ದೇವರಹಿಪ್ಪರಗಿ: ಭಾರತೀಯ ವೈದ್ಯಕೀಯ ಪ್ರಕೋಷ್ಟಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಬಾಬು ರಾಜೇಂದ್ರ ನಾಯಿಕರವರಿಗೆ ಈ ಬಾರಿ ವಿಜಯಪುರ ಮತಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಬೆಂಬಲಿಗರು ಹಾಗೂ ಅಭಿಮಾನಿಗಳ ಸಂಘದ ಅಧ್ಯಕ್ಷ ಬಾಳು ರಾಠೋಡ ಆಗ್ರಹಿಸಿದ್ದಾರೆ.
ಪಟ್ಟಣದ ಪ್ರವಾಸಿಮಂದಿರದಲ್ಲಿ ಗುರುವಾರ ಈ ಕುರಿತು ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಡಾ.ಬಾಬುರಾಜೇಂದ್ರ ನಾಯಿಕರು ಕಳೆದ ೧೫ ವರ್ಷಗಳಿಂದ ಸಂಘ ಪರಿವಾರದ ಕಟ್ಟಾಳುಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಕಳೆದ ೮ ವರ್ಷಗಳಿಂದ ಬಿಜೆಪಿ ಸಕ್ರೀಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಕೊರೋನಾ ಕಾಲದ ಲಾಕ್‌ಡೌನ್ ಸಮಯದಲ್ಲಿ ರೋಗಿಗಳ ಆರೈಕೆ ಮಾಡುವುದರ ಜೊತೆಗೆ ಅನೇಕ ಜನಪರ, ಸಾಮಾಜಿಕ ಸೇವಾಕಾರ್ಯಗಳನ್ನು ಕೈಗೊಂಡು ಮಾನವೀಯತೆ ಮೆರೆದಿದ್ದಾರೆ. ಅಲ್ಲದೇ ಪ್ರಧಾನಿ ಮೋದಿಯರವರ ಆಶಯದಂತೆ ಸ್ವಚ್ಛತಾ ಆಂದೋಲನದ ಕಾರ್ಯಗಳಲ್ಲಿ ಪಾಲ್ಗೊಂಡು ಗಮನಸೆಳೆದಿದ್ದಾರೆ.
ಬೀಳಗಿ ಪಟ್ಟಣದಲ್ಲಿ ಗೋಶಾಲೆ ತೆರೆಯುವುದರ ಮೂಲಕ ಗೋರಕ್ಷಣೆ ಕಾರ್ಯ ಆರಂಭಿಸಿರುವ ಡಾ.ಬಾಬುರಾಜೇಂದ್ರ ನಾಯಿಕರು ತಮ್ಮ ಹಲವಾರು ನಿಸ್ವಾರ್ಥ ಸೇವೆಗಳ ಮೂಲಕ ಜಿಲ್ಲೆಯ ಜನಪ್ರೀಯ ವ್ಯಕ್ತಿಯಾಗಿ, ಎಲ್ಲ ಸಮುದಾಯಗಳೊಂದಿಗೆ ಅನೂನ್ಯತೆ ಭಾವ ಹೊಂದಿದ್ದಾರೆ. ಯುವಕರಿಗೆ ಮಾನವೀಯತೆ, ಕಳಕಳಿಯ ಸ್ನೇಹಿತನಾಗಿ, ಜಿಲ್ಲೆಯ ಬಹುತೇಕ ಎಲ್ಲ ಮಠಮಾನ್ಯಗಳ ಸ್ವಾಮೀಜಿಗಳ ಪರಮಭಕ್ತರಾಗಿ ಹಾಗೂ ಎಲ್ಲ ಹಿರಿಯ, ಕಿರಿಯ ರಾಜಕೀಯ ನಾಯಕರೊಂದಿಗೆ ಆತ್ಮೀಯತೆ ಭಾವ ಹೊಂದಿದ್ದಾರೆ. ಇಂಥ ನಾಯಕರ ಅಗತ್ಯತೆ ಇಂದು ಜಿಲ್ಲೆಗೆ ಅಗತ್ಯವಾಗಿದೆ. ಆದ್ದರಿಂದ ಬಿಜೆಪಿ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಇವರ ಸೇವೆಗೆ ಅವಕಾಶ ಕಲ್ಪಿಸಲು ಈ ಬಾರಿ ನಮ್ಮ ಜಿಲ್ಲೆಯಿಂದ ಲೋಕಸಭೆ ಸ್ಪರ್ಧೆ ಮಾಡಲು ಇವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ಧುರೀಣ ವಿನೋದ ಚವ್ಹಾಣ, ಮೋಹನ ಚವ್ಹಾಣ, ರಾಕೇಶ ರಜಪೂತ, ಶ್ರೀಕಾಂತ ಕಾಖಂಡಕಿ, ಜಗದೀಶ ಚವ್ಹಾಣ, ಅನೀಲ ರಾಠೋಡ, ಭೀಮು ಚವ್ಹಾಣ, ರವಿ ರಾಠೋಡ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

