ಚಡಚಣ: ಸಮೀಪದ ಹಾಳೊಳ್ಳಿ ಗ್ರಾಮದ ಮುರಾರ್ಜಿ ಪ್ರೌಢ ಶಾಲೆಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಕಿಶೋರ ಸ್ವಾಸ್ಥ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾತನಾಡಿದ ಚಡಚಣ ತಾಲೂಕಾ ಆಪ್ತ ಸಮಾಲೋಚಕ ಪ್ರಶಾಂತ ಸಾಳುಂಕೆ ಅವರು, ಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯ ಇದ್ದರೆ ಸಾಮಾಜಿಕವಾಗಿ ಮುಂದೆ ಬರಬಹುದು. ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರ ಸೇವನೆ ಜತೆಗೆ ವ್ಯಾಯಾಮ, ಯೋಗಾಭ್ಯಾಸ ಮಾಡುವದು ರೂಡಿಸಿಕೊಳ್ಳಬೇಕು ಎಂದರು.
ಆಯುಷ್ಯಮಾನ ಕಾರ್ಡ್ ಹೊಂದಿದದವರು ಲಕ್ಷಾಂತರ ರೂ. ಉಚಿತ ವೈದ್ಯಕೀಯ ಸೇವೆಗಳನ್ನು ಪಡೆಯಬಹುದು ಎಂದ ಆರೋಗ್ಯ ಮಿತ್ರ ಸಂಜೀವ ರೋಗಿ ಅವರು, ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೆ ಮಾಹಿತಿಯನ್ನು ನೀಡಿದರು.
ಪೌಷ್ಟಿಕ ಆಹಾರ ನಮಗೆ ಅತಿ ಮುಖ್ಯವಾಗಿದೆ ಆದ ಕಾರಣ ನಾವು ಪೌಷ್ಟಿಕ ಆಹಾರ ಸೇವಿಸಬೇಕು ಮತ್ತು ಆರೋಗ್ಯಯುತ ಜೀವನ ನಡೆಸಬೇಕಾದರೆ ತಂಬಾಕು ಮತ್ತು ದುಷ್ಟ ಚಟಗಳು ಮತ್ತು ಜಂಕ್ಸ ಪುಂಡ್ ಉತ್ಪನ್ನಗಳ ಸೇವನೆಯಿಂದ ದೂರ ಇರಬೇಕು ಎಂದು ಎನ್.ಸಿ.ಡಿ ಆಪ್ತಸಮಾಲೋಚಕ ಕುಮಾರ ರಾಠೋಡ ಹೇಳಿದರು.
ಹಿರಿಯ ಆರೋಗ್ಯ ನಿರಿಕ್ಷಣಾಧಿಕಾರಿ ಆರ್ ಬಿ ಲಾಲಸಂಗಿ ಮಾತನಾಡಿದರು.
ಶಾಲೆಯ ಮುಖ್ಯ ಗುರು ಹೆಬ್ಬಾಲಕರ್ ಮತ್ತು ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

