ಮುದ್ದೇಬಿಹಾಳ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವುದಕ್ಕಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಗ್ರೇಡ ೨ ತಹಶೀಲ್ದಾರ ಜಿ.ಎನ್.ಕಟ್ಟಿಮನಿ ಹೇಳಿದರು.
ತಾಲೂಕಿನ ಹುಲ್ಲೂರು ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ನಡೆದ ಪಿಂಚಣಿ ಅದಾಲತ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪಿಂಚಣಿ ಅದಾಲತ್ ಸಾಕಷ್ಟು ಸಹಕಾರಿಯಾಗಲಿದೆ. ಈ ಸೇವೆಯಿಂದ ಬರುವ ದಿನಗಳಲ್ಲಿ ಫಲಾನುಭವಿಗಳು ಕಚೇರಿಗೆ ಅಲೆಯುವದು ತಪ್ಪುತ್ತದೆ. ಅದಾಲತ್ ನಲ್ಲಿ ಸಲ್ಲಿಕೆಯಾದ ಅರ್ಜಿಗಳ ಪೈಕಿ, ಕೆಲವನ್ನು ಕಂದಾಯ ಇಲಾಖೆ ಸಿಬ್ಬಂದಿಗಳೊಂದಿಗೆ ಚರ್ಚಿಸಿ ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಗಿದೆ. ಹೊಸದಾಗಿ ಪಿಂಚಣಿಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಶೀಘ್ರದಲ್ಲಿ ಆದೇಶ ಪತ್ರಗಳನ್ನು ತಮ್ಮ ಮನೆಗೆ ಬಂದು ವಿತರಿಸಲಾಗುವದು ಎಂದು ಹೇಳಿದರು.
ಗ್ರಾ.ಪಂ ಸದಸ್ಯ ಶಿವಾನಂದ ಲಮಾಣಿ ಮಾತನಾಡಿದರು.
ಪಂಚಾಯತ ಅಭಿವೃದ್ದಿ ಅಧಿಕಾರಿ ಅರವಿಂದ ಲೋನಾರಮಠ ಮಾತನಾಡಿದರು.
ಇದೇ ವೇಳೆ ಸ್ಥಳೀಯ ಮತ್ತು ಸುತ್ತಮುತ್ತಲಿನ ೬ ಗ್ರಾಮದ ಹಲವಾರು ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಮಂಜೂರಾತಿ ಪತ್ರಗಳನ್ನು ವಿತರಿಸಿದರು. ಢವಳಗಿ ಉಪತಹಶೀಲ್ದಾರ ಎಸ್.ಪಿ.ಭಾವಿಕಟ್ಟಿ, ಗ್ರಾಮ ಲೆಕ್ಕಾಧಿಕಾರಿ ಮನೋಜ ರಾಠೋಡ, ಪಂಚಾಯತ ಕಾರ್ಯದರ್ಶಿ, ಎಸ್.ಡಿ.ಎ, ಎಮ್.ಡಿ.ಮಲ್ಲಾಬಾದಿ, ಕಂಪ್ಯೂಟರ್ ಆಪರೇಟರ ರಾಮಕೃಷ್ಣ ಗುಡಿಮನಿ, ಪ್ರಕಾಶ ಕಟ್ಟಿಮನಿ, ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

