ವಿಜಯಪುರ: ನಾಗಠಾಣ ಮತಕ್ಷೇತ್ರದ ನಾಗಠಾಣ ಬ್ಲಾಕ್ ಮಾಜಿ ಅಧ್ಯಕ್ಷ ದೇಸು ಗೇಮು ಚವ್ಹಾಣ ಇವರು ತಮ್ಮ ಬೆಂಬಲಿಗರೊಂದಿಗೆ ಕುಮಟಗಿ ಎಲ್.ಟಿ., ಆಹೇರಿ, ಮದಬಾವಿ, ಹಡಗಲಿ ಹಾಗೂ ಹಿಂದಿನ ಕಾಂಗ್ರೆಸ್ ಪಕ್ಷದ ಸದಸ್ಯರೊಂದಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ವಿಜಯಪುರ ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ರವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರುಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಪ್ರೊ.ರಾಜು ಆಲಗೂರ ರವರು ಮಾತನಾಡಿ, ನಾಗಠಾಣ ಬ್ಲಾಕ್ ಮಾಜಿ ಅಧ್ಯಕ್ಷರಾದ ದೇಸು ಗೇಮು ಚವ್ಹಾಣ ಇವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಮರುಸೇರ್ಪಡೆಗೊಂಡಿರುವುದು ನಾಗಠಾಣ ಮತ್ತು ವಿಜಯಪುರ ಲೋಕಸಭಾ ಮತಕ್ಷೇತ್ರದಲ್ಲಿ
ಪಕ್ಷಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ದೇಸು ಗೇಮು ಚವ್ಹಾಣ ಮಾತನಾಡಿ, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಹಾಗೂ ಗ್ಯಾರಂಟಿ ಯೋಜನೆಗಳನ್ನು ಮೆಚ್ಚಿ ಗ್ರಾ.ಪಂ. ಸದಸ್ಯರಾದ ರಾಚು ಚವ್ಹಾಣ, ಅಪ್ಪು ಹೀರು ಪವಾರ, ದುಂಡು ದೇನು ಜಾಧವ, ಭಾವಸಿಂಗ ಜಾಧವ, ಸಂತೋಷ ಜಾಧವ, ರಾಜು ಜಾಧವ, ಧೋಂಡು ದೇನು ಜಾಧವ, ಸುರೇಶ ಡಿ. ಚವ್ಹಾಣ, ಸೇವು ತುಳಜು ನಾಯಕ, ಮಾನು ಕಾರಬಾರಿ, ಹೂನು ಚವ್ಹಾಣ, ಎಂ.ಎಂ. ಮುಲ್ಲಾ (ದ್ಯಾಬೇರಿ) ಪಾಂಡು ರಾಠೋಡ, ಧರ್ಮು ರಾಠೋಡ, ಎಂ.ವಾಯ್. ಹಲಗಣಿ ಇವರುಗಳೊಂದಿಗೆ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಸೇರ್ಪಡೆಗೊಂಡಿದ್ದೇನೆ ಅದರಂತೆ ಇನ್ನು ಮುಂದೆ ಜಿಲ್ಲೆಯ ಪ್ರಭಾವಿ ನಾಯಕರು ಹಾಗೂ ಇಬ್ಬರು ಸಚಿವರುಗಳ ಮತ್ತು ಶಾಸಕರುಗಳ ಮಾರ್ಗದರ್ಶನದಲ್ಲಿ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಡಾ.ಗಂಗಾಧರ ಸಂಬಣ್ಣಿ, ಕೆಪಿಸಿಸಿ ಕಾರ್ಮಿಕ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀರಾಸಾಬ ಮುಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಹಾಜಿಲಾಲ ದಳವಾಯಿ, ಕೃಷ್ಣಾ ಲಮಾಣಿ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

