಮರಿ ದಿವ್ಯ ಸಾನಿಧ್ಯ ವಹಿಸಿದ್ದರು. ಮುಫ್ತಿ ಸೋಹೆಲ್ ಬ್ಯಾಕೋಡ ಸಾನಿಧ್ಯ ವಹಿಸಿದ್ದರು.
ವಿಜಯಪುರ ಮಾಜಿ ಶಾಸಕ ಮಕಬುಲ್ ಭಾಗವಾನ, ಅಶೋಕ ವಾರದ, ಅಬ್ದುಲ್ ಖಾದಿರ ಬಾಗವಾನ, ಹೊರ್ತಿ, ದಿನೇಶ್ ಹಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರಿಫ್ ಬಿರಾದಾರ್, ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಸುರೇಶ್ ಪೂಜಾರ, ಆಲಮೇಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಧಿಕ್ ಸುಂಬಡ್, ಸೈಪನ್ ಸಾಬ್ ನಾಟಿಕಾರ್ ಸೇರಿದಂತೆ ಅನೇಕರಿದ್ದರು.

