ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನ ಮುಂಭಾಗದಲ್ಲಿ ಮಾ.10 ಮಂಗಳವಾರ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ವತಿಯಿಂದ ಬೃಹತ್ ಹಿಂದೂ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಸಮ್ಮೇಳನದ ದಿವ್ಯ ಸಾನಿಧ್ಯವನ್ನು ಮುಳವಾಡ–ಕೊಣ್ಣೂರು ಹಿರೇಮಠದ ಪೂಜ್ಯ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಸಾನಿಧ್ಯವನ್ನು ಪಟ್ಟಣದ ದಿಗಂಬರೇಶ್ವರ ಸಂಸ್ಥಾನ ಮಠದ ಪರಮಪೂಜ್ಯ ಯೋಗಿ ಕಲ್ಲಿನಾಥ ದೇವರು, ವರ್ಚಗಲ್ ಶ್ರದ್ಧಾನಂದ ಆಶ್ರಮದ ಪರಮಪೂಜ್ಯ ಜಗದೀಶಾನಂದ ಮಹಾಸ್ವಾಮಿಗಳು ಹಾಗೂ ಶೀಲವಂತ ಹಿರೇಮಠದ ಡಾ. ಕೈಲಾಸನಾಥ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸೈನಿಕರು ಹಾಗೂ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯ ಐ.ಜಿ. ಬಿರಾದಾರ ವಹಿಸಲಿದ್ದಾರೆ. ವಕ್ತಾರರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು ಹಾಗೂ ಬಳ್ಳಾರಿ ಕೇಂದ್ರ ಗ್ರಾಮ ವಿಕಾಸ ಪ್ರಾಂತ ಟೋಳಿ ಸದಸ್ಯರಾದ ದಾಮೋದರ ಜಿ ಭಾಗವಹಿಸಲಿದ್ದಾರೆ. ಮಹಿಳಾ ಪ್ರತಿನಿಧಿಯಾಗಿ ಸಾಹಿತಿ ಗಾಯತ್ರಿ ಪತ್ತಾರ ಉಪಸ್ಥಿತರಿರುತ್ತಾರೆ ಎಂದು ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ತಿಳಿಸಿದೆ.
