ಸಿಂದಗಿ: ನ್ಯೂಜಿಲೆಂಡ್‌ನಲ್ಲಿ ಕನ್ನಡ ಸಂಘ, ಶರಣ ಸಾಹಿತ್ಯ ಪರಿಷತ್ತು ಮತ್ತು ಬಸವ ಸಮಿತಿಯನ್ನು ರಚಿಸಿಕೊಂಡು ಬಸವಣ್ಣನವರ ತತ್ವಾದರ್ಶಗಳನ್ನು ಸುಮಾರು ವರ್ಷಗಳಿಂದ ಬೆಳೆಸುತ್ತಿದ್ದೇನೆ ಎಂದು ನ್ಯೂಜಿಲೆಂಡಿನ ಬಸವ ಸಮಿತಿ ಸಂಸ್ಥಾಪಕ ಲಿಂಗಣ್ಣ ಕಲಬುರಗಿ ಹೇಳಿದರು,
ತಾಲೂಕಿನ ಯರಗಲ್ ಬಿಕೆ ಗ್ರಾಮದಲ್ಲಿ ಚಿಕ್ಕಪ್ಪಯ್ಯ ಶಿವಯೋಗಿಗಳ ಜಾತ್ರಾ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡ ಅಬ್ಬೆ ತುಮಕೂರಿನ ವಿಶ್ವರಾಧ್ಯರ ಮಹಾ ಪುರಾಣ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಬಸವಣ್ಣನವರ ತತ್ವಾದರ್ಶಗಳನ್ನು ಪಸರಿಸಲು ನ್ಯೂಜಿಲೆಂಡ, ಆಸ್ಟ್ರೇಲಿಯಾ ಮತ್ತು ಸಿಂಗಾಪುರ ಸೇರಿ ೯ ಬಸವ ಸಮಿತಿ ಶಾಖೆಗಳನ್ನು ಪ್ರಾರಂಭಿಸಲಾಗಿದೆ. ಪ್ರತಿವರ್ಷ ಕರ್ನಾಟಕದಿಂದ ಹರಗುರು ಚರಮೂರ್ತಿಗಳನ್ನು ಕರೆಯಿಸಿ ೯ ಶಾಖೆಗಳಿಗೆ ಭೇಟಿ ನೀಡಿಸಿ ಕನ್ನಡ ಬಳಗವನ್ನು ಕೂಡಿಸಿ ಕನ್ನಡ ನಾಡು ನುಡಿ ಬಗ್ಗೆ ಮಾಹಿತಿ ಕೊಡಿಸಲಾಗುವುದು ಎಂದರು.
ಈ ವೇಳೆ ಜಾನಪದ ವಿದ್ವಾಂಸ ಹಿರಿಯ ಸಾಹಿತಿ ಡಾ.ಎಂ.ಎಂ. ಪಡಶೆಟ್ಟಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ರಟಕಲ್ ಶ್ರೀಮಠದ ರೇವಣಸಿದ್ದ ಶಿವಾಚಾರ್ಯರು, ಪುರಾಣಿಕರಾದ ರಟಕಲ್ ವಿರಕ್ತಮಠದ ಸಿದ್ದರಾಮ ಮಹಾಸ್ವಾಮಿಗಳು, ಗವಾಯಿಗಳಾದ ಮಾಹಾಂತೇಶ ನಾಗೋಜಿ, ಶಿವಪ್ಪ ಗವಸಾನಿ, ಗುರುಲಿಂಗಪ್ಪಗೌಡ ಪಾಟೀಲ, ಶರಣಗೌಡ ಪಾಟೀಲ, ಬಾಬು ಜಾದವ್, ವಿಜಯಕುಮಾರ ಬಗಲಿ, ದೊಡ್ಡಪ್ಪಗೌಡ ನಾಗಠಾಣ, ಮಲ್ಲಿಕಾರ್ಜುನ ಗುಣಾರಿ, ಉಮೇಶ ಬಿರಾದಾರ, ಅಶೋಕ ಕುಮಸಗಿ, ಸುಧಾಕರ ಚಿಕ್ಕಪ್ಪನಮಠ, ದಯಾನಂದ ಚಿಕ್ಕಪ್ಪನಮಠ, ಶಶಿಕಾಂತ ಚಿಕ್ಕಯ್ಯನಮಠ ಸೇರಿದಂತೆ ಯರಗಲ್ ಗ್ರಾಮಸ್ಥರು ಶ್ರೀಮಠದ ಭಕ್ತರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

