ಮುದ್ದೇಬಿಹಾಳ: ತಾಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ಇಲ್ಲಿನ ನ್ಯಾಯಾಲಯಗಳ ಸಂಕೀರ್ಣದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತನ್ನು ಏರ್ಪಡಿಸಲಾಗಿತ್ತು.
ಎರಡು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಒಟ್ಟು ೬೫೫೬ ಬಾಕಿ ಇರುವ ಪ್ರಕರಣಗಳಲ್ಲಿ ೨೨೩೭ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ಈ ಪೈಕಿ ಒಟ್ಟು ೧೪೧೬ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು. ಇದರಲ್ಲಿ ಅಪರಾಧ ಪ್ರಕರಣಗಳು, ಎಂವಿಸಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೆಂಟೇನೆನ್ಸ್ ಪ್ರಕರಣಗಳು, ಪಾಲು ವಾಟ್ನಿ ದಾವೆಗಳು, ಎಲ್‌ಎಸಿ-ಇಪಿ ಪ್ರಕರಣಗಳು, ಎಮ್‌ವಿಸಿ-ಇಪಿ ಪ್ರಕರಣಗಳು, ಅಪರಾಧ ದಂಡ ಪ್ರಕರಣಗಳು ಸೇರಿದಂತೆ ಅಬಕಾರಿ ಇಲಾಖೆಯ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು. ಅಲ್ಲದೇ ಪೂರ್ವದಾವೆ ಪ್ರಕರಣಗಳಲ್ಲಿ, ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು ಹಾಗೂ ಬ್ಯಾಂಕಿನ ಪ್ರಕರಣಗಳು ಸೇರಿ ಒಟ್ಟು ೨೮೮೧ ಪ್ರಕರಣಗಳಲ್ಲಿ ೧೩೮೮ ಪ್ರಕರಣಗಳನ್ನು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷೆ ಲಕ್ಷ್ಮೀ ನಿಂಗಪ್ಪ ಗರಗ ಹಾಗೂ ಸದಸ್ಯ ಕಾರ್ಯದರ್ಶಿ ಸಂಪತಕುಮಾರ ಬಳೂಲಗಿಡದ ಇವರುಗಳು ರಾಜೀಸಂಧಾನದ ಮೂಲಕ ಇತ್ಯರ್ಥಪಡಿಸಿದರು.
ನ್ಯಾಯಾಂಗ ಸಂಧಾನಕಾರರಾಗಿ ರೇಣುಕಾ ಪಾಟೀಲ ಹಾಗೂ ಶೋಭಾ ಪಾಟೀಲ, ಸರಕಾರಿ ವಕೀಲರಾದ ಬಸವರಾಜ ಆಹೇರಿ, ಅಪರ ಸರ್ಕಾರಿ ವಕೀಲ ಎಚ್.ಎಲ್.ಸರೂರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ತಾಲೂಕಾ ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ, ಶಿರಿಸ್ತೇದಾರರಾದ ಎಸ್.ಎಸ್.ಚಕ್ರಮನಿ ಮತ್ತು ಸುರೇಶ ಬಳಗಾನೂರ, ನ್ಯಾಯಾಲಯದ ಸಿಬ್ಬಂದಿಗಳಾದ ಎಮ್.ಎಫ್.ಜೇವರಗಿ, ಎ.ಆರ್.ಮುಜಾವರ, ಪ್ರಸನ್ನ, ನರ್ಮದಾ ಮರೋಳ, ಅಮಿದಾ ನದಾಫ್, ಎಮ್.ಎಸ್.ಸಾಲಿಮಠ, ಪಿ.ಎಲ್.ಗಾಯಕವಾಡ, ಕಾವೇರಿ ರಾಠೋಡ, ಮಹಾಂತೇಶ್ ಹಚರೆಡ್ಡಿ, ರಾಜೇಶ್ವರಿ, ಮಧು ಧರ್ಮಗಿರಿ, ಎಸ್.ಎಸ್.ಹರನಾಳ, ಮೀನಾಕ್ಷಿ ದೊಡಮನಿ, ಗೀತಾ ರಾಂಪುರ, ಚೆನ್ನಮ್ಮ ಬಾಗೇವಾಡಿ, ಮಂಜುಳಾ ಕಟ್ಟಿಮನಿ, ನೀಲಮ್ಮ ಬಡಿಗೇರ. ಶ್ರುತಿ ಜಾಯಿ, ನಾಗೇಶ ಮಾದಿಹಳ್ಳಿ, ಸುಷ್ಮಾ ಬಾನಿ ಹಾಗೂ ನ್ಯಾಯವಾದಿಗಳಾದ ಸಿ.ಆರ್.ಜೋಶಿ, ಜೆ.ಎ.ಚಿನಿವಾರ, ಎಸ್.ಆರ್.ಸಜ್ಜನ, ಏನ್.ಜಿ. ಕುಲಕರ್ಣಿ, ಏನ್.ಆರ್.ಮೋಕಾಶಿ, ಎಮ್.ಆರ್.ಪಾಟೀಲ, ಎಮ್.ಎಚ್.ಕ್ವಾರಿ, ಚೇತನ ಶಿವಶಿಂಪಿ, ಎಸ್.ಆರ್.ಜೋಗಿ, ಎಸ್.ಎಂ.ಕಿಣಗಿ, ಪಿ.ಎನ್.ಬಿರಾದಾರ, ಎಲ್.ಎಸ್.ಮೇಟಿ, ಬಿ.ಎಮ್.ಮುಂದಿನಮನಿ, ಆಯ್.ಎಸ್.ಹಗಟಗಿ. ಎಮ್.ಎ.ಲಿಂಗಸೂರ, ಎಲ್.ಆರ್.ನಾಲತವಾಡ, ಏನ್.ಬಿ.ಮುದ್ನಾಳ, ಎಸ್.ಎಚ್.ಚಳ್ಳಗಿ, ಎಸ್.ಆರ್.ಅಮರಣ್ಣವರ, ಎಚ್.ಟಿ.ಪೂಜಾರಿ, ಬಸವರಾಜ ಚಿನಿವಾರ, ಪಿ.ಎ.ಹಿರೇಮಠ, ಎಂ.ಆರ್.ಪಾಟೀಲ, ಎಸ್.ಸಿ.ಹಿರೇಮಠ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

