Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಆಯಾ ರಾಜಕೀಯ ಪಕ್ಷಗಳಿಗೆ ವಿಜಯಪುರ ನಗರ ಮತಕ್ಷೇತ್ರದ ನೋಂದಣಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತಂತೆ ಆಯಾ ರಾಜಕೀಯ ಪಕ್ಷದವರು ತಮ್ಮ ಮತಗಟ್ಟೆ ಮಟ್ಟದ ಏಜೆಂಟರನ್ನು ಕೂಡಲೇ ನೇಮಕ ಮಾಡಿಕೊಳ್ಳಬೇಕು ಎಂದು ವಿಜಯಪುರ ನಗರ ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳಾದ ಮಹಾನಗರ ಪಾಲಿಕೆ ಆಯುಕ್ತರಾದ ವಿಜಯ ಮೆಕ್ಕಳಕಿ ಹೇಳಿದರು.ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಕೈಗೊಳ್ಳುವ ಕುರಿತಂತೆ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಇತ್ತಿಚಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಗರ ಮತಕ್ಷೇತ್ರದಲ್ಲಿ ೨೦೨೬ರ ಮೇ ೨೬ ರಂತೆ ಒಟ್ಟು ೨,೯೨,೧೭೯ ಮತದಾರರಿದ್ದಾರೆ. ಒಟ್ಟು ೨೮೫ ಮತಗಟ್ಟೆಗಳಿದ್ದು ೨೮೫ ಜನ ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಗೂ ೨೮ ಜನ ಮತಗಟ್ಟೆ ಮಟ್ಟದ ಮೇಲ್ವಿಚಾರಕರು ಕಾರ್ಯ ನಿರ್ವಹಿಸುತ್ತಿದ್ದಾರೆ.ರಾಜಕೀಯ ಪಕ್ಷದವರು ತಮ್ಮ ಮತಗಟ್ಟೆ ಮಟ್ಟದ ಏಜೆಂಟ್ ರನ್ನು ಕೂಡಲೇ ನೇಮಕ ಮಾಡಿಕೊಳ್ಳಬೇಕು ಎಂದು…
ಮುದ್ದೇಬಿಹಾಳ-ತಾಳಿಕೋಟೆ ನ್ಯಾಯಾಲಯಗಳಲ್ಲಿ ಒಬ್ಬರೇ ನ್ಯಾಯಾಧೀಶರು ಕಾರ್ಯನಿರ್ವಹಿಸುವ ವ್ಯವಸ್ಥೆ | ನ್ಯಾಯ ವಿತರಣೆಗೆ ಹಿನ್ನಡೆಯ ಆತಂಕ | ಹೆಚ್ಚುವರಿ ನ್ಯಾಯಾಲಯ ಬೇಡಿಕೆ ಉದಯರಶ್ಮಿ ದಿನಪತ್ರಿಕೆ ವರದಿ: ಚೇತನ ಶಿವಶಿಂಪಿಮುದ್ದೇಬಿಹಾಳ: ಈಗಾಗಲೇ ಸುಮಾರು ೫ ಸಾವಿರಕ್ಕೂ ಹೆಚ್ಚು ಪ್ರಕರಣಗಳ ಭಾರ ಹೊತ್ತಿರುವ ಪಟ್ಟಣದ ಸಿವಿಲ್ ನ್ಯಾಯಾಲಯಕ್ಕೆ (ಕಿರಿಯ ಶ್ರೇಣಿ) ನ್ಯಾಯಾಧೀಶರ ಕೊರತೆಯ ಸಮಸ್ಯೆ ಎದುರಾಗಿದ್ದು, ಒಬ್ಬರೇ ನ್ಯಾಯಾಧೀಶರು ಮುದ್ದೇಬಿಹಾಳ ಮತ್ತು ತಾಳಿಕೋಟೆ ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥೆ ಜಾರಿಯಾಗಿರುವುದು ಸಾರ್ವಜನಿಕರು ಹಾಗೂ ವಕೀಲರ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.ಮುದ್ದೇಬಿಹಾಳದಲ್ಲಿ ಒಂದೇ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ಪ್ರಕರಣಗಳು ಬಾಕಿ ಉಳಿದಿವೆ. ಇಂತಹ ಸಂದರ್ಭದಲ್ಲಿ ಪ್ರತ್ಯೇಕ ನ್ಯಾಯಾಧೀಶರನ್ನು ನೇಮಕ ಮಾಡುವ ಬದಲು, ಅದೇ ನ್ಯಾಯಾಧೀಶರಿಗೆ ತಾಳಿಕೋಟೆ ನ್ಯಾಯಾಲಯದ ಜವಾಬ್ದಾರಿಯನ್ನೂ ನೀಡಲಾಗಿದೆ. ಪರಿಣಾಮವಾಗಿ ವಾರದಲ್ಲಿ ಮೂರು ದಿನಗಳ ಕಾಲ ಮುದ್ದೇಬಿಹಾಳ, ಮೂರು ದಿನಗಳ ಕಾಲ ತಾಳಿಕೋಟೆ ನಡುವೆ ಓಡಾಟ ನಡೆಸುತ್ತಾ ಎರಡೂ ನ್ಯಾಯಾಲಯಗಳ ಕಾರ್ಯಭಾರ ನಿಭಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಇದರಿಂದ ಈಗಾಗಲೇ ವಿಳಂಬವಾಗುತ್ತಿರುವ ಪ್ರಕರಣಗಳ ವಿಚಾರಣೆ ಮತ್ತಷ್ಟು ಮುಂದೂಡಿಕೆಯಾಗುವ ಸಾಧ್ಯತೆ…
ರಾಜ್ಯಕ್ಕೆ ಮೊದಲ ರ‍್ಯಾಂಕ್ ನೀಡುವ ಮೂಲಕ ಮತ್ತೊಂದು ಮೈಲುಗಲ್ಲು ನೆಟ್ಟ ಎಕ್ಸಲಂಟ್ ಕಾಲೇಜು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರತಿ ವರ್ಷವೂ ಒಂದಲ್ಲ ಒಂದು ರ‍್ಯಾಂಕ್ ಮೂಲಕ ಗುರುತಿಸಿಕೊಂಡಿರುವ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜು ಈ ಬಾರಿ ವೆಟರ್‌ನರಿ ಸೈನ್ಸ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ನೀಡುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಜಿಲ್ಲೆಗೆ ಮತ್ತೊಂದು ಗರಿ ಮೂಡುವಂತೆ ಮಾಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ೨೦೨೫-೨೬ ನೇ ಸಾಲಿಗೆ ನಡೆಸಿದ ಕರ್ನಾಟಕ ಸಾಮಾನ್ಯ ಅರ್ಹತಾ ಪರೀಕ್ಷೆಯಲ್ಲಿ ಗಂಗಾಧರ ಮುತ್ತಗಿ ವೆಟರ್‌ನರಿ ಸೈನ್ಸನಲ್ಲಿ(ಪ್ರಾ) ೦.೫ ರ‍್ಯಾಂಕ್ ಹಾಗೂ ಬಿಎಸ್‌ಸಿ ಅಗ್ರಿಯಲ್ಲಿ ೩.೫ ರ‍್ಯಾಂಕ್ ಪಡೆದುಕೊಂಡಿರುವುದು ಶ್ಲಾಘನೀಯವಾಗಿದೆ.ಇತ್ತೀಚೆಗೆ ಪ್ರಕಟಗೊಂಡ ೨೦೨೫-೨೬ ನೇ ಕೆ-ಸಿಇಟಿ ಪರೀಕ್ಷೆಯ ಫಲಿತಾಂಶದಲ್ಲಿ ತಾಂತ್ರಿಕ ದೋಷಗಳಿಂದಾಗಿ ಕೆಲವು ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಲು ಸಾಧ್ಯವಾಗದೇ ಉಳಿದಿದ್ದವು. ಅಂಥಹ ಸಂದರ್ಭದಲ್ಲಿ ಸ್ಪಾಟ್ ರ‍್ಯಾಂಕಿಂಗ್‌ನ್ನು ನೀಡುವ ಪ್ರತೀತಿ ಕೆಇಎ ಅಳವಡಿಸಿಕೊಂಡಿದ್ದು ಅದರ ಆಧಾರದ ಮೇಲೆ ರ‍್ಯಾಂಕ್ ನೀಡಲಾಗಿದ್ದು ಗಂಗಾಧರ ಮುತ್ತಗಿ ೦.೫ ರ‍್ಯಾಂಕ್ ಪಡೆಯುವ ಮೂಲಕ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮತದಾರರ ಪಟ್ಟಿ ಪರಿಷ್ಕರಿಸಲು ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಮತದಾರರು ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಲು ಮುಂದಾಗಬೇಕು. ಯಾವುದೇ ಅನಗತ್ಯ ಭಯ ಬೇಡ ಎಂದು ತಹಶೀಲ್ದಾರ ನಿಂಗಪ್ಪ ಬಿರಾದಾರ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಗುರುವಾರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ ರ ಕುರಿತಾದ ಮಾಧ್ಯಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ೭೫.೪೦ ಮ್ಯಾಪಿಂಗ್ ಮತ್ತು ೧೧೮.೯೮ ಪ್ರೋಜಣಿ ಆಗಿದ್ದು ಒಟ್ಟು ೯೫.೦೫ ಫಲಿತಾಂಶ ಬಂದಿದೆ. ಇದೇ ದಿ:೨೦ ರಿಂದ ೨೯ ರವರೆಗೆ ಬಿಎಲ್‌ಓ ಮತ್ತು ಬಿಎಲ್‌ಎ ತರಬೇತಿ ಮತ್ತು ರಾಜಕೀಯ ಮುಖಂಡರ ಸಭೆ ಜರುಗಲಿವೆ. ನಂತರ ಇದೇ ದಿ:೩೦ ರಿಂದ ಜುಲೈ ೨೯ ರವರೆಗೆ ಬಿಎಲ್‌ಓ ಗಳು ಪ್ರತಿ ಮನೆಗೆ ತೆರಳಿ ನಮೂನೆ ಅನುಭಂಧ ೩ ನೀಡಿ ಅವರಿಂದ ಆಯೋಗ ಸೂಚಿಸಿದ ೧೨ ದಾಖಲೆಗಳಲ್ಲಿ ಒಂದನ್ನು ಪಡೆಯುತ್ತಾರೆ.ಮತದಾರರು ಘೋಷಣಾ ನಮೂನೆಯಲ್ಲಿ ವಿವರಗಳನ್ನು ಒದಗಿಸಲು ಸಂಬಂಧಪಟ್ಟ ಬಿಎಲ್‌ಓ ಗಳನ್ನು ಸಂಪರ್ಕಿಸಬಹುದಾಗಿದೆ. ಘೋಷಣಾ ನಮೂನೆಯಲ್ಲಿ…
ಉದಯರಶ್ಮಿ ದಿನಪತ್ರಿಕೆ ಇಂಡಿ: ರಾಜ್ಯ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಅವರಿಗೆ ಉಪಮುಖ್ಯಮಂತ್ರಿ (ಡಿಸಿಎಂ) ಅಥವಾ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ವಿಜಯಪುರ ಜಿಲ್ಲೆಯ ಇಂಡಿ ನಗರದಲ್ಲಿ ಯುವ ಅಲ್ಪಸಂಖ್ಯಾತರ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನೆ ಪ್ರಾರಂಭಸಿ ಟಿಪ್ಪು ಸುಲ್ತಾನ್ ವೃತ್ತ, ಬಸವೇಶ್ವರ ವೃತ್ತ ,ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಮಹಾವೀರ ವೃತ್ತಕ್ಕೆ ತೆರಳಿ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡ್‌ಗೆ ವಿರುದ್ಧ ಘೋಷಣೆಗಳನ್ನು ಕೂಗಿ, ಜಮೀರ್ ಅಹಮ್ಮದ್ ಖಾನ್ ಅವರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವಂತೆ ಒತ್ತಾಯಿಸಿದರು.ತದನಂತರ ತಾಲೂಕು ಆಡಳಿತ ಸೌಧಕ್ಕೆ ತೆರಳಿ ಶಿರಸ್ತೆದಾರ ಎಸ್ ಆರ್ ಮುಜಗೊಂಡ ಮೂಲಕ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಯುವ ಅಲ್ಪಸಂಖ್ಯಾತ ಅಭಿವೃದ್ಧಿ ಕಮಿಟಿಯ ಸಂಸ್ಥಾಪಕ ಅಧ್ಯಕ್ಷ…
ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಸಾರಿಗೆ ಅಧಿಕಾರಿಗಳು ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಮರ್ಪಕ ಬಸ್ ಸೌಲಭ್ಯ ಇಲ್ಲದೆ ಹಲವು ದಿನಗಳಿಂದ ಪರದಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ದೂರವಾಣಿ ಕರೆ ಹಾಗೂ ವಾಟ್ಸಪ್ ಸಂದೇಶಗಳ ಮೂಲಕ ಜಮಖಂಡಿ ಸಾರಿಗೆ ಘಟಕದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.ಸಾರ್ವಜನಿಕರ ಮನವಿಗೆ ತ್ವರಿತವಾಗಿ ಸ್ಪಂದಿಸಿದ ಸಾರಿಗೆ ಅಧಿಕಾರಿಗಳು, ಮನವಿ ಸಲ್ಲಿಕೆಯಾದ ಮರುದಿನವೇ ಚಿಕ್ಕಪಡಸಲಗಿ ಗ್ರಾಮಕ್ಕೆ ಬೆಳಗಿನ ವೇಳೆಯಲ್ಲಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ಸಾರ್ವಜನಿಕರಿಗೆ ಸಂಚಾರದ ಅನುಕೂಲವಾಗಿದ್ದು, ಗ್ರಾಮಸ್ಥರು ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದಾರೆ.ಹೆಚ್ಚುವರಿ ಬಸ್ ಸೇವೆಯಿಂದ ಪ್ರತಿದಿನ ಬಸ್ ಕೊರತೆಯಿಂದ ಎದುರಾಗುತ್ತಿದ್ದ ಸಮಸ್ಯೆ ನಿವಾರಣೆಯಾಗಿದ್ದು, ಸಮಯಕ್ಕೆ ಸರಿಯಾಗಿ ಶಾಲೆ, ಕಾಲೇಜು ಹಾಗೂ ಕೆಲಸದ ಸ್ಥಳಗಳಿಗೆ ತೆರಳಲು ಅನುಕೂಲವಾಗಿದೆ. ಸಾರ್ವಜನಿಕರ ಬೇಡಿಕೆಗೆ ತಕ್ಷಣ ಸ್ಪಂದಿಸಿ ಅಗತ್ಯ ಕ್ರಮ ಕೈಗೊಂಡ ಜಮಖಂಡಿ ಸಾರಿಗೆ ಘಟಕದ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ. ” ಮುಂದೆಯೂ ಇದೇ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ವಿರಕ್ತಮಠದಲ್ಲಿ ಹಂಗರಗಿಯ ಚನ್ನಬಸವೇಶ್ವರ ಪ್ರತಿಷ್ಠಾನ, ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆಯ ಸಹಯೋಗದಲ್ಲಿ ಜೂ. 14 ರಂದು ಬೆಳಗ್ಗೆ 10 ಗಂಟೆಗೆ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ ಹಾಗೂ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಸಾನಿಧ್ಯವನ್ನು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ವಹಿಸುವರು. ಪಿ.ಎಲ್.ಡಿ. ಬ್ಯಾಂಕಿನ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಚನ್ನಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷ ವಿವೇಕಾನಂದ ಕಲ್ಯಾಣಶೆಟ್ಟಿ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ, ವೈದ್ಯ ಡಾ.ಎನ್.ಬಿ.ವಜೀರಕರ, ಸ್ಥಳೀಯ ಎಸ್.ಬಿ.ಐ ಬ್ಯಾಂಕಿನ ವ್ಯವಸ್ಥಾಪಕ ರಾಘವೇಂದ್ರ ಕಟ್ಟಿ, ನಿವೃತ್ತ ಶಿಕ್ಷಕರಾದ ಸಿ.ಸಿ.ಮೂಕಾರ್ತಿಹಾಳ, ನಾಗರಾಜ ಹೊಸಮನಿ ಆಗಮಿಸುವರು.ತಳೇವಾಡದ ಸರ್ಕಾರಿ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಯ ಸಂಗಮೇಶ ಪೂಜಾರಿ ಉಪನ್ಯಾಸ ನೀಡುವರು. ಕಾರ್ಯಕ್ರಮದಲ್ಲಿ ಬಸವನಬಾಗೇವಾಡಿ, ನಿಡಗುಂದಿ, ಕೊಲ್ಹಾರ ತಾಲೂಕಿನಲ್ಲಿ ಕನ್ನಡ, ಆಂಗ್ಲ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಅಖಂಡ ತಾಲೂಕಿನಲ್ಲಿ ಉರ್ದು ಮಾಧ್ಯಮದಲ್ಲಿ ಪ್ರಥಮ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಸವ ಜನ್ಮಭೂಮಿ ಪ್ರತಿಷ್ಠಾನ ಪತ್ರಿಕಾ ದಿನಾಚರಣೆ ಅಂಗವಾಗಿ ರಾಜಾಜಿನಗರದ ‘ಬಸವಸಂಗಮ ಸಭಾಂಗಣ’ ದಲ್ಲಿ ಜುಲೈ ಮೊದಲ ವಾರದಲ್ಲಿ ಕವಿಗೋಷ್ಠಿˌ ಪತ್ರಿಕಾ ಮಾಧ್ಯಮದ ಮಹತ್ವ ಕುರಿತು ಉಪನ್ಯಾಸ ಹಾಗೂ ಪ್ರತಿಷ್ಠಾನದ ಪ್ರಗತಿಗೆ ಪೂರಕ ಪರಿಕರಗಳನ್ನು ಪೂರೈಸಿದ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದೆ.ಆಸಕ್ತ ಕವಿಗಳು ಪತ್ರಿಕೆಗಳ ಮಹತ್ವ ಮತ್ತು ಓದುಗ ವಿಷಯ ಕುರಿತು ೨೦ ಸಾಲುಗಳ ಮಿತಿಯುಳ್ಳ ಒಂದು ಕವಿತೆಯನ್ನು ಇದೇ ತಿಂಗಳು ೨೫ ರೊಳಗೆ ಮುರುಗೇಶ ಸಂಗಮˌ ಸಂಚಾಲಕರುˌ ಬಸವ ಜನ್ಮಭೂಮಿ ಪ್ರತಿಷ್ಠಾನˌ ಆರ್.ಟಿ.ಓ.ಕಚೇರಿ ಹಿಂಭಾಗˌ ನಾಡದೇವಿ ಮಂದಿರ ರಸ್ತೆˌ ರಾಜಾಜಿನಗರˌ ವಿಜಯಪುರ ವಿಳಾಸಕ್ಕೆ ಕಳುಹಿಸಬೇಕು. ಮಾಹಿತಿಗೆ ಮೊ. ೮೦೭೩೬೨೫೩೯೯ ಸಂಖ್ಯೆ ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ
ಲೇಖನ- ರಶ್ಮಿ ಕೆ. ವಿಶ್ವನಾಥ್.ಮೈಸೂರು ಉದಯರಶ್ಮಿ ದಿನಪತ್ರಿಕೆ ಲಿಂಗಗಳಲ್ಲಿ 3 ವಿಧ. ಪುರುಷ, ಮಹಿಳೆ ಮತ್ತು ತೃತೀಯ ಲಿಂಗಿಗಳು.ಕೋರ್ಟು ಅದ್ಯಾವ ಆಧಾರದ ಮೇಲೆ ಅವರಿಗೆ ‘ತೃತೀಯ ಲಿಂಗಿ’ ಎಂದು ಕರೆಯಿತೋ ಗೊತ್ತಿಲ್ಲ. ಹಾಗಾದರೆ ‘ಪುರುಷ, ಮಹಿಳೆ’ ಇವರಿಬ್ಬರಲ್ಲಿ ‘ಪ್ರಥಮ, ದ್ವಿತೀಯ’ ಯಾರು? ತಿಳಿಯದು.ಇರಲಿ.ಇಲ್ಲಿಯ ವಿಷಯ ಬೇರೆಯೆ ಇದೆಮೊನ್ನೆ ಒಂದು ಸಿನಿಮಾ ನೋಡುತ್ತಾ ಕುಳಿತಿದ್ದೆ. ಅದರಲ್ಲಿ ತಾಯಿ ಇಲ್ಲದ ಮಗ -ಮಗಳನ್ನ, ಆ ಬಡವ ತಂದೆಯೆ, ತನ್ನ ಸರ್ವಸ್ವವನ್ನು ಧಾರೆಯೆರೆದು ಸಾಕುತ್ತಾ ಇರುತ್ತಾನೆ & ಇಡೀ ಕುಟುಂಬ ಒಬ್ಬರಿಗೊಬ್ಬರು ಮುಗ್ದತೆಯಿಂದ ಬೆಸೆದುಹೋಗಿರುತ್ತಾರೆ. ಅಲ್ಲೊಂದು ಚಂದದ ಜೀವನ ಅರಳಿ ನಗುತ್ತಿರುತ್ತದೆ.ಒಬ್ಬ ಪ್ರತಿಷ್ಟಿತ ವ್ಯಕ್ತಿ ಮುಳ್ಳಿನಂತೆ ಬಂದು ‘ಆ ಮಗಳನ್ನ’ ಗರ್ಭಿಣಿ ಮಾಡಿಬಿಡುತ್ತಾನೆ. ಉಳಿದದ್ದು ಗೊತ್ತೇ ಇದೆ ಆ ತಂದೆಯೇ ತನ್ನ ಮಗಳನ್ನು ಕೆಡಿಸಿದ್ದಾನೆ ಎಂದು ಸುಳ್ಳುಕಟ್ಟಿ ಜೈಲಿಗೆ ಹಾಕಿ, ಆತ ಅವಮಾನದಿಂದ ಸಾಯುವಂತೆ ಮಾಡುತ್ತಾರೆ’.ಇನ್ನು ಕೆಲವು ಸಿನಿಮಾಗಳಲ್ಲಿ ತಂದೆ ತಾಯಿ ಇಬ್ಬರು ಇದ್ದರೂ ಸಹ ಬೇರೆ ಯಾರೊ ದೊಡ್ಡ ಮನುಷ್ಯನಿಂದ ಹೆಣ್ಣು ಮಗುವಿನ ಮಾನಭಂಗವಾಗಿದ್ದರೆ,…
