Author: editor.udayarashmi@gmail.com

ವಿಜಯಪುರ: ಬರಲಿರುವ ಲೋಕಸಭೆ ಚುನಾವಣೆ ಹಾಗೂ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರಿಯಾದ ಪಾಠ ಕಲಿಸಲು ಬಂಜಾರಾ ಸಮಾಜ ಪ್ರತಿಜ್ಞೆ ಮಾಡಿದೆ. ಸಮಾಜದ ಗುರು ಸಂತ ಶ್ರೀ ಸೇವಾಲಾಲ್‌ರ ಹೆಸರಿನಲ್ಲಿ ಪ್ರಮಾಣ ಮಾಡಿ ಯಾವುದೇ ಕಾರಣಕ್ಕೆ ರಾಜ್ಯದಲ್ಲಿ ಇನ್ನು ಮುಂದೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಲು ಬಿಡುವುದಿಲ್ಲ ಎಂದು ರಾಜ್ಯ ಆ್ಯಂಟಿ ಕರಪ್ಷನ್ ಫೌಂಡೇಶನ್ ಆಫ್ ಇಂಡಿಯಾ ಅಧ್ಯಕ್ಷ ಬಿ.ಬಿ. ಲಮಾಣಿ ಗುಡುಗಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರಕಾರ ಬಂಜಾರಾ ಸಮಾಜದ ಸದಾಶಿವ ಆಯೋಗವನ್ನು ಜಾರಿಗೆ ತಂದಿದ್ದಕ್ಕೆ ಬಂಜಾರಾ ಸಮಾಜ ಯಾವ ರೀತಿ ಪ್ರತಿಭಟನೆ ಮಾಡಿತು. ಅದು ಕಾಂಗ್ರೆಸ್ಸಿಗೆ ಗೊತ್ತೇ ಇದೆ. ಅದರ ಪ್ರತಾಪದಿಂದ ಬಿಜೆಪಿಯು ರಾಜ್ಯದಲ್ಲಿ ತನ್ನ ಸರಕಾರವನ್ನೇ ಕಳೆದುಕೊಂಡಿದ್ದನ್ನು ಸ್ವತಃ ಬಿಜೆಪಿ ರಾಜ್ಯ ನಾಯಕರೇ ಒಪ್ಪಿಕೊಂಡಿದ್ದಾರೆ. ಈ ಸಲ ಸಮಾಜವು ಸುಮ್ಮನೇ ಕೂಡದು. ಅತೀ ಶೀಘ್ರದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಹಾಗೂ ರಾಜ್ಯಾದ್ಯಾಂತ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರತಿಭಟನೆಯನ್ನು…

Read More

ಮುದ್ದೇಬಿಹಾಳ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವುದಕ್ಕಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಗ್ರೇಡ ೨ ತಹಶೀಲ್ದಾರ ಜಿ.ಎನ್.ಕಟ್ಟಿಮನಿ ಹೇಳಿದರು.ತಾಲೂಕಿನ ಹುಲ್ಲೂರು ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ನಡೆದ ಪಿಂಚಣಿ ಅದಾಲತ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.ಪಿಂಚಣಿ ಅದಾಲತ್ ಸಾಕಷ್ಟು ಸಹಕಾರಿಯಾಗಲಿದೆ. ಈ ಸೇವೆಯಿಂದ ಬರುವ ದಿನಗಳಲ್ಲಿ ಫಲಾನುಭವಿಗಳು ಕಚೇರಿಗೆ ಅಲೆಯುವದು ತಪ್ಪುತ್ತದೆ. ಅದಾಲತ್ ನಲ್ಲಿ ಸಲ್ಲಿಕೆಯಾದ ಅರ್ಜಿಗಳ ಪೈಕಿ, ಕೆಲವನ್ನು ಕಂದಾಯ ಇಲಾಖೆ ಸಿಬ್ಬಂದಿಗಳೊಂದಿಗೆ ಚರ್ಚಿಸಿ ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಗಿದೆ. ಹೊಸದಾಗಿ ಪಿಂಚಣಿಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಶೀಘ್ರದಲ್ಲಿ ಆದೇಶ ಪತ್ರಗಳನ್ನು ತಮ್ಮ ಮನೆಗೆ ಬಂದು ವಿತರಿಸಲಾಗುವದು ಎಂದು ಹೇಳಿದರು.ಗ್ರಾ.ಪಂ ಸದಸ್ಯ ಶಿವಾನಂದ ಲಮಾಣಿ ಮಾತನಾಡಿದರು.ಪಂಚಾಯತ ಅಭಿವೃದ್ದಿ ಅಧಿಕಾರಿ ಅರವಿಂದ ಲೋನಾರಮಠ ಮಾತನಾಡಿದರು.ಇದೇ ವೇಳೆ ಸ್ಥಳೀಯ ಮತ್ತು ಸುತ್ತಮುತ್ತಲಿನ ೬ ಗ್ರಾಮದ ಹಲವಾರು ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಮಂಜೂರಾತಿ ಪತ್ರಗಳನ್ನು ವಿತರಿಸಿದರು. ಢವಳಗಿ ಉಪತಹಶೀಲ್ದಾರ ಎಸ್.ಪಿ.ಭಾವಿಕಟ್ಟಿ, ಗ್ರಾಮ ಲೆಕ್ಕಾಧಿಕಾರಿ ಮನೋಜ ರಾಠೋಡ,…

Read More

’ವಿದ್ಯಾರ್ಥಿ ನಿಧಿ’ ಮಕ್ಕಳ ಕಥೆ- ಮಂಡ್ಯ ಮ.ನಾ.ಉಡುಪ ಅದೊಂದು ಕಾಡು. ಅಲ್ಲಿ ನಾನಾ ರೀತಿಯ ಪ್ರಾಣಿಗಳು ವಾಸಿಸುತ್ತಿದ್ದವು. ಅವುಗಳಲ್ಲಿ ತೋಳವೊಂದಿತ್ತು. ತೋಳವು ಚಿಕ್ಕಪುಟ್ಟ ಪ್ರಾಣಿಗಳನ್ನು ತಿಂದು ಹಸಿವನ್ನು ನೀಗಿಸಿಕೊಳ್ಳುತಿತ್ತು.ಒಮ್ಮೆ ಕಾಡಿನ ಪಕ್ಕದಲ್ಲಿನ ಗುಹೆಯಿಂದ ಸಿಂಹವೊಂದು ಜೋರಾಗಿ ಘರ್ಜನೆ ಮಾಡುತ್ತಾ ಕಾಡನ್ನು ಪ್ರವೇಶಮಾಡಿತು. ಸಿಂಹದ ಘರ್ಜನೆ ಕೇಳಿದ ಕಾಡಿನ ಪ್ರಾಣಿಗಳೆಲ್ಲ ನಡುಗಿಹೋದವು. ಬೆಟ್ಟದ ಮೇಲಿನಿಂದ ಬರುತಿದ್ದ ತೋಳಕ್ಕೂ ಸಿಂಹದ ಘರ್ಜನೆ ಕೇಳಿತು. ಅದು ಗಡಿಬಿಡಿಯಲ್ಲಿ ಓಡವಾಗ ಬೆಟ್ಟದಿಂದ ಕೆಳಗಿನ ಕಮರಿಯೊಂದಕ್ಕೆ ಬಿತ್ತು. ಬಿದ್ದ ರಭಸಕ್ಕದು ಎದ್ದು ಓಡಾಡದ ಸ್ಥಿತಿ ತಲುಪಿತು.ಸಿಂಹ ಕಾಡೆಲ್ಲವನ್ನು ಸುತ್ತಿ ಗುಹೆಗೆ ಹೊರಟು ಹೋಯಿತು. ಕಾಡು ಮತ್ತೆ ಪ್ರಶಾಂತವಾಯಿತು.ಇದೇ ಸಮಯದಲ್ಲಿ ಮೊಲವೊಂದು ಹುಲ್ಲು ಹುಡುಕಿಕೊಂಡು ಹೊರಟಿತ್ತು. ದಾರಿಯಲ್ಲಿ ಕಮರಿಯೊಳಗೆ ಬಿದ್ದ ತೋಳವನ್ನು ನೋಡಿತು. ತೋಳವು ದೈನ್ಯವಾದ ದನಿಯಿಂದ ಕೇಳಿತು” ಮಿತ್ರಾ ನಾನು ಹಸಿವು ಮತ್ತೆ ಬಾಯಾರಿಕೆಯಿಂದ ಬಳಲಿಹೋಗಿರುವೆ. ಕನಿಕರಿಸಿ ಸ್ವಲ್ಪ ಪಕ್ಕದ ಹಳ್ಳದಿಂದ ನೀರು ತಂದುಕೊಡಬಲ್ಲೆಯಾ… ? “ಆಗ ಮೊಲವು ಹೇಳಿತು” ಮಿತ್ರಾ ನಾನೇನಾದರೂ ನೀರು ತೆಗೆದುಕೊಂಡು ನಿನ್ನ ಬಳಿಗೆ…

Read More

’ಹಲೋ ಸಖಿ’ ಬಳಗದಿಂದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ’ಉದಯರಶ್ಮಿ’ ಪ್ರಕಾಶಕಿ ಶೈಲಾ ಮಣೂರ ಅಭಿಮತ ವಿಜಯಪುರ: ಕುಟುಂಬದ ಜೊತೆಗೆ ಸಮಾಜ ಹಾಗೂ ರಾಷ್ಟ್ರ ನಿರ್ಮಾಣದಲ್ಲೂ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಅವರ ತ್ಯಾಗವನ್ನು ಗುರುತಿಸಲು ಮತ್ತು ಸಮಾಜದಲ್ಲಿ ಅವರಿಗೆ ಸಮಾನ ಹಕ್ಕುಗಳನ್ನು ಕಲ್ಪಿಸುವ ಸಲುವಾಗಿ ಪ್ರತಿ ವರ್ಷ ಮಾ.೦೮ ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ ಎಂದುಶಿಕ್ಷಕಿ ಸುಮಂಗಲಾ ಕೋಳೂರ ಹೇಳಿದರು.ಸೋಮವಾರ ಸಂಜೆ ನಗರದ ಖಾಸಗಿ ಹೊಟೇಲನಲ್ಲಿ ’ಹಲೋ ಸಖಿ’ ಸ್ನೇಹಿತೆಯರ ಬಳಗ ಏರ್ಪಡಿಸಿದ ‘ವಿಶ್ವ ಮಹಿಳಾ ದಿನಾಚರಣೆ’ ಕಾರ್ಯಕ್ರಮಕ್ಕೆ ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಸೌಂದರ್ಯ ತಜ್ಞೆ ರೇಖಾ ಜಿನಗೊಂಡ ಮಾತನಾಡಿ, ಮಹಿಳೆಯೇ ಇಲ್ಲದ ವಿಶ್ವವನ್ನು ಊಹಿಸಲು ಸಾಧ್ಯವೇ ಇಲ್ಲ. ಮಹಿಳೆ ಎಂದರೆ ಶಕ್ತಿ, ಮಹಿಳೆ ಎಂದರೆ ಧೈರ್ಯ, ಮಹಿಳೆ ಎಂದರೆ ಪ್ರೀತಿ, ಮಹಿಳೆ ಎಂದರೆ ಕಾಳಜಿ. ಹೀಗೆ ಮಹಿಳೆ ಪ್ರತಿಯೊಬ್ಬರ ಬದುಕಿನಲ್ಲೂ ನಿರ್ವಹಿಸುವ ಪಾತ್ರಗಳು ಹಾಗೂ ನಿರ್ವಹಿಸುವ ಜವಾಬ್ದಾರಿಗಳೂ ಹಲವಾರು ಎಂದು ಹೇಳಿದರು.’ಉದಯರಶ್ಮಿ’ ದಿನಪತ್ರಿಕೆಯ ಪ್ರಕಾಶಕಿ ಶೈಲಾ…

Read More

ಸಿಂದಗಿ: ವ್ಯಾಪಕವಾಗಿ ಬೆಳೆಯುತ್ತಿರುವ ಸಿಂದಗಿ ನಗರದಲ್ಲಿ ೨ ಎಕರೆ ೩೪ ಗುಂಟೆಯಲ್ಲಿ ಅಂದಾಜು ೨ ಕೋಟಿ ಅನುದಾನದಲ್ಲಿ ವಿನೂತನವಾದ ಟ್ರೀ ಪಾರ್ಕ್ ರೂಪುಗೊಳ್ಳಲಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ವಿಜಯಪುರ ಪ್ರಾದೇಶಿಕ ಅರಣ್ಯ ವಿಭಾಗ ಹಾಗೂ ಸಿಂದಗಿ ಪ್ರಾದೇಶಿಕ ಅರಣ್ಯ ವಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಹೊನ್ನಪ್ಪಗೌಡರ ಲೇಔಟ್ ದಲ್ಲಿ ಟ್ರೀ ಪಾರ್ಕ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟ ಜಾಗೆಯನ್ನು ಅಭಿವೃದ್ದಿ ಪಡಿಸಿ ಹಿರಿಯರಿಗೆ ಮಕ್ಕಳಿಗೆ ಅನುಕೂಲವಾಗಲು ಪಣ ತೊಟ್ಟಿದ್ದೇನೆ. ಪ್ರಸ್ತುತ ಭೂಮಿ ಪೂಜೆಯಾದ ಕಾಮಗಾರಿಗೆ ಸದ್ಯ ೧ ಕೋಟಿ ಅನುದಾನ ಬಿಡುಗಡೆಯಾಗಿದೆ. ೨೦೨೪-೨೫ ನೇ ಸಾಲಿನಲ್ಲಿ ಮತ್ತೆ ರೂ.೧ ಕೋಟಿ ಅನುದಾನ ಸರಕಾರ ನೀಡಲಿದೆ ಎಂದ ಅವರು ಆನಂದ ಟಾಕೀಜ್ ಹತ್ತಿರವಿರುವ ಹಳೆಯ ತಹಶೀಲ್ದಾರ ಕಛೇರಿಯನ್ನು ಮೆಗಾ ಮಾರ್ಕೆಟ್ ಮಾಡಲು ಅಂದಾಜು ೨೭ ಕೋಟಿಯ ಯೋಜನೆಯು ಸರ್ಕಾರದ ಮುಂದಿದೆ. ಆಲಮೇಲ ರಸ್ತೆಯಲ್ಲಿನ ಮಿನಿ ವಿಧಾನಸೌಧಕ್ಕೆ ಇನ್ನೂ ಅಂದಾಜು ರೂ.೫ ಕೋಟಿ ಕೊರತೆ…

Read More

ಸಿಂದಗಿ: ಪ್ರಸ್ತುತ ಮಕ್ಕಳ ಶಿಕ್ಷಣದ ಪ್ರಗತಿಯಲ್ಲಿ ಶಿಕ್ಷಕರಿಗಿಂತಲೂ ಪಾಲಕರ ಜವಾಬ್ದಾರಿ ಮತ್ತು ಹೊಣೆಗಾರಿಕೆ ಅತ್ಯಂತ ಪ್ರಮುಖವಾಗಿದೆ ಎಂದು ಯವ ಸಾಹಿತಿ ಡಾ. ಸಂತೋಷ ಬಿ. ನವಲಗುಂದ ಅವರು ಹೇಳಿದರು.ತಾಲೂಕಿನ ಹೊನ್ನಳ್ಳಿ ಗ್ರಾಮದ ಪ್ರಿಯದರ್ಶಿನಿ ಶಿಕ್ಷಣ ಸಂಸ್ಥೆಯ ಶ್ರೀ ಸರಸ್ವತಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ೧೮ನೇ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಉಪನ್ಯಾಸಕರಾಗಿ ಅವರು ಮಾತನಾಡಿದರು.ಸರ್ಕಾರಗಳು ಬದಲಾದಂತೆ ಮಕ್ಕಳಿಗೆ ನೀಡುವ ಶಿಕ್ಷಣ ಪದ್ದತಿಯು ಬದಲಾಗುತ್ತಾ ಹೋಗುತ್ತಿದೆ. ಈ ವರ್ಷ ಅಭ್ಯಾಸ ಮಾಡಿದ ಪಠ್ಯವಸ್ತು ಮರು ವರ್ಷ ಇರುತ್ತದೆ ಎಂಬ ನಂಬಿಕೆ ಉಳಿದಿಲ್ಲ. ಇವತ್ತು ಮಕ್ಕಳ ಶಿಕ್ಷಣದ ಜೊತೆಗೆ ಸರ್ಕಾರಗಳು ಒಂದು ರೀತಿಯ ಆಟ ಆಡುತ್ತಿವೆ ಎಂಬ ಭಾವನೆ ಎಲ್ಲರಲ್ಲಿಯೂ ಮೂಡುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಪಾಲಕರಾದವರು ತಮ್ಮ ಮಕ್ಕಳಿಗೆ ಯಾವ ನಿಟ್ಟಿನಲ್ಲಿ ಶಿಕ್ಷಣ ಒದಗಿಸಬೇಕೆಂದು ಗಂಭೀರ ಆಲೋಚನೆ ಮಾಡಿಯೇ ಶಾಲೆಗಳಿಗೆ ದಾಖಲಿಸಬೇಕಾಗಿದೆ ಎಂದು ಸಲಹೆ ನೀಡಿದರು.ಈ ವೇಳೆ, ಇದೇ ಶಾಲೆಯಲ್ಲಿ ಕಲಿತು ಉನ್ನತ ಪದವಿಗಳಲ್ಲಿರುವ ಸಾಧಕರಿಗೆ ವಿಶೇಷವಾಗಿ ಸತ್ಕರಿಸಲಾಯಿತು.ಈ ಸಂದರ್ಭದಲ್ಲಿ ಹೊನ್ನಳ್ಳಿಯ ವೀರಘಂಟಿ…

Read More

ಸಿಂದಗಿ: ಬಿಜೆಪಿ ಪಕ್ಷದ ಯುವ ಮುಖಂಡ ಪ್ರಶಾಂತ ಕದ್ದರಕಿಯವರನ್ನು ಎಸ್.ಟಿ. ಮೋರ್ಚಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ತಾಲೂಕು ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಆದೇಶ ಹೊರಡಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಎಸ್.ಟಿ.ಮೋರ್ಚಾ ಅಧ್ಯಕ್ಷ ಪ್ರಶಾಂತ ಕದ್ದರಕಿ, ಪಕ್ಷದ ಹಿರಿಯರು ನನ್ನ ರಾಜಕೀಯ ಗುರು ಮಾಜಿ ಶಾಸಕ ರಮೇಶ ಭೂಸನೂರ ಮತ್ತು ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು ನನ್ನ ಮೇಲೆ ಭರವಸೆಯಿಟ್ಟು ಎಸ್.ಟಿ.ಮೋರ್ಚಾ ಅಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ. ನನ್ನ ಮೇಲೆ ಇಟ್ಟಿರುವ ಭರವಸೆ ಹುಸಿಯಾಗದಂತೆ ಪಕ್ಷದಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತೇನೆ ಮುಂಬರು ಲೋಕಸಭೆ, ಜಿ.ಪಂ, ತಾ.ಪಂ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವೆ ಪಕ್ಷವನ್ನು ಸಂಘಟಿಸುವೆ ಎಂದು ಹೇಳಿದರು.

Read More

ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಮಲಘಾಣ ಗ್ರಾಮದ ಇಂಚಗೇರಿ ಆಧ್ಯಾತ್ಮ ಸಂಪ್ರದಾಯ ಫೌಂಡೇಶನ ವತಿಯಿಂದ ಮಹಾಶಿವರಾತ್ರಿ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕಿಯರಿಗೆ ಪ್ರತಿ ವರ್ಷ ನೀಡುವ ಅಹಿಲ್ಯಾಬಾಯಿ ಹೋಳ್ಕರ ರಾಷ್ಟ್ರೀಯ ಪ್ರಶಸ್ತಿಗೆ ಸಮಾಜ ಸೇವಕಿ ಕಾಶಿಬಾಯಿ ರಾಂಪೂರ ಭಾಜನರಾಗಿ ಪ್ರಶಸ್ತಿ ಸ್ವೀಕರಿಸಿದರು.

Read More

ಸಿಂದಗಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮನಗೂಳಿ ಚಾಲನೆ ಸಿಂದಗಿ: ನಗರದ ಅಲ್ಪ ಸಂಖ್ಯಾತರ ಕಾಲೋನಿಗಳನ್ನು ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಸಚಿವ ಜಮೀರ್ ಅಹ್ಮದ ಅವರು ೫ಕೋಟಿ ಅನುದಾನವನ್ನು ಮಂಜೂರು ಮಾಡಿದ್ದಾರೆ, ಅದರಲ್ಲಿ ೨ಕೋಟಿ ೮೫ಲಕ್ಷ ರೂ. ಅನುದಾನ ಮಹಮ್ಮದಿಯಾ ನಗರಕ್ಕೆ ಮೀಸಲು ಇಟ್ಟಿದ್ದೇವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ೭ನೆಯ ವಾರ್ಡಿನ ಮಹಮ್ಮದಿಯಾ ನಗರದಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಿಜಯಪುರ ಕೆಎಸ್‌ಎಚ್‌ಸಿ ಅನುಷ್ಠಾನದ ೨೦೨೩-೨೪ನೆಯ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ ಹಮ್ಮಿಕೊಂಡ ಸಿಸಿ ರಸ್ತೆ, ಪೇವರ್ಸ್ ನಿಮಾರ್ಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ೧ ಕೋಟಿ ೧೧ಲಕ್ಷ ರೂ. ಶಿವಶಂಕರ ಬಡಾವಣೆಯಲ್ಲಿ ವಾಸಿಸುವ ಅಲ್ಪ ಸಂಖ್ಯಾತರಿಗೆ ರಸ್ತೆ ಮತ್ತು ಚರಂಡಿಗಾಗಿ ಮೀಸಲಿಟ್ಟಿದೆ. ೯ನೆಯ ವಾರ್ಡಿಗೆ ೪೫ಲಕ್ಷ ರೂ. ಮೀಸಲು. ೧೭ನೆಯ ವಾರ್ಡ ಸರಕಾರಿ ಆಸ್ಪತ್ರೆಯ ಹಿಂದುಗಡೆ ವಾಸಿಸುವ ಅಲ್ಪ ಸಂಖ್ಯಾತರ ಅಭಿವೃದ್ದಿ ೫೫ಲಕ್ಷ ರೂ. ಮೀಸಲಿಟ್ಟು ಒಟ್ಟು ಸಿಂದಗಿ ನಗರಕ್ಕೆ ೫ಕೋಟಿ…

Read More