Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಯಶಸ್ಸು ಸಾಧನೆಗೆ ಆಧ್ಯಾತ್ಮಿಕತೆ ನೆರವು :ಮೋಕ್ಷಾನಂದಜಿ

ಬೆಂಬಲ ಬೆಲೆ ಯೋಜನೆ: ಮೆಕ್ಕೆಜೋಳ ಖರೀದಿಗೆ ರೈತರಿಂದ ನೋಂದಣಿ

ಬೂದಿ ತುಂಬಿದ ವಾಹನಗಳಿಂದ ವಾಯು ಮಾಲಿನ್ಯ ತಡೆಗಟ್ಟಲು ಆಗ್ರಹ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ನನ್ನ ಬಡತನ ಹಸಿವು ಅವಮಾನಗಳೆ, ನಾನು ಬರಹಗಾರನಾಗಲು ಮೂಲ ಕಾರಣ: – ಡಾ.ಲೋಕೇಶ್ ಅಗಸನಕಟ್ಟೆ
ವಿಶೇಷ ಲೇಖನ

ನನ್ನ ಬಡತನ ಹಸಿವು ಅವಮಾನಗಳೆ, ನಾನು ಬರಹಗಾರನಾಗಲು ಮೂಲ ಕಾರಣ: – ಡಾ.ಲೋಕೇಶ್ ಅಗಸನಕಟ್ಟೆ

By Updated:No Comments7 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

-ಸಿದ್ಧಾಪುರ ಶಿವಕುಮಾರ್

ಕವಿ, ಕಥೆಗಾರ, ವಿಮರ್ಶಕ ಲೋಕೇಶ್ ಅಗಸಕಟ್ಟೆಯವರು ಹುಟ್ಟಿದ್ದು ದಾವಣಗೆರೆ ತಾಲ್ಲೂಕು ಅಗಸನಕಟ್ಟೆ ಎಂಬ ಪುಟ್ಟ ಗ್ರಾಮದಲ್ಲಿ 02-08-1958 ರಲ್ಲಿ.ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದ ಗೀಳು ಹಚ್ಚಿಕೊಂಡು ಬೆಳೆದವರು. ಸಾಹಿತ್ಯ ಕ್ಷೇತ್ರದಲ್ಲಿ ಕಿರಿವಯಸ್ಸಿಗೆ ಹಿರಿಯ ಸಾಧನೆಗೈದು ಸಾಹಿತ್ಯಾಸಕ್ತರ ಗಮನ ಸೆಳೆದವರು. ಮತ್ತೆ ಸೂರ್ಯ ಬರುತ್ತಾನೆ, ಮನೆಯಂಗಳದ ಮರ, ಧರಣಿಯ ಧ್ಯಾನ, ಲೋಕೇಶ್ ಅವರ ಕವನ ಸಂಕಲನಗಳಾದರೆ, ಅಭಿಮುಖ, ಕನ್ನಡ ಕಾವ್ಯ: ಸಮಾಜ ಸಂಸ್ಕೃತಿ’ (ಸಂಶೋಧನಾ ಕೃತಿ) ಒಳಗಿನ ಬೆಳಗು, ಸಾಂದರ್ಭಿಕ, ಕುಂವೀ ಕಥಾ ಸಾಹಿತ್ಯ ಇವು ವಿಮರ್ಶಾ ಸಂಕಲನಗಳು. “ನಮ್ಮೆಲ್ಲರ ಬುದ್ಧ” ನಾಟಕ. ಹಟ್ಟಿ ಎಂಬ ಭೂಮಿಯ ತುಣುಕು, ಕಥಾಸಂಕಲನ. ಲೋಕೇಶ್ ಅಗಸನಕಟ್ಟೆಯವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಹಲವು. ಛಂದ ಪುಸ್ತಕ ಪ್ರಶಸ್ತಿ , ಪ್ರಜಾವಾಣಿ ಕಥಾಸ್ಪರ್ಧೆಯಲ್ಲಿ ಧ್ವಿತೀಯ ಬಹುಮಾನ, ಕನ್ನಡಪ್ರಭ ಪ್ರತಿಭೆಯ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತು ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿರುವ ಇವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಹೌದು. ಇಸವಿ 2000ದಲ್ಲಿ ಚೀನಾ ಪ್ರವಾಸ ಮುಗಿಸಿ ಬಂದಿದ್ದಾರೆ. ಚಿತ್ರದುರ್ಗ ಸರ್ಕಾರಿ ಕಾಲೇಜಿನ ಸ್ನಾತಕೋತ್ತರ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿ ಇದೀಗ ನಿವೃತ್ತಿ ಜೀವನದಲ್ಲಿ ತಮ್ಮ ಸಾಹಿತ್ಯ ಕೃಷಿಯಲ್ಲಿ ಕ್ರಿಯಾಶೀಲವಾಗಿರುವ ಇವರೊಂದಿಗೆ ಒಂದು ಸಂವಾದ.*

ಸರ್ ನಿಮ್ಮ ಬಾಲ್ಯ ವಿದ್ಯಾಭ್ಯಾಸ ನೆನಪಿಸಿಕೊಳ್ಳಿ
ನಾನು ಹಳ್ಳಿಯಲ್ಲೆ ಓದಿದ್ದು. ಗ್ರಾಮೀಣ ಪರಿಸರದಲ್ಲೇ ಜೀವನ ಆರಂಭವಾಯಿತು. ಹೆಚ್ಚು ಕಡಿಮೆ ಎಂ.ಎ.ಓದುವ ತನಕ ಗ್ರಾಮೀಣ ಶಾಲೆಗಳಲ್ಲಿ ಓದಿದೆ. ಆ ಕಾಲದ ನನ್ನ ತಲೆಮಾರಿನವರು ಹಳ್ಳಿಮಟ್ಟದ ಶಾಲೆಗಳಲ್ಲೆ ವಿದ್ಯೆ ಕಲಿಯುತ್ತಿದ್ದರು. ಆದರೆ ಆಗಿನ ಹಳ್ಳಿ ಶಾಲೆಗಳನ್ನು ಈ ಹೊತ್ತಿಗೆ ಹೋಲಿಕೆ ಮಾಡಿ ನೋಡಿದ್ರೆ, ಆ ಹೊತ್ತಿನ ಶಾಲೆಗಳೆ ಬಹಳ ಚನ್ನಾಗಿದ್ವು. ಮೇಷ್ಟ್ರುಗಳಿಗಾಗಲಿ ವಿದ್ಯಾರ್ಥಿಗಳಾಗಲಿ ಓದುವಿನಲ್ಲಿ ಆಸಕ್ತಿ ಇತ್ತು. ಹೀಗಾಗಿಯೇ ಪ್ರೈಮರಿಯಿಂದಿಡಿದು ಡಿಗ್ರಿವರೆಗೂ ಹಳ್ಳಿಗಳಲ್ಲೆ ಓದ್ಕೊಂಡು ಬಂದ್ವಿ. ಹೈಸ್ಕೂಲ್, ಪಿಯುಸಿ, ಪಕ್ಕದ ಆನಗೂಡು ಊರಿನಲ್ಲಿ ಓದಿದೆ. ಡಿಗ್ರಿ ಸಿರಿಗೆರೆಯ ಕಾಲೇಜಿನಲ್ಲಿ ಓದಿದೆ. ಎಂ. ಎ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮಾಡಿದೆ.ಆದ್ರೆ ಈವಾಗ ಬಹಳ ದೊಡ್ಡ ಸವಾಲುಗಳು. ಬಹುತೇಕ ನಮ್ಮ ತಲೆಮಾರಿನ ಎಜುಕೇಟೆಡ್ಸ್ ಅಂತ ಕರಿತಿವಲ್ವ, ಯಾರಿಗೂ ಜಾತಿ ಮತ ಪ್ರಶ್ನೆನೇ ಬರೊಲ್ಲ. ಆದರೆ ಇವತ್ತಿನ ಶಿಕ್ಷಣದಲ್ಲಿ ಅದು ಎದ್ದು ಕಾಣುತ್ತದೆ. ಆದ್ರೆ ನಮ್ಮ ತಲೆಮಾರಿನವರೆಲ್ಲ ಬಡತನ ಹಸಿವು ಮತ್ತು ಅವಮಾನಗಳಲ್ಲೆ ಬಂದವ್ರು. ಅವಾಗ ಏನಾಗಿತ್ತು ಅಂದ್ರೆ, ದುಡ್ಡು ಅನ್ನೊದು ಜನಗಳ ಬಳಿ ಇರಲೇ ಇಲ್ಲ.ನನಗೆ ನೆನಪಿರುವಂಗೆ ಈ ಬಾಟರ್ ಸಿಸ್ಟಮ್ ನ್ನು ನನ್ನ ಕಣ್ಣಾರೆ ನೋಡಿದಂತವ್ನು ಗ್ರಾಮೀಣ ಮಟ್ಟದಲ್ಲಿ. ಅವ್ರು ಬೆಳೆದಿದ್ದು ಇವರಿಗೆ,ಇವ್ರು ಬೆಳೆದಿದ್ದು ಅವ್ರಿಗೆ ಮುಖ್ಯವಾಗಿ ಅವ್ರ ಹೊಲಗಳಲ್ಲಿ ಇವ್ರು ಹೋಗಿ ಕೆಲ್ಸ ಮಾಡ್ತಿದ್ರು ಇವ್ರ ಹೊಲಗಳಲ್ಲಿ ಅವ್ರು ಕೆಲ್ಸ ಮಾಡೋರು. ಕಾರಣ ಏನಂದ್ರೆ, ಕೂಲಿ ದುಡ್ಡು ಕೊಡೋಕೆ ಇರ್ತಿರಲಿಲ್ಲ. ಅದಕ್ಕೆ ಇಷ್ಟು ದಿವಸ ನೀವು ನಮ್ಮ ಹೊಲದಲ್ಲಿ ಕೆಲ್ಸ ಮಾಡಿ ನಾವು ಅಷ್ಟೇ ದಿವಸ ನಿಮ್ಮ ಹೊಲದಲ್ಲಿ ಕೆಲ್ಸ ಮಾಡ್ತಿವಿ ಅಂತ ಒಪ್ಪಂದ ಮಾಡಿಕೊಳ್ತಾಯಿದ್ರು. ಈ ತರಹದಲ್ಲಿ ಆರ್ಥಿಕ ದುಸ್ಥಿತಿ ಇದ್ದ ಕಾಲದಲ್ಲಿ ಭವಿಷ್ಯಃ ಎಲ್ಲಿ ನೋಡಿದ್ರೂ ಬಡತನ ಕಾಣ್ತಿತ್ತು.ಹಳ್ಳಿಗಳಲ್ಲಿ ಒಬ್ರೊ ಇಬ್ರೊ ಶ್ರೀಮಂತ್ರು ಸಿಗೋರು‌ ಅಷ್ಟೆ. ಹೀಗಾಗಿ ಇಡೀ ಊರು ಬಡತನದಲ್ಲಿ ಇರುತ್ತಿತ್ತು. ಹಂಗಾಗಿ ಜಾತಿ ಸಮಸ್ಯೆ ಇರುತ್ತಿರಲಿಲ್ಲ. ನನ್ನ ಬಾಲ್ಯದಲ್ಲಂತೂ ಜಾತಿನೇ ಕಾಣಲಿಲ್ಲ. ಆ ಜಾತಿ ಕೀಳು ಈ ಜಾತಿ ಮೇಲು ಅಂತ ಅನ್ಸಿಸ್ತನೇ ಇರಲಿಲ್ಲ. ಯಾಕೆಂದರೆ ಎಲ್ರೂ ಬಡವರೇ ಆಗಿದ್ರು. ಬಡತನಕ್ಕೆ ಜಾತಿ ಪ್ರಶ್ನೆನೇ ಬರೊಲ್ಲ. ಕ್ರಮೇಣ ಯಾವಾಗ ಆರ್ಥಿಕ ಸ್ಥಿತಿ ಸುಧಾರಣೆ ಆಯ್ತೊ ಅಧಿಕಾರ ಬೇಕಂತ ಶುರುವಾಯ್ತೊ ಇಂತಹ ಸಂದರ್ಭಗಳಲ್ಲಿ ಈ ಪ್ರಶ್ನೆಗಳು ಎದ್ದು ಕಾಣೋಕೆ ಶುರುವಾಗಿದ್ದು. ಹೀಗಾಗಿ ನನ್ನ ಬಾಲ್ಯದಲ್ಲಿ ಜಾತಿಗಳನ್ನು ವಿಂಗಡಿಸಿಕೊಂಡು ಬೆಳೆದ ಸಮಾಜದಲ್ಲಿ ನಾನು ಬೆಳಿಲೆ ಇಲ್ಲ. ಈ ಒಟ್ಟಾಗುವ ಸಮಾಜದಲ್ಲಿ ನಾನು ಬೆಳೆದು ಬಂದಿದ್ರಿಂದ, ಈಗ ಛಿದ್ರ ಛಿದ್ರವಾಗುತ್ತಿರುವ ಸಮಾಜವನ್ನು ನೋಡಿದ್ರೆ ಎಲ್ಲಿಂದ ಬಂತು ಇದೆಲ್ಲ ಅನಿಸುತ್ತೆ. ನಮ್ಮ ತಲೆಮಾರಿನ ಕಾಲದಲ್ಲಿ ಇಷ್ಟೊಂದು ರಾಜಕೀಯದ ಪ್ರಕ್ಷುಬ್ಧತೆ ಇರಲಿಲ್ಲ. ವಿದ್ಯಾರ್ಥಿಗಳಿಗಂತು ರಾಜಕಾರಣದ ಗಂಧಗಾಳಿ ಇರಲಿಲ್ಲ. ವಿದ್ಯಾರ್ಥಿ ಸಂಘಗಳಲ್ಲಿ ಚುನಾವಣೆ ನಡೆಯುತಿದ್ವು. ನಮಗೆ ಬೇಕಾದ ಪ್ರತಿನಿಧಿನ ನಾವೆ ಆಯ್ಕೆ ಮಾಡ್ತಿದ್ವಿ. ಅದನ್ನು ಬಿಟ್ರೆ ಓದೋದು ಅಷ್ಟೇ. ಮುಖ್ಯವಾಗಿ ಹೊಟ್ಟೆ ತುಂಬಿಸಿಕೊಳ್ಳೊದು ಹೇಗಂತ ಯೋಚನೆ ಮಾಡೋದು. ಆಸ್ಟಲ್ಗಳಲ್ಲಿ ಬೆಳಗ್ಗೆ ತಿಂಡಿಯಾದ್ರೆ ರಾತ್ರಿ ಊಟ ಅಷ್ಟೇ. ಈ ತರದ ಬಡತನ ಮತ್ತು ಹಸಿವಿ‌ನ ನಡುವೆಯೇ ಶಿಕ್ಷಣವನ್ನು ಪಡೆಯಬೇಕಾಗಿತ್ತು. ಹೀಗೆ ನನ್ನ ತಲೆಮಾರಿನೊಂದಿಗೆ ನಾನೂ ಅನುಭವಿಸಿಕೊಂಡು ಬಂದಂತವನು.

ನಿಮ್ಮ ತಂದೆ-ತಾಯಿ ಪ್ರೋತ್ಸಾಹ ಹೇಗಿತ್ತು?
ನನ್ನ ತಂದೆ ಬೇಗ ಸತ್ತೋಗಿ ಬಿಟ್ರು. ಸಾಯುವ ಕಡೆ ಕ್ಷಣದಲ್ಲಿ ನಮ್ಮ ತಂದೆ ನನ್ನ ತಾಯಿ ಕೈಯಿಡ್ಕೊಂಡು ಒಂದು ಮಾತು ಹೇಳಿದ್ರಂತೆ. ” ಏನೇ ಕಷ್ಟವಾದ್ರೂ ನಮ್ಮ ಮಕ್ಕಳನ್ನು ಚನ್ನಾಗಿ ಓದಿಸೋದು ಬಿಡಬೇಡ” ಹಂಗಾಗಿ ನಮ್ಮ ತಾಯಿ ಏನೋ ನಮ್ಮನ್ನು ಹೊಡ್ದು ಬಡ್ದು ಏನೊ ಮಾಡಿ ಸ್ಕೂಲಿಗೆ ಕಳಿಸಿಬಿಡೋರು. ನಮ್ಮನ್ನು ಆಸ್ಟಲ್ಲಿಗೆ ಹಾಕಿದ್ರು. ಊರಿಗೆ ಏನಾದ್ರೂ ಹೋದ್ರೆ ಏಟು ಬಿದ್ವು ಅಂತಾನೆ ಲೆಕ್ಕ.ಅದಕ್ಕೆ ಹೆದರಿ ಊರಿಗೆ ಹೋಗ್ತ ಇರಲಿಲ್ಲ. ಅಮ್ಮನ‌ ಭಯ ಇತ್ತು ನಮ್ಗೆ. ನಮ್ಮ ತಾಯಿ ನಾನು ಎಂ. ಎ. ಮಾಡೊತಂಕ ಬಹಳ ಸಪೋರ್ಟಿವಾಗಿದ್ರು. ನಾನು ನನ್ನ ಅಣ್ಣ ಎಂ.ಎ ಗೆ ಹೊರಟ್ವಿ. ಅವ್ನು‌ ಒಂದು ವರ್ಷ ಪೇಲಾಗಿಬಿಟ್ಟ. ಇಬ್ರೂ ಎಂ.ಎ. ಗೆ ಹೋಗಬೇಕಿತ್ತು. ಆದ್ರೆ ಕಳಿಸೊ ಶಕ್ತಿ ಇರಲಿಲ್ಲ. ಏನು ಮಾಡೋದು ಅಂತ ಯೋಚಿಸುವಾಗ, ನಮ್ಮ ಅಮ್ಮ “ನಮ್ಮ ಹೊಲ ಐತೈಲ್ಲ ಅದ್ನ ಮಾರ್ಬಿಡೋಣ ಅಂತಂದ್ರು. ಇದೇ ನಿರ್ಧಾರ ಮಾಡಿ ಹೊಲನೂ ಮಾರಿ ನಮ್ಮನ್ನು ಓದೋದಕ್ಕೆ ಕಳಿಸಿಬಿಟ್ರು. ಅವತ್ತಿನ ನಾಲ್ಕು ಎಕರೆ ಹೊಲಕ್ಕೆ ಬರೀ ಆರು ಸಾವಿರ ರೂಪಾಯಿ. ಆ ಸಂದರ್ಭದಲ್ಲಿ ನಮ್ಮ ತಾಯಿ ಏನಾದ್ರೂ ನಮ್ಮ ಜಮೀನು ಹೋಗುತ್ತೆ ನೀವಿಬ್ರು ಹೊಲದ ಕೆಲ್ಸ ಮಾಡ್ಕೊಂಡು ಇರಿ ಅಂದಿದ್ರೆ, ನಾವು ಓದೋದಕ್ಕೆ ಆಗ್ತಾನೇ ಇರಲಿಲ್ಲ. ಹೀಗಾಗಿ ನಮ್ಮ ತಂದೆ ಕೊಟ್ಟ ಮಾತಿನಂತೆ ನಮ್ಮ ತಾಯಿ ನಮ್ಮ‌ ಶಿಕ್ಷಣಕ್ಕೆ ತುಂಬಾ ಸಪೋರ್ಟ್ ಮಾಡಿದ್ರು.

ನಿಮಗೆ ಅಕ್ಷರ ಪ್ರೀತಿ ಸಾಹಿತ್ಯದ ನಂಟು ಹೇಗೆ ಶುರುವಾಯ್ತು ಸರ್?
ಡಿಗ್ರಿಯಲ್ಲಿದ್ದಾಗ್ಲೆ ಸಾಹಿತ್ಯದ ಆಸಕ್ತಿ ಬೆಳಿತು. ಆ ಸಂದರ್ಭದಲ್ಲಿ ಚಳವಳಿಗಳು ಶುರುವಾದವು. ಸಮುದಾಯ ಅಂತ ಶುರುವಾಗಿ ಪ್ರಸನ್ನ, ಗಂಗಾಧರಸ್ವಾಮಿ ಇವರೆಲ್ಲ ಸೇರಿ ಶುರುಮಾಡಿದ್ರು.ಕಲ್ಕತ್ತಾ ವೆಸ್ಟ್ ಬೆಂಗಾಲ್ ಇದೆಯಲ್ವ ಇಲ್ಲಿಂದ ಶುರುವಾದಂತಹ ಈ ಸಮುದಾಯದ ಚಳವಳಿಗಳು ಎಲ್ಲಾ ಕಡೆಯಿಂದ ಜೋರಾಗಿ ಸ್ವರೂಪ ಪಡೆದುಕೊಂಡ್ವು. ಆ ಸುದ್ದಿಗಳನ್ನು ಪೇಪರನಲ್ಲಿ ಓದುತ್ತಿದ್ವಿ. ಆ ಸಮುದಾಯದ ನಾಟಕಗಳನ್ನು ಪ್ರದರ್ಶಿಸಲು ಸಿರಿಗೆರೆಗೆ ಬಂದ್ರು. ಬೀದಿಯಲ್ಲಿ ನಾಟಕಗಳನ್ನು ಆಡಿದ್ರು. ಅವುಗಳ ಪರಿಣಾಮ ಎಲ್ಲಾ ವಿದ್ಯಾರ್ಥಿಗಳ ಮೇಲೂ ಆಯ್ತು. ಹೊಸ ಚಿಂತನೆಗೆ ಪ್ರೇರಣೆಯಾಯ್ತು. ನಾವು ನಮ್ಮ ತಲೆಮಾರಿನ ಎಲ್ಲರೂ ಕೂಡ ಚಳವಳಿಗಳ ಕಾಲದಲ್ಲಿ ಹುಟ್ಟಿದ್ದು ಸಹ ಬಹಳ ಮುಖ್ಯವಾದ ಕಾರಣ. ನಮ್ಮ ತಲೆಮಾರಿನ ಸಂದರ್ಭದಲ್ಲೆ ಜೆ.ಪಿ ಚಳವಳಿ ಶುರುವಾಯ್ತು. ಆಮೇಲೆ ಬೂಸ ಬಸವಲಿಂಗಪ್ಪನವರ ಚಳವಳಿ ಶುರುವಾಗಿದ್ದೂ ಆ ಕಾಲದಲ್ಲಿನೇ. ಆನಂತರ ರೈತಸಂಘ ಹುಟ್ಟುಕೊಂಡ್ತು. ವಿಶೇಷವಾಗಿ ದಲಿತ ಚಳವಳಿ ಶುರುವಾಯ್ತು. ಇದನ್ನು ನಮ್ಮ ಸೌಭಾಗ್ಯ ಅನ್ನಬೇಕೊ ಗೊತ್ತಿಲ್ಲ. ಈ ಚಳವಳಿಗಳೆಲ್ಲ ಹುಟ್ಕೊಂಡ ಕಾಲವದು. ಈ ಚಳವಳಿ ಏನು ಮಾಡ್ತವೆ ಅಂತ ಈ ಬಗ್ಗೆ ತಿಳ್ಕೊಂಡು ತಿಳ್ಕೊಂಡು, ಸಹಜವಾಗಿ ಅದನ್ನು ಪತ್ರಿಕೆಗಳಿಗೆ ಬರೆಯೋಕೆ ಶುರುಮಾಡಿದ್ವಿ. ಬಹಳ ವಿಶೇಷವಾಗಿ ಸಿದ್ದಲಿಂಗಯ್ಯನವರ ಪದ್ಯಗಳಿವೆ ಅಲ್ವ, ಅವುಗಳನ್ನ ಅನುಸರಿಸಿ ನಾವುನೂ ಪದ್ಯ ಬರೆಯಲು ಶುರುಮಾಡಿದ್ವಿ. ಅವರ ಕೃತಿಗಳಿಂದ ಪದ್ಯಗಳು ಬಂದಲ್ವ ಅವುಗಳ ಪ್ರಭಾವ ಹಾಗೆ ಮಹದೇವನ ಕಥೆಗಳ ಪ್ರಭಾವ ನಮಗಾಯ್ತು. ಯಾಕೆಂದರೆ ಅಲ್ಲಿನ ಪದ್ಯಗಳಲ್ಲಿ ಇದಿದ್ದು ನಮ್ಮ ಅನುಭವಗಳೆ ಆಗಿದ್ವು. ಮಹಾದೇವ ರ ಕಥೆಗಳಲ್ಲಿ ಇದಿದ್ದು ಜಾತಿ ಸಂಘರ್ಷ ಕೆಳಜಾತಿ ಮೇಲು ಜಾತಿ ಈ ತರದ ವಿಷಯಗಳು ಬರೋದು. ಸಿದ್ದಲಿಂಗಯ್ಯನವರ ಪದ್ಯಗಳಲ್ಲಿ ಬರುವ ಭಾಷೆ ಶೈಲಿ ಎಲ್ಲಾ ನಮ್ಮೂರಿಂದೆ ಅನಿಸೋದು. ಹೀಗಾಗಿ ನಮ್ಮ ಅನುಭವವನ್ನು ಸಾಹಿತ್ಯದಲ್ಲಿ ತರಬಹುದು ಬರೆಯಬಹುದಲ್ವ ಅನ್ನುವ ವಾತಾವರಣ ನಿರ್ಮಾಣವಾಯ್ತು. ನಮಗೆ ಬರೆಯಬೇಕೆಂಬ ಉತ್ಸಾಹ ಅರಿವಿನಿಂದ ನಮ್ಮ ಸಾಹಿತ್ಯ ಬರವಣಿಗೆ ಶುರುವಾಯ್ತು. ಈ ನಡುವೆ ಮದ್ಯಮ ವರ್ಗದ ಅನುಭವಗಳೇ ಸಾಹಿತ್ಯದ ಸರಕಲ್ಲ, ನಿಮ್ಮ ಬಡತನದ ಅನುಭವಗಳನ್ನು ಸಾಹಿತ್ಯದ ಸರಕು ಆಗಿಸಿಕೊಳ್ಳಬಹುದು ಎನ್ನುವಂತ ಒಂದು ಮಿಂಚು ದಾರಿ ಹುಟ್ಟಿದ್ದು ನಾನು ಡಿಗ್ರಿಯಲ್ಲಿದ್ದಾಗ. ಆಗ ನಾನು ಪದ್ಯ ಬರೆಯಲು ಶುರುಮಾಡಿದೆ. ಅಮೇಲೆ “ಬದುಕು” ಅಂತ ಒಂದು ಮ್ಯಾಗಜಿನ್ ಬರೋದು. ನಾನು ಅದಕ್ಕೆ ಒಂದು ಪದ್ಯ ಬರೆದು ಕೊಟ್ಟಿದ್ದೆ. ಆ ಪದ್ಯ ಪ್ರಕಟವಾಗಿತ್ತು. ಆ ಪದ್ಯ ನಮ್ಮೂರ ಭಾಷಾ ಶೈಲಿಯಲ್ಲೆ ಬರೆದಿದ್ದೆ. ಆಗ ನನ್ನ ಹೆಸರು ಲೋಕೇಶ್ ಎಲ್.ಎಸ್. ಅಂತ ಇತ್ತು. ನನ್ನ ಗೆಳೆಯರ ಸಲಹೆಯಂತೆ ನಮ್ಮೂರಿನ ಹೆಸರನ್ನು ಸೇರಿಸಿ ಲೋಕೇಶ್ ಅಗಸನಕಟ್ಟೆ ಅಂತ ಬದಲಿಸಿಕೊಂಡೆ. ಮುಂದೆ ಕರ್ಮವೀರ,ತುಷಾರ ಪತ್ರಿಕೆಗಳಲ್ಲಿ ನನ್ನ ಪದ್ಯಗಳು ಪ್ರಕಟವಾದವು. ಹೀಗೆ ಈ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಶುರುಮಾಡಿದೆ.

ನಿಮ್ಮನ್ನು ಪ್ರಭಾವಿಸಿದ ಪುಸ್ತಕ ಅಥವಾ ಘಟನೆಗಳ ಬಗ್ಗೆ ಹೇಳಬಹುದೇ?
ನಿರ್ದಿಷ್ಟವಾಗಿ ಹೇಳೋಕೆ ಅಗೊಲ್ಲ. ಪುಸ್ತಕಗಳು ನನ್ನನ್ನು ಪ್ರಭಾವ ಮಾಡಿದವು ಅನ್ನೊದಕ್ಕಿಂತ, ನಾನು ಬೆಳೆದ ವಾತಾವರಣವೇ ನನ್ನಲ್ಲಿ ಪ್ರಭಾವವನ್ನುಂಟು ಮಾಡಿತು. ಬಹಳ ಮುಖ್ಯವಾಗಿ ನಾನು ಸಿರಿಗೆರೆಯಲ್ಲಿ ಓದಿದ್ದು. ಮಠ ಇದ್ದಂತ ಕಡೆ. ನಿಜವಾಗಿಯೂ ನಾನೊಂತರ ಕರ್ಮಠ ಇದರೊಳಗೆ ಬೆಳಿಬೇಕಾಗಿತ್ತು. ನಾವು ಏನೇ ಮಾಡಿದ್ರು ಅದನ್ನು ಎಕ್ಸ್ ಪೋಜ್ ಮಾಡುವಂತಹ ಸ್ಥಿತಿ ಇತ್ತು ಅಲ್ಲಿ. ಒಂದು ಘಟನೆ ನೆನಪಾಗುತ್ತೆ, ಬಹುಶಃ 1964 ಇಸಿವಿಗಿಂತ ಈಚೆಗೆ ಇರಬಹುದು ಆಗ ಸ್ವಾತಂತ್ರೋತ್ಸವ ಇತ್ತು. ನಾನು ನನ್ನ ಗೆಳೆಯ ರಾಜು ಸೇರಿ ಆ ಸ್ವಾತಂತ್ರ್ಯೋತ್ಸವದ ಹಿಂದಿನ ದಿನ ಇಡಿ ಮಠದ ಗೋಡೆ ಕಾಪೌಂಡುಗಳ ಮೇಲೆ ಸ್ವಾತಂತ್ರೋತ್ಸವವನ್ನು ವಿರೋಧಿಸುವಂತ ಘೊಷಣೆಗಳನ್ನು ಬರೆದಿದ್ವಿ. ಆಗ ನಮ್ಮನ್ನು ಪತ್ತೆ ಹಚ್ಚಿ ಬೆಳಗ್ಗೆ ಕರೆಸಿಕೊಂಡರು. ಯಾಕೆ ಈಗೆಲ್ಲ ಬರೆದಿದ್ದೀರಿ ಎಂದು ಕೇಳಿದ್ರು. ಅದಕ್ಕೆ ನಮ್ಮದೇ ಆದ ವಿವರಣೆ ಕೊಟ್ಟದ್ವಿ. ಆಗ ಅವರು ನಮಗೆ ಹೀಗೆಲ್ಲ ಬರೆಯಬಾರದು ಅಂತ ಬುದ್ಧಿ ಹೇಳಿದ್ರೆ ವಿನಃ ದಂಡಿಸೋದು ಶಿಕ್ಷೆ ಕೊಡೋದು ಆತರ ಏನೂ ಮಾಡಲಿಲ್ಲ. ಅಲ್ಲಿ ಎಲ್ಲಾ ವಿಷಯದಲ್ಲೂ ಮುಕ್ತ ವಾತಾವರಣ ಇತ್ತು. ಇದು ಸಹ ನನ್ನ ಮೇಲೆ ಪ್ರಭಾವಿಸಲು ಕಾರಣ ಇರಬಹುದೇನೊ ಅನಿಸುತ್ತೆ. ಹಾಗೆ ಆ ಕಾಲವೇ ನಮ್ಮನ್ನು ಪ್ರೇರೇಪಿಸಿತು ಅಂತ ಹೇಳಬಹುದು. ಆಗಿನ ಚಳವಳಿ ಆ ಸಾಹಿತ್ಯದ ಬಿಸಿಯ ವಾತಾವರಣ. ಪ್ರತಿದಿನ ಪ್ರಜಾವಾಣಿ ಪತ್ರಿಕೆಯಲ್ಲಿ ನಡೆಯುತ್ತಿದ್ದ ಸಾಹಿತ್ಯದ ಚಟುವಟಿಕೆಗಳು ಚರ್ಚೆಗಳೇ ಈ ದಾರಿಗೆ ಇವೆಲ್ಲ ನನಗೆ ಪ್ರಭಾವ ಪ್ರೇರಣೆಯಾಗಿವೆ.

ನೀವು ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದಾಗ ಎದುರಾದ ಸಮಸ್ಯೆ ಸವಾಲುಗಳು ಏನಿದ್ದವು?
ಸಮಸ್ಯೆ ಅಂತೇನು ಕಾಣಲಿಲ್ಲ. ನೀವು ನಂಬುತ್ತೀರೊ ಇಲ್ವೊ, ಇವತ್ತು ಯಾರಾದ್ರೂ ಬರೆತಾನೆ ಅಂದ್ರೆ, ಅವನನ್ನು ಏನಾದ್ರೂ ಮಾಡಿ ತುಳಿಬೇಕೆನ್ನುವವರು ಇರ್ತಾರೆ. ಆಮೇಲೆ ಯಾರಾದರೂ ಬರೆದಿದ್ದನ್ನು ಓದಿಕೊಡ್ರಿ ಅಂದ್ರೆ, ಏನ್ ಬರೆದಿದ್ದಿಯಾ ನೀನು. ಹೇ ನನಗೆ ಟೈಮಿಲ್ಲ ಹೋಗಪ್ಪ ಅ‌ನ್ನೊರು. ಇಲ್ಲಾಂದ್ರೆ ನಿನ್ನಂಥವನೆಲ್ಲ ಬರೆಯೋಕೆ ಆಗುತ್ತೆನಯ್ಯ. ಒಟ್ಟಾರೆ ಆಸಕ್ತಿಯನ್ನು ಕುಗ್ಗಿಸುವವರೆ ಹೆಚ್ಚು. ಆದ್ರೆ ನಾವು ಬರೆವಣಿಗೆ ಆರಂಭಿಸಿದ ಸಂದರ್ಭ ಹೇಗಿತ್ತು ಅಂದ್ರೆ? ಏನಾದ್ರೂ ಬರೆದ್ರೆ ಅನುಭವಿಗಳಿಗೆ ಕೊಟ್ರೆ ತಾಳ್ಮೆಯಿಂದ ಓದೋರು. ಒಂದ್ಸಾರಿ ಅಡಿಗರನ್ನು ಭೇಟಿಯಾದ ಸಂದರ್ಭ, ನಾನು ಎಂ.ಎ.ಓದುತ್ತಿದ್ದೆ. ಆಗ ಅವರು ಹೋಟೆಲೊಂದರಲ್ಲಿ ಉಳಿದುಕೊಂಡಿದ್ರು. ನಾನು ಕನ್ನಡ ವಿಭಾಗದಲ್ಲಿ ಮುಖ್ಯ ಸ್ಟೂಡೆಂಟ್ ಆಗಿದ್ದೆ. ನಾನು ಅಡಿಗರನ್ನು ಕರ್ಕೊಂಡ್ ಬರಬೇಕಿತ್ತು. ಆ ಸಮಯದಲ್ಲಿ “ತುಷಾರ” ಪತ್ರಿಕೆಯಲ್ಲಿ ನನ್ನ ಕವನ ಪ್ರಕಟವಾಗಿತ್ತು. ಅಡಿಗರನ್ನು ಭೇಟಿಯಾಗಿ ಅದನ್ನು ತೋರಿಸಿದೆ. ತಾಳ್ಮೆಯಿಂದ ಓದಿದ್ರು. “ಇದು ಬಂಡಾಯದ ಕವನ” ಎಂದ ಅಡಿಗರು ಮುಂದುವರಿದು ನಿಮಗೆ ಯಾವುದು ಸರಿ ಎನಿಸುತ್ತೊ ಆ ದಾರಿಯಲ್ಲಿ ಹೋಗಿ” ಎಂದು ಪದ್ಯದಲ್ಲಿ ಈ ಪದಗಳ ಬಗ್ಗೆ ಬದಲಾವಣೆ ಮಾಡ್ಕೊಳ್ಳಿ” ಎಂದಿದ್ರು. ಆಗ ಎಂಥಹ ಬರಹಗಾರರಾದ್ರೂ ತಾಳ್ಮೆಯಿಂದ ಓದಿ ಮಾರ್ಗದರ್ಶನ ಮಾಡ್ತಿದ್ರು ಹೊರತಾಗಿ ಆಸಕ್ತಿನ ಕುಗ್ಗಿಸ್ತಾ ಇರಲಿಲ್ಲ. ಯುವಬರಹಗಾರರನ್ನು ಹುರಿದುಂಬಿಸುವಂತವರು ಇದ್ರು. ಒಂದೊಮ್ಮೆ ಪದ್ಯಗಳು ಚನ್ನಾಗಿಲ್ಲದಿದ್ರು, ಚನ್ನಾಗಿದೆ ನೀನೂ ಬರೆಯಬಹುದು ಅನ್ನುವವರಿದ್ರು. ಹೀಗಾಗಿ ಎಲ್ಲರೂ ಸಪೋರ್ಟ್ ಮಾಡುವ ವಾತಾವರಣ ಇತ್ತು. ನೋಡಿ ಆಗ ಪತ್ರಿಕೆಗಳು ಹೇಗಿದ್ವು ಅಂದ್ರೆ, ಪ್ರಜಾವಾಣಿಗೆ ಪದ್ಯಗಳನ್ನು ಕಳಿಸಿದ್ರೆ, ಹಿಂತಿರುಗಿ ವಿಷಾದದ ಪತ್ರಗಳು ಬರುತಿದ್ವು. ಈಗ ಪತ್ರನೂ ಬರೊಲ್ಲ. ಆಗ ಪತ್ರಿಕೆಗಳಿಂದ ನಿಮ್ಮ ಪದ್ಯಗಳು ಸ್ವೀಕೃತ ಆಗಿಲ್ಲವೆಂದು ಪತ್ರ ಬರುತಿದ್ವು. ಆಗ ನಾವು ಆ ಪತ್ರ ಇಟ್ಟುಕೊಂಡೆ ಖುಷಿ ಪಡ್ತಿದ್ವಿ. ಹಾಗೆನೆ ನಿಮ್ಮ ಪದ್ಯ ಸ್ವೀಕೃತಿಗೊಂಡಿದೆ ಪ್ರಕಟಿಸಲಾಗುವುದು ಅಂತಾನು ಪತ್ರ ಕಳಿಸೋರು. ಇದೆಲ್ಲ ನಮಗೆ ಖುಷಿ ಕೋಡೊದು. ಕವನ ಬರೆದಿದ್ದು ಏನಾದ್ರೂ ಗೊತ್ತಾದ್ರೆ ವೇದಿಕೆಯಲ್ಲಿ ಓದುವುದಕ್ಕೆ ಅವಕಾಶ ಕೋಡೋರು. ಈಗ ಅದೆಲ್ಲ ಕಡಿಮೆ. ಹೀಗಾಗಿ, ಆಗ ಬರವಣಿಗೆಯಲ್ಲಿ ನಮಗೆ ಎಡರು ತೊಡರಿನ ಕಷ್ಟವೇ ಕಾಣಲಿಲ್ಲ.

ಬರವಣಿಗೆಯ ಅಭಿವ್ಯಕ್ತಿ ಮಾಧ್ಯಮವನ್ನು ನೀವು ಮುಖ್ಯವಾಗಿ ಯಾವ ಕಾರಣಕ್ಕೆ ಬಳಸಿಕೊಂಡ್ರಿ?
ನಾವು ನಮ್ಮೂರಿನ ಪರಿಸರದಲ್ಲಿ ಅನುಭವಿಸಿದ್ದೆ ಇರಬಹುದು. ಇವರು ಬಡವರು ಎಂಬ ಕಾರಣಕ್ಕೆ ಅವಮಾನಿಸೋದು ಇರಬಹುದು. ನಾನು ನಿರ್ದಿಷ್ಟವಾಗಿ ಇಂತದ್ದೆ ಘಟನೆ ಅಂತ ನಾನು
ಹೇಳಲಾರೆ. ನನ್ನ ಬಡತನ ಹಸಿವು ಅವಮಾನಗಳೇ ನನ್ನ ಬರವಣಿಗೆಯ ಮೂಲ ಕಾರಣ. ಇದನ್ನೆಲ್ಲ ಯಾರ ಮುಂದೆ ನೇರವಾಗಿ ಹೇಳದೇ ಸಾಹಿತ್ಯದಲ್ಲಿ ಇದನ್ನೆಲ್ಲ ಅಭಿವ್ಯಕ್ತಿಗೊಳಿಸಲು ಬರವಣಿಗೆಯಲ್ಲಿ ತೊಡಗಿಸಿಕೊಂಡೆ. ಮೂಲತಃ ನಾನೊಂತರ ಅಂರ್ತಮುಖಿ ವ್ಯಕ್ತಿ ಹೆಚ್ಚು ಮಾತು ಆಡಲ್ಲ. ಹೀಗಾಗಿ ಜಾತ್ರೆಯಲ್ಲೂ ನಾನು ಒಂಟಿ. ಈ ಅಂತರ್ಮುಖತೆಗೆ ಕಾರಣವೂ ನನಗಾದ ಅವಮಾನಗಳೆ. ಹೀಗಾಗಿ ಬರವಣಿಗೆಯನ್ನು ಅಭಿವ್ಯಕ್ತಿಗೆ ಬಳಸಿಕೊಂಡೆ.
ನಿಮ್ಮ ಬರವಣಿಗೆ ಮಾಗುತ್ತ ಆಧ್ಯಾತ್ಮವನ್ನು ನೀವು ನೆಚ್ಚಿಕೊಂಡಂತವರು ಇದಕ್ಕೆ ಕಾರಣ?
ಆಧ್ಯಾತ್ಮ ಎಂದರೆ ನಮ್ಮ ಮನಸ್ಸನ್ನು ಹದಗೊಳಿಸುವ ರೀತಿಯದು. ನನ್ನನ್ನು ನಾನು ಪರಿಶುದ್ದ ಹಾಗು ಪರಿಪಕ್ವಗೊಳಿಸಿಕೊಳ್ಳುವ ಒಂದು ದಾರಿ,ಇದು ಮೊದಲಿಂದಲೂ ಇದೆ ಎನಿಸುತ್ತೆ.ನಾನು ಸಣ್ಣವನಿದ್ದಾಗ ನಮ್ಮ ತಂದೆ ಶನಿ ಪುರಾಣ ಓದುತ್ತಿದ್ರು , ಶನಿ ಚಿತ್ರ ಬರೆಯುತ್ತಿದ್ದ ಕಾಲದಿಂದಲೂ ಇದೆ.ಮುಖ್ಯವಾಗಿ ಆಧ್ಯಾತ್ಮ ಎಂದ್ರೆ ಮನುಷ್ಯನನ್ನು ನಿಜ ಮಾನವನನ್ನಾಗಿ ಮಾಡುವ ಒಂದು ಪ್ರೋಸೆಸ್. ಬಹಿರಂಗವಾಗಿ ಪ್ರವಚನಕ್ಕಿಂತ ನಮ್ಮೊಳಗಿನ ಎಲ್ಲಾ ಕ್ರೂರತನಗಳನ್ನ ಅಮಾನವೀಯತೆಗಳನ್ನ ವಿನಾಶಗೊಳಿಸಿ ನಮ್ಮನ್ನು ನಿಜ ಮನುಷ್ಯರನ್ನಾಗಿಸುವ ಹಾದಿಯೇ ಆಧ್ಯಾತ್ಮ. ಹೀಗಾಗಿ ಎಲ್ಲರೊಳಗೂ ಬೆಳಕು ತುಂಬುವ ಆಧ್ಯಾತ್ಮವನ್ನು ನೆಚ್ಚಿಕೊಂಡೆ.

ನಿಮ್ಮ ಕಥೆಗಳಲ್ಲಿ ಗ್ರಾಮೀಣ ಸೊಗಡಿನೊಂದಿಗೆ ಬರುವ ಪಾತ್ರಗಳಿಗೆ ನಿಮ್ಮ ಬಾಲ್ಯ ಗೆಳೆಯರ ಹೆಸರನ್ನೆ ಹೆಚ್ಚು ಬಳಸಿಕೊಳ್ಳುವ ಬಗ್ಗೆ?
ಎಲ್ಲರಿಗೂ ಬಾಲ್ಯ ಅನ್ನೊದು ಒಂದು ಬ್ಯಾಗ್ರೌಂಡ್. ಮನುಷ್ಯತ್ವವನ್ನ ರೂಪಿಸುವುದೇ ಅವರವರ ಬಾಲ್ಯ. ಅದನ್ನು ನಾವು ಎಷ್ಟೆಷ್ಟು ಮೊಗೆಮೊಗೆದು ಬಳಸಿಕೊಳ್ತಿವೊ ಅದರ ಮೂಲಕ ಅಷ್ಟೇ ನೈಜವಾಗುತ್ತೇವೆ. ನಾವೆಲ್ರೂ ವರ್ತಮಾನದಲ್ಲಿ ಕ್ರೂರತನ ಕಾಣೋದ್ರಿಂದ ನಾವು ಬಾಲ್ಯಕ್ಕೆ ಹಿಂತಿರುಗಬೇಕೆನಿಸುತ್ತದೆ. ಹೀಗಾಗಿ ಬಾಲ್ಯ ನನಗೆ ಹಿತವೆನಿಸುವುದರಿಂದ ನನ್ನ ಬಾಲ್ಯದ ಗೆಳೆಯರನ್ನು ನನ್ನ ಕಥೆ ಕಾದಂಬರಿಗಳಲ್ಲಿ ಸ್ಮರಿಸಿಕೊಳ್ಳುತ್ತೇನೆ.

– ಸಿದ್ಧಾಪುರ ಶಿವಕುಮಾರ್

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಯಶಸ್ಸು ಸಾಧನೆಗೆ ಆಧ್ಯಾತ್ಮಿಕತೆ ನೆರವು :ಮೋಕ್ಷಾನಂದಜಿ

ಬೆಂಬಲ ಬೆಲೆ ಯೋಜನೆ: ಮೆಕ್ಕೆಜೋಳ ಖರೀದಿಗೆ ರೈತರಿಂದ ನೋಂದಣಿ

ಬೂದಿ ತುಂಬಿದ ವಾಹನಗಳಿಂದ ವಾಯು ಮಾಲಿನ್ಯ ತಡೆಗಟ್ಟಲು ಆಗ್ರಹ

ಲಿಂ.ಚೆನ್ನಬಸವ ಶ್ರೀ, ದಿ.ಶಾಮನೂರ ಶಿವಶಂಕರಪ್ಪ ರಿಗೆ ಶ್ರದ್ಧಾಂಜಲಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಯಶಸ್ಸು ಸಾಧನೆಗೆ ಆಧ್ಯಾತ್ಮಿಕತೆ ನೆರವು :ಮೋಕ್ಷಾನಂದಜಿ
    In (ರಾಜ್ಯ ) ಜಿಲ್ಲೆ
  • ಬೆಂಬಲ ಬೆಲೆ ಯೋಜನೆ: ಮೆಕ್ಕೆಜೋಳ ಖರೀದಿಗೆ ರೈತರಿಂದ ನೋಂದಣಿ
    In (ರಾಜ್ಯ ) ಜಿಲ್ಲೆ
  • ಬೂದಿ ತುಂಬಿದ ವಾಹನಗಳಿಂದ ವಾಯು ಮಾಲಿನ್ಯ ತಡೆಗಟ್ಟಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಲಿಂ.ಚೆನ್ನಬಸವ ಶ್ರೀ, ದಿ.ಶಾಮನೂರ ಶಿವಶಂಕರಪ್ಪ ರಿಗೆ ಶ್ರದ್ಧಾಂಜಲಿ
    In (ರಾಜ್ಯ ) ಜಿಲ್ಲೆ
  • ಚಡಚಣದಲ್ಲಿ ಕಳ್ಳರ ಹಾವಳಿ: ಭಯಭೀತಿಯಲ್ಲಿ ನಾಗರಿಕರು
    In (ರಾಜ್ಯ ) ಜಿಲ್ಲೆ
  • ಅಂತರ್ಜಾಲದ ಬಳಕೆ ಅತ್ಯಂತ ಜಾಗರೂಕತೆಯಿಂದ ನಿರ್ವಹಣೆ ಮಾಡಿ
    In (ರಾಜ್ಯ ) ಜಿಲ್ಲೆ
  • ದ್ವೇಷ ಭಾಷಣ ವಿರೋಧಿ ಮಸೂದೆಗೆ ರಾಜ್ಯಪಾಲರು ಒಪ್ಪಬಾರದು
    In (ರಾಜ್ಯ ) ಜಿಲ್ಲೆ
  • ಪಿಪಿಪಿ ಮಾದರಿ ಬಿಜೆಪಿ ಹಾಗೂ ಮೋದಿ ಅವರ ಕೂಸು
    In (ರಾಜ್ಯ ) ಜಿಲ್ಲೆ
  • ಸಾರವಾಡ ಸುತ್ತಮುತ್ತಲಿನ ಗ್ರಾಮಗಳಿಗೆ ನೀರಾವರಿ ಸೌಲಭ್ಯಕ್ಕೆ ಬದ್ಧ
    In (ರಾಜ್ಯ ) ಜಿಲ್ಲೆ
  • ದೇಹ ದಾರ್ಡ್ಯ ಸ್ಪರ್ಧೆ: ಎಸ್.ಎಸ್.ಬಿ. ಪ್ರತಿಭೆ ಪ್ರಜ್ವಲ ಗೆ ಬೆಳ್ಳಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.