Author: editor.udayarashmi@gmail.com

ವಿಜಯಪುರ: ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು ಇಂಡಿ ಭಾಗದಲ್ಲಿ ಅತೀ ಹೆಚ್ಚು ಲಿಂಬೆ ಬೆಳಗಾರರಿದ್ದಾರೆ. ರೈತರ ಲಿಂಬೆ ಗಿಡಗಳನ್ನು ರಕ್ಷಿಸಲು ನಾವು ಮುಂದಾಗಬೇಕು ಎಂದು ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ್ ಹೇಳಿದರು.     ಗುರುವಾರ ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಈ ಭಾಗದಲ್ಲಿ ನೀರಿನ ಮಟ್ಟ ಕುಸಿದಿದ್ದು ರೈತರು ನೀರಿನ ಅಭಾವದಿಂದ ಲಿಂಬೆ ಬೆಳೆಗಳನ್ನು ರಕ್ಷಿಸಲು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಈ ಭಾಗದ ರೈತರ ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಿ ರೈತರ ನಿಜ ಸ್ಥಿತಿ ಅರಿಯಬೇಕು. ನಿಖರ ಮಾಹಿತಿ ಪಡೆದು ಲಿಂಬೆ ಬೆಳೆ ರಕ್ಷಣೆ ಮುಂದಾಗಬೇಕು ಅಧಿಕಾರಿಗಳು ಪಡೆದ ಮಾಹಿತಿಯನ್ನು ಲಿಂಬೆ ಅಭಿವೃದ್ಧಿ ಮಂಡಳಿ ವತಿಯಿಂದ ಸರ್ಕಾರಕ್ಕೆ ವರದಿಯನ್ನು ಕಳುಹಿಸಿ ತಕ್ಷಣ ಕ್ರಮ ವಹಿಸುವಂತೆ ಜಿಲ್ಲಾಡಳಿತ ಹಾಗೂ ನಾವುಗಳು ಕೂಡಿ ೫೦ ಲಕ್ಷ ರೂಗಳ ಅನುದಾನ ಬಿಡುಗಡೆಗೆ ಕ್ರಮ ವಹಿಸೋಣ ಎಂದರು.ಏಪ್ರಿಲ್ ಹಾಗೂ ಮೇ ಮಾಹೆಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗುವುದು ಕಾರಣ ಈಗಿನಿಂದಲೆ…

Read More

ವಿಜಯಪುರ: ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ವಿಜಯಪುರ ವತಿಯಿಂದ “ಸ್ಟಡಿ ಸರ್ಕಲ್ಸ್” ಕಾರ್ಯಕ್ರಮದ ಅಡಿಯಲ್ಲಿ ಮುಂಬರುವ ಕೆ.ಎ.ಎಸ್. ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಆರ್ಯಭಟ ಕರಿಯರ್ ಅಕಾಡೆಮಿ (ರಿ), ಜೊಡ ಗುಮ್ಮಜ ಎದುರಿಗೆ, ಬಸ್ಟಾö್ಯಂಡ್ ರೋಡ, ಮಿನಾಕ್ಷಿ ಚೌಕ, ವಿಜಯಪುರದಲ್ಲಿ ಮಾ.೧೫ರಿಂದ ಮಾ.೨೪ರವರೆಗೆ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮಕ್ಕನುಸಾರವಾಗಿ ಉಚಿತ ತರಬೇತಿ ನೀಡಲು ಉದ್ದೇಶಿಸಲಾಗಿದೆ.ಇದು ಉಚಿತ ತರಬೇತಿಯಾಗಿದ್ದು, ಹಾಜರಾಗಲು ಇಚ್ಛಿಸುವ ಅಭ್ಯರ್ಥಿಗಳು, ಕೆಪಿಎಸ್‌ಸಿ ನಲ್ಲಿ ಅಧಿಸೂಚಿತ ಕೆಎಎಸ್ ಹುದ್ದೆಗೆ ಸಲ್ಲಿಸಿದ ತಮ್ಮ ಅರ್ಜಿಯ ಪ್ರತಿ(ಝರಾಕ್ಸ್) ಹಾಗೂ ಆಧಾರ ಕಾರ್ಡ ಪ್ರತಿ(ಝರಾಕ್ಸ್) ನೊಂದಿಗೆ ಆಗಮಿಸಬಹುದು.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಪ್ಲಾಟ್ ನಂ.೫೫, ಕೆ.ಎಚ್.ಬಿ. ಕಾಲೋನಿ, ಸರ್ಕಾರಿ ಪ್ರಾಥಮಿಕ ಶಾಲೆ ನಂ.೨೪ ಹತ್ತಿರ ಸೋಲಾಪೂರ ರಸ್ತೆ, ವಿಜಯಪುರ ಅಥವಾ ದೂರವಾಣಿ ಸಂಖ್ಯೆ ೦೮೩೫೨-೨೫೦೩೮೩, ೯೦೭೧೦೫೫೫೫೭, ೭೩೪೯೬೦೧೦೬೧, ೯೮೮೦೭೧೬೦೮೩ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಚಿಮ್ಮಲಗಿ ಏತ ನೀರಾವರಿಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರಕ್ಕೆ ಸಂಗಮೇಶ ಸಗರ ಆಗ್ರಹ ವಿಜಯಪುರ: ಜಿಲ್ಲೆಯಲ್ಲಿ ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ ಜಮೀನು ಕಳೆದುಕೊಂಡು ೪-೫ ವರ್ಷಗಳೆ ಕಳೆದರೂ ರೈತರಿಗೆ ಇಲ್ಲಿಯವರೆಗೆ ಪರಿಹಾರ ಬಂದಿರುವುದಿಲ್ಲ, ಕೋರ್ಟಿನ ಮುಖಾಂತರ ಹೋರಾಟ ಮಾಡಿ ಕೋರ್ಟಿನ ಆದೇಶದಂತೆ ಕೂಡಲೇ ಹೆಚ್ಚುವರಿ ಅವಾರ್ಡನ ಹಣ ಹಾಗೂ ಬಡ್ಡಿ ಹಾಕಿಕೊಡಬೇಕೆಂದು ಆದೇಶವಾಗಿದ್ದರೂ ಇಲ್ಲಿಯವರೆಗೆ ಯಾವುದೋ ಸಬೂಬು ಹೇಳಿ ರೈತರಿಗೆ ಅನ್ಯಾಯ, ಆರ್ಥಿಕ ಹೊಣೆ ಹಾಗೂ ಸಮಯ ಮಾಡುತ್ತಿರುವುದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದುಕಾಣುತ್ತಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಆರೋಪಿಸಿದರು.ಇನ್ನಾದರೂ ಕೆ.ಬಿ.ಜೆ.ಎನ್.ಎಲ್. ಉಪ ಮುಖ್ಯ ಅಭೀಯಂತರ ಸುರೇಶ ಹಯಾಳ ಅವರು ಕೂಡಲೇ ರೈತರ ಹಣ ಮಂಜೂರು ಮಾಡುವಂತೆ ಸಂಗಮೇಶ ಸಗರ ಅವರು ಮನವಿ ಸಲ್ಲಿಸಿ ಆಗ್ರಹಸಿದರು.ರೈತರು ತಮ್ಮ ಬೆಲೆಬಾಳುವ ಒಳ್ಳೆಯ ಫಲವತ್ತಾದ ಭೂಮಿಯನ್ನು  ಚಿಮ್ಮಲಗಿ ಏತನೀರಾವರಿ ಯೋಜನೆಯ ಕಾಲುವೆಗೆ ಬಿಟ್ಟುಕೊಟ್ಟು ೪-೫ ವರ್ಷಗಳೇ ಕಳೆದಿವೆ. ಇಲ್ಲಿಯವರೆಗೆ ಅವರಿಗೆ ಭೂ-ಪರಿಹಾರ ಬಂದಿರುವುದಿಲ್ಲ, ಇನ್ನು ಹೆಚ್ಚುವರಿ ಅವಾರ್ಡಗಾಗಿ ಸಾಲಸೊಲಮಾಡಿ ಕೋರ್ಟನ ಮುಖಾಂತರ…

Read More

ಸಿಂದಗಿ: ಪಟ್ಟಣದ ಓಂ ಶಾಂತಿ ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಮಾ.೧೬ರಂದು ಸಾಯಂಕಾಲ ೪:೩೦ಗಂಟೆಗೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ೮೮ನೆಯ ತ್ರಿಮೂರ್ತಿ ಶೀವ ಜಯಂತಿ ಹಾಗೂ ಮಹಾಶಿವರಾತ್ರಿ ಪ್ರಯುಕ್ತ ಶಿವಸ್ಮೃತಿ ಕವಿಗೋಷ್ಠಿ ಹಾಗೂ ಕಾವ್ಯ-ಕುಂಚ ಕಾರ್ಯಕ್ರಮ ಹಾಗೂ ಮಾ.೧೭ರಂದು ಬೆಳಿಗ್ಗೆ ೦೯ಗಂಟೆಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಜರುಗಲಿವೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಪವಿತ್ರಾಜಿ ತಿಳಿಸಿದ್ದಾರೆ.ಮಾ.೧೬ರಂದು ನಡೆಯುವ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಸಿಂದಗಿ ಸಿಪಿಐ ನಾನಾಗೌಡ ಪೊಲೀಸಪಾಟೀಲ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಆದರ್ಶ ವಿದ್ಯಾಲಯದ ಪ್ರಾಚಾರ್ಯ ಶಿವಪ್ಪಗೌಡ ಬಿರಾದಾರ ವಹಿಸಿಕೊಳ್ಳಲಿದ್ದಾರೆ. ಎಚ್.ಜಿ.ಕಾಲೇಜು ಉಪನ್ಯಾಸಕ ಸಿದ್ದಲಿಂಗ ಕಿಣಗಿ ಅವರಿಗೆ ಸನ್ಮಾನಿಸಲಾಗುವುದು. ಹಲವಾರು ಕವಿಗಳು ಕವನ ವಾಚನ ಮಾಡಲಿದ್ದಾರೆ. ಕಾವ್ಯ-ಕುಂಚ ಕಾರ್ಯಕ್ರಮ ಜರುಗಲಿದೆ.ಮಾ.೧೭ರಂದು ಜರುಗುವ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಆಗಮಿಸಲಿದ್ದಾರೆ. ಕಾರ್ಯಕ್ರಮದ ಸಾನಿದ್ಯವನ್ನು ಪವಿತ್ರಾಜಿ ವಹಿಸಿಲಿದ್ದಾರೆ. ಆಲಮೇಲ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರೇಣುಕಾ ಅಕ್ಕನವರು ಉಪನ್ಯಾಸ ನೀಡಲಿದ್ದಾರೆ.…

Read More

ಸಿಂದಗಿ: ಉತ್ತರ ಕನ್ನಡದ ಸಂಸದ ಅನಂತಕುಮಾರ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಿಲ್ಲೂರು ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ ಮಾಧ್ಯಮದವರನ್ನು ಹೀಯಾಳಿಸಿರುವುದು ಖಂಡನೀಯ ಎಂದು ಕಾನಿಪ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಕಛೇರಿಯಲ್ಲಿ ಕಾನಿಪ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಾಧ್ಯಮ ರಂಗವು ತನ್ನದೇಯಾದ ಮಹತ್ವದ ಸ್ಥಾನವಿದೆ. ತಮಗೆ ಬೇಕಾದಾಗ ಮಾಧ್ಯಮ ಕ್ಷೇತ್ರವನ್ನು ಹೊಗಳುವುದು ಬೇಡವಾದಾಗ ತೆಗಳುವುದು ಕೆಲವು ರಾಜಕಾರಣಿಗಳಿಗೆ ಪರಿಪಾಠವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕಾನೂನನ್ನು ಜಾರಿಗೆ ತರಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘ ಒತ್ತಾಯಿಸುತ್ತದೆ. ಅನಂತಕುಮಾರ ಹೆಗಡೆ ಅವರು ಜವಾಬ್ದಾರಿಯುತ ಸಂಸದರಾಗಿದ್ದು, ಮಾಧ್ಯಮದವರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿರುವುದನ್ನು ಬಿಜೆಪಿ ಪಕ್ಷ ಗಂಬೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಅವರನ್ನು ಸಾರಾಸಗಟವಾಗಿ ಮಾಧ್ಯಮದವರು ಬಹಿಷ್ಕರಿಸುವ ನಿರ್ಣಯ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಇದು ಇತರೆ ರಾಜಕಾರಣಿಗಳಿಗೆ ಒಂದು ಪಾಠವಾಗಲಿ.…

Read More

ವಿಜಯಪುರ: ನಗರದ ನಾರಾಯಣ ಹುಂಡೈ ಷೋರೋಂನಲ್ಲಿ ನೂತನ ಕ್ರೇಟಾ ಎನ್‌ಲೈನ್ ಎಸ್‌ಯುವಿ ವಾಹನವನ್ನು ಅನಾವರಣಗೊಳಿಸಲಾಯಿತು.ಆರ್‌ಟಿಓ ವಸಂತ ಚವ್ಹಾಣ, ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಜಕುಮಾರ ಹಿರೇಮಠ ಜಂಟಿಯಾಗಿ ನೂತನ ಕಾರನ್ನು ಅನಾವರಣಗೊಳಿಸಿದರು.ನೂತನ ಕಾರಿನ ವೈಶಿಷ್ಟ್ಯತೆ ಕುರಿತು ವಿವರಿಸಿದ ನಾರಾಯಣ ಹುಂಡೈ ಮುಖ್ಯಸ್ಥ ಗೋವಿಂದ ಜೋಶಿ ಮಾತನಾಡಿ, ಗ್ರಾಹಕರಿಗೆ ಅತ್ಯಾಧುನಿಕ ಸೌಕರ್ಯ ಒದಗಿಸಿ ಸುಖಕರ ಪ್ರಯಾಣಕ್ಕೆ ಹುಂಡೈ ಆದ್ಯತೆ ನೀಡಿದ್ದು, ಹೊಸ ಕ್ರೇಟಾ ಎನ್‌ಲೈನ್ ಅನೇಕ ವಿಶೇಷತೆಗಳನ್ನು ಹೊಂದಿದೆ, ಸ್ಪೋರ್ಟಿ ವಿನ್ಯಾಸ್, ಸ್ಪೀಡ್ ಮ್ಯಾನುವಲ್ ಗೇರಬಾಕ್ಸ್ ಹೀಗೆ ಅನೇಕ ರೀತಿಯ ಸೌಲಭ್ಯಗಳನ್ನು ಹೊಂದಿದೆ ಎಂದರು.ನಾರಾಯಣ ಹುಂಡೈ ಮ್ಯಾನೇಜರ್ ಅಂಥೋನಿ, ಶಿವಕುಮಾರ ಕಮಲಾಕರ, ಸಂಜಯ ನಿಂಬಾಳಕರ, ವಿಜಯ ಜೋಶಿ ಮೊದಲಾದವರು ಪಾಲ್ಗೊಂಡಿದ್ದರು.

Read More

-ಸಿದ್ಧಾಪುರ ಶಿವಕುಮಾರ್ ಕವಿ, ಕಥೆಗಾರ, ವಿಮರ್ಶಕ ಲೋಕೇಶ್ ಅಗಸಕಟ್ಟೆಯವರು ಹುಟ್ಟಿದ್ದು ದಾವಣಗೆರೆ ತಾಲ್ಲೂಕು ಅಗಸನಕಟ್ಟೆ ಎಂಬ ಪುಟ್ಟ ಗ್ರಾಮದಲ್ಲಿ 02-08-1958 ರಲ್ಲಿ.ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದ ಗೀಳು ಹಚ್ಚಿಕೊಂಡು ಬೆಳೆದವರು. ಸಾಹಿತ್ಯ ಕ್ಷೇತ್ರದಲ್ಲಿ ಕಿರಿವಯಸ್ಸಿಗೆ ಹಿರಿಯ ಸಾಧನೆಗೈದು ಸಾಹಿತ್ಯಾಸಕ್ತರ ಗಮನ ಸೆಳೆದವರು. ಮತ್ತೆ ಸೂರ್ಯ ಬರುತ್ತಾನೆ, ಮನೆಯಂಗಳದ ಮರ, ಧರಣಿಯ ಧ್ಯಾನ, ಲೋಕೇಶ್ ಅವರ ಕವನ ಸಂಕಲನಗಳಾದರೆ, ಅಭಿಮುಖ, ಕನ್ನಡ ಕಾವ್ಯ: ಸಮಾಜ ಸಂಸ್ಕೃತಿ’ (ಸಂಶೋಧನಾ ಕೃತಿ) ಒಳಗಿನ ಬೆಳಗು, ಸಾಂದರ್ಭಿಕ, ಕುಂವೀ ಕಥಾ ಸಾಹಿತ್ಯ ಇವು ವಿಮರ್ಶಾ ಸಂಕಲನಗಳು. “ನಮ್ಮೆಲ್ಲರ ಬುದ್ಧ” ನಾಟಕ. ಹಟ್ಟಿ ಎಂಬ ಭೂಮಿಯ ತುಣುಕು, ಕಥಾಸಂಕಲನ. ಲೋಕೇಶ್ ಅಗಸನಕಟ್ಟೆಯವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಹಲವು. ಛಂದ ಪುಸ್ತಕ ಪ್ರಶಸ್ತಿ , ಪ್ರಜಾವಾಣಿ ಕಥಾಸ್ಪರ್ಧೆಯಲ್ಲಿ ಧ್ವಿತೀಯ ಬಹುಮಾನ, ಕನ್ನಡಪ್ರಭ ಪ್ರತಿಭೆಯ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತು ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿರುವ ಇವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಹೌದು. ಇಸವಿ 2000ದಲ್ಲಿ ಚೀನಾ ಪ್ರವಾಸ ಮುಗಿಸಿ ಬಂದಿದ್ದಾರೆ.…

Read More

ಸಿದ್ದಲಿಂಗ ಫೈನ್ ಆರ್ಟ್ ಸೊಸೈಟಿಯಿಂದ ಚಿತ್ರಕಲಾ ಪ್ರದರ್ಶನ ಮತ್ತು ಕಲಾ ಪ್ರಾತ್ಯಕ್ಷತೆ ವಿಜಯಪುರ. ನಾಡಿನ ಹಿರಿಯ ಚಿತ್ರಕಲಾವಿದರಾದ ದಿವಂಗತ ಸಿ.ಬಿ.ಕಾಚಾಪುರ ಅವರ ಪುಣ್ಯ ಸ್ಮರಣೆ ಪ್ರಯುಕ್ತ ನಗರದ ಸಿದ್ದಲಿಂಗ ಫೈನ್ ಆರ್ಟ್ ಸೊಸೈಟಿಯು ಏರ್ಪಡಿಸಿದ್ದ ಜಲವರ್ಣದ ಕಲಾಕೃತಿಗಳ ಚಿತ್ರಕಲಾ ಪ್ರದರ್ಶನ ಮತ್ತು ಕಲಾ ಪ್ರಾತ್ಯಕ್ಷತೆಯನ್ನು ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ್ ಮಗಿಮಠ ಬುಧವಾರ ಸಂಜೆ ಉದ್ಘಾಟಿಸಿದರು.ಈ ವೇಳೆ ಮಾತನಾಡಿದ ಅವರು, ಕಾಚಾಪುರ ಸರ್ ಅವರ ಜೀವನ ಆದರ್ಶಮಯವಾದ ಕಲಾ ಬದುಕು. ಶ್ರೇಷ್ಠ ಸಂಘಟಕರಾಗಿ ಕಲಾ ಕ್ಷೇತ್ರದ ಬೆಳವಣಿಗೆಗೆ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ಧೀಮಂತ ಕಲಾ ಸಾಧಕರು. ವಿಜಯಪುರದಲ್ಲಿ ಕಲೆ ಮತ್ತು ಸಾಂಸ್ಕೃತಿಕವಾಗಿ ಇಡಿ ರಾಜ್ಯದಲ್ಲಿ ವಿಜಯಪುರದ ಗಮನ ಸೆಳೆಯುವ ರೀತಿಯಲ್ಲಿ ಅವರು ಮಾಡಿದ ಕೆಲಸ ಇವತ್ತಿಗೂ ಜೀವಂತವಾಗಿದೆ. ಕಲಾ ಶಾಲೆಯ ಮುಖಾಂತರ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕಲಾವಿದರಿಗೆ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇದೇ ರೀತಿ ಮುಂದಿನ ದಿನಗಳಲ್ಲಿ ಹೆಚ್ಚಿನ ಕಲಾ ಕೆಲಸ ಈ ಗ್ಯಾಲರಿಯಲ್ಲಿ ನಡೆಯಲಿ, ಮಹಾನಗರ ಪಾಲಿಕೆಯಿಂದ ಮೂಲ…

Read More

ವಿಜಯಪುರ: ನಾಗಠಾಣ ಮತಕ್ಷೇತ್ರದ ನಾಗಠಾಣ ಬ್ಲಾಕ್ ಮಾಜಿ ಅಧ್ಯಕ್ಷ ದೇಸು ಗೇಮು ಚವ್ಹಾಣ ಇವರು ತಮ್ಮ ಬೆಂಬಲಿಗರೊಂದಿಗೆ ಕುಮಟಗಿ ಎಲ್.ಟಿ., ಆಹೇರಿ, ಮದಬಾವಿ, ಹಡಗಲಿ ಹಾಗೂ ಹಿಂದಿನ ಕಾಂಗ್ರೆಸ್ ಪಕ್ಷದ ಸದಸ್ಯರೊಂದಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ವಿಜಯಪುರ ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ರವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರುಸೇರ್ಪಡೆಗೊಂಡರು.ಈ ಸಂದರ್ಭದಲ್ಲಿ ಪ್ರೊ.ರಾಜು ಆಲಗೂರ ರವರು ಮಾತನಾಡಿ, ನಾಗಠಾಣ ಬ್ಲಾಕ್ ಮಾಜಿ ಅಧ್ಯಕ್ಷರಾದ ದೇಸು ಗೇಮು ಚವ್ಹಾಣ ಇವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಮರುಸೇರ್ಪಡೆಗೊಂಡಿರುವುದು ನಾಗಠಾಣ ಮತ್ತು ವಿಜಯಪುರ ಲೋಕಸಭಾ ಮತಕ್ಷೇತ್ರದಲ್ಲಿಪಕ್ಷಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.ದೇಸು ಗೇಮು ಚವ್ಹಾಣ ಮಾತನಾಡಿ, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಹಾಗೂ ಗ್ಯಾರಂಟಿ ಯೋಜನೆಗಳನ್ನು ಮೆಚ್ಚಿ ಗ್ರಾ.ಪಂ. ಸದಸ್ಯರಾದ ರಾಚು ಚವ್ಹಾಣ, ಅಪ್ಪು ಹೀರು ಪವಾರ, ದುಂಡು ದೇನು ಜಾಧವ, ಭಾವಸಿಂಗ ಜಾಧವ, ಸಂತೋಷ ಜಾಧವ, ರಾಜು ಜಾಧವ, ಧೋಂಡು ದೇನು ಜಾಧವ, ಸುರೇಶ ಡಿ. ಚವ್ಹಾಣ, ಸೇವು ತುಳಜು…

Read More

ಗದಗ: ಕಲಾವಿದರ ಮತ್ತು ಕಲಾಪೋಷಕರ ಸಂಘಟನೆಯಾದ ಗದುಗಿನ ಕಲಾ ವಿಕಾಸ ಪರಿಷತ್ ಹಮ್ಮಿಕೊಂಡಿರುವ ಕಲಾ ವಿಕಾಸ ಉತ್ಸವ-೨೦೨೪ ಸಮಾರಂಭದಲ್ಲಿ ನೀಡುತ್ತಾ ಬಂದಿರುವ ೨೪ನೇ ವರ್ಷದ ಪ್ರಶಸ್ತಿ, ಕಲಾ ವಿಕಾಸ ಪುರಸ್ಕಾರ ಪ್ರಶಸ್ತಿಗೆ ಶಾಸ್ತ್ರೀಯ ಸಂಗೀತ (ಗಾಯನ ವಾದನ, ಸುಗಮ ಸಂಗೀತ, ತತ್ವಪದ, ವಚನ ಗಾಯನ, ಜಾನಪದ ಸಂಗೀತ) ಕ್ಷೇತ್ರದಲ್ಲಿ ಮತ್ತು ಶಾಸ್ತ್ರೀಯ ನೃತ್ಯ (ಭರತನಾಟ್ಯ, ಕಥಕ್, ಕುಚುಪುಡಿ, ಮೊದಲಾದ ನೃತ್ಯ) ಪ್ರಕಾರದಲ್ಲಿ ಸಾಧನೆಗೈದ ಕಲಾವಿದರು ಅರ್ಜಿ ಸಲ್ಲಿಸಬಹುದಾಗಿದೆ.ಈ ಪ್ರಶಸ್ತಿಯು ಗೌರವಧನ, ಪ್ರಶಸ್ತಿ ಫಲಕ, ನೆನಪಿನ ಕಾಣಿಕೆ, ಶಾಲು ಸತ್ಕಾರವನ್ನು ಒಳಗೊಂಡಿರುತ್ತದೆ. ಆಸಕ್ತ ಕಲಾವಿದರು ತಮ್ಮ ಸಂಪೂರ್ಣ ವಿವರ ಮತ್ತು ಕಲಾ ಪ್ರದರ್ಶನದ ವಿಡಿಯೋ ತುಣುಕುಗಳೊಂದಿಗೆ ಈ ವಾಟ್ಸಪ್ ೯೮೮೬೭೧೭೭೩೨ ನಂಬರಿಗೆ ಅಥವಾ kvpgadag@gmail.com ಈ ಇಮೇಲ್ ಗೆ ಕಳಿಸಿಕೊಡಬಹುದಾಗಿದೆ.ಪುರಸ್ಕಾರಕ್ಕೆ ಆಯ್ಕೆಯಾದ ಕಲಾವಿದರು ತಮ್ಮ ಕಲಾ ಪ್ರದರ್ಶನ ನಡೆಸಿಕೊಡುವುದು ಕಡ್ಡಾಯವಾಗಿರುತ್ತದೆ. ಎಂದು ಕಲಾವಿಕಾಸ ಪರಿಷತ್ ಅಧ್ಯಕ್ಷ ಸಿ. ಕೆ. ಹೆಚ್. ಶಾಸ್ತ್ರಿ (ಕಡಣಿ) ಇವರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.

Read More