ವಿಜಯಪುರ: ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ವಿಜಯಪುರ ವತಿಯಿಂದ “ಸ್ಟಡಿ ಸರ್ಕಲ್ಸ್” ಕಾರ್ಯಕ್ರಮದ ಅಡಿಯಲ್ಲಿ ಮುಂಬರುವ ಕೆ.ಎ.ಎಸ್. ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಆರ್ಯಭಟ ಕರಿಯರ್ ಅಕಾಡೆಮಿ (ರಿ), ಜೊಡ ಗುಮ್ಮಜ ಎದುರಿಗೆ, ಬಸ್ಟಾö್ಯಂಡ್ ರೋಡ, ಮಿನಾಕ್ಷಿ ಚೌಕ, ವಿಜಯಪುರದಲ್ಲಿ ಮಾ.೧೫ರಿಂದ ಮಾ.೨೪ರವರೆಗೆ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮಕ್ಕನುಸಾರವಾಗಿ ಉಚಿತ ತರಬೇತಿ ನೀಡಲು ಉದ್ದೇಶಿಸಲಾಗಿದೆ.
ಇದು ಉಚಿತ ತರಬೇತಿಯಾಗಿದ್ದು, ಹಾಜರಾಗಲು ಇಚ್ಛಿಸುವ ಅಭ್ಯರ್ಥಿಗಳು, ಕೆಪಿಎಸ್‌ಸಿ ನಲ್ಲಿ ಅಧಿಸೂಚಿತ ಕೆಎಎಸ್ ಹುದ್ದೆಗೆ ಸಲ್ಲಿಸಿದ ತಮ್ಮ ಅರ್ಜಿಯ ಪ್ರತಿ(ಝರಾಕ್ಸ್) ಹಾಗೂ ಆಧಾರ ಕಾರ್ಡ ಪ್ರತಿ(ಝರಾಕ್ಸ್) ನೊಂದಿಗೆ ಆಗಮಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಪ್ಲಾಟ್ ನಂ.೫೫, ಕೆ.ಎಚ್.ಬಿ. ಕಾಲೋನಿ, ಸರ್ಕಾರಿ ಪ್ರಾಥಮಿಕ ಶಾಲೆ ನಂ.೨೪ ಹತ್ತಿರ ಸೋಲಾಪೂರ ರಸ್ತೆ, ವಿಜಯಪುರ ಅಥವಾ ದೂರವಾಣಿ ಸಂಖ್ಯೆ ೦೮೩೫೨-೨೫೦೩೮೩, ೯೦೭೧೦೫೫೫೫೭, ೭೩೪೯೬೦೧೦೬೧, ೯೮೮೦೭೧೬೦೮೩ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
