ಸಿಂದಗಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮನಗೂಳಿ ಚಾಲನೆ
ಸಿಂದಗಿ: ನಗರದ ಅಲ್ಪ ಸಂಖ್ಯಾತರ ಕಾಲೋನಿಗಳನ್ನು ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಸಚಿವ ಜಮೀರ್ ಅಹ್ಮದ ಅವರು ೫ಕೋಟಿ ಅನುದಾನವನ್ನು ಮಂಜೂರು ಮಾಡಿದ್ದಾರೆ, ಅದರಲ್ಲಿ ೨ಕೋಟಿ ೮೫ಲಕ್ಷ ರೂ. ಅನುದಾನ ಮಹಮ್ಮದಿಯಾ ನಗರಕ್ಕೆ ಮೀಸಲು ಇಟ್ಟಿದ್ದೇವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ೭ನೆಯ ವಾರ್ಡಿನ ಮಹಮ್ಮದಿಯಾ ನಗರದಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಿಜಯಪುರ ಕೆಎಸ್‌ಎಚ್‌ಸಿ ಅನುಷ್ಠಾನದ ೨೦೨೩-೨೪ನೆಯ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ ಹಮ್ಮಿಕೊಂಡ ಸಿಸಿ ರಸ್ತೆ, ಪೇವರ್ಸ್ ನಿಮಾರ್ಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ೧ ಕೋಟಿ ೧೧ಲಕ್ಷ ರೂ. ಶಿವಶಂಕರ ಬಡಾವಣೆಯಲ್ಲಿ ವಾಸಿಸುವ ಅಲ್ಪ ಸಂಖ್ಯಾತರಿಗೆ ರಸ್ತೆ ಮತ್ತು ಚರಂಡಿಗಾಗಿ ಮೀಸಲಿಟ್ಟಿದೆ. ೯ನೆಯ ವಾರ್ಡಿಗೆ ೪೫ಲಕ್ಷ ರೂ. ಮೀಸಲು. ೧೭ನೆಯ ವಾರ್ಡ ಸರಕಾರಿ ಆಸ್ಪತ್ರೆಯ ಹಿಂದುಗಡೆ ವಾಸಿಸುವ ಅಲ್ಪ ಸಂಖ್ಯಾತರ ಅಭಿವೃದ್ದಿ ೫೫ಲಕ್ಷ ರೂ. ಮೀಸಲಿಟ್ಟು ಒಟ್ಟು ಸಿಂದಗಿ ನಗರಕ್ಕೆ ೫ಕೋಟಿ ರೂ. ಅನುದಾನ ಅಭಿವೃದ್ಧಿಗಾಗಿ ಇಟ್ಟಿದ್ದೇವೆ ಎಂದರು.
ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ೭ನೆಯ ವಾರ್ಡಿನ ಶಾದಿ ಮಹಲಕ್ಕೆ ಈಗಾಗಲೇ ೨೦ಲಕ್ಷ ರೂ. ಅನುದಾನ ಮಂಜೂರಾಗಿದೆ. ಗಾಜಿ ಹುಸೇನ ದರ್ಗಾಕ್ಕೆ ೩೦ಲಕ್ಷರೂ ಅನುದಾನ ಮೀಸಲಿಟ್ಟು ದರ್ಗಾ ಅಭಿವೃದ್ದಿಗೊಳಿಸುವೆ. ನಗರದ ೨೩ವಾರ್ಡನಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಗೆ ಸರಕಾರದ ಅನುದಾನವನ್ನು ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಮ್ಮ ತಂದೆಯವರ ಕಾಲದಿಂದಲೂ ನಮ್ಮ ಮನೆತನ ೯ಚುನಾವಣೆ ಎದುರಿಸಿದೆ. ನಾವು ಯಾವುದೇ ಪಕ್ಷದಿಂದ ಚುನಾವಣೆಯ ಕಣಕ್ಕೆ ಇಳಿದು ಸೋಲಲಿ ಗೆಲುವು ಪಡೆದುಕೊಳ್ಳಲಿ ನಗರ ಜನತೆಯ ಆಶೀರ್ವಾದ ನಮ್ಮ ಮನೆತನದ ಮೇಲಿದೆ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರ ಮಾತನಾಡಿದರು.
ಪಟ್ಟಣದ ಮೊಗಲಾಯಿ ಕಾಂಪ್ಲೆಕ್ಷಯಿಂದ ಶಾಂತವೀರ ಮನಗೂಳಿ ಅವರ ಮನೆಯವರೆಗೆ ೨೮.೫೦ಲಕ್ಷ ರೂ. ಮೊತ್ತದ ೨೦೨೩-೨೪ನೆಯ ಸಾಲಿನ ಎಸ್.ಎಫ್.ಸಿ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ. ೧೫ನೆಯ ಹಣಕಾಸಿನ ಅನುದಾನದಲ್ಲಿ ವಿದ್ಯಾನಗರ ೧ನೆಯ ಕ್ರಾಸ್ ಸುಶ್ಮಾ ಕೋಚಿಂಗ್ ಶಾಲೆಯ ಹಿಂದಿಗಡೆಯಿರುವ ಉದ್ಯಾನವನಕ್ಕೆ ೧೪.೬೪ಲಕ್ಷ ರೂ.ಅನುದಾನದಲ್ಲಿ ಅಭಿವೃದ್ಧಿ ಪಡಿಸುವುದು. ಪಟ್ಟಣದ ೫ ಸರಕಾರಿ ಶಾಲೆಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕವನ್ನು ೫೪.೯೦ಲಕ್ಷ ರೂ.ಅನುದಾನದಲ್ಲಿ ನಿರ್ಮಿಸುವುದು.
ಈ ಸಂದರ್ಭದಲ್ಲಿ ಇಂಡಿ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ, ಸುನಂದಾ ಯಂಪುರೆ, ಎಂ.ಎ.ಖತೀಬ, ಡಾ.ಗಿರೀಶ ಕುಲಕರ್ಣಿ ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಪಿಡಬ್ಲೂಡಿ ಅಭಿಯಂತರ ತಾರಾನಾಥ ರಾಠೋಡ, ಜೆಇ ಆಕಾಶ, ಮಹಾನಂದ ಬಮ್ಮಣ್ಣಿ, ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಡಾ.ಶಾಂತವೀರ ಮನಗೂಳಿ, ಡಾ.ಚನ್ನವೀರ ಮನಗೂಳಿ(ಮುತ್ತು), ಭಾಷಾಸಾಬ ತಾಂಬೋಳಿ, ಹಾಸಿಂಪೀರ ಆಳಂದ, ಬಸವರಾಜ ಯರನಾಳ, ಶಾಂತವೀರ ಬಿರಾದಾರ, ಉಮೇಶ ಜೋಗುರ, ಜಯಶ್ರೀ ಹದನೂರ, ಪ್ರತಿಭಾ ಚಳ್ಳಗಿ, ಬಶೀರ್ ಮರ್ತೂರ, ಸೈಪನ್ ಖೇಡ, ಮಮತಾಜ್ ಖೇಡ, ರಜತ್ ತಾಂಬೆ, ಖಲೀಲ ಬಡಿಗೇರ, ಮಹಿಬೂಬಸಾಬ ಶಾಹಾಪೂರ, ಪಾರೂಕ್ ಅಳ್ಳೊಳ್ಳಿ, ರಫಿಕ್ ಹುಣಶ್ಯಾಳ, ಸಂಗೀತಾ ತಿಕೋಟೆ, ವಿಜಯಕುಮಾರ ತಿಕೋಟೆ ಸೇರಿದಂತೆ ಅನೇಕರು ಇದ್ದರು.

