ಕೊಲ್ಹಾರ: ಸಾಮಾಜಿಕ ಕ್ಷೇತ್ರದ ನನ್ನ ರಾಜಕೀಯ ೪೫ ವರ್ಷಗಳ ಜೀವನದಲ್ಲಿ ಭಾವನಾತ್ಮಕವಾಗಿ ಸಂಬಂಧಗಳನ್ನು ಮನುಷ್ಯ ಮನುಷ್ಯರ ನಡುವೆ ಬೆಸೆಯುವ ಮೂಲಕ ರಾಜಕಾರಣ ಮಾಡುತ್ತಾ ಬಂದಿದ್ದು ಒಂದು ಸಣ್ಣ ಜೀವಿಗೂ ಕೂಡ ನಾನು ಹಿಂಸೆ ಮಾಡದೇ ಅಹಿಂಸಾ ತತ್ವದ ಅಡಿ ನಡೆದುಕೊಂಡು ಬರುತ್ತಿದ್ದೇನೆ ಎಂದು ವಿಜಯಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿದರು.
ಪಟ್ಟಣದ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರ ತೋಟದ ಮನೆಯ ಆವರಣದಲ್ಲಿ ಸೋಮವಾರ ಸಾಯಂಕಾಲ ನಡೆದ ಭಾರತೀಯ ಜನತಾಪಕ್ಷದ ಬಸವನ ಬಾಗೇವಾಡಿ ಮಂಡಲ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಚುನಾವಣಾ ಪ್ರಚಾರ ಸಭೆಯ ಮೊದಲ ಭಾಷಣವನ್ನು ಕೊಲ್ಹಾರದಲ್ಲಿಯೇ ಪ್ರಾರಂಭಿಸಿ ಮಾತನಾಡಿದರು.
ಹುಬ್ಬಳ್ಳಿ ಹುಮನಾಬಾದ ರಾಷ್ಟ್ರೀಯ ಹೆದ್ದಾರಿ ೨೧೮ ದ್ವೀಪಥವಿದ್ದ ರಸ್ತೆ ಚತುಷ್ಪಥ ಹೆದ್ದಾರಿಯಾಗಿ ಮಂಜೂರಾಗಿದೆ ಎಂದರು.
ಈಗ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಅತ್ಯಂತ ಪಾಪಿಷ್ಟ ಸರಕಾರವಾಗಿದೆ ಕಾರಣ ಅಧಿಕಾರಕ್ಕೆ ಬಂದು ೧೦ ತಿಂಗಳು ಗತಿಸುತ್ತಾ ಬಂದರೂ ರಾಜ್ಯದ ಯಾವುದೇ ಒಂದು ಪ್ರದೇಶದಲ್ಲಿ ಒಂದು ಹನಿಕೂಡ ಮಳೆರಾಯನ ಕೃಪೆಯಾಗದೇ ಬರಗಾಲದ ಬವಣೆಯನ್ನು ಎದುರಿಸುತ್ತಿರುವುದು ಅತ್ಯಂತ ನೋವಿನ ಸಂಗತಿ ಈ ರಾಜ್ಯದ ಜನತೆಯದಾಗಿದೆ. ಈ ಹಿಂದಿನ ದಿನಮಾನಗಳಲ್ಲಿ ಒಂದು ಮಳೆಯಾಗದೇ ಹೋದರೆ ಇನ್ನೊಂದು ಮಳೆ ಸಂಪೂರ್ಣವಾಗಿ ಜನತೆಗೆ ಆಶಾಕಿರಣವಾಗಿರುತ್ತಿತ್ತು ಗ್ಯಾರಂಟಿ ಯೋಜನೆಗಳಿಂದ ಸಂಸಾರದಲ್ಲಿ ಬಿರುಕು ಮೂಡುವಂತೆ ಮಾಡಿರುವದೇ ಕಾಂಗ್ರೆಸ್ ಸರಕಾರದ ಸಾಧನೆಯಾಗಿದೆ ಎಂದು ಕುಟುಕಿದರು.
ರಾಜ್ಯ ಬಿಜೆಪಿ ಮುಖಂಡ ಚಂದ್ರಶೇಖರ ಕವಟಗಿ ಮಾತನಾಡಿ, ೧೨ ಬಾರಿ ಚುಣಾವಣೆಯಲ್ಲಿ ಸ್ಪರ್ದಿಸಿ ೧೧ ಬಾರಿ ವಿಜೇತರಾದ ರಮೇಶ ಜಿಗಜಿಣಗಿ ಅವರ ಸೇವೆ ರಾಜ್ಯದ ಮತ್ತು ದೇಶದ ಜನತೆಗೆ ಸೋಲಿಲ್ಲದಂತೆ ಸಿಕ್ಕ ಸಮಾಜಸೇವೆಯಾಗಿದ್ದು ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿ ಇನ್ಯಾವುದೇ ಪಕ್ಷವೂ ಸತತವಾಗಿ ಮೂರುಬಾರಿ ಅಧಿಕಾರದ ಚುಕ್ಕಾಣೆಯನ್ನು ಹಿಡಿದ ಉದಾಹರಣೆಯೇ ಇಲ್ಲ. ಆದರೆ ಸ್ವಾಭಿಮಾನಿ ಭಾರತ ಜನತೆಯ ಆಶಿರ್ವಾದದಿಂದ ಈಗಾಗಲೇ ಸತತವಾಗಿ ಎರಡು ಬಾರಿ ಭಾರತೀಯ ಜನತಾಪಕ್ಷದ ಮುಖಂಡರಾದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಸೇವೆಯನ್ನು ಮಾಡುತ್ತಿದ್ದು ಮೂರನೇಬಾರಿಯೂ ನಿಮ್ಮೆಲ್ಲರ ಆಶಿರ್ವಾದದಿಂದ ಅಧಿಕಾರದ ಚುಕ್ಕಾಣೆ ಹಿಡಿದು ದಾಖಲೆ ನಿರ್ಮಿಸುವಂತಾಗಲು ತಾವೆಲ್ಲರೂ ಶ್ರಮಿಸಬೇಕೆಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.
ಮಾಜಿ ಸಚಿವ ಎಸ.ಕೆ.ಬೆಳ್ಳುಬ್ಬಿ ಮಾತನಾಡಿ, ಬಸವನ ಬಾಗೇವಾಡಿ ಮತಕ್ಷೇತ್ರದ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ತಮ್ಮ ತಮ್ಮ ಭೂತ್ ಮಟ್ಟದ ಮತದಾರರನ್ನು ಮತಗಟ್ಟೆಗೆ ಕರೆದುಕೊಂಡು ಬಂದು ಮೇ೭ ರಂದು ನಡೆಯುವ ಚುಣಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಮತ ಚಲಾಯಿಸಲು ಶ್ರಮಪಡಬೇಕು. ಮಂಡಲದ ಅಲ್ಪಸಂಖ್ಯಾತ ಘಟಕ ಸೇರಿ ೮ ಮೋರ್ಚಾಗಳ ಜವಾಬ್ದಾರಿ ಸ್ಥಾನದ ಕಾರ್ಯಕರ್ತರು ಮನೆಮನೆಗೆ ತೆರಳಿ ಪ್ರಚಾರವನ್ನು ಕೈಕೊಂಡು ಮತ್ತೊಮ್ಮೆ ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಒಕ್ಕೂಟ ಅಧಿಕಾರ ಚುಕ್ಕಾಣೆ ಹಿಡಿಯಲು ಕೆಲಸ ಮಾಡಬೇಕೆಂದು ಹೇಳಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಸಂಗಣಗೌಡ ಚಿಕ್ಕೊಂಡ, ಬಸವರಾಜ ಬಿರಾದಾರ, ಶಂಕರಗೌಡ ಪಾಟೀಲ, ಸಿದ್ರಾಮ ಕಾಖಂಡಕಿ, ಜಗದೀಶ ಸುಣಗದ ಅನೇಕ ಪ್ರಮುಖ ಕಾರ್ಯಕರ್ತರು ವೇದಿಕೆ ಮೇಲೆ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

