ಆಲಮಟ್ಟಿ: ನೀರು ತಲುಪದೆ ಇರುವ ಕೆರೆಗಳಿಗೆ ನೀರು ಭರ್ತಿ ಮಾಡಲು ಮತ್ತೊಮ್ಮೆ ಕಾಲುವೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿ ಶನಿವಾರ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಆಲಮಟ್ಟಿಯ ಮುಖ್ಯ ಎಂಜಿನಿಯರ್ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ ಬೇಸಿಗೆ ಸಂದರ್ಭದಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲತೆ ಕಲ್ಪಿಸಲು ಕಳೆದ ತಿಂಗಳು 19 ರಂದು ಪ್ರಾದೇಶಿಕ ಆಯುಕ್ತರ ಅನುಮತಿ ಮೇರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿತ್ತು. ಜಿಲ್ಲೆಯಲ್ಲಿರುವ 99 ಕೆರೆಗಳ ಪೈಕಿ ಅರ್ಧಕ್ಕೂ ಹೆಚ್ಚು ಕೆರೆಗಳಲ್ಲಿ ಸಂಪೂರ್ಣ ನೀರು ಬಂದಿಲ್ಲ, ಹೂವಿನಹಿಪ್ಪರಗಿ ಸಂಕನಾಳ ಕೆರೆಗೆ ಒಂದು ತೊಟ್ಟು ನೀರು ಬಂದಿಲ್ಲ ಅಂದರಂತೆ ಬಸವನಬಾಗೇವಾಡಿ ಶಾಖಾ ಕಾಲುವೆಗೆ ನೀರು ಹರಿಸಿದ್ದರು ಕೂಡಾ ತೃಪ್ತಿಕರವಾಗಿ ನೀರು ಬಂದಿಲ್ಲ ಕೆಲವೊಂದು ಭಾಗದಲ್ಲಿ ಕಾಲುವೆ ಕೊನೆ ಅಂಚಿನವರೆಗೂ ನೀರು ತಲುಪೆ ಇಲ್ಲ ನೀರು ಹರಿಸಿದ್ದದೇವೆಂದು ನೀರಾವರಿ ಇಲಾಖೆಯವರಿಗೆ ಹೇಳಿಕೊಳ್ಳಲು ಮಾತ್ರವಾಗಿದೆ. ಆದರೆ ವಾಸ್ತವಾಗಿ ಇನ್ನೂ ಬಹುತೇಕ ಕೆರೆಗಳಿಗೆ ನೀರು ಬಂದಿಲ್ಲ ಮಲಘಾಣ ಪಶ್ಚಿಮ ಕಾಲುವೆ ಕೊನೆಯ ಅಂಚಿನವರೆಗೂ ನೀರು ಬಂದಿಲ್ಲ ಇದರಿಂದ ರೈತರಿಗೆ ನೀರು ಹರಿಸಿದರು ಪ್ರಯೋಜನೆ ಇಲ್ಲದಂತಾಗಿದೆ. ಕಾಲುವೆ ಮದ್ಯದಲ್ಲಿ ನೀರನ್ನು ಪೊಲ್ ಮಾಡಿದ್ದಾರೆ ಹೀಗಾಗಿ ನೀರು ಹರಿಸಿದರು ರೈತರಿಗೆ ಉಪಯೋಗವಿಲ್ಲದಂತಾಗಿದೆ. ಆದ್ದರಿಂದ ಮತ್ತೊಮ್ಮೆ ಕೆ.ಬಿ.ಜೆ.ಎನ್.ಎಲ್. ಅಧಿಕಾರಿಗಳು ಎಲ್ಲ ಕೆರೆಗಳನ್ನು ಸಮೀಕ್ಷೆ ಮಾಡಿ ಎರಡು ಮೂರು ದಿನಗಳಲ್ಲಿ ಮತ್ತೆ ಕಾಲುವೆಗೆ ನೀರು ಹರಿಸಲು ಪ್ರಾರಂಭಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿಠಲ ಬಿರಾದಾರ, ಮಲಿಗೆಪ್ಪ ಸಾಸನೂರ, ಲಾಲಸಾ ಹಳ್ಳೂರ, ಭೀರಪ್ಪ ಗೋಡೆಕರ, ಶೇಖಪ್ಪ ಜಮ್ಮಲದಿನ್ನಿ, ಸಾಹೇಬಗೌಡ ಪಾಟೀಲ, ಮುತ್ತು ಜಮ್ಮಲದಿನ್ನಿ ಬಾಬು ಹಡಪದ, ರಮೇಶ ಜಮ್ಮಲದಿನ್ನಿ, ಕೆಂಚಪ್ಪ ಮಾದರ ಲಾಳೆಸಾಬ ಕೆಳಗಿನಮನಿ, ಶಿವಶಂಕರ ಕಟಗೂರ, ಮಹಾಂತೇಶ ಜಮ್ಮಲದಿನ್ನಿ, ಯಲ್ಲಪ್ಪ ಮನ್ಯಾಳ ಇದ್ದರು.
ಮುಖ್ಯ ಎಂಜಿನಿಯರ್ ಪರವಾಗಿ ಡಿಸೈನ್ ಎಂಜಿನಿಯರ್ ಪ್ರಕಾಶ ಕಾತರಕಿ ಹಾಗೂ ವಿಜಯಕುಮಾರ ಕೂಗಲಿ ಮನವಿ ಸ್ವೀಕರಿಸಿದರು.
ಈಚೆಗೆ ಕಾಲುವೆಯ ಮೂಲಕ ಹರಿಸಿದ ನೀರಿನಿಂದ ಸಾಕಷ್ಟು ಕೆರೆಗಳು ಭರ್ತಿಯಾಗಿಲ್ಲ, ನೀರು ಹರಿಸಿ ಕೆರೆ ಭರ್ತಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಸದಸ್ಯರು ಶನಿವಾರ, ಆಲಮಟ್ಟಿಯ ಕೆಬಿಜೆಎನ್ ಎಲ್ ಡಿಸೈನ್ ಎಂಜಿನಿಯರ್ ಪ್ರಕಾಶ ಕಾತರಕಿ ಅವರಿಗೆ ಮನವಿ ಸಲ್ಲಿಸಿದರು
Subscribe to Updates
Get the latest creative news from FooBar about art, design and business.
Related Posts
Add A Comment

