ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ತಾಲ್ಲೂಕಿನ ಕೆಡಿ ಜಂಬಗಿ ಗ್ರಾಮದಲ್ಲಿ ಚಿರತೆ ತಡರಾತ್ರಿಯಲ್ಲಿ ಬೊನಿನೊಳಗೆ ಬಿದ್ದು ಘರ್ಜಿಸುತ್ತಿದೆ.
ಕಳೆದ ಎರಡು ಮೂರು ತಿಂಗಳ ಕೆ.ಡಿ.ಜಂಬಗಿ ಗ್ರಾಮದಲ್ಲಿ ಚಿರತೆಯ ಕಾಟಕ್ಕೆ ಬೇಸತ್ತ ಗ್ರಾಮಸ್ಥರು ಸಾಕಷ್ಟು ಬಾರಿ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಹ ಚಿರತೆ ಹಿಡಿಯಲು ಪ್ರಯತ್ನಿಸಿದರೂ ಚಿರತೆ ಸಿಗದ ಕಾರಣ ಅರಣ್ಯ ಇಲಾಖೆಯವರು ಬೇಸತ್ತು ಹೋಗಿದ್ದರು. ಆದರೆ ಚಿರತೆ ಸಿಗದೆ ತನ್ನ ಓಡಾಟವನ್ನು ನಡೆಸಿತ್ತು. ಚಿರತೆಯ ದಾಳಿಯಿಂದ ದನ ಕರುಗಳಿಗೆ ಹಾನಿಯುಂಟು ಮಾಡುತ್ತದೆ ಎಂಬ ಭಯದ ವಾತಾವರಣದಲ್ಲಿ ತಿರುಗಾಡುತ್ತಿದ್ದ ಗ್ರಾಮಸ್ಥರು ತಮ್ಮ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳಿಸುವುದು ಕಷ್ಟಕರವಾಗಿತ್ತು.
ಆಹಾರ ಅರಸಿಕೊಂಡು ತಡರಾತ್ರಿಯಲ್ಲಿ ಚಿರತೆ ಬೋನಿನೊಳಗೆ ಬಿದ್ದಿದೆ. ಹೊಲದಲ್ಲಿ ಇಟ್ಟಿರುವ ಬೋನಿನಲ್ಲಿ ಚಿರತೆ ಸೆರೆಯಾಗಿದೆ.
ಸ್ಥಳಕ್ಕೆ ಜಮಖಂಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಬಂದು ಚಿರತೆಯು ಬೋನಿನಲ್ಲಿ ಬಿದ್ದಿದನ್ನು ಕಂಡು
ಸುರಕ್ಷಿತವಾಗಿ ಬೋನಿನ ಸುತ್ತ ಪ್ಲಾಸ್ಟಿಕ್ ಹಾಳೆಯನ್ನು ಹೊದಿಸಿ ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಅದನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಬೇರೆ ಅರಣ್ಯಕ್ಕೆ ಬಿಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.
ಕೆ.ಡಿ.ಜಂಬಗಿ ಗ್ರಾಮಸ್ಥರು ಚಿರತೆ ಬೋನಿನಲ್ಲಿ ಬಿದ್ದಿರುವುದನ್ನು ಕಂಡು ನಿಟ್ಟುಸಿರು ಬಿಟ್ಟಿದ್ದಾರೆ.

