Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಕೃಷಿ ಅಧಿಕಾರಿ ಮನೆ ಮೇಲೆ ದಾಳಿ: ರೂ.2.5 ಕೋಟಿ ಅಕ್ರಮ ಆಸ್ತಿ ಪತ್ತೆ

ದೌರ್ಜನ್ಯ ಪ್ರಕರಣ ಗಂಭೀರವಾಗಿ ಪರಿಗಣಿಸಿ ಇತ್ಯರ್ಥಗೊಳಿಸಿ

ಯಶಸ್ಸು ಸಾಧನೆಗೆ ಆಧ್ಯಾತ್ಮಿಕತೆ ನೆರವು :ಮೋಕ್ಷಾನಂದಜಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಚುನಾವಣೆ: ಸೋಷಿಯಲ್ ಮೀಡಿಯಾ ಮೇಲಿನ ನಿಯಂತ್ರಣಗಳು
(ರಾಜ್ಯ ) ಜಿಲ್ಲೆ

ಚುನಾವಣೆ: ಸೋಷಿಯಲ್ ಮೀಡಿಯಾ ಮೇಲಿನ ನಿಯಂತ್ರಣಗಳು

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

“ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ”- ವಿವೇಕಾನಂದ. ಎಚ್.ಕೆ, ಬೆಂಗಳೂರು

ದೇಶದ ಚುನಾವಣೆ ಘೋಷಣೆಯಾಗಿದೆ. ಚುನಾವಣಾ ಆಯೋಗ ಅನೇಕ ನೀತಿ ನಿಯಮಗಳನ್ನು ಜಾರಿ ಮಾಡಿದೆ. ಅವುಗಳಲ್ಲಿ ಸೋಷಿಯಲ್ ಮೀಡಿಯಾಗಳ ಮೇಲಿನ ಕೆಲವು ನಿಯಂತ್ರಣಗಳು ಸೇರಿವೆ..

ಮೂಲಭೂತವಾಗಿ ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯ ಗಣರಾಜ್ಯ. ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲಿನ ಹಕ್ಕು..

ಕೇವಲ ಚುನಾವಣಾ ಸಮಯದಲ್ಲಿ ಮಾತ್ರವಲ್ಲ ಎಲ್ಲಾ ಕಾಲದಲ್ಲೂ, ಎಲ್ಲಾ ಸಂದರ್ಭದಲ್ಲಿಯೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇನ್ನೊಬ್ಬರ ವೈಯಕ್ತಿಕ ನಿಂದನೆ, ಜಾತಿ ಧರ್ಮ ಭಾಷೆಗಳ ಅವಹೇಳನ, ಕೆಟ್ಟ ಪದಗಳ ಪ್ರಯೋಗ, ಅನೈತಿಕ ಚಟುವಟಿಕೆ, ಕಾನೂನು ಬಾಹಿರ ವ್ಯವಹಾರಗಳನ್ನು ನಿರ್ಬಂಧಿಸಲಾಗಿದೆ. ಇದೇನು ಹೊಸ ನಿಯಮವಲ್ಲ..

ಚುನಾವಣಾ ಸಂದರ್ಭದಲ್ಲಿ ವಿಶೇಷವಾಗಿ ಕೆಲವು ಸೂಚನೆ ಕೊಡಲಾಗಿದೆ. ಅದರಲ್ಲಿ ಮುಖ್ಯವಾಗಿ..

ಸಾಮಾಜಿಕ ಜಾಲತಾಣಗಳಲ್ಲಿ ಅಭ್ಯರ್ಥಿ ಅಥವಾ ಪಕ್ಷದ ಪರ ಪ್ರಚಾರ ಮಾಡಬಾರದು. ಇದು ಸಂಪೂರ್ಣ ನಿಷೇಧವಲ್ಲ. ಪ್ರಚಾರ ಮಾಡಬೇಕಾದರೆ ಅನುಮತಿ ಪಡೆದಿರಬೇಕು. ಏಕೆಂದರೆ ಚುನಾವಣಾ ಖರ್ಚು ವೆಚ್ಚದ ಮೇಲೆ ಮಿತಿ ಇರುವುದರಿಂದ ಇಲ್ಲಿಯ ಪ್ರಚಾರದ ಲೆಕ್ಕ ಸಿಗುವುದಿಲ್ಲ ಎಂದು ಒಂದು ಆಲೋಚನೆ ಅಷ್ಟೆ. ಅನುಮತಿ ಪಡೆದು ಹಣದ ಲೆಕ್ಕ ತೋರಿಸಿ ಪ್ರಚಾರ ಮಾಡಬಹುದು. ಏಕೆಂದರೆ ಸಾಮಾನ್ಯ ಸಂಧರ್ಭದಲ್ಲಿ ಯಾವುದೇ ಮಾಧ್ಯಮಗಳ ಅಧೀಕೃತ ಪ್ರಚಾರವನ್ನು ತಡೆಯುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ..

ಮತ್ತೆ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹೆಚ್ಚಾಗಿ ಹರಿದಾಡುವುದರಿಂದ ಮತ್ತು ಅದಕ್ಕೆ ಒಂದು ನಿರ್ದಿಷ್ಟ ಜವಾಬ್ದಾರಿ ಮತ್ತು ಸತ್ಯದ ಅಧೀಕೃತ ಖಚಿತತೆಯ ಮಾನದಂಡಗಳು ಇಲ್ಲದಿರುವುದರಿಂದ, ಭಾರತದಂತ ಬೃಹತ್ ದೇಶದಲ್ಲಿ ಗಾಳಿ ಸುದ್ದಿಗಳು ಬಹುಬೇಗ ಹರಡುವುದು ಮತ್ತು ಜನರು ಅದನ್ನು ನಂಬುವ ಸಾಧ್ಯತೆ ಇರುವುದರಿಂದ ಅದರ ದುಷ್ಪರಿಣಾಮ ತಡೆಯಲು ಅನುಮತಿಯನ್ನು ಕಡ್ಡಾಯ ಗೊಳಿಸಲಾಗಿದೆ..

ಇದನ್ನೇ ಕೆಲವು ಗೆಳೆಯರು ತಪ್ಪಾಗಿ ಭಾವಿಸಿ ಕಳವಳಗೊಂಡಿದ್ದಾರೆ. ಭಾರತದ ಪ್ರಜೆಗಳೆಲ್ಲ ಕ್ರಿಮಿನಲ್ ಗಳಲ್ಲ. ಪ್ರಜಾಪ್ರಭುತ್ವದ ಮೂಲ ಗಟ್ಟಿತನ ಉಳಿದಿರುವುದೇ ಅದರ ಭಿನ್ನ ಧ್ವನಿಗಳಿಂದಾಗಿ. ಇದೇನು ಕಮ್ಯುನಿಸ್ಟ್ ಅಥವಾ ಸರ್ವಾಧಿಕಾರಿ ದೇಶವಲ್ಲ..

ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗೆ ಇರುವಷ್ಟು ಸ್ವಾತಂತ್ರ್ಯ ಸೋಷಿಯಲ್ ಮೀಡಿಯಾಗಳಿಗೂ ಇದೆ. ಅದೇರೀತಿ ಕಾನೂನು ಬಾಹಿರ ವಿಷಯ ಪ್ರಕಟಿಸಿದರೆ ಶಿಕ್ಷೆಗೆ ಗುರಿ ಮಾಡುವ ಅಧಿಕಾರವೂ ಆಡಳಿತಕ್ಕೆ ಇದೆ..

ಸೋಷಿಯಲ್ ಮೀಡಿಯಾ ಇಂದು ಒಂದು ಪ್ರಬಲ ಮಾಧ್ಯಮವಾಗಿ ಬೆಳೆದಿದೆ. ಭಾರತದ ಶಾಂತಿ ಸಾಮರಸ್ಯ ಅಭಿವೃದ್ಧಿ ಮತ್ತು ವೈವಿಧ್ಯತೆಯನ್ನು ಉಳಿಸಿಕೊಳ್ಳಲು ಒಂದು ಜನಾಭಿಪ್ರಾಯ ಮೂಡಿಸುವುದು ಅವಶ್ಯವಲ್ಲವೆ‌‌..

ಅಧಿಕಾರಿಗಳು, ರಾಜಕೀಯ ಪಕ್ಷಗಳು, ಅತ್ಯಂತ ನೀಚ ಭ್ರಷ್ಟಾಚಾರಗಳಲ್ಲಿ ತೊಡಗಿ, ಅಕ್ರಮಗಳ ಮುಖಾಂತರ ಚುನಾವಣೆ ಗೆದ್ದು ಬಡವರ ರಕ್ತ ಹೀರುತ್ತಿರುವಾಗ ನಾವು ಕೈಕಟ್ಟಿ, ಬಾಯಿ ಮುಚ್ಚಿ ಕುಳಿತುಕೊಳ್ಳಬೇಕೆ..

ಕನಿಷ್ಠ ಒಂದು ಒಳ್ಳೆಯ ಆಡಳಿತಾತ್ಮಕ ವ್ಯವಸ್ಥೆ ರೂಪಿಸಲು, ಜನರ ಮೇಲೆ ಸಾಮೂಹಿಕ ಪರಿಣಾಮ ಬೀರಿ ಜನಾಭಿಪ್ರಾಯ ರೂಪಿಸಲು ಸಣ್ಣ ಮಟ್ಟದ ಪ್ರಯತ್ನ ಮಾಡಬಾರದೆ..

ಹೌದು, ಕೆಲವು ಉಡಾಫೆ ಮನೋಭಾವದ ಜನಗಳು ಯಾವುದೋ ವ್ಯಕ್ತಿ ಅಥವಾ ಪಕ್ಷ ಅಥವಾ ಜಾತಿ ಅಥವಾ ಧರ್ಮ ಅಥವಾ ಹಣಕ್ಕೆ ತಮ್ಮನ್ನು ಮಾರಿಕೊಂಡು ಅಸಭ್ಯ ಭಾಷೆಯಿಂದ ಇತರರನ್ನು ಕೆಟ್ಟ ಕೊಳಕ ಭಾಷೆಯಲ್ಲಿ ನಿಂದಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುವುದನ್ನು ನೋಡುತ್ತಿದ್ದೇವೆ. ಇದು ಅಪರಾಧ..

ಆದರೆ ಇಂತಹ ಅಭ್ಯರ್ಥಿ ಉತ್ತಮ, ಇಂತಹ ಪಕ್ಷ ಪರವಾಗಿಲ್ಲ ಅಥವಾ ‌ಇದು ಯಾವುದೂ ಸರಿ ಇಲ್ಲ ಬೇರೆ ವ್ಯವಸ್ಥೆಯ ಬಗ್ಗೆ ಪರಿಶೀಲಿಸೋಣ ಎಂಬ ಅಭಿಪ್ರಾಯ ವ್ಯಕ್ತಪಡಿಸಲೂ ಸಾಧ್ಯವಿಲ್ಲ ಎಂದಾದರೆ ಅದು ಪ್ರಜಾಪ್ರಭುತ್ವ ನಾಶದ ಲಕ್ಷಣ ಎಂದೇ ಭಾವಿಸಬೇಕಾಗುತ್ತದೆ..

ಕೆಟ್ಟದ್ದನ್ನು ನಿಯಂತ್ರಿಸುವ ಭರದಲ್ಲಿ ಒಳ್ಳೆಯವರನ್ನು ಮೂಕರಾಗಿಸುವುದು ದುರಂತ. ಇದರ ಲಾಭ ಪಡೆಯುವ ದುಷ್ಟರು ನಮ್ಮನ್ನು ಸದಾಕಾಲವು ಶೋಷಿಸುತ್ತಲೇ ಇರುತ್ತಾರೆ. ಬಂಧನದ ಭೀತಿ ಸೃಷ್ಟಿಸಿ ನಮ್ಮ ಧ್ವನಿ ಅಡಗಿಸುತ್ತಾರೆ..

ನಾವು ಎಚ್ಚೆತ್ತುಕೊಳ್ಳಬೇಕಿದೆ. ಕೊಲೆಗಡುಕರು, ಭ್ರಷ್ಟರು, ಮಾಫಿಯಾದವರು, ರೌಡಿಗಳು, ಖದೀಮರು ಬಾಯಿಗೆ ಬಂದಂತೆ ರಾಜಾರೋಷವಾಗಿ ಮಾತನಾಡುವಾಗ ದೇಶದ ಹಿತದೃಷ್ಟಿಯಿಂದ ಒಳ್ಳೆಯ ಮಾತನಾಡುವ ನಾವು ಹೆದರಬೇಕೆ ?..

ಯೋಚಿಸುವ ಸಮಯ ನಮ್ಮದು..

– ವಿವೇಕಾನಂದ. ಎಚ್.ಕೆ, ಬೆಂಗಳೂರು

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಕೃಷಿ ಅಧಿಕಾರಿ ಮನೆ ಮೇಲೆ ದಾಳಿ: ರೂ.2.5 ಕೋಟಿ ಅಕ್ರಮ ಆಸ್ತಿ ಪತ್ತೆ

ದೌರ್ಜನ್ಯ ಪ್ರಕರಣ ಗಂಭೀರವಾಗಿ ಪರಿಗಣಿಸಿ ಇತ್ಯರ್ಥಗೊಳಿಸಿ

ಯಶಸ್ಸು ಸಾಧನೆಗೆ ಆಧ್ಯಾತ್ಮಿಕತೆ ನೆರವು :ಮೋಕ್ಷಾನಂದಜಿ

ಬೆಂಬಲ ಬೆಲೆ ಯೋಜನೆ: ಮೆಕ್ಕೆಜೋಳ ಖರೀದಿಗೆ ರೈತರಿಂದ ನೋಂದಣಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಕೃಷಿ ಅಧಿಕಾರಿ ಮನೆ ಮೇಲೆ ದಾಳಿ: ರೂ.2.5 ಕೋಟಿ ಅಕ್ರಮ ಆಸ್ತಿ ಪತ್ತೆ
    In (ರಾಜ್ಯ ) ಜಿಲ್ಲೆ
  • ದೌರ್ಜನ್ಯ ಪ್ರಕರಣ ಗಂಭೀರವಾಗಿ ಪರಿಗಣಿಸಿ ಇತ್ಯರ್ಥಗೊಳಿಸಿ
    In (ರಾಜ್ಯ ) ಜಿಲ್ಲೆ
  • ಯಶಸ್ಸು ಸಾಧನೆಗೆ ಆಧ್ಯಾತ್ಮಿಕತೆ ನೆರವು :ಮೋಕ್ಷಾನಂದಜಿ
    In (ರಾಜ್ಯ ) ಜಿಲ್ಲೆ
  • ಬೆಂಬಲ ಬೆಲೆ ಯೋಜನೆ: ಮೆಕ್ಕೆಜೋಳ ಖರೀದಿಗೆ ರೈತರಿಂದ ನೋಂದಣಿ
    In (ರಾಜ್ಯ ) ಜಿಲ್ಲೆ
  • ಬೂದಿ ತುಂಬಿದ ವಾಹನಗಳಿಂದ ವಾಯು ಮಾಲಿನ್ಯ ತಡೆಗಟ್ಟಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಲಿಂ.ಚೆನ್ನಬಸವ ಶ್ರೀ, ದಿ.ಶಾಮನೂರ ಶಿವಶಂಕರಪ್ಪ ರಿಗೆ ಶ್ರದ್ಧಾಂಜಲಿ
    In (ರಾಜ್ಯ ) ಜಿಲ್ಲೆ
  • ಚಡಚಣದಲ್ಲಿ ಕಳ್ಳರ ಹಾವಳಿ: ಭಯಭೀತಿಯಲ್ಲಿ ನಾಗರಿಕರು
    In (ರಾಜ್ಯ ) ಜಿಲ್ಲೆ
  • ಅಂತರ್ಜಾಲದ ಬಳಕೆ ಅತ್ಯಂತ ಜಾಗರೂಕತೆಯಿಂದ ನಿರ್ವಹಣೆ ಮಾಡಿ
    In (ರಾಜ್ಯ ) ಜಿಲ್ಲೆ
  • ದ್ವೇಷ ಭಾಷಣ ವಿರೋಧಿ ಮಸೂದೆಗೆ ರಾಜ್ಯಪಾಲರು ಒಪ್ಪಬಾರದು
    In (ರಾಜ್ಯ ) ಜಿಲ್ಲೆ
  • ಪಿಪಿಪಿ ಮಾದರಿ ಬಿಜೆಪಿ ಹಾಗೂ ಮೋದಿ ಅವರ ಕೂಸು
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.