ಸಿದ್ದಲಿಂಗ ಫೈನ್ ಆರ್ಟ್ ಸೊಸೈಟಿಯಿಂದ ಚಿತ್ರಕಲಾ ಪ್ರದರ್ಶನ ಮತ್ತು ಕಲಾ ಪ್ರಾತ್ಯಕ್ಷತೆ
ವಿಜಯಪುರ. ನಾಡಿನ ಹಿರಿಯ ಚಿತ್ರಕಲಾವಿದರಾದ ದಿವಂಗತ ಸಿ.ಬಿ.ಕಾಚಾಪುರ ಅವರ ಪುಣ್ಯ ಸ್ಮರಣೆ ಪ್ರಯುಕ್ತ ನಗರದ ಸಿದ್ದಲಿಂಗ ಫೈನ್ ಆರ್ಟ್ ಸೊಸೈಟಿಯು ಏರ್ಪಡಿಸಿದ್ದ ಜಲವರ್ಣದ ಕಲಾಕೃತಿಗಳ ಚಿತ್ರಕಲಾ ಪ್ರದರ್ಶನ ಮತ್ತು ಕಲಾ ಪ್ರಾತ್ಯಕ್ಷತೆಯನ್ನು ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ್ ಮಗಿಮಠ ಬುಧವಾರ ಸಂಜೆ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಕಾಚಾಪುರ ಸರ್ ಅವರ ಜೀವನ ಆದರ್ಶಮಯವಾದ ಕಲಾ ಬದುಕು. ಶ್ರೇಷ್ಠ ಸಂಘಟಕರಾಗಿ ಕಲಾ ಕ್ಷೇತ್ರದ ಬೆಳವಣಿಗೆಗೆ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ಧೀಮಂತ ಕಲಾ ಸಾಧಕರು. ವಿಜಯಪುರದಲ್ಲಿ ಕಲೆ ಮತ್ತು ಸಾಂಸ್ಕೃತಿಕವಾಗಿ ಇಡಿ ರಾಜ್ಯದಲ್ಲಿ ವಿಜಯಪುರದ ಗಮನ ಸೆಳೆಯುವ ರೀತಿಯಲ್ಲಿ ಅವರು ಮಾಡಿದ ಕೆಲಸ ಇವತ್ತಿಗೂ ಜೀವಂತವಾಗಿದೆ. ಕಲಾ ಶಾಲೆಯ ಮುಖಾಂತರ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕಲಾವಿದರಿಗೆ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇದೇ ರೀತಿ ಮುಂದಿನ ದಿನಗಳಲ್ಲಿ ಹೆಚ್ಚಿನ ಕಲಾ ಕೆಲಸ ಈ ಗ್ಯಾಲರಿಯಲ್ಲಿ ನಡೆಯಲಿ, ಮಹಾನಗರ ಪಾಲಿಕೆಯಿಂದ ಮೂಲ ಸೌಲಭ್ಯದ ಅಡಿಯಲ್ಲಿ ಈ ಕಲಾ ಗ್ಯಾಲರಿಗೆ ಬೇಕಾದ ಎಲ್ಲ ರೀತಿಯ ಸಹಾಯ ಮಾಡಿಸುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ್ ಭಜಂತ್ರಿಯವರು ಮಾತನಾಡಿದರು.
ದಿ. ಸಿ.ಬಿ.ಕಾಚಾಪುರ ಅವರ ವಿದ್ಯಾರ್ಥಿ, ನಾಡಿನ ಶ್ರೇಷ್ಠಕಲಾವಿದ ಕೆ.ಕೆ ಮಕಾಳೆಯವರು ಕಲಾ ಪ್ರಾತ್ಯಕ್ಷತೆಯನ್ನು ನಡೆಸಿಕೊಡುವುದದರ ಮೂಲಕ ಕಾಚಾಪುರ ಅವರಿಗೆ ಕಲಾನಮನ ಸಲ್ಲಿಸಿದರು. ಸೇರಿದ್ದ ಕಲಾಸಕ್ತರು ಪ್ರಾತ್ಯಕ್ಷತೆಯನ್ನು ನೋಡಿ ಮಂತ್ರಮುಗ್ಧರಾದರು.
ವೇದಿಕೆಯಲ್ಲಿ ಸಿದ್ದಲಿಂಗ ಫೈನ್ ಆರ್ಟ್ ಸೊಸೈಟಿಯ ಕಾರ್ಯದರ್ಶಿ ಲಿಂಗರಾಜ ಕಾಚಾಪುರ ಉಪಸ್ಥತರಿದ್ದರು.
ಪ್ರಾಸ್ತಾವಿಕವಾಗಿ ಹಿರಿಯ ಕಲಾವಿದ ವಿದ್ಯಾಧರ ಸಾಲಿ ಮಾತನಾಡಿದರು. ಕಲಾವಿದ ರಮೇಶ ಚವ್ಹಾಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಲಾವಿದ ಮಂಜುನಾಥ ಮಾನೆ ವಂದಿಸಿದರು.
ಹಿರಿಯ ಕಲಾವಿದರಾದ ಎಸ್.ಟಿ. ಕೆಂಭಾವಿ, ಪಿ.ಎಸ್. ಕಡೇಮನಿ, ಬಸವರಾಜ ಪಾಟೀಲ, ಡಾ.ವಿಷ್ಣು ಶಿಂಧೆ, ವಿಷ್ವನಾಥ ಬೀಳಗಿ, ಡಾ. ಶಶಿಕಲಾ ಹೂಗಾರ, ಗಜಾಕೋಶ, ಮಲ್ಲಿಕಾರ್ಜುನ ಕನ್ನೂರ, ರಾಜೇಶ್ವರಿ ಆಲಕುಂಟೆ, ಯಾಮಿನಿ ಶಹಾ, ಸವಿತಾ ಮಾನೆ, ಶಿವಾನಂಧ ಅಥಣಿ, ಶಿವಣ್ಣ ಗೊಳಸಂಗಿ, ಎ.ಎಸ್. ಕಾಖಂಡಕಿ. ಪರಶುರಾಮ ಅಳಗುಂಡಗಿ. ನಿಂಗನಗೌಡ ಪಾಟೀಲ್, ಗೊಳಸಂಗಿ, ಶಬ್ಬಿರ್ ನದಾಫ್, ಶ್ರೀಕಾಂತ ರಜಪೂರ, ಗಂಗಾಧರ ಮಾಯಾಚಾರಿ, ಸತೀಶ ಕಲಾಲ, ಪವನ ಅಂಗಡಿ, ರಾಜುಸಿಂಗ ರಜಪೂತ, ಸಿದ್ದು ಬಳೋಲಗಿಡದ, ಸಹಿತ ಕಲಾಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲ ಕಲಾವಿದರು ಕಲಾಸಕ್ತರು ಬಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

