Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಕರುನಾಡ ಮನೆಮನೆಯ ರಾಣಿಯರಿಗೆ ಕಲರ್ಸ್ ಕನ್ನಡದ ವಿಶೇಷ ನಮನ

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸರ್ವಾಂಗೀಣ ಬೆಳವಣಿಗೆ ಹೊಂದಬೇಕು

ಮಕ್ಕಳು ಒಳ್ಳೆಯ ಮೌಲ್ಯ, ಸಂಸ್ಕಾರ ಬೆಳೆಸಿಕೊಳ್ಳಲಿ :ಪಟ್ಟಿಹಾಳ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಗುರು ಮುಟ್ಟಿ ಗುರುವಾಗಲು ನಿಷ್ಟೆಯಿಂದ ನಡೆಯಿರಿ :ಶ್ರೀಶೈಲ ಶ್ರೀ
(ರಾಜ್ಯ ) ಜಿಲ್ಲೆ

ಗುರು ಮುಟ್ಟಿ ಗುರುವಾಗಲು ನಿಷ್ಟೆಯಿಂದ ನಡೆಯಿರಿ :ಶ್ರೀಶೈಲ ಶ್ರೀ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಪುರಾಣ ಮಹಾಮಂಗಲ | ಧರ್ಮಸಭೆ | ಕೃತಿ ಬಿಡುಗಡೆ | ಪ್ರಶಸ್ತಿ ಪ್ರಧಾನ ಸಮಾರಂಭ

ಉದಯರಶ್ಮಿ ದಿನಪತ್ರಿಕೆ

ಕಲಕೇರಿ: ಗುರು ತೋರಿದ ದಾರಿಯಲ್ಲಿ ಅಚಲ ಶ್ರದ್ಧಾ ಭಕ್ತಿಯನ್ನಿಟ್ಟು ನಡೆದರೆ ಶಿಷ್ಯನಾದವನು ತಾನೇ ಗುರುವಾಗಲು ಸಾಧ್ಯ ಎಂಬುದನ್ನು ಕಲಕೇರಿ ಗುರುಮರುಳಾರಾಧ್ಯರಿಂದ ಲಿಂಗದೀಕ್ಷೆ ಪಡೆದ ಕಲಬುರಗಿ ಶರಣಬಸವೇಶ್ವರರು ಇಂದು ನಾಡಿನಾದ್ಯಂತ ದಾಸೋಹಮೂರ್ತಿಯಾಗಿ ಪೂಜಿಸಲ್ಪಡುತ್ತಿದ್ದು, ಅದು ಒಬ್ಬ ಶ್ರೇಷ್ಟ ಗುರುವಿನಲ್ಲಿರುವ ಶಕ್ತಿಯನ್ನು ಎತ್ತಿ ತೋರಿಸುತ್ತದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ತಮ್ಮ ಆಶಿರ್ವಚನದಲ್ಲಿ ಹೇಳಿದರು.
ಗ್ರಾಮದ ಗುರುಮರುಳಾರಾಧ್ಯರ ಸಂಸ್ಥಾನ ಹಿರೇಮಠದಲ್ಲಿ ಲಿಂ.ಬಸವಲಿಂಗ ಮರುಳಸಿದ್ಧ ಶಿವಾಚಾರ್ಯರ ೨೩ನೇ ಪುಣ್ಯ ಸ್ಮರಣೋತ್ಸವದ ನಿಮಿತ್ಯ ಫೆ.೧೮ ರಿಂದ ಪ್ರಾರಂಭವಾದ ಉಪ್ಪಲದಿನ್ನಿಯ ಮುಗ್ಧ ಸಂಗಮೇಶ್ವರರ ಮಹಾಪುರಾಣ ಮಹಾಮಂಗಲದ ಪ್ರಯುಕ್ತ ನಡೆದ ಧರ್ಮಸಭೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಆಶಿರ್ವಚನ ನೀಡಿದರು.
ಜಗತ್ತಿನಲ್ಲಿ ಅತಿ ವೇಗವಾಗಿ ಚಲಿಸುವ ವಸ್ತು ಎಂದರೆ ಮನಸ್ಸು, ಅಂತಹ ಮನಸ್ಸನ್ನು ನಿಯಂತ್ರಣದಲ್ಲಿರಿಸಿ ಗುರುವಿನ ಮಾರ್ಗದರ್ಶನದಲ್ಲಿ ಇಂತಹ ಧಾರ್ಮಿಕ ಕಾರ್ಯಗಳಲ್ಲಿ, ದೇವರ ಪ್ರಾರ್ಥನೆಯಲ್ಲಿ, ಪುರಾಣ, ಪ್ರವಚನಗಳಲ್ಲಿ ತೊಡಗಿಸಿಕೊಂಡರೆ ಒಳ್ಳೆಯ ಸದೃಡ, ಸುಶಿಕ್ಷಿತ ಸಮಾಜ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವಕೀಲರಾದ ಸುಭಾಸ ಛಾಯಾಗೋಳ, ಶಿಕ್ಷಣ ಕ್ಷೇತ್ರದ ನಾನಾಗೌಡ ಬ. ನಡುವಿನಮನಿ, ಜಾನಪದ ತಜ್ಞರಾದ ಎಂ.ಎಂ.ಪಡಶೆಟ್ಟಿ, ವೈದ್ಯರಾದ ಡಾ|| ಎಂ.ಬಿ.ಬಿರಾದಾರ, ಸಮಾಜ ಸೇವಕರಾದ ದೇವು ಎಸ್.ಪರಸನಳ್ಳಿ, ಪತ್ರಕರ್ತ ಈರಣ್ಣ ಎಂ.ಝಳಕಿ, ಪರಿಸರ ಪ್ರೇಮಿಗಳಾದ ಶರಣಬಸಪ್ಪ ಶಿ.ಗಡೇದ, ಸಂಗೀತಗಾರರಾದ ವೀರೇಶ ವಾಲಿ ಅವರಿಗೆ ಕಲಕೇರಿನ ಗುರುಮರುಳಾರಾಧ್ಯ ಸಂಸ್ಥಾನ ಹಿರೇಮಠದಿಂದ ಕೊಡಮಾಡುವ ೨೦೨೬ನೇ ಸಾಲಿನ “ಶ್ರೀ ಗುರುಮರುಳಾರಾಧ್ಯ ಸಿರಿ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಶೇಷವಾಗಿ ಶ್ರೀಮತಿ ಮಮತಾ ಮುಳಸಾವಳಗಿ ಅವರು ಬರೆದ ಮಮತೆಯ ಮರುಳಾರಾಧ್ಯರ ಶತವಚನಗಳು ಎಂಬ ಗ್ರಂಥ ಬಿಡುಗಡೆ ನಡೆಯಿತು ಮತ್ತು ಶಿವದೀಕ್ಷೆ, ಅಯ್ಯಾಚಾರ ಕಾರ್ಯಕ್ರಮಗಳು ಶ್ರೀಗಳ ಸಾನಿಧ್ಯದಲ್ಲಿ ನಡೆದವು.
ಅಧ್ಯಕ್ಷತೆವಹಿಸಿದ ಗುರುಮರುಳಾರಾಧ್ಯರ ಹಿರೇಮಠದ ಪಟ್ಟಾಧ್ಯಕ್ಷರಾದ ಸಿದ್ಧರಾಮ ಶಿವಾಚಾರ್ಯರು, ಶಿವಮೊಗ್ಗದ ಮೇಜರ್ ಆನಂದ ಮತ್ತು ವಿಜಯಪುರ ಚಾಣಕ್ಯ ಕರಿಯರ್‌ನ ನಿಂಗನಗೌಡ ಮ. ಬಿರಾದಾರ ಮಾತನಾಡಿದರು.
ಇದೇ ವೇಳೆ ಶ್ರೀಮಠದ ನೂರಾರು ಸೇವಾರ್ಥಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.
ಜವಳಕೋಟ ಕಟ್ಟೀಮಠ ಸಂಸ್ಥಾನದ ಶಿವಾನಂದ ಶಿವಾಚಾರ್ಯರು ಸಾನಿಧ್ಯವಹಿಸಿದ್ದು, ಹಲಕರ್ಟಿ ಕಟ್ಟೀಮನಿ ಹಿರೇಮಠದ ಅಭಿನವ ಮುನೀಂದ್ರ ಶಿವಾಚಾರ್ಯರು, ಕೊಕಟನೂರದ ಮಡಿವಾಳೇಶ್ವರ ಶ್ರೀಗಳು, ದೇವರಹಿಪ್ಪರಗಿ ಪರದೇಶಿಮಠದ ಶಿವಯೋಗಿ ಶ್ರೀಗಳು, ದಂಡಗುಂಡ ಹಿರೇಮಠದ ಸಂಗನಬಸವ ಶಿವಾಚಾರ್ಯರು, ಚಬನೂರ ಹಿರೇಮಠದ ರಾಮಲಿಂಗಯ್ಯ ಶ್ರೀಗಳು, ಕರಬಂಟನಾಳದ ಶಿವಕುಮಾರ ಶ್ರೀಗಳು, ಕಾಖಂಡಕಿಯ ನಿಜಲಿಂಗ ಶಾಸ್ತ್ರಿಗಳು, ನಗನೂರ ಶರಣರಮಠದ ಶರಣಪ್ಪ ಶರಣರು ಪ್ರವಚನಕಾರರಾದ ಪುಟ್ಟರಾಜ ಶಾಸ್ತ್ರಿಗಳು, ಸಂಗೀತಗಾರಾರ ಪ್ರಭುಕುಮಾರ ಮತ್ತು ಲಕ್ಷ್ಮೀಕಾಂತ ಕಲಬುರಗಿ, ಶಾಸಕರಾದ ರಾಜುಗೌಡ ಪಾಟೀಲ ಕುದರಿಸಾಲೋಡಗಿ, ಕೆಪಿಸಿಸಿ ಪ್ರಾಧಾನ ಕಾರ್ಯದರ್ಶಿ ಪ್ರಭುಗೌಡ ಬ. ಪಾಟೀಲ, ಯಾದಗಿರಿ ಜಿ.ಪಂ ಮಾಜಿ ಅಧ್ಯಕ್ಷರಾದ ಬಸನಗೌಡ ಯಡ್ಯಾಪುರ, ಬಿಜೆಪಿ ಮುಖಂಡರಾದ ಪ್ರಭುಗೌಢ ಅಸ್ಕಿ, ಸಿದ್ದು ಬುಳ್ಳಾ, ತಾಪಂ ಸದಸ್ಯ ಲಕ್ಕಪ್ಪ ಬಡಿಗೇರ, ಕಾಂಗ್ರೆಸ್ ಮುಖಂಡರಾದ ಸಂಗನಗೌಡ ಹರನಾಳ, ಕಸಾಪ ಜಿಲ್ಲಾ ಅಧ್ಯಕ್ಷರಾದ ಹಾಸೀಂಪೀರ ವಾಲೀಕಾರ ಸೇರಿದಂತೆ ಇತರರು ಇದ್ದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಕರುನಾಡ ಮನೆಮನೆಯ ರಾಣಿಯರಿಗೆ ಕಲರ್ಸ್ ಕನ್ನಡದ ವಿಶೇಷ ನಮನ

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸರ್ವಾಂಗೀಣ ಬೆಳವಣಿಗೆ ಹೊಂದಬೇಕು

ಮಕ್ಕಳು ಒಳ್ಳೆಯ ಮೌಲ್ಯ, ಸಂಸ್ಕಾರ ಬೆಳೆಸಿಕೊಳ್ಳಲಿ :ಪಟ್ಟಿಹಾಳ

ಪುರುಷರಷ್ಟೇ ಕೆಲಸ ಮಾಡುತ್ತಿದ್ದರೂ ಮಹಿಳೆಯರ ಮೇಲೆ ನಿಲ್ಲದ ದೌರ್ಜನ್ಯ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಕರುನಾಡ ಮನೆಮನೆಯ ರಾಣಿಯರಿಗೆ ಕಲರ್ಸ್ ಕನ್ನಡದ ವಿಶೇಷ ನಮನ
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸರ್ವಾಂಗೀಣ ಬೆಳವಣಿಗೆ ಹೊಂದಬೇಕು
    In (ರಾಜ್ಯ ) ಜಿಲ್ಲೆ
  • ಮಕ್ಕಳು ಒಳ್ಳೆಯ ಮೌಲ್ಯ, ಸಂಸ್ಕಾರ ಬೆಳೆಸಿಕೊಳ್ಳಲಿ :ಪಟ್ಟಿಹಾಳ
    In (ರಾಜ್ಯ ) ಜಿಲ್ಲೆ
  • ಪುರುಷರಷ್ಟೇ ಕೆಲಸ ಮಾಡುತ್ತಿದ್ದರೂ ಮಹಿಳೆಯರ ಮೇಲೆ ನಿಲ್ಲದ ದೌರ್ಜನ್ಯ
    In (ರಾಜ್ಯ ) ಜಿಲ್ಲೆ
  • ಕೆ.ಡಿ.ಜಂಬಗಿ: ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
    In (ರಾಜ್ಯ ) ಜಿಲ್ಲೆ
  • ಡಾ.ಅಂಬೇಡ್ಕರ್ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ
    In (ರಾಜ್ಯ ) ಜಿಲ್ಲೆ
  • ಮಾ.೧೦ ರಂದು ಕೊಲ್ಹಾರದಲ್ಲಿ ಬೃಹತ್ ಹಿಂದೂ ಸಮ್ಮೇಳನ
    In (ರಾಜ್ಯ ) ಜಿಲ್ಲೆ
  • ಗುರು ಮುಟ್ಟಿ ಗುರುವಾಗಲು ನಿಷ್ಟೆಯಿಂದ ನಡೆಯಿರಿ :ಶ್ರೀಶೈಲ ಶ್ರೀ
    In (ರಾಜ್ಯ ) ಜಿಲ್ಲೆ
  • 4 ವರ್ಷದ ಕುವರಿ ಉಮ್ಮೇ ಐಮನ ಳಿಂದ ರಂಜಾನ್ ವೃತಾಚರಣೆ
    In (ರಾಜ್ಯ ) ಜಿಲ್ಲೆ
  • ಇಂಡಿಯಲ್ಲಿ ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ಪ್ರಧಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.