ನಿಡಗುಂದಿ: ಬುದ್ಧಿಮಾಂದ್ಯ ಮಕ್ಕಳಿಗೆ ಅವರ ಚಿಕ್ಕ ವಯಸ್ಸಿನಲ್ಲಿಯೇ ತರಬೇತಿ ಮತ್ತು ಶಿಕ್ಷಣ ನೀಡಬೇಕು, ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಆರಂಭಿಕ ಹಸ್ತಕ್ಷೇಪ ಮತ್ತು ಆರಂಭಿಕ ಪುನರ್ವಸತಿ ಸೇವೆಗಳು ಕೇಂದ್ರಿಕರಿಸುತ್ತವೆ ಎಂದು ಬುದ್ಧಿಮಾಂದ್ಯ ಮಕ್ಕಳ ಶಿಕ್ಷಣದ ಸಂಪನ್ಮೂಲ ವ್ಯಕ್ತಿ ದಾವಣಗೆರೆಯ ರಾಜು ಟಿ ಅಭಿಪ್ರಾಯಪಟ್ಟರು.
ಪಟ್ಟಣದ ರುದ್ರೇಶ್ವರ ಮಠದಲ್ಲಿ ಸಿಕಂದರಾಬಾದ್ ನ ನಿಪೀಡ್ ಮತ್ತು ವಿಜಯಪುರದ ಆಶಾದೀಪ ಅಂಗವಿಕಲರ ಸರ್ವ ಅಭಿವೃದ್ಧಿ ಸೇವಾ ಸಂಸ್ಥೆಯ ಆಶ್ರಯದಲ್ಲಿ ನಿಡಗುಂದಿ ತಾಲ್ಲೂಕಿನ ಅಂಗನವಾಡಿ, ಆಶಾಕಾರ್ಯಕರ್ತರಿಗೆ ಬುದ್ಧಿಮಾಂದ್ಯ ಮಕ್ಕಳ ಶಿಕ್ಷಣದ ಅರಂಭಿಕ ಹಸ್ತಕ್ಷೇಪ ಮತ್ತು ಆರಂಭಿಕ ಪುನರ್ವಸತಿ ಸೇವೆಗಳ ಒಂದು ದಿನದ ತರಬೇತಿಯಲ್ಲಿ ಅವರು ಮಾತನಾಡಿದರು.
ಮಗುವಿನ ಪಾಲಕರಿಗೂ ಮಗು ಆರೈಕೆ, ಅವರಲ್ಲಿ ನಾನಾ ವಿಧದ ಕೌಶಲ್ಯ ಅಭಿವೃದ್ಧಿಗೊಳಿಸುವ ಬಗೆಯನ್ನು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರೇ ಕಲಿಸಿಕೊಟ್ಟರೇ ಬುದ್ಧಿಮಾಂದ್ಯ ಮಗುವಿನ ಸಮರ್ಪಕ ಪಾಲನೆಯಾಗಲಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುಪರವೈಸರ್ ಎಸ್.ಎಂ. ಕಂದಗಲ್ಲ ಮಾತನಾಡಿದರು.
ಗಿರೀಶ ಹೂಗಾರ ಅಧ್ಯಕ್ಷತೆ ವಹಿಸಿದ್ದರು.
ಜಗದೀಶ ಮುಚ್ಚಂಡಿ, ಡಿ.ಎಚ್. ಅದ್ವಾನಿ, ಶಿವಾನಂದ ಹಣಮಶೆಟ್ಟಿ, ಶಿವಲೀಲಾ ಬಿರಾದಾರ, ಜಾನಕಿ ಚವ್ಹಾಣ, ಬಾಳಪ್ಪ ಗಾಯಕವಾಡ, ಅಮೀನಪ್ಪ ಹೊಸಮನಿ, ಸಂಗೀತಾ ಹೊಸಮನಿ, ಮಲ್ಲಿಕಾರ್ಜುನ ಬಿರಾದಾರ ಮತ್ತೀತರರು ಇದ್ದರು.
150 ಕ್ಕೂ ಅಧಿಕ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
Subscribe to Updates
Get the latest creative news from FooBar about art, design and business.
ಬುದ್ಧಿಮಾಂದ್ಯ ಮಕ್ಕಳ ಕೌಶಲ್ಯಾಭಿವೃದ್ಧಿಗೆ ಒತ್ತು ಅಗತ್ಯ :ರಾಜು
Related Posts
Add A Comment

