Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕೊಲ್ಹಾರ: ಸಾಮಾಜಿಕ ಕ್ಷೇತ್ರದ ನನ್ನ ರಾಜಕೀಯ ೪೫ ವರ್ಷಗಳ ಜೀವನದಲ್ಲಿ ಭಾವನಾತ್ಮಕವಾಗಿ ಸಂಬಂಧಗಳನ್ನು ಮನುಷ್ಯ ಮನುಷ್ಯರ ನಡುವೆ ಬೆಸೆಯುವ ಮೂಲಕ ರಾಜಕಾರಣ ಮಾಡುತ್ತಾ ಬಂದಿದ್ದು ಒಂದು ಸಣ್ಣ ಜೀವಿಗೂ ಕೂಡ ನಾನು ಹಿಂಸೆ ಮಾಡದೇ ಅಹಿಂಸಾ ತತ್ವದ ಅಡಿ ನಡೆದುಕೊಂಡು ಬರುತ್ತಿದ್ದೇನೆ ಎಂದು ವಿಜಯಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿದರು.ಪಟ್ಟಣದ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರ ತೋಟದ ಮನೆಯ ಆವರಣದಲ್ಲಿ ಸೋಮವಾರ ಸಾಯಂಕಾಲ ನಡೆದ ಭಾರತೀಯ ಜನತಾಪಕ್ಷದ ಬಸವನ ಬಾಗೇವಾಡಿ ಮಂಡಲ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಚುನಾವಣಾ ಪ್ರಚಾರ ಸಭೆಯ ಮೊದಲ ಭಾಷಣವನ್ನು ಕೊಲ್ಹಾರದಲ್ಲಿಯೇ ಪ್ರಾರಂಭಿಸಿ ಮಾತನಾಡಿದರು.ಹುಬ್ಬಳ್ಳಿ ಹುಮನಾಬಾದ ರಾಷ್ಟ್ರೀಯ ಹೆದ್ದಾರಿ ೨೧೮ ದ್ವೀಪಥವಿದ್ದ ರಸ್ತೆ ಚತುಷ್ಪಥ ಹೆದ್ದಾರಿಯಾಗಿ ಮಂಜೂರಾಗಿದೆ ಎಂದರು.ಈಗ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಅತ್ಯಂತ ಪಾಪಿಷ್ಟ ಸರಕಾರವಾಗಿದೆ ಕಾರಣ ಅಧಿಕಾರಕ್ಕೆ ಬಂದು ೧೦ ತಿಂಗಳು ಗತಿಸುತ್ತಾ ಬಂದರೂ ರಾಜ್ಯದ ಯಾವುದೇ ಒಂದು ಪ್ರದೇಶದಲ್ಲಿ ಒಂದು ಹನಿಕೂಡ ಮಳೆರಾಯನ ಕೃಪೆಯಾಗದೇ ಬರಗಾಲದ ಬವಣೆಯನ್ನು ಎದುರಿಸುತ್ತಿರುವುದು…
“ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ”- ವಿವೇಕಾನಂದ. ಎಚ್.ಕೆ, ಬೆಂಗಳೂರು ದೇಶದ ಚುನಾವಣೆ ಘೋಷಣೆಯಾಗಿದೆ. ಚುನಾವಣಾ ಆಯೋಗ ಅನೇಕ ನೀತಿ ನಿಯಮಗಳನ್ನು ಜಾರಿ ಮಾಡಿದೆ. ಅವುಗಳಲ್ಲಿ ಸೋಷಿಯಲ್ ಮೀಡಿಯಾಗಳ ಮೇಲಿನ ಕೆಲವು ನಿಯಂತ್ರಣಗಳು ಸೇರಿವೆ.. ಮೂಲಭೂತವಾಗಿ ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯ ಗಣರಾಜ್ಯ. ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲಿನ ಹಕ್ಕು.. ಕೇವಲ ಚುನಾವಣಾ ಸಮಯದಲ್ಲಿ ಮಾತ್ರವಲ್ಲ ಎಲ್ಲಾ ಕಾಲದಲ್ಲೂ, ಎಲ್ಲಾ ಸಂದರ್ಭದಲ್ಲಿಯೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇನ್ನೊಬ್ಬರ ವೈಯಕ್ತಿಕ ನಿಂದನೆ, ಜಾತಿ ಧರ್ಮ ಭಾಷೆಗಳ ಅವಹೇಳನ, ಕೆಟ್ಟ ಪದಗಳ ಪ್ರಯೋಗ, ಅನೈತಿಕ ಚಟುವಟಿಕೆ, ಕಾನೂನು ಬಾಹಿರ ವ್ಯವಹಾರಗಳನ್ನು ನಿರ್ಬಂಧಿಸಲಾಗಿದೆ. ಇದೇನು ಹೊಸ ನಿಯಮವಲ್ಲ.. ಚುನಾವಣಾ ಸಂದರ್ಭದಲ್ಲಿ ವಿಶೇಷವಾಗಿ ಕೆಲವು ಸೂಚನೆ ಕೊಡಲಾಗಿದೆ. ಅದರಲ್ಲಿ ಮುಖ್ಯವಾಗಿ.. ಸಾಮಾಜಿಕ ಜಾಲತಾಣಗಳಲ್ಲಿ ಅಭ್ಯರ್ಥಿ ಅಥವಾ ಪಕ್ಷದ ಪರ ಪ್ರಚಾರ ಮಾಡಬಾರದು. ಇದು ಸಂಪೂರ್ಣ ನಿಷೇಧವಲ್ಲ. ಪ್ರಚಾರ ಮಾಡಬೇಕಾದರೆ ಅನುಮತಿ ಪಡೆದಿರಬೇಕು. ಏಕೆಂದರೆ ಚುನಾವಣಾ ಖರ್ಚು ವೆಚ್ಚದ ಮೇಲೆ ಮಿತಿ ಇರುವುದರಿಂದ ಇಲ್ಲಿಯ ಪ್ರಚಾರದ ಲೆಕ್ಕ ಸಿಗುವುದಿಲ್ಲ ಎಂದು ಒಂದು ಆಲೋಚನೆ…
“ವೀಣಾಂತರಂಗ”ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ಅದೊಂದು ಮದುವೆ ಸಮಾರಂಭ. ವಧು ವರರಿಬ್ಬರೂ ಈ ಕಾರ್ಯಕ್ರಮಕ್ಕೆ ಆ ಲೇಖಕಿಯನ್ನು ವಿಶೇಷವಾಗಿ ಪತ್ರ ಮುಖೇನ ಆಹ್ವಾನ ನೀಡಿ ಬರಲೇಬೇಕೆಂದು ಒತ್ತಾಯಿಸಿದ್ದರು. ತಾನು ಮದುವೆಯಾಗಲಿರುವ ವಧು ತೊನ್ನು ರೋಗಕ್ಕೆ ಗುರಿಯಾಗಿದ್ದು ಮುಂದಿನ ಭವಿಷ್ಯ ಹೇಗೆ ಎಂದು ಕಳವಳಗೊಂಡ ವರ ಮದುವೆಯನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಬಂದು, ಕೊನೆಗೆ ಆ ಲೇಖಕಿಯ ‘ಮಹಾಶ್ವೇತೆ’ ಕಾದಂಬರಿಯನ್ನು ಓದಿ ಮನಃಪರಿವರ್ತನೆಗೊಂಡು, ನಿಶ್ಚಿತ ವಧುವನ್ನು ವಿನಾಕಾರಣ ನೋಯಿಸಿದುದಕ್ಕೆ ಕ್ಷಮೆ ಕೇಳಿ ಮದುವೆಯ ಮೂಲಕ ಮತ್ತೆ ಒಂದಾದ. ವಧು ವರರು ಈ ಮದುವೆಗೆ ಕಾರಣವೇ ತಾವು ಎಂದು ಆ ಲೇಖಕಿಗೆ ಹೇಳಿ ಆಕೆಯ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದಿದ್ದರು. ಅಷ್ಟು ಶಕ್ತಿ ಆಕೆಯ ಬರವಣಿಗೆಗೆ ಇದೆ. ರಾಜ್ಯದ ಗಡಿ ಭಾಗದಲ್ಲಿ ಒಂದು ಅಪ್ಯಾಯಮಾನವಾದ ಸಮಾರಂಭ. ದೇವದಾಸಿಯರಾಗಿದ್ದ ಸಾವಿರಾರು ಮಹಿಳೆಯರ ಪುನರ್ವಸತಿಯ ನಂತರದ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನ ದೇವದಾಸಿಯರು ತಮ್ಮ ಪ್ರೀತಿಯ ದ್ಯೋತಕವಾಗಿ ಸೀರೆಯಿಂದ ತಯಾರು ಮಾಡಿದ ಕೌದಿಯನ್ನು (ಉತ್ತರ ಕರ್ನಾಟಕ…
Udayarashmi kannada daily newspaper
ಬಿಸಿಲಿನ ತಾಪದಲ್ಲೂ ಪತ್ರಾಸ್ ಶೆಡ್ಡಿನಲ್ಲಿ ಕಾರ್ಯ | ಕೂಡಗಿ ಪೋಲೀಸರಿಗೆ ನರಕಯಾತನೆ | ದೂರುದಾರರಿಗೆ ಹೊರಗಡೆಯೇ ನಿಲ್ಲಿಸಿ ವಿಚಾರಣೆ ಕೊಲ್ಹಾರ: ಬೇಸಿಗೆಯ ಕಾಲದಲ್ಲಿ ಬಿಸಿಲಿನ ತಾಪದ ಝಳ ಮಳೆಗಾಲ ಬಂತೆಂದರೆ ಮಳೆರಾಯನ ಆಗಮನದ ಜೋರಾದ ಸಪ್ಪಳ ಚಳಿಗಾಲದಲ್ಲಿ ಬೆಚ್ಚಗಿನ ನಡುವೆಯೂ ಚಳಿ ಚಳಿ ತಾಳಿಕೊಂಡು ಸೇವೆಯನ್ನು ಸಲ್ಲಿಸುವ ಅನಿವಾರ್ಯ ಪರಿಸ್ಥಿತಿಯ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರಕ್ಷಕರ ಹಲವಾರು ವರ್ಷಗಳ ದುಸ್ಥಿತಿಯ ಚಿತ್ರಣ.ಇಂತಹ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಪೋಲೀಸ್ ಠಾಣೆಯ (ಆರಕ್ಷಕ) ಠಾಣಾಧಿಕಾರಿಗಳು ಸೇರಿದಂತೆ ಸಿಬ್ಬಂದಿ ವರ್ಗದವರು ಅನುಭವಿಸುತ್ತಿರುವ ನರಕಯಾತನೆ ಹೇಳತೀರದು. ಸಾರ್ವಜನಿಕರಿಗೆ ಗಣ್ಯರಿಗೆ ರಕ್ಷಣೆ ಕೊಡುವ ಆರಕ್ಷಕ ಇಲಾಖೆಯ ಸಿಬ್ಬಂದಿ ವರ್ಗದವರಿಗೆ ಸುಸಜ್ಜಿತವಾದ ಸ್ವಂತ ಇಲಾಖಾ ಕಟ್ಟಡವಿಲ್ಲದೇ ಕಾರ್ಯನಿರ್ವಹಿಸುವಂತಹ ಸರಕಾರಿ ಸೇವೆ ಸಲ್ಲಿಸುತ್ತಿರುವ ಅವರಿಗೆ ಕಟ್ಟಡ ಭಾಗ್ಯ ದೊರಕುವದು ಯಾವಾಗ ಎನ್ನುವಂತಾಗಿದೆ.ಸುಮಾರು ೧೫ ವರ್ಷಗಳ ಹಿಂದೆ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ಘಟಕ ಉದ್ಘಾಟನೆ ಮಾಡಬಾರದು ಎನ್ನುವ ರೈತ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಅವಾಂತರವನ್ನು ಗಮನಿಸಿದ…
ಬಸವನಬಾಗೇವಾಡಿ: ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿರುವ ನಾಲ್ಕು ನ್ಯಾಯಾಲಯಗಳಲ್ಲಿ ವಿವಿಧ ನ್ಯಾಯಾಧೀಶರ ಸಮ್ಮುಖದಲ್ಲಿ ಶನಿವಾರ ಜರುಗಿದ ರಾಷ್ಟ್ರೀಯ ಲೋಕಅದಲಾತ್ನಲ್ಲಿ ೨,೬೮೦ ಪ್ರಕರಣಗಳಲ್ಲಿ ೧,೩೪೫ ಪ್ರಕರಣಗಳು ಇತ್ಯರ್ಥವಾದವು.ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಅಪರಾಧ ಪ್ರಕರಣಗಳು, ಚೆಕ್ ಬೌನ್ಸ್, ವಾಟ್ನಿ ದಾವೆ, ಬ್ಯಾಂಕ್ ಪ್ರಕರಣಗಳು ಸೇರಿದಂತೆ ವಿವಿಧ ಪ್ರಕರಣಗಳನ್ನು ಹಿರಿಯ ಸಿವ್ಹಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೋಡೆ, ಹೆಚ್ಚುವರಿ ಹಿರಿಯ ಸಿವ್ಹಿಲ್ ನ್ಯಾಯಾಧೀಶೆ ತಯ್ಯಾಬಾ ಸುಲ್ತಾನ, ಸಿವ್ಹಿಲ್ ನ್ಯಾಯಾಧೀಶೆ ತೇಜಶ್ವಿನಿ ಸೊಗಲದ, ಹೆಚ್ಚುವರಿ ಸಿವ್ಹಿಲ್ ನ್ಯಾಯಾಧೀಶೆ ಸೌಮ್ಯ ಹೂಲಿ ಅವರು ಕೈಗೆತ್ತಿಗೊಂಡು ರಾಜೀ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿದರು.ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ, ವಕೀಲರಾದ ಬಿ.ಕೆ.ಕಲ್ಲೂರ, ವ್ಹಿ.ಜಿ.ಕುಲಕರ್ಣಿ, ವ್ಹಿ.ಬಿ.ಮರ್ತುರ, ಗೋಪಾಲ ಚಿಂಚೋಳಿ, ಎಂ.ಎಸ್.ಗೊಳಸಂಗಿ, ಬಿ.ಪಿ.ಪತ್ತಾರ, ಜಿ.ಜಿ.ಬಿಸನಾಳ, ರಾಜು ಅಡ್ಡೋಡಗಿ ಸೇರಿದಂತೆ ವಿವಿಧ ವಕೀಲರು ಭಾಗವಹಿಸಿದ್ದರು.
ಇಂಡಿ: ವಿಜಯಪುರ ಮತಕ್ಷೇತ್ರಕ್ಕೆ ಕಳೆದ ೧೦ ವರ್ಷಗಳಲ್ಲಿ ಒಂದು ಲಕ್ಷ ಕೋಟಿ ರೂ ಅನುದಾನ ತಂದು ವಿವಿಧ ರೀತಿಯ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಇಂಡಿ ವಿಧಾನಸಭಾ ಮತಕ್ಷೇತ್ರದ ಲೋಕ ಸಭಾ ಚುನಾವಣೆಯ ಚುನಾವಣೆ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡುತ್ತಿದ್ದರು.ಅಕ್ಕಲಕೋಟ — ವಿಜಯಪುರ ೧೦೦ ಕಿಮಿ ೧೦೦೦ ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾರ್ಯ, ಚತುಷ್ಟ ರಸ್ತೆಗಳು, ರೇಲ್ವೆ ಬ್ರಾಡಗೇಜ ಅಗಲೀಕರಣ, ರೇಲ್ವೆ ಸ್ಟೇಷನ್ ನವೀಕರಣ, ರೇಲ್ವೆ ಓಡಾಟಕ್ಕೆ ವಿದ್ಯುತ್ ಸಂಪರ್ಕ, ವಿಮಾನ ನಿಲ್ದಾಣ, ಕೂಡಗಿ ಥರ್ಮಲ್ ಪವರ್ ಸೇರಿದಂತೆ ಅನೇಕ ಕಾರ್ಯ ಮಾಡಿರುವುದಾಗಿ ತಿಳಿಸಿದರು.ಇಂಡಿಯ ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿಗೆ ರೂ ೩೦೦೦ ಕೋಟಿ ಅನುದಾನ, ಗುರುತ್ವಾಕರ್ಷಣೆ ಮೇಲೆ ಕೆರೆಗಳನ್ನು ತುಂಬಿಸುವದು ಸೇರಿದಂತೆ ಜಲಜೀವನ ಮಿಷನ ನಿಂದ ಪ್ರತಿ ಗ್ರಾಮದವರಿಗೂ ಕುಡಿಯುವ ನೀರು ದೊರೆಯುವಂತೆ ಮಾಡಿದ್ದೇನೆ ಎಂದರು.ತಾನು ಭಾವನಾತ್ಮಕ ಸಂಬಂಧವಿಟ್ಟುಕೊಂಡು ರಾಜಕೀಯ ಮಾಡಿದ್ದೇನೆ. ಸೇಡಿನ ಜಾತಿಯ ರಾಜಕಾರಣ ಎಂದು…
ಮುದ್ದೇಬಿಹಾಳ: ವಿಜಯಪುರ ಜಿಲ್ಲಾ ಕಾಂಗ್ರೇಸ್ ಸಮಿತಿಯ ಕಾರ್ಯದರ್ಶಿಯನ್ನಾಗಿ ತಾಲೂಕಿನ ಗೋನಾಳ ಗ್ರಾಮದ ತಿಪ್ಪಣ್ಣ ದೊಡಮನಿ ಇವರನ್ನು ಆಯ್ಕೆ ಮಾಡಿ ಜಿಲ್ಲಾಧ್ಯಕ್ಷ ಹೆಚ್.ಆರ್.ಆಲಗೂರ (ರಾಜು) ಆದೇಶಿಸಿದ್ದಾರೆ.
ಮುದ್ದೇಬಿಹಾಳ: ಕರ್ನಾಟಕದಲ್ಲಿಯೇ ಅತೀ ಹಿಂದುಳಿದ ತಾಲೂಕುಗಳಲ್ಲಿ ಮುದ್ದೇಬಿಹಾಳ ಕೂಡ ಒಂದು ಎಂದು ಕರೆಸಿಕೊಳ್ಳುತ್ತಿದೆ. ಆಲಮಟ್ಟಿ ನಾರಾಯಣಪುರ ಅಣೆಕಟ್ಟು ಇದ್ದರೂ ನೀರಾವರಿ ಸಂಪೂರ್ಣ ಆಗಿಲ್ಲ, ಉದ್ಯಮಗಳು ಸ್ಥಾಪನೆಯಾಗಿಲ್ಲ. ಕಾರಣ ಚುನಾವಣೆಗಳಲ್ಲಿ ಮತದಾರರು ಜಾಗೃತಿಯಾಗುವ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಬೇಕು ಎಂದು ನ್ಯಾಯವಾದಿ ಎನ್.ಬಿ.ಮುದ್ನಾಳ ಹೇಳಿದರು.ಪಟ್ಟಣದ ಫಕೀರೇಶ್ವರ ಡೈಗ್ನೋಸ್ಟಿಕ್ ಸೆಂಟರ್ ನಲ್ಲಿ ವಿವಿಧ ಸಂಘಟನೆಗಳ ಅಡಿ ನೂತನ ತಾಲೂಕು ಮತದಾರ ಜಾಗೃತಿ ವೇದಿಕೆಯ ನಿರ್ಮಾಣ ಕುರಿತು ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಸಂವಿಧಾನದ ಅನುಚ್ಛೇದ ೩೭೧ಜೆ ಅಡಿಯಲ್ಲಿ ವಿಜಯಪುರ ಜಿಲ್ಲೆಯ ಅಭಿವೃದ್ಧಿಯನ್ನು ಮಾಡುವುದು, ಆಲಮಟ್ಟಿ ಯಾದಗಿರಿ ರೈಲು ಮಾರ್ಗ ನಿರ್ಮಾಣ, ಜಿಲ್ಲೆಯಿಂದ ೮೦ ಕಿ.ಮೀ ದೂರವಿರುವ ತಾಲೂಕು ಕೇಂದ್ರವನ್ನು ಜಿಲ್ಲಾ ಕೇಂದ್ರವನ್ನಾಗಿಸುವುದು ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಲಾಭವನ್ನು ಪಡೆದುಕೊಳ್ಳುವಂತಾಗಲು ಬರುವ ಲೋಕಸಭೆಯ ಸ್ಪರ್ಧಾಳುಗಳಿಗೆ ನಮ್ಮ ಬೇಡಿಕೆಗಳನ್ನು ಮುಂದಿಟ್ಟು ಯೋಜಿತವಾಗಿ ಕೆಲಸ ಮಾಡಲು ಸಾಧ್ಯವಾಗುವಂತೆ ಮತದಾರರನ್ನು ಜಾಗೃತಿಗೊಳಿಸುವ ಉದ್ದೇಶದಿಂದ ಹೋರಾಟ ವೇದಿಕೆಯನ್ನು ರಚಿಸಲಾಗುತ್ತಿದೆ ಎಂದರು.ಸಭೆಯಲ್ಲಿ ವಿರುಪಾಕ್ಷಿ ಪತ್ತಾರ, ಮುಸ್ತಾಕ ಬಾಗವಾನ, ಶಂಕರಗೌಡ ರಾಯಗೊಂಡ ಎಲ್.ಎಸ್.ಮೇಟಿ…
ನಿಡಗುಂದಿ: ಶಿವನನ್ನು ಜಪತಪದೊಂದಿಗೆ ನಿರಂತರ ಆರಾಧಿಸಿ ಆ ಪರಮಾತ್ಮನ ಸ್ಮೃತಿಯಲ್ಲಿಯೇ ನಿತ್ಯ ನಮ್ಮ ಕರ್ಮ ಕಾಯಕಗಳನ್ನು ನಡೆಸಿಕೊಂಡು ಬಂದರೆ ಬದುಕು ಹಸನಾಗುವುದು ಎಂದು ನಿಡಗುಂದಿ ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರಿ ವಿದ್ಯಾಲಯದ ಸಂಚಾಲಕಿ, ರಾಜಯೋಗಿನಿ ರೇಣುಕಾ ಅಕ್ಕನವರು ಹೇಳಿದರು. ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರಿ ವಿದ್ಯಾಲಯ ಸ್ಥಾಪನೆಗೊಂಡು ೮೮ ವರ್ಷಗಳಾದ ಹಿನ್ನೆಲೆಯಲ್ಲಿ ನಿಡಗುಂದಿ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರಿ ವಿದ್ಯಾಲಯ ಆಶ್ರಮದ ವತಿಯಿಂದ ಪರಮ ಶ್ರೇಷ್ಠ ಶಿವ ಪರಮಾತ್ಮ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಿವ ಮಹಿಮೆ ಕುರಿತು ಮಾತನಾಡಿದ ಅವರು, ಪರಮಾತ್ಮ ಶಿವನ ಮಹಿಮೆ ಅರಿತವರಿಗೆ ಯಾವುದೇ ಭಯವಿಲ್ಲ ಎಂದರು. ಶಿವ ಜ್ಞಾನದ ಸ್ಪೂರ್ತಿ, ಈ ಪರಮ ಪರಮಾತ್ಮನ ಸ್ಮೃತಿ ಸ್ತುತಿ ನಮ್ಮ ದೇಹದೊಳಗಿನ ಆತ್ಮಕ್ಕೆ ತಾಗಿದರೆ ನಮ್ಮೊಳಗಿನ ಅನೇಕ ವಿಕಾರ ರೂಪಿ ಮುಳ್ಳುಗಳು ಭಸ್ಮವಾಗುತ್ತವೆ. ಶಿವ ಭಗವಂತನ ವಚನಗಳ ಅನುಸಾರ ನಾವುಗಳು ಹೆಜ್ಜೆಯಿರಿಸಿದರೆ ನಮ್ಮೊಳಗಿನ ಆತ್ಮಜ್ಯೋತಿ…
