ಸಿಂದಗಿ: ಸರಕಾರ ಒದಗಿಸುವ ಆರೋಗ್ಯ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಸಾರ್ವಜನಿಕ ಇಲಾಖೆಯ ಐಸಿಟಿಸಿ ವಿಭಾಗದ ಆಪ್ತಸಮಾಲೋಚಕ ಎಂ.ಪಿ ಸಾಗರ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಇಲಾಖೆ, ತಾಲೂಕು ಆರೋಗ್ಯ ಇಲಾಖೆ, ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ವಿಭಾಗ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ೨ನೆಯ ಹಂತದ ಸಮುದಾಯ ಆಧಾರಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಕಾಲ ಕಾಲಕ್ಕೆ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಮುಂಬರುವ ರೋಗಗಳ ಬಗ್ಗೆ ನೀಗಾವಹಿಸಬೇಕು. ಎಚ್‌ಐವಿ ಪರೀಕ್ಷೆ ಮತ್ತು ತಡೆಗಟ್ಟುವಿಕೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ವೇಳೆ ಬಸ್ ನಿಲ್ದಾಣದಲ್ಲಿ ೨೧೦ಕ್ಕೂ ಅಧಿಕ ಜನರು ತಪಾಸಣೆ ಮಾಡಿಕೊಂಡರು. ತಪಾಸಣಾ ಶಿಬಿರದಲ್ಲಿ ಸಿಬ್ಬಂದಿಗಳಾದ ಲವ ಗಾಣಿಗೇರ, ಡಿ.ಎಲ್. ಕುಂಬಾರ, ಮಹ್ಮದ್ ಸೋಯೆಬ್, ಮತ್‌ಸುದ್ ಕಲಾಲ್, ನವೀನ, ಪರಶುರಾಮ ಸೇರಿದಂತೆ ಪ್ರಯಾಣಿಕರು, ನಿರ್ವಾಹಕರು, ಚಾಲಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

