Author: editor.udayarashmi@gmail.com

ಮುದ್ದೇಬಿಹಾಳ: ಅಖಂಡ ವಿಜಯಪುರ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆಯಲ್ಲಿ ಪಾಸಾದ ಮತ್ತು ಭಾರತೀಯ ಸೈನ್ಯದಲ್ಲಿ ಕರ್ನಲ್ ಅಗಿ ನಿವೃತ್ತಿ ಹೊಂದಿರುವ ಸತೀಶ ದೇಶಪಾಂಡೆ ದಂಪತಿಗಳನ್ನು ಇಲ್ಲಿನ ಕಾರ್ಗಿಲ್ ವೀರಯೋಧರ ಸ್ಮಾರಕ ನಿರ್ಮಾಣ ಸಮಿತಿಯ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.ಸಮಿತಿಯ ಅಧ್ಯಕ್ಷ ಮಹಾಂತೇಶ ಬೂದಿಹಾಳಮಠ, ಪದಾಧಿಕಾರಿಗಳಾದ ಬಸಯ್ಯ ನಂದಿಕೇಶ್ವರಮಠ, ಎಸ್.ಎನ್.ಪಟ್ಟಣಶೆಟ್ಟಿ ವಕೀಲರು, ಹಣಮಂತ ನಲವಡೆ, ಚಂದ್ರು ಕಲಾಲ, ಶ್ರೀಕಾಂತ ಹಿರೇಮಠ, ಸಂಜು ಬಾಗೇವಾಡಿ, ಉದಯ ರಾಯಚೂರ ಸೇರಿದಂತೆ ಮತ್ತೀತರರು ಇದ್ದರು.

Read More

ಮುದ್ದೇಬಿಹಾಳ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿಯ ಎಸ್.ಸಿ ಮೋರ್ಚಾದ ತಾಲೂಕ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಮಲ್ಲಿಕಾರ್ಜುನ್ ತಂಗಡಗಿ, ಹಾಗೂ ರೈತ ಮೋರ್ಚಾದ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಎಸ್.ಶಿವಣಗಿ ಇವರುಗಳನ್ನು ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಸನ್ಮಾನಿಸಿ ಗೌರವಿಸಿದರು.ಈ ವೇಳೆ ಮುಖಂಡರಾದ ಹರೀಶ್ ನಾಟೇಕಾರ, ಪರಶುರಾಮ ನಾಲತವಾಡ, ಪರಶುರಾಮ ಮುರಾಳ, ಬಸವರಾಜ ಸಿದ್ದಾಪೂರ, ಮಹಾಂತೇಶ ಕಂದಗನೂರ, ಶರಣು ಸರೂರ, ರಾಹುಲ ಕಟ್ಟಿಮನಿ, ಪ್ರಕಾಶ್ ಹಾದಿಮನಿ, ರಮೇಶ ಕಂದಗನೂರ, ಭೀಮಣ್ಣ ನಾಯಕಮಕ್ಕಳ, ಗುಂಡಪ್ಪ ಚಲವಾದಿ, ಶೇಖರ ಢವಳಗಿ, ಶಶಿ ಹಳ್ಳೂರ, ಸಂತೋಷ್ ಮುದ್ದೇಬಿಹಾಳ, ಲಕ್ಷ್ಮಣ ಕಾಳಗಿ ಸೇರಿದಂತೆ ಮತ್ತೀತರರು ಇದ್ದರು

Read More

ಮುದ್ದೇಬಿಹಾಳ: ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪದ್ಮಾವತಿ ದೇವಸ್ಥಾನದ ಸಮುದಾಯಭವನದಲ್ಲಿ ಮಾ.೧೭ ರಂದು ಬೆಳಿಗ್ಗೆ ೧೧ ಗಂಟೆಗೆ ಜಿನೇಂದ್ರ ಭಗವಾನರ ಮಹಾ ಅಭಿಷೇಕ ಹಾಗೂ ಮಹಾತಪಸ್ವಿ, ವಿದ್ಯಾಭೂಷಣ ಮುನಿಮಹಾರಾಜರ ಕೇಶಲೋಚನ ಕಾರ್ಯಕ್ರಮ ಜರುಗಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.

Read More

ವಿಜಯಪುರದಲ್ಲಿ ಲೋಕಸಭೆ ಚುನಾವಣೆ ಕುರಿತು ಡಿಸಿ ಟಿ.ಭಾಬಾಲನ್ ಪತ್ರಿಕಾಗೋಷ್ಠಿ ವಿಜಯಪುರ: ಭಾರತ ಚುನಾವಣೆ ಆಯೋಗವು ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ ರ ಅಧಿಸೂಚನೆಯನ್ನು ಹೊರಡಿಸಿದ್ದು, ಇಂದಿನಿಂದ ಜೂನ್ ೬ ರ ವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣೆ ಅಧಿಕಾರಿಯೂ ಆಗಿರುವ ಟಿ.ಭೂಬಾಲನ್ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣಲ್ಲಿ ಲೋಕಸಭೆ ಚುನಾವಣೆ ೨೦೨೪ ರ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆಯ ಅಧಿಸೂಚನೆಯನ್ನ ಏ. ೧೨ ರಂದು ಹೊರಡಿಸಲಾಗುವುದು. ಏ. ೧೯ ನಾಮಪತ್ರ ಸಲ್ಲಿಸುವ ಕೊನೆಯ ದಿನವಾಗಿದೆ. ಏ. ೨೦ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏ. ೨೨ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳುವ ದಿನವಾಗಿದೆ. ಮೆ. ೭ ರಂದು ಮತದಾನ ಹಾಗೂ ಜೂನ ೪ ರಂದು ಮತ ಎಣಿಕೆ ನಡೆಯಲಿವೆ ಎಂದರು.ಜಿಲ್ಲೆಯಲ್ಲಿ ಸುಸೂತ್ರವಾಗಿ ಚುನಾವಣೆ ನಡೆಸಲು. ೯ ಜನ ಸಹಾಯಕ ಚುನಾವಣೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೨೦೮೫ ಮತಗಟ್ಟೆಗಳಿದ್ದು, ೧೯,೧೯,೦೪೮ ಜನ ಮತದಾರರು ಇದ್ದಾರೆ. ಇದರಲ್ಲಿ ೯,೪೨,೭೫೭ ಮಹಿಳಾ,…

Read More

ನಿಡಗುಂದಿ: ಬುದ್ಧಿಮಾಂದ್ಯ ಮಕ್ಕಳಿಗೆ ಅವರ ಚಿಕ್ಕ ವಯಸ್ಸಿನಲ್ಲಿಯೇ ತರಬೇತಿ ಮತ್ತು ಶಿಕ್ಷಣ ನೀಡಬೇಕು, ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಆರಂಭಿಕ ಹಸ್ತಕ್ಷೇಪ ಮತ್ತು ಆರಂಭಿಕ ಪುನರ್ವಸತಿ ಸೇವೆಗಳು ಕೇಂದ್ರಿಕರಿಸುತ್ತವೆ ಎಂದು ಬುದ್ಧಿಮಾಂದ್ಯ ಮಕ್ಕಳ ಶಿಕ್ಷಣದ ಸಂಪನ್ಮೂಲ ವ್ಯಕ್ತಿ ದಾವಣಗೆರೆಯ ರಾಜು ಟಿ ಅಭಿಪ್ರಾಯಪಟ್ಟರು.ಪಟ್ಟಣದ ರುದ್ರೇಶ್ವರ ಮಠದಲ್ಲಿ ಸಿಕಂದರಾಬಾದ್ ನ ನಿಪೀಡ್ ಮತ್ತು ವಿಜಯಪುರದ ಆಶಾದೀಪ ಅಂಗವಿಕಲರ ಸರ್ವ ಅಭಿವೃದ್ಧಿ ಸೇವಾ ಸಂಸ್ಥೆಯ ಆಶ್ರಯದಲ್ಲಿ ನಿಡಗುಂದಿ ತಾಲ್ಲೂಕಿನ ಅಂಗನವಾಡಿ, ಆಶಾಕಾರ್ಯಕರ್ತರಿಗೆ ಬುದ್ಧಿಮಾಂದ್ಯ ಮಕ್ಕಳ ಶಿಕ್ಷಣದ ಅರಂಭಿಕ ಹಸ್ತಕ್ಷೇಪ ಮತ್ತು ಆರಂಭಿಕ ಪುನರ್ವಸತಿ ಸೇವೆಗಳ ಒಂದು ದಿನದ ತರಬೇತಿಯಲ್ಲಿ ಅವರು ಮಾತನಾಡಿದರು.ಮಗುವಿನ ಪಾಲಕರಿಗೂ ಮಗು ಆರೈಕೆ, ಅವರಲ್ಲಿ ನಾನಾ ವಿಧದ ಕೌಶಲ್ಯ ಅಭಿವೃದ್ಧಿಗೊಳಿಸುವ ಬಗೆಯನ್ನು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರೇ ಕಲಿಸಿಕೊಟ್ಟರೇ ಬುದ್ಧಿಮಾಂದ್ಯ ಮಗುವಿನ ಸಮರ್ಪಕ ಪಾಲನೆಯಾಗಲಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುಪರವೈಸರ್ ಎಸ್.ಎಂ. ಕಂದಗಲ್ಲ ಮಾತನಾಡಿದರು.ಗಿರೀಶ ಹೂಗಾರ ಅಧ್ಯಕ್ಷತೆ ವಹಿಸಿದ್ದರು.ಜಗದೀಶ ಮುಚ್ಚಂಡಿ, ಡಿ.ಎಚ್. ಅದ್ವಾನಿ, ಶಿವಾನಂದ ಹಣಮಶೆಟ್ಟಿ, ಶಿವಲೀಲಾ…

Read More

ಆಲಮಟ್ಟಿ: ನೀರು ತಲುಪದೆ ಇರುವ ಕೆರೆಗಳಿಗೆ ನೀರು ಭರ್ತಿ ಮಾಡಲು ಮತ್ತೊಮ್ಮೆ ಕಾಲುವೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿ ಶನಿವಾರ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಆಲಮಟ್ಟಿಯ ಮುಖ್ಯ ಎಂಜಿನಿಯರ್ ಅವರಿಗೆ ಮನವಿ ಸಲ್ಲಿಸಿದರು.ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ ಬೇಸಿಗೆ ಸಂದರ್ಭದಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲತೆ ಕಲ್ಪಿಸಲು ಕಳೆದ ತಿಂಗಳು 19 ರಂದು ಪ್ರಾದೇಶಿಕ ಆಯುಕ್ತರ ಅನುಮತಿ ಮೇರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿತ್ತು. ಜಿಲ್ಲೆಯಲ್ಲಿರುವ 99 ಕೆರೆಗಳ ಪೈಕಿ ಅರ್ಧಕ್ಕೂ ಹೆಚ್ಚು ಕೆರೆಗಳಲ್ಲಿ ಸಂಪೂರ್ಣ ನೀರು ಬಂದಿಲ್ಲ, ಹೂವಿನಹಿಪ್ಪರಗಿ ಸಂಕನಾಳ ಕೆರೆಗೆ ಒಂದು ತೊಟ್ಟು ನೀರು ಬಂದಿಲ್ಲ ಅಂದರಂತೆ ಬಸವನಬಾಗೇವಾಡಿ ಶಾಖಾ ಕಾಲುವೆಗೆ ನೀರು ಹರಿಸಿದ್ದರು ಕೂಡಾ ತೃಪ್ತಿಕರವಾಗಿ ನೀರು ಬಂದಿಲ್ಲ ಕೆಲವೊಂದು ಭಾಗದಲ್ಲಿ ಕಾಲುವೆ ಕೊನೆ ಅಂಚಿನವರೆಗೂ ನೀರು ತಲುಪೆ ಇಲ್ಲ ನೀರು ಹರಿಸಿದ್ದದೇವೆಂದು ನೀರಾವರಿ ಇಲಾಖೆಯವರಿಗೆ ಹೇಳಿಕೊಳ್ಳಲು ಮಾತ್ರವಾಗಿದೆ. ಆದರೆ ವಾಸ್ತವಾಗಿ ಇನ್ನೂ ಬಹುತೇಕ ಕೆರೆಗಳಿಗೆ ನೀರು…

Read More

ಚಡಚಣ: ಪಟ್ಟಣದ ಸಚಿನ ಅವಟಿ ಅವರನ್ನು ವಿಜಯಪುರ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಬಸವರಾಜ ಹೂಗಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕಲಕೇರಿ: ಸನಾತನ ಕಾಲದಿಂದಲೂ ಮಠಮಾನ್ಯಗಳಿಗೆ ತನ್ನದೇ ಆದ ವಿಶೇಷ ಘನತೆ ಗೌರವದ ಸ್ಥಾನವಿದ್ದು, ಮಠಗಳು ಸಮಾಜವನ್ನು ತಿದ್ದಿ ತೀಡಿ ಅವರನ್ನು ಧರ್ಮದ ಮಾರ್ಗದಲ್ಲಿ ನಡೆಯುವಂತೆ ಮಾಡುವ ಗುರುತರವಾದ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಬಂದಿದ್ದು, ಅವು ನಿರಂತರವಾಗಿ ಅನ್ನ, ಅರಿವು ಮತ್ತು ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವ ತಾಣಗಳಾಗಿವೆ ಎಂದು ಮಾಗಣಗೇರಿಯ ಡಾ. ವಿಶ್ವಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು.ಗ್ರಾಮದ ಗುರುಮರುಳಾರಾಧ್ಯರ ಹಿರೇಮಠದಲ್ಲಿ ಶುಕ್ರವಾರ ಸಂಜೆ ನಡೆದ ಲಿಂ.ಬಸವಲಿಂಗ ಮರುಳಸಿದ್ದ ಶಿವಾಚಾರ್ಯರ ಪುಣ್ಯಸ್ಮರಣೋತ್ಸವದ ನಿಮಿತ್ಯ ತಿಂಗಳ ಪರ್ಯಂತ ನಡೆಯಲಿರುವ ಮಹಾಶಿವಶರಣೆ ಸಜ್ಜಲಗುಡ್ಡದ ಶರಣಮ್ಮ ತಾಯಿಯ ಮಾಹಾಪುರಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕಲಕೇರಿಯ ಗುರುಮರುಳಾರಾಧ್ಯರ ಹಿರೇಮಠಕ್ಕೆ ಶತಶತಮಾನಗಳ ಇತಿಹಾಸವಿದ್ದು ಮಹಾದಾಸೋಹಿ ಕಲಬುರ್ಗಿಯ ಶರಣಬಸಪ್ಪನಿಗೆ, ಕಡಕೋಳದ ಮಡಿವಾಳಪ್ಪನಿಗೆ ದೀಕ್ಷೆ ಕೊಟ್ಟ ಕೀರ್ತಿ ಕಲಕೇರಿ ಹಿರೇಮಠದ ಗುರುಪರಂಪರೆಗೆ ಸಲ್ಲುತ್ತದೆ, ಪ್ರಸ್ತುತ ಶ್ರೀಮಠದ ಪೀಠಾಧಿಪತಿಗಳಾದ ಸಿದ್ದರಾಮ ಶಿವಾಚಾರ್ಯರು ಹತ್ತು ಹಲವು ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಭಕ್ತರು ತಮ್ಮ ಸಂಸಾರದ ಜಂಜಾಟದ ಮಧ್ಯ ಗುರುಗಳ ಮಾರ್ಗದರ್ಶನದಲ್ಲಿ ಪುರಾಣ ಪುಣ್ಯಕಥೆಗಳನ್ನು ಕೇಳುವುದರ…

Read More

ಚಡಚಣ: ಸಮೀಪದ ಹಾಳೊಳ್ಳಿ ಗ್ರಾಮದ ಮುರಾರ್ಜಿ ಪ್ರೌಢ ಶಾಲೆಯಲ್ಲಿ ಶನಿವಾರ    ನಡೆದ ರಾಷ್ಟ್ರೀಯ ಕಿಶೋರ ಸ್ವಾಸ್ಥ ಕಾರ್ಯಕ್ರಮ ನಡೆಯಿತು.ಈ ವೇಳೆ ಮಾತನಾಡಿದ ಚಡಚಣ ತಾಲೂಕಾ ಆಪ್ತ ಸಮಾಲೋಚಕ ಪ್ರಶಾಂತ ಸಾಳುಂಕೆ ಅವರು, ಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯ ಇದ್ದರೆ ಸಾಮಾಜಿಕವಾಗಿ ಮುಂದೆ ಬರಬಹುದು. ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರ ಸೇವನೆ ಜತೆಗೆ ವ್ಯಾಯಾಮ, ಯೋಗಾಭ್ಯಾಸ ಮಾಡುವದು ರೂಡಿಸಿಕೊಳ್ಳಬೇಕು ಎಂದರು.ಆಯುಷ್ಯಮಾನ ಕಾರ್ಡ್ ಹೊಂದಿದದವರು ಲಕ್ಷಾಂತರ ರೂ. ಉಚಿತ ವೈದ್ಯಕೀಯ ಸೇವೆಗಳನ್ನು ಪಡೆಯಬಹುದು ಎಂದ ಆರೋಗ್ಯ ಮಿತ್ರ ಸಂಜೀವ ರೋಗಿ ಅವರು, ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೆ ಮಾಹಿತಿಯನ್ನು ನೀಡಿದರು.ಪೌಷ್ಟಿಕ ಆಹಾರ ನಮಗೆ ಅತಿ ಮುಖ್ಯವಾಗಿದೆ ಆದ ಕಾರಣ ನಾವು ಪೌಷ್ಟಿಕ ಆಹಾರ ಸೇವಿಸಬೇಕು ಮತ್ತು ಆರೋಗ್ಯಯುತ ಜೀವನ ನಡೆಸಬೇಕಾದರೆ ತಂಬಾಕು ಮತ್ತು ದುಷ್ಟ ಚಟಗಳು ಮತ್ತು ಜಂಕ್ಸ ಪುಂಡ್‌ ಉತ್ಪನ್ನಗಳ ಸೇವನೆಯಿಂದ ದೂರ ಇರಬೇಕು ಎಂದು ಎನ್.ಸಿ.ಡಿ  ಆಪ್ತಸಮಾಲೋಚಕ ಕುಮಾರ ರಾಠೋಡ ಹೇಳಿದರು.ಹಿರಿಯ ಆರೋಗ್ಯ ನಿರಿಕ್ಷಣಾಧಿಕಾರಿ ಆರ್‌ ಬಿ ಲಾಲಸಂಗಿ ಮಾತನಾಡಿದರು.ಶಾಲೆಯ ಮುಖ್ಯ…

Read More

ಮುದ್ದೇಬಿಹಾಳ: ತಾಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ಇಲ್ಲಿನ ನ್ಯಾಯಾಲಯಗಳ ಸಂಕೀರ್ಣದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತನ್ನು ಏರ್ಪಡಿಸಲಾಗಿತ್ತು.ಎರಡು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಒಟ್ಟು ೬೫೫೬ ಬಾಕಿ ಇರುವ ಪ್ರಕರಣಗಳಲ್ಲಿ ೨೨೩೭ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ಈ ಪೈಕಿ ಒಟ್ಟು ೧೪೧೬ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು. ಇದರಲ್ಲಿ ಅಪರಾಧ ಪ್ರಕರಣಗಳು, ಎಂವಿಸಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೆಂಟೇನೆನ್ಸ್ ಪ್ರಕರಣಗಳು, ಪಾಲು ವಾಟ್ನಿ ದಾವೆಗಳು, ಎಲ್‌ಎಸಿ-ಇಪಿ ಪ್ರಕರಣಗಳು, ಎಮ್‌ವಿಸಿ-ಇಪಿ ಪ್ರಕರಣಗಳು, ಅಪರಾಧ ದಂಡ ಪ್ರಕರಣಗಳು ಸೇರಿದಂತೆ ಅಬಕಾರಿ ಇಲಾಖೆಯ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು. ಅಲ್ಲದೇ ಪೂರ್ವದಾವೆ ಪ್ರಕರಣಗಳಲ್ಲಿ, ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು ಹಾಗೂ ಬ್ಯಾಂಕಿನ ಪ್ರಕರಣಗಳು ಸೇರಿ ಒಟ್ಟು ೨೮೮೧ ಪ್ರಕರಣಗಳಲ್ಲಿ ೧೩೮೮ ಪ್ರಕರಣಗಳನ್ನು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷೆ ಲಕ್ಷ್ಮೀ ನಿಂಗಪ್ಪ ಗರಗ ಹಾಗೂ ಸದಸ್ಯ ಕಾರ್ಯದರ್ಶಿ ಸಂಪತಕುಮಾರ ಬಳೂಲಗಿಡದ ಇವರುಗಳು ರಾಜೀಸಂಧಾನದ ಮೂಲಕ ಇತ್ಯರ್ಥಪಡಿಸಿದರು.ನ್ಯಾಯಾಂಗ ಸಂಧಾನಕಾರರಾಗಿ ರೇಣುಕಾ ಪಾಟೀಲ…

Read More