ಉದಯರಶ್ಮಿ ದಿನಪತ್ರಿಕೆ
ಇಂಡಿ: ನಗರ ಸೇರಿದಂತೆ ಎಲ್ಲ ಗ್ರಾಮಗಳಲ್ಲೂ ರಂಗ ಪಂಚಮಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಬೆಳಿಗೆ ೮ ಗಂಟೆಯಿಂದಲೇ ಬಾಲಕರು ಯುವಕರು ಬಣ್ಣ ಆಡಲು ಪ್ರಾರಂಭಿಸಿದರು.
ನಂತರ ೧೧ ಗಂಟೆಗೆ ಹಿರಿಯರು ಕಿರಿಯರು ಎಲ್ಲರೂ ಸೇರಿ ಬಣ್ಣವನ್ನು ಆಡ ತೊಡಗಿದರು.
ಅಣುಕು ಶವ ಯಾತ್ರೆ, ಜಾನಪದ ಹೋಳಿ ಹಾಡುಗಳು ಹಲಗೆ ಕುಣಿತ ಸೇರಿ ಅನೇಕ ಮನರಂಜನೆ ನಡೆದವು.
ನಗರದ ಕೃಷಿ ಮಾರುಕಟ್ಟೆ, ಬಸ್ ನಿಲ್ದಾಣ, ಸಿಂದಗಿ ವಿಜಯಪುರ ರಸ್ತೆ ಸೇರಿದಂತೆ ನಗರದ ಎಲ್ಲ ಕಡೆ ಬಣ್ಣ ಎರಚುವದು ಸಾಮಾನ್ಯವಾಗಿತ್ತು.
ಅನೇಕ ಕಡೆ ಬ್ಯಾರೆಲು ಬಕೇಟುಗಳಲ್ಲಿ ಬಣ್ಣ ಎರಚಿಸಿದರು. ಯುವಕರು ಮಕ್ಕಳು ಪಿಚಕಾರಿ ಮೂಲಕ ಬಣ್ಣ ಎರಚಿದರು. ಮುಖಕ್ಕೆ ಬಣ್ಣ ಹಚ್ಚುವದು ಎಲ್ಲ ಕಡೆ ಸಾಮಾನ್ಯವಾಗಿತ್ತು.
ಗಣ್ಯರಾದ ಕಾಸುಗೌಡ ಬಿರಾದಾರ, ಬಾಳು ಮುಳಜಿ, ಅನೇಕ ವೈದ್ಯರು, ವ್ಯಾಪಾರಿಗಳು ರೈತರು ಬಣ್ಣ ಆಡಿ ಸಂತೋಷ ಪಟ್ಟರು.

