ಉದಯರಶ್ಮಿ ದಿನಪತ್ರಿಕೆ
ಇಂಡಿ: ಮಹಿಳಾ ಸಬಲೀಕರಣ, ಶಿಕ್ಷಣ ಸಮಾಜ ಸೇವೆಯನ್ನು ಗುರುತಿಸಿ ಪಟ್ಟಣದ ರಾಜೇಶ್ವರಿ ಕ್ಷತ್ರಿ ಅವರಿಗೆ ಈ ವರ್ಷದ ಮಹಿಳಾ ಸಾಧಕಿ ಮತ್ತು ಸಾಲೋಟಗಿ ಗ್ರಾಮದ ಸವಿತಾಬಾಯಿ ಸೋಮಣ್ಣ ಕರೂರ ಇವರಿಗೆ ಕೃಷಿ ಸೇವಾ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗಿದೆ ಎಂದು ಐಡಿಯಾ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಶೈಲಜಾ ತೆಲ್ಲೂರ ಹೇಳಿದರು.
ನಗರದ ಐಡಿಯಾ ಪಿಯು ಮಹಾವಿದ್ಯಾಲಯದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪ್ರಶಸ್ತಿ ನೀಡಿ ಮಾತನಾಡಿದರು.
ಪೂಜಾ ಏಳಗಿ, ಪ್ರತಿಭಾ ಬುರಕುಲೆ, ವಿದ್ಯಾಶ್ರೀ ಪಾಟೀಲ, ಶ್ಯಾಮಲಾ ಬಗಲಿ, ಮಹಾದೇವಿ ಸಂಖ, ಸಂಪದಾ ದೇಶಪಾಂಡೆ, ಪುನಮ ಕಟ್ಟಿಮನಿ, ಸವಿತಾ ರೂಪನೂರ, ಕವಿತಾ ಮಹೀಂದ್ರಕರ, ಪ್ರತಿಭಾ, ಅಸುಷಾ, ಶೋಭಾ ಹಿರೇಮಠ, ಶಕುಂತಲಾ ಐಡಿಯಾ ಸಂಸ್ಥೆಯ ಅಧ್ಯಕ್ಷ ಸಿದ್ದಪ್ಪ ಖೇಡ, ಅನೀಲ ಪ್ರಸಾದ ಏಳಗಿ, ಪ್ರಭು ಹೊಸಮನಿ, ಶ್ರೀಶೈಲ ಅರ್ಜುಣಗಿ ಕಾಲೇಜಿನ ಆಡಳಿತ ಮಂಡಳಿ ಉಪಸ್ಥಿತರಿದ್ದರು.

