ಸಿಂದಗಿ: ಪ್ರಸ್ತುತ ಮಕ್ಕಳ ಶಿಕ್ಷಣದ ಪ್ರಗತಿಯಲ್ಲಿ ಶಿಕ್ಷಕರಿಗಿಂತಲೂ ಪಾಲಕರ ಜವಾಬ್ದಾರಿ ಮತ್ತು ಹೊಣೆಗಾರಿಕೆ ಅತ್ಯಂತ ಪ್ರಮುಖವಾಗಿದೆ ಎಂದು ಯವ ಸಾಹಿತಿ ಡಾ. ಸಂತೋಷ ಬಿ. ನವಲಗುಂದ ಅವರು ಹೇಳಿದರು.
ತಾಲೂಕಿನ ಹೊನ್ನಳ್ಳಿ ಗ್ರಾಮದ ಪ್ರಿಯದರ್ಶಿನಿ ಶಿಕ್ಷಣ ಸಂಸ್ಥೆಯ ಶ್ರೀ ಸರಸ್ವತಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ೧೮ನೇ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಸರ್ಕಾರಗಳು ಬದಲಾದಂತೆ ಮಕ್ಕಳಿಗೆ ನೀಡುವ ಶಿಕ್ಷಣ ಪದ್ದತಿಯು ಬದಲಾಗುತ್ತಾ ಹೋಗುತ್ತಿದೆ. ಈ ವರ್ಷ ಅಭ್ಯಾಸ ಮಾಡಿದ ಪಠ್ಯವಸ್ತು ಮರು ವರ್ಷ ಇರುತ್ತದೆ ಎಂಬ ನಂಬಿಕೆ ಉಳಿದಿಲ್ಲ. ಇವತ್ತು ಮಕ್ಕಳ ಶಿಕ್ಷಣದ ಜೊತೆಗೆ ಸರ್ಕಾರಗಳು ಒಂದು ರೀತಿಯ ಆಟ ಆಡುತ್ತಿವೆ ಎಂಬ ಭಾವನೆ ಎಲ್ಲರಲ್ಲಿಯೂ ಮೂಡುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಪಾಲಕರಾದವರು ತಮ್ಮ ಮಕ್ಕಳಿಗೆ ಯಾವ ನಿಟ್ಟಿನಲ್ಲಿ ಶಿಕ್ಷಣ ಒದಗಿಸಬೇಕೆಂದು ಗಂಭೀರ ಆಲೋಚನೆ ಮಾಡಿಯೇ ಶಾಲೆಗಳಿಗೆ ದಾಖಲಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಈ ವೇಳೆ, ಇದೇ ಶಾಲೆಯಲ್ಲಿ ಕಲಿತು ಉನ್ನತ ಪದವಿಗಳಲ್ಲಿರುವ ಸಾಧಕರಿಗೆ ವಿಶೇಷವಾಗಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಹೊನ್ನಳ್ಳಿಯ ವೀರಘಂಟಿ ಶ್ರೀ ಮಡಿವಾಳೇಶ್ವರ ಮಠದ ಕಲ್ಯಾಣದಯ್ಯ ಸ್ವಾಮಿಗಳು, ಗುರುಲಿಂಗಯ್ಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಹಣಮಂತ್ರಾಯಗೌಡ ಚೌಧರಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ವಿಜುಗೌಡ ಬಿರಾದಾರ, ಗುರುನಾಥ ರೆಡ್ಡಿ ಚೌಧರಿ, ಮಹಾಂತಗೌಡ ಚೌಧರಿ, ಗುರಣ್ಣ ಸಜ್ಜನ, ಆರ್ .ಟಿ. ಪಾಟೀಲ, ಡಾ. ಎನ್.ಪಿ.ನಾಯ್ಕೋಡಿ. ಸಾಯೀಪಟೇಲ ಬೋಜಾರ್, ಬಾಲಚಂದ್ರ ಭಜಂತ್ರಿ, ಈರಣ್ಣ ಭಜಂತ್ರಿ, ಮಕ್ತುಮ್ ಸಾಬ ತಂಗಡಗಿ, ಕರಬಸು ಮನಗೂಳಿ, ಇಸ್ಮಾಯಿಲ್ ತಂಗಡಗಿ, ಶಾಲೆಯ ಮುಖ್ಯಸ್ಥ ಮಲ್ಲಿಕಾರ್ಜುನ ಭಜಂತ್ರಿ, ಹಣಮಂತ ಎಂಟಮನಿ, ಶರಣಬಸು ಭಜಂತ್ರಿ ಇದ್ದರು.
ರಮೇಶ ಗುಬ್ಬೇವಾಡ ನಿರೂಪಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

