ಬಸವನಬಾಗೇವಾಡಿ: ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿರುವ ನಾಲ್ಕು ನ್ಯಾಯಾಲಯಗಳಲ್ಲಿ ವಿವಿಧ ನ್ಯಾಯಾಧೀಶರ ಸಮ್ಮುಖದಲ್ಲಿ ಶನಿವಾರ ಜರುಗಿದ ರಾಷ್ಟ್ರೀಯ ಲೋಕಅದಲಾತ್ನಲ್ಲಿ ೨,೬೮೦ ಪ್ರಕರಣಗಳಲ್ಲಿ ೧,೩೪೫ ಪ್ರಕರಣಗಳು ಇತ್ಯರ್ಥವಾದವು.
ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಅಪರಾಧ ಪ್ರಕರಣಗಳು, ಚೆಕ್ ಬೌನ್ಸ್, ವಾಟ್ನಿ ದಾವೆ, ಬ್ಯಾಂಕ್ ಪ್ರಕರಣಗಳು ಸೇರಿದಂತೆ ವಿವಿಧ ಪ್ರಕರಣಗಳನ್ನು ಹಿರಿಯ ಸಿವ್ಹಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೋಡೆ, ಹೆಚ್ಚುವರಿ ಹಿರಿಯ ಸಿವ್ಹಿಲ್ ನ್ಯಾಯಾಧೀಶೆ ತಯ್ಯಾಬಾ ಸುಲ್ತಾನ, ಸಿವ್ಹಿಲ್ ನ್ಯಾಯಾಧೀಶೆ ತೇಜಶ್ವಿನಿ ಸೊಗಲದ, ಹೆಚ್ಚುವರಿ ಸಿವ್ಹಿಲ್ ನ್ಯಾಯಾಧೀಶೆ ಸೌಮ್ಯ ಹೂಲಿ ಅವರು ಕೈಗೆತ್ತಿಗೊಂಡು ರಾಜೀ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿದರು.
ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ, ವಕೀಲರಾದ ಬಿ.ಕೆ.ಕಲ್ಲೂರ, ವ್ಹಿ.ಜಿ.ಕುಲಕರ್ಣಿ, ವ್ಹಿ.ಬಿ.ಮರ್ತುರ, ಗೋಪಾಲ ಚಿಂಚೋಳಿ, ಎಂ.ಎಸ್.ಗೊಳಸಂಗಿ, ಬಿ.ಪಿ.ಪತ್ತಾರ, ಜಿ.ಜಿ.ಬಿಸನಾಳ, ರಾಜು ಅಡ್ಡೋಡಗಿ ಸೇರಿದಂತೆ ವಿವಿಧ ವಕೀಲರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

