ಸಿಂದಗಿ: ವ್ಯಾಪಕವಾಗಿ ಬೆಳೆಯುತ್ತಿರುವ ಸಿಂದಗಿ ನಗರದಲ್ಲಿ ೨ ಎಕರೆ ೩೪ ಗುಂಟೆಯಲ್ಲಿ ಅಂದಾಜು ೨ ಕೋಟಿ ಅನುದಾನದಲ್ಲಿ ವಿನೂತನವಾದ ಟ್ರೀ ಪಾರ್ಕ್ ರೂಪುಗೊಳ್ಳಲಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ವಿಜಯಪುರ ಪ್ರಾದೇಶಿಕ ಅರಣ್ಯ ವಿಭಾಗ ಹಾಗೂ ಸಿಂದಗಿ ಪ್ರಾದೇಶಿಕ ಅರಣ್ಯ ವಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಹೊನ್ನಪ್ಪಗೌಡರ ಲೇಔಟ್ ದಲ್ಲಿ ಟ್ರೀ ಪಾರ್ಕ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟ ಜಾಗೆಯನ್ನು ಅಭಿವೃದ್ದಿ ಪಡಿಸಿ ಹಿರಿಯರಿಗೆ ಮಕ್ಕಳಿಗೆ ಅನುಕೂಲವಾಗಲು ಪಣ ತೊಟ್ಟಿದ್ದೇನೆ. ಪ್ರಸ್ತುತ ಭೂಮಿ ಪೂಜೆಯಾದ ಕಾಮಗಾರಿಗೆ ಸದ್ಯ ೧ ಕೋಟಿ ಅನುದಾನ ಬಿಡುಗಡೆಯಾಗಿದೆ. ೨೦೨೪-೨೫ ನೇ ಸಾಲಿನಲ್ಲಿ ಮತ್ತೆ ರೂ.೧ ಕೋಟಿ ಅನುದಾನ ಸರಕಾರ ನೀಡಲಿದೆ ಎಂದ ಅವರು ಆನಂದ ಟಾಕೀಜ್ ಹತ್ತಿರವಿರುವ ಹಳೆಯ ತಹಶೀಲ್ದಾರ ಕಛೇರಿಯನ್ನು ಮೆಗಾ ಮಾರ್ಕೆಟ್ ಮಾಡಲು ಅಂದಾಜು ೨೭ ಕೋಟಿಯ ಯೋಜನೆಯು ಸರ್ಕಾರದ ಮುಂದಿದೆ. ಆಲಮೇಲ ರಸ್ತೆಯಲ್ಲಿನ ಮಿನಿ ವಿಧಾನಸೌಧಕ್ಕೆ ಇನ್ನೂ ಅಂದಾಜು ರೂ.೫ ಕೋಟಿ ಕೊರತೆ ಇದೆ. ಆ ಅನುದಾನವನ್ನು ಕೂಡಲೇ ನೀಡಿ ಮಿನಿ ವಿಧಾನಸೌಧದ ಕಾರ್ಯ ಪೂರ್ಣಗೊಂಡಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ತಹಶೀಲ್ದಾರ ಕಛೇರಿಯನ್ನು ಪುರಸಭೆ ಕಾರ್ಯಾಲಯವಾಗಿ ಪರಿವರ್ತಿಸುವ ಯೋಚನೆಯಲ್ಲಿದ್ದೇವೆ. ಸಿಂದಗಿ ನಗರಕ್ಕೆ ಅಮೃತ-೨ ಯೋಜನೆಯಲ್ಲಿ ರೂ ೪೬ ಕೋಟಿ ಅನುದಾನದಲ್ಲಿ ಮನೆಮನೆಗೆ ಕುಡಿಯುವ ನೀರಿನ ಕಾಮಗಾರಿಯನ್ನು ಆದಷ್ಟು ಬೇಗನೆ ಪ್ರಾರಂಭ ಮಾಡಲು ಎಲ್ಲ ಸಿದ್ದತೆಗಳನ್ನು ಮಾಡುತ್ತಿದ್ದೇವೆ ಎಂದರು.
ಈ ವೇಳೆ ಸಾನಿಧ್ಯ ವಹಿಸಿದ ಸ್ಥಳೀಯ ಸಾರಂಗಮಠದ ಡಾ ಪ್ರಭುಸಾರಂಗದೇವ ಶಿವಾಚಾರ್ಯರು ಮತ್ತು ಇಂಡಿ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಮಾತನಾಡಿ, ಗಿಡ ಮರಗಳು ಇಲ್ಲದಿದ್ದಲ್ಲಿ ಪ್ರಾಣಿ ಸಂಕುಲವೇ ನಾಶವಾಗುತ್ತದೆ. ಪ್ರತಿಯೊಬ್ಬರು ಪರಿಸರವನ್ನು ಪ್ರೀತಿಸಿ ಗಿಡ ಮರಗಳನ್ನು ಬೆಳೆಸುವ ಕಾಯಕದಲ್ಲಿರಬೇಕು ಎಂದರು.
ಈ ಸಂಧರ್ಭದಲ್ಲಿ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಶಿವಶರಣಯ್ಯ, ಭಾಗ್ಯವಂತ ಮಸೂದಿ, ರಾಜು ಬಿರಾದಾರ, ಎಸ್.ಎಸ್.ಬಿರಾದಾರ, ಮಿಟ್ಟೆಸಾ ಮುಲ್ಲಾ, ಎಮ್.ವಾಯ್.ಮಲಕಣ್ಣವರ, ಡಾ.ಮುತ್ತು ಮನಗೂಳಿ, ದಯಾನಂದ ಬಿರಾದಾರ, ಮಂಜುನಾಥ ಬಿಜಾಪೂರ, ಮುತ್ತು ಮುಂಡೇವಾಡಗಿ, ಚನ್ನು ಪಟ್ಟಣಶೆಟ್ಟಿ, ರಮೇಶ ಹೂಗಾರ, ಸತೀಶ ಬಿರಾದಾರ, ಮಲ್ಲಿಕಾರ್ಜುನ ಅಲ್ಲಾಪೂರ, ಉಮೇಶ ಪೂಜೇರಿ, ಅಶೋಕ ಯಡ್ರಾಮಿ, ರಜತ ತಾಂಬೆ, ಭೀಮು ವಾಲೀಕಾರ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
ರೂ.೨ ಕೋಟಿ ವೆಚ್ಚದಲ್ಲಿ ಟ್ರೀ ಪಾರ್ಕ್ ನಿರ್ಮಾಣ :ಶಾಸಕ ಮನಗೂಳಿ
Related Posts
Add A Comment

