ಮುದ್ದೇಬಿಹಾಳ: ಇಂದಿನ ಮಕ್ಕಳಿಗೆ ಸಾಕಷ್ಟು ವಿದ್ಯಾರ್ಜನೆ ಕೊಡಿಸುವದರ ಜೊತೆಗೆ ಕೆಲವಿಷ್ಟಾದರೂ ನಮ್ಮ ಧರ್ಮದ, ಇತಿಹಾಸದ, ಆದರ್ಶ ಪರಂಪರೆಯ ಪರಿಚಯವನ್ನ ಮಾಡಿಸಿ ಇಲ್ಲದಿದ್ದರೆ ಮುಂದೊಂದು ದಿನ ಅನೇಕ ಆತಂಕಗಳನ್ನು, ಸಂಕಷ್ಟಗಳನ್ನು ಎದುರಿಸುವ ಪರೀಸ್ಥಿತಿ ಬರಬಹುದು ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಭಗವದ್ಪಾದಕರು ಹೇಳಿದರು.
ತಾಲೂಕಿನ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರ ಗುರು ಪಟ್ಟಾಧಿಕಾರ ಮಹೋತ್ಸವದ ಎರಡನೆಯ ದಿನದ ಧರ್ಮ ಜಾಗೃತಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕಾಗಿ ಶಾಸ್ತ್ರದ ಭಯ ಇರಬೇಕು. ಇಲ್ಲವೇ ಶಸ್ತ್ರದ ಭಯವಾದರೂ ಇರಬೇಕು. ಆದರೆ ಇವತ್ತು ಮನುಷ್ಯ ಶಾಸ್ತ್ರದ ಮರ್ಯಾದೆಯನ್ನು ಮೀರಿ ಕವಲುದಾರಿಯಲ್ಲಿ ನಡೆಯುತ್ತಿರುವದರಿಂದ ಅನೇಕ ಸಂಕಷ್ಟಗಳಿಗೆ ಬಲಿಯಾಗುತ್ತಿದ್ದಾನೆ. ಎಷ್ಟೇ ಸಂಪತ್ತು ಗಳಿಸಿದರೂ, ಅಧಿಕಾರದ ಅಂತಸ್ತು ಪಡೆದಿದ್ದರೂ ಆತ್ಮಶಾಂತಿ, ನೆಮ್ಮದಿ ಇಲ್ಲ. ಹಾಗಾಗಿ ಮನುಷ್ಯನಿಗೆ ಶಾಸ್ತ್ರದ ಬಗ್ಗೆ ಒಂದಿಷ್ಟಾದರೂ ಅರಿವು ಇರಬೇಕು. ಇಲ್ಲದೇ ಹೋದರೆ ಶಸ್ತ್ರ ನಮ್ಮನ್ನ ಬಂಧಿಸುತ್ತದೆ ಎಂದರೆ.
ವೀರಶೈವದ ಧರ್ಮದ ಪಂಚಪೀಠಗಳು ಸಮಾಜದಲ್ಲಿ ಜಾತಿ ಮತ ಪಂಥಗಳನ್ನು ಮೀರಿ ಎಲ್ಲ ವರ್ಗದ ಜನರಿಗೆ ಸಮನ್ವಯದ ಶಾಂತಿ ಸಂದೇಶವನ್ನ ಯಾವಾಗಲೂ ಕೊಡುತ್ತ ಬಂದಿವೆ. ಉತ್ತಮ ಸಂಸ್ಕಾರ ಪಡೆಯಲು ಮಠಗಳಿಂದ ಸಾಧ್ಯವೇ ಹೊರತು ಬೇರೆ ಎಲ್ಲೂ ಸಿಗಲ್ಲ ಎಂದರು.
ಸಿಂದಗಿಯ ಪ್ರಭು ಸಾರಂಗ ಶಿವಾಚಾರ್ಯರು, ಎಮ್ಮಿಗನೂರಿನ ವಾಮದೇವ ಮಹಾಂತ ಶಿವಾಚಾರ್ಯರು, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ದಾಸೋಹ ಸೇವೆ ನೀಡಿದ ಸಮಾಜ ಸೇವಕ ಸಿ.ಬಿ.ಅಸ್ಕಿ ಮಾತನಾಡಿದರು.
ನಿಡಗುಂದಿಯ ರುದ್ರಮುನಿ ಶಿವಾಚಾರ್ಯರು, ಚಳಗೇರಿಯ ವಿರುಪಾಕ್ಷಲಿಂಗ ಶಿವಾಚಾರ್ಯರು, ಬಿಲಕೆರಿಯ ಸಿದ್ದಲಿಂಗ ಶಿವಾಚಾರ್ಯರು, ಗುಂಡಕನಾಳದ ಗುರುಲಿಂಗ ಶಿವಾಚಾರ್ಯರು ಸೇರಿದಂತೆ ಹರ ಗುರು ಚರಮೂರ್ತಿಗಳ ಆದಿಯಾಗಿ ವಿವಿಧ ಗಣ್ಯರು ವೇದಿಕೆಯ ಮೇಲಿದ್ದರು. ಉಪನ್ಯಾಸಕ ಯು.ಎನ್.ಕುಂಟೋಜಿ ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಸ್ವಾಗತಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

