Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ಸರಕಾರ ಒದಗಿಸುವ ಆರೋಗ್ಯ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಸಾರ್ವಜನಿಕ ಇಲಾಖೆಯ ಐಸಿಟಿಸಿ ವಿಭಾಗದ ಆಪ್ತಸಮಾಲೋಚಕ ಎಂ.ಪಿ ಸಾಗರ ಹೇಳಿದರು.ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಇಲಾಖೆ, ತಾಲೂಕು ಆರೋಗ್ಯ ಇಲಾಖೆ, ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ವಿಭಾಗ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ೨ನೆಯ ಹಂತದ ಸಮುದಾಯ ಆಧಾರಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಕಾಲ ಕಾಲಕ್ಕೆ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಮುಂಬರುವ ರೋಗಗಳ ಬಗ್ಗೆ ನೀಗಾವಹಿಸಬೇಕು. ಎಚ್‌ಐವಿ ಪರೀಕ್ಷೆ ಮತ್ತು ತಡೆಗಟ್ಟುವಿಕೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಈ ವೇಳೆ ಬಸ್ ನಿಲ್ದಾಣದಲ್ಲಿ ೨೧೦ಕ್ಕೂ ಅಧಿಕ ಜನರು ತಪಾಸಣೆ ಮಾಡಿಕೊಂಡರು. ತಪಾಸಣಾ ಶಿಬಿರದಲ್ಲಿ ಸಿಬ್ಬಂದಿಗಳಾದ ಲವ ಗಾಣಿಗೇರ, ಡಿ.ಎಲ್. ಕುಂಬಾರ, ಮಹ್ಮದ್ ಸೋಯೆಬ್, ಮತ್‌ಸುದ್ ಕಲಾಲ್, ನವೀನ,…
ಸಿಂದಗಿ: ನ್ಯೂಜಿಲೆಂಡ್‌ನಲ್ಲಿ ಕನ್ನಡ ಸಂಘ, ಶರಣ ಸಾಹಿತ್ಯ ಪರಿಷತ್ತು ಮತ್ತು ಬಸವ ಸಮಿತಿಯನ್ನು ರಚಿಸಿಕೊಂಡು ಬಸವಣ್ಣನವರ ತತ್ವಾದರ್ಶಗಳನ್ನು ಸುಮಾರು ವರ್ಷಗಳಿಂದ ಬೆಳೆಸುತ್ತಿದ್ದೇನೆ ಎಂದು ನ್ಯೂಜಿಲೆಂಡಿನ ಬಸವ ಸಮಿತಿ ಸಂಸ್ಥಾಪಕ ಲಿಂಗಣ್ಣ ಕಲಬುರಗಿ ಹೇಳಿದರು,ತಾಲೂಕಿನ ಯರಗಲ್ ಬಿಕೆ ಗ್ರಾಮದಲ್ಲಿ ಚಿಕ್ಕಪ್ಪಯ್ಯ ಶಿವಯೋಗಿಗಳ ಜಾತ್ರಾ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡ ಅಬ್ಬೆ ತುಮಕೂರಿನ ವಿಶ್ವರಾಧ್ಯರ ಮಹಾ ಪುರಾಣ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಬಸವಣ್ಣನವರ ತತ್ವಾದರ್ಶಗಳನ್ನು ಪಸರಿಸಲು ನ್ಯೂಜಿಲೆಂಡ, ಆಸ್ಟ್ರೇಲಿಯಾ ಮತ್ತು ಸಿಂಗಾಪುರ ಸೇರಿ ೯ ಬಸವ ಸಮಿತಿ ಶಾಖೆಗಳನ್ನು ಪ್ರಾರಂಭಿಸಲಾಗಿದೆ. ಪ್ರತಿವರ್ಷ ಕರ್ನಾಟಕದಿಂದ ಹರಗುರು ಚರಮೂರ್ತಿಗಳನ್ನು ಕರೆಯಿಸಿ ೯ ಶಾಖೆಗಳಿಗೆ ಭೇಟಿ ನೀಡಿಸಿ ಕನ್ನಡ ಬಳಗವನ್ನು ಕೂಡಿಸಿ ಕನ್ನಡ ನಾಡು ನುಡಿ ಬಗ್ಗೆ ಮಾಹಿತಿ ಕೊಡಿಸಲಾಗುವುದು ಎಂದರು.ಈ ವೇಳೆ ಜಾನಪದ ವಿದ್ವಾಂಸ ಹಿರಿಯ ಸಾಹಿತಿ ಡಾ.ಎಂ.ಎಂ. ಪಡಶೆಟ್ಟಿ ಮಾತನಾಡಿದರು.ಇದೇ ಸಂದರ್ಭದಲ್ಲಿ ರಟಕಲ್ ಶ್ರೀಮಠದ ರೇವಣಸಿದ್ದ ಶಿವಾಚಾರ್ಯರು, ಪುರಾಣಿಕರಾದ ರಟಕಲ್ ವಿರಕ್ತಮಠದ ಸಿದ್ದರಾಮ ಮಹಾಸ್ವಾಮಿಗಳು, ಗವಾಯಿಗಳಾದ ಮಾಹಾಂತೇಶ ನಾಗೋಜಿ, ಶಿವಪ್ಪ ಗವಸಾನಿ, ಗುರುಲಿಂಗಪ್ಪಗೌಡ ಪಾಟೀಲ,…
ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ೨೧ನೇ ಅವಧಿಗೆ ವಿವಿಧ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ಮಾ.೧೨ ರಂದು ನಿಗದಿಪಡಿಸಿದ ಚುನಾವಣೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ವಿಜಯಪುರ ಮಹಾನಗರ ಪಾಲಿಕೆ ಅಧ್ಯಕ್ಷಾಧಿಕಾರಿಗಳಾದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ.
ವಿಜಯಪುರ: ಸಿಂದಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆ ಕ್ಷೇತ್ರವನ್ನು ವಿಭಜಿಸಿ, ಆಲಮೇಲ ತಾಲೂಕಿಗೆ ಪ್ರತ್ಯೇಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರಚಿಸಲು ಸಹಕಾರ ಇಲಾಖೆ ಅಧೀನ ಕಾರ್ಯದರ್ಶಿಗಳು ಅಧಿಸೂಚನೆ ಹೊರಡಿಸಿದ್ದು, ಈ ಕುರಿತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ದಿ) ಅಧಿನಿಯಮ, ೧೯೬೬ ಕಲಂ ೧೪೫ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ರೈತರ ಹಿತದೃಷ್ಟಿಯಿಂದ ವಿಜಯಪುರ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆ ಕೇತ್ರವನ್ನು ವಿಭಜಿಸಿ, ಅಲಮೇಲ ತಾಲ್ಲೂಕಿಗೆ ಹೊಸದಾಗಿ ಪ್ರತ್ಯೇಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರಚಿಸಲು ಹಾಗೂ ೯೫ ಅಧಿಸೂಚಿತ ಕೃಷಿ ಉತ್ಪನ್ನಗಳ ಮಾರಾಟ ನಿಯಂತ್ರಣಕ್ಕೆ ಒಳಪಡಿಸಲು ಉದ್ದೇಶಿಸಲಾಗಿದೆ.ಉದ್ದೇಶಿತ ಪ್ರಸ್ತಾವನೆಗೆ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ದಿ) ಅಧಿನಿಯಮ, ೧೯೬೬ರ ಕಲಂ ೦೩ ರನ್ವಯ ಆಕ್ಷೇಪಣೆ/ಸಲಹೆಗಳನ್ನು ಆಹ್ವಾನಿಸಿದ್ದು, ಯಾವುದೇ ಆಕ್ಷೇಪಣೆಗಳು/ ಸಲಹೆಗಳು ಇದ್ದಲ್ಲಿ, ಈ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಅಥವಾ ಈ ಪ್ರಕಟಣೆಯ ೩೦…
ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ನಿಂಬಾಳ ಕೆ.ಡಿ., ಕಪನಿಂಬರಗಿ, ಹಿಂಗಣಿ ಹಾಗೂ ಪಡನೂರ ಗ್ರಾಮ ಪಂಚಾಯತ್‌ಗಳಲ್ಲಿ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಗೌರವಧನದ ಆಧಾರದ ಮೇಲೆ ಕಾರ್ಯನಿರ್ವಹಿಸಲು ಆಯ್ಕೆಯಾದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಪ್ರಕಟಿತ ಪಟ್ಟಿಗೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.ಆಯ್ಕೆಯಾದ ತಾತ್ಕಾಲಿಕ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಚೇರಿ ನೋಟಿಸ್ ಬೋರ್ಡಿಗೆ ಹಾಗೂ ತಾಲೂಕಾ ಪಂಚಾಯತ್ ಇಂಡಿ, ಕಚೇರಿ ಮತ್ತು ನಿಂಬಾಳ ಕೆ.ಡಿ., ಕಪನಿಂಬರಗಿ, ಹಿಂಗಣಿ ಹಾಗೂ ಪಡನೂರ ಗ್ರಾಮ ಪಂಚಾಯತ್ ಕಾರ್ಯಾಲಯದ ನೋಟಿಸ್ ಬೋರ್ಡನಲ್ಲಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳ ಆಯ್ಕೆಗೆ ಆಕ್ಷೇಪಣೆ ಸಲ್ಲಿಸುವವರು ದಿನಾಂಕ : ೧೮-೦೩-೨೦೨೪ರೊಳಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವಿಜಯಪುರ ಕಚೇರಿಗೆ ಸಲ್ಲಿಸಬೇಕು.ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮಾತ್ರ ಆಕ್ಷೆಪಣೆಗಳನ್ನು ಸಲ್ಲಿಸಬಹುದಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕನಕದಾಸ ಬಡಾವಣೆ,…
ವಿಜಯಪುರ: ಜಿಲ್ಲೆಯಲ್ಲಿ ಗುರುವಾರ ನಡೆದ ದ್ವಿತೀಯ ಪಿಯುಸಿ ಇತಿಹಾಸ ಹಾಗೂ ಭೌತಶಾಸ್ತ್ರ ಪರೀಕ್ಷೆಯಲ್ಲಿ ೧೧೬೩ ವಿದ್ಯಾರ್ಥಿಗಳ ಗೈರ ಹಾಜರಾಗಿದ್ದರು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.ಇತಿಹಾಸ ಪರೀಕ್ಷೆಗೆ ಒಟ್ಟು ೧೭೪೦೯ ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು, ೧೬೪೨೩ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ೯೮೬ ವಿದ್ಯಾರ್ಥಿಗಳು ಗೈರ ಹಾಜರಾಗಿದ್ದರು. ಅದರಂತೆ ಭೌತಶಾಸ್ತ್ರ ಪರೀಕ್ಷೆಗೆ ೧೧೫೦೪ ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು, ೧೧೩೨೭ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ೧೭೭ ವಿದ್ಯಾರ್ಥಿಗಳು ಗೈರ ಹಾಜರಾಗಿದ್ದರು. ಒಟ್ಟಾರೆ ೧೧೬೩ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರ ಹಾಜರಾಗಿದ್ದರು ಎಂದು ಅವರು ತಿಳಿಸಿದ್ದಾರೆ.
ವಿಜಯಪುರ: ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿರುವ ವಿಜಯಪುರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ದರ್ಬಾರ್ ಪದವಿ ಪೂರ್ವ ಕಾಲೇಜಿಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಗುರುವಾರ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಹಾಜರಾತಿ ಕುರಿತು ಕಾಲೇಜಿನ ಪ್ರಾಚಾರ್ಯರೊಂದಿಗೆ ಚರ್ಚಿಸಿದರು. ವಿ ಬಿ ದರ್ಬಾರ್ ಕಾಲೇಜಿಗೆ ಭೇಟಿ ನೀಡಿ ಪರೀಕ್ಷಾ ಕೊಠಡಿಗಳನ್ನು ವೀಕ್ಷಣೆ ಮಾಡಿದರುಈ ಸಂದರ್ಭದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜ, ದರ್ಬಾರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ತಿರುಮಲ ಕುಲಕರ್ಣಿ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.
ಮುದ್ದೇಬಿಹಾಳ: ಇಂದಿನ ಮಕ್ಕಳಿಗೆ ಸಾಕಷ್ಟು ವಿದ್ಯಾರ್ಜನೆ ಕೊಡಿಸುವದರ ಜೊತೆಗೆ ಕೆಲವಿಷ್ಟಾದರೂ ನಮ್ಮ ಧರ್ಮದ, ಇತಿಹಾಸದ, ಆದರ್ಶ ಪರಂಪರೆಯ ಪರಿಚಯವನ್ನ ಮಾಡಿಸಿ ಇಲ್ಲದಿದ್ದರೆ ಮುಂದೊಂದು ದಿನ ಅನೇಕ ಆತಂಕಗಳನ್ನು, ಸಂಕಷ್ಟಗಳನ್ನು ಎದುರಿಸುವ ಪರೀಸ್ಥಿತಿ ಬರಬಹುದು ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಭಗವದ್ಪಾದಕರು ಹೇಳಿದರು.ತಾಲೂಕಿನ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರ ಗುರು ಪಟ್ಟಾಧಿಕಾರ ಮಹೋತ್ಸವದ ಎರಡನೆಯ ದಿನದ ಧರ್ಮ ಜಾಗೃತಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕಾಗಿ ಶಾಸ್ತ್ರದ ಭಯ ಇರಬೇಕು. ಇಲ್ಲವೇ ಶಸ್ತ್ರದ ಭಯವಾದರೂ ಇರಬೇಕು. ಆದರೆ ಇವತ್ತು ಮನುಷ್ಯ ಶಾಸ್ತ್ರದ ಮರ್ಯಾದೆಯನ್ನು ಮೀರಿ ಕವಲುದಾರಿಯಲ್ಲಿ ನಡೆಯುತ್ತಿರುವದರಿಂದ ಅನೇಕ ಸಂಕಷ್ಟಗಳಿಗೆ ಬಲಿಯಾಗುತ್ತಿದ್ದಾನೆ. ಎಷ್ಟೇ ಸಂಪತ್ತು ಗಳಿಸಿದರೂ, ಅಧಿಕಾರದ ಅಂತಸ್ತು ಪಡೆದಿದ್ದರೂ ಆತ್ಮಶಾಂತಿ, ನೆಮ್ಮದಿ ಇಲ್ಲ. ಹಾಗಾಗಿ ಮನುಷ್ಯನಿಗೆ ಶಾಸ್ತ್ರದ ಬಗ್ಗೆ ಒಂದಿಷ್ಟಾದರೂ ಅರಿವು ಇರಬೇಕು. ಇಲ್ಲದೇ ಹೋದರೆ ಶಸ್ತ್ರ ನಮ್ಮನ್ನ ಬಂಧಿಸುತ್ತದೆ ಎಂದರೆ.ವೀರಶೈವದ ಧರ್ಮದ ಪಂಚಪೀಠಗಳು ಸಮಾಜದಲ್ಲಿ ಜಾತಿ ಮತ ಪಂಥಗಳನ್ನು ಮೀರಿ ಎಲ್ಲ…
ಇಂಡಿ: ರಾಷ್ಟ್ರಕೂಟರ ಕಾಲದಲ್ಲಿ ಸಾಲೋಟಗಿಯಲ್ಲಿ ಅಸ್ತಿತ್ವದಲ್ಲಿದ್ದ ಅಗ್ರಹಾರ. ಆಗಿನ ಕಾಲದಲ್ಲಿ ಜ್ಞಾನದ ಕೇಂದ್ರವಾಗಿ ನಾಡಿಗೆ ಗುರುವಾಗಿತ್ತು ಎಂದು ಶಿಕ್ಷಕ, ಸಾಹಿತಿ ದಶರಥ ಕೋರಿ ಉಪನ್ಯಾಸದ ಮೂಲಕ ಮಕ್ಕಳಿಗೆ ಮಾಹಿತಿ ನೀಡಿದರು.ತಾಲೂಕಿನ ಸಾಲೋಟಗಿ ಗ್ರಾಮದ ಎಸ್ ವಾಯ್ ಪದವಿ ಪೂರ್ವ ಕಾಲೇಜು (ಪ್ರೌಡವಿಭಾಗದ) 2023-24 ಎಸ್ ಎಸ್ ಎಲ್ ಸಿ ಮಕ್ಕಳ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡುತ್ತ ಅವರು, ಸಾಲೋಟಗಿ ಐತಿಹಾಸಿಕವಾಗಿ, ಧಾರ್ಮಿಕವಾಗಿ, ಜಾನಪದವಾಗಿ ನಾಡಿನಲ್ಲಿ ಅತ್ಯಂತ ಶ್ರೇಷ್ಠವಾದ ಸಾಧನೆಯ ಮೈಲುಗಲ್ಲನ್ನು ಸ್ಥಾಪಿಸಿದೆ. ಸಾಲೋಟಗಿಯಲ್ಲಿನ ಅಗ್ರಹಾರದ ಕುರಿತು ಮತ್ತು ಕಾಲಜ್ಞಾನಿ ಶಿವಯೋಗಿಶ್ವರರು ಬರೆದಿರುವೆನ್ನಲಾದ ಡಂಗರು ಪದಗಳ ಕುರಿತು ಇನ್ನಷ್ಟು ಬೆಳಕು ಚೆಲ್ಲಬೇಕು. ಅದರ ಜೊತೆಗೆ ನಾಡಿಗೆ ಜ್ಞಾನ ಕೇಂದ್ರವಾಗಿ,ಗುರುವಾಗಿದ್ದ ಇಲ್ಲಿನ ಅಗ್ರಹಾರ ಮತ್ತು ಹಲವು ದೇವಸ್ಥಾನದ ಪೂರಕ ಮಾಹಿತಿ ತಿಳಿಯಲು ಉತ್ಖನನದ ಅವಶ್ಯಕತೆಯಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಪ್ರೌಡಶಾಲಾ ಮುಖ್ಯಗುರುಗಳಾದ ಎಸ್ ವಾಯ್ ಉಪಾಸೆಯವರು ಮಾತನಾಡುತ್ತ ಮಕ್ಕಳಲ್ಲಿ ಸಂಶೋಧನಾ ಪ್ರವೃತ್ತಿ ಹೆಚ್ಚು ಮಾಡಿಕೊಳ್ಳಬೇಕೆಂದು ಕರೆ ನೀಡಿದರು.ಶಾಲಾ ಬೀಳ್ಕೊಡುವ ಸಮಾರಂಭದಲ್ಲಿ ರಾಜ್ಯ ಮಟ್ಟದಲ್ಲಿ ಕ್ರೀಡಾ ಸಾಧನೆ…
ದೇವರಹಿಪ್ಪರಗಿ: ಭಾರತೀಯ ವೈದ್ಯಕೀಯ ಪ್ರಕೋಷ್ಟಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಬಾಬು ರಾಜೇಂದ್ರ ನಾಯಿಕರವರಿಗೆ ಈ ಬಾರಿ ವಿಜಯಪುರ ಮತಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಬೆಂಬಲಿಗರು ಹಾಗೂ ಅಭಿಮಾನಿಗಳ ಸಂಘದ ಅಧ್ಯಕ್ಷ ಬಾಳು ರಾಠೋಡ ಆಗ್ರಹಿಸಿದ್ದಾರೆ.ಪಟ್ಟಣದ ಪ್ರವಾಸಿಮಂದಿರದಲ್ಲಿ ಗುರುವಾರ ಈ ಕುರಿತು ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಡಾ.ಬಾಬುರಾಜೇಂದ್ರ ನಾಯಿಕರು ಕಳೆದ ೧೫ ವರ್ಷಗಳಿಂದ ಸಂಘ ಪರಿವಾರದ ಕಟ್ಟಾಳುಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಕಳೆದ ೮ ವರ್ಷಗಳಿಂದ ಬಿಜೆಪಿ ಸಕ್ರೀಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಕೊರೋನಾ ಕಾಲದ ಲಾಕ್‌ಡೌನ್ ಸಮಯದಲ್ಲಿ ರೋಗಿಗಳ ಆರೈಕೆ ಮಾಡುವುದರ ಜೊತೆಗೆ ಅನೇಕ ಜನಪರ, ಸಾಮಾಜಿಕ ಸೇವಾಕಾರ್ಯಗಳನ್ನು ಕೈಗೊಂಡು ಮಾನವೀಯತೆ ಮೆರೆದಿದ್ದಾರೆ. ಅಲ್ಲದೇ ಪ್ರಧಾನಿ ಮೋದಿಯರವರ ಆಶಯದಂತೆ ಸ್ವಚ್ಛತಾ ಆಂದೋಲನದ ಕಾರ್ಯಗಳಲ್ಲಿ ಪಾಲ್ಗೊಂಡು ಗಮನಸೆಳೆದಿದ್ದಾರೆ.ಬೀಳಗಿ ಪಟ್ಟಣದಲ್ಲಿ ಗೋಶಾಲೆ ತೆರೆಯುವುದರ ಮೂಲಕ ಗೋರಕ್ಷಣೆ ಕಾರ್ಯ ಆರಂಭಿಸಿರುವ ಡಾ.ಬಾಬುರಾಜೇಂದ್ರ ನಾಯಿಕರು ತಮ್ಮ ಹಲವಾರು ನಿಸ್ವಾರ್ಥ ಸೇವೆಗಳ ಮೂಲಕ ಜಿಲ್ಲೆಯ ಜನಪ್ರೀಯ ವ್ಯಕ್ತಿಯಾಗಿ, ಎಲ್ಲ ಸಮುದಾಯಗಳೊಂದಿಗೆ ಅನೂನ್ಯತೆ ಭಾವ ಹೊಂದಿದ್ದಾರೆ.…
