ನಿಡಗುಂದಿ: ಶಿವನನ್ನು ಜಪತಪದೊಂದಿಗೆ ನಿರಂತರ ಆರಾಧಿಸಿ ಆ ಪರಮಾತ್ಮನ ಸ್ಮೃತಿಯಲ್ಲಿಯೇ ನಿತ್ಯ ನಮ್ಮ ಕರ್ಮ ಕಾಯಕಗಳನ್ನು ನಡೆಸಿಕೊಂಡು ಬಂದರೆ ಬದುಕು ಹಸನಾಗುವುದು ಎಂದು ನಿಡಗುಂದಿ ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರಿ ವಿದ್ಯಾಲಯದ ಸಂಚಾಲಕಿ, ರಾಜಯೋಗಿನಿ ರೇಣುಕಾ ಅಕ್ಕನವರು ಹೇಳಿದರು.
ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರಿ ವಿದ್ಯಾಲಯ ಸ್ಥಾಪನೆಗೊಂಡು ೮೮ ವರ್ಷಗಳಾದ ಹಿನ್ನೆಲೆಯಲ್ಲಿ ನಿಡಗುಂದಿ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರಿ ವಿದ್ಯಾಲಯ ಆಶ್ರಮದ ವತಿಯಿಂದ ಪರಮ ಶ್ರೇಷ್ಠ ಶಿವ ಪರಮಾತ್ಮ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಿವ ಮಹಿಮೆ ಕುರಿತು ಮಾತನಾಡಿದ ಅವರು, ಪರಮಾತ್ಮ ಶಿವನ ಮಹಿಮೆ ಅರಿತವರಿಗೆ ಯಾವುದೇ ಭಯವಿಲ್ಲ ಎಂದರು.
ಶಿವ ಜ್ಞಾನದ ಸ್ಪೂರ್ತಿ, ಈ ಪರಮ ಪರಮಾತ್ಮನ ಸ್ಮೃತಿ ಸ್ತುತಿ ನಮ್ಮ ದೇಹದೊಳಗಿನ ಆತ್ಮಕ್ಕೆ ತಾಗಿದರೆ ನಮ್ಮೊಳಗಿನ ಅನೇಕ ವಿಕಾರ ರೂಪಿ ಮುಳ್ಳುಗಳು ಭಸ್ಮವಾಗುತ್ತವೆ. ಶಿವ ಭಗವಂತನ ವಚನಗಳ ಅನುಸಾರ ನಾವುಗಳು ಹೆಜ್ಜೆಯಿರಿಸಿದರೆ ನಮ್ಮೊಳಗಿನ ಆತ್ಮಜ್ಯೋತಿ ಜ್ಞಾನ ಬೆಳಗುತ್ತದೆ. ಶಿವಭಕ್ತಿ ಅರಿತ ಮನಸ್ಸುಗಳು ಪರರ ಆತ್ಮಜ್ಯೋತಿ ಮಿನುಗಿಸುವ ನಿಷ್ಕಾಮ ಸೇವೆಗೆ ಮುಂದಾಗುತ್ತವೆ ಎಂದರು.
ಎಲ್ಲ ಹಬ್ಬ ಹರಿದಿನಗಳ ಹಿಂದೆ ಆಧ್ಯಾತ್ಮಿಕ ಹಿನ್ನೆಲೆ, ರಹಸ್ಯಗಳಿವೆ. ಶ್ರದ್ಧಾ ಭಕ್ತಿಗಳಿಂದ ಹಬ್ಬ ಪರಂಪರೆ ಆಚರಿಸುತ್ತಿದ್ದಾಗ್ಯೂ ಅಸಂಖ್ಯಾತ ಮನಗಳು ಒಳಗೊಳಗೆ ದುಃಖಿ ಅಗಿವೆ. ಎಷ್ಟೇ ಪ್ರಗತಿ ಸಾಧಿಸಿದರೂ ಕೂಡಾ ಕತ್ತಲೆಯ ಅವಸ್ಥೆಯಲ್ಲಿ ಬದುಕುತ್ತಿದ್ದೆವೆ. ಜನರ ಭಾವಮನದ ಮೂಲೆಮೂಲೆಗಳಲ್ಲಿ ಇನ್ನೂ ಕತ್ತಲೆ ಎನ್ನುವ ಅಂಧಕಾರ ಉಳಿದುಕೊಂಡಿವೆ. ಕಾರಣ ಬಾಹ್ಯ ರೂಪದ ಹಬ್ಬಾಚರಣೆಗೆ ಹೆಚ್ಚು ಒತ್ತು ನೀಡುತ್ತಿದ್ದೆವೆ.ಅಂದ ಅಲಂಕಾರದ ವ್ಯಾಮೋಹ ನಮ್ಮಲ್ಲಿ ಹೆಚ್ಚಾಗಿದೆ. ಹಬ್ಬಗಳ ಪರಿಕಲ್ಪನೆ, ಮಹತ್ವ, ಅರ್ಥಗಳನ್ನು ಆಲಿಸದೇ ಇರುವ ಪರಿಣಾಮ ಮನದಲ್ಲಿ ಕತ್ತಲೆ, ಹೃದಯದಲ್ಲಿ ದುಃಖ,ಚಿಂತೆ ದಿನದಿಂದ ದಿನಕ್ಕೆ ಅಧಿಕವಾಗುತ್ತಲ್ಲಿದೆ. ಈ ಸೃಷ್ಟಿಯ ಮೇಲೆ ಅಧರ್ಮ,ಅನ್ಯಾಯ,ಪಾಪ ಕೃತ್ಯಗಳು ಹೆಚ್ಚಾಗಿವೆ. ಭಾಗಶಃ ಅಜ್ಞಾನ ಮೌಢ್ಯಗಳ ಪಾಪ ತುಂಬುತ್ತಿದೆ. ಯಾವ ಯುಗದಲ್ಲಿ ಅಧರ್ಮದ ತಾಂಡವ ಅತಿ ಅಗುತ್ತದೆಯೋ ಅಗ ಧರ್ಮಸ್ಥಾಪನೆಯ ಅವಶ್ಯಕತೆ ಬರುತ್ತದೆ. ಅಂಥ ಸಂಕೀರ್ಣ ಯುಗದಲ್ಲಿ ನಾ ಮತ್ತೆ ಬರುತ್ತೆನೆ ಎಂದು ಶಿವ ಪರಮಾತ್ಮ ಹೇಳಿ ಹೋಗಿದ್ದಾರೆ. ಇದು ಅದೇ ಸಮಯ ಅದೇ ಕಲಿಯುಗ ಅಗಿದೆ. ಸೃಷ್ಟಿ ಮೇಲೆ ಶಿವಪರಮಾತ್ಮ ಬರುವ ಘಳಿಗೆ ಈಗ ಎದುರಾಗಿದೆ ಎಂದರು.
ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರು,ಧನ ಸಂಪತ್ತಿನಲ್ಲಿ ತೇಲಾಡಿದರು ಮನುಷ್ಯನಲ್ಲಿ ಒಳಗೆ ಹೇಳಿಕೊಳ್ಳಲಾರದಂಥ ಕೊರಗಿನಿಂದ ಮರುಗುತ್ತಿದ್ದಾನೆ. ನಾವುಗಳು ಬಹುತೇಕ ಮಾನಸಿಕತೆ ಖಿನ್ನತೆಯಿಂದ ಕುಗ್ಗುತ್ತಲ್ಲಿದ್ದೇವೆ. ಆಂತರಿಕವಾಗಿ ಸ್ಥಿರವಾಗಿರುವೆ, ಶಾಂತವಾಗಿರುವೆ, ನೆಮ್ಮದಿಯಾಗಿರುವೆ ಎನ್ನುವರನ್ನು ಈ ಜಗತ್ತಿನಲ್ಲಿ ಎಲ್ಲಿ ಹುಡುಕಿದರೂ ಸಿಗದಂಥ ಸ್ಥಿತಿ ಇದೆ ಎಂದರು.
ಶಿವನಾಮದ ಧ್ಯಾನದಲ್ಲಿ ನಮ್ಮ ಆತ್ಮರಂಗ ಶುಚಿಗೊಳ್ಳಬೇಕು. ಅದು ಜಾಗರೂಕತೆಯಿಂದ ಇರುವಂತೆ ನೋಡಿಕೊಳ್ಳಬೇಕು. ಶಿವ ಸ್ತುತಿಯಿದ್ದರೆ ಜಾಗೃತ ಬುದ್ದಿ ಹಿಂಬಾಲಿಸುತ್ತದೆ.ಯಾವುದೇ ತಪ್ಪು ಕರ್ಮಗಳು ಆಗುವುದಿಲ್ಲ.ಈ ಜಗದಲ್ಲಿ ಹಲ ಮಹಾತ್ಮರು ಚಾರುತಿಗೊಂಡಿದ್ದಾರೆ. ಹೀಗಾಗಿ ಶಿವರಾತ್ರಿಯಲ್ಲಿ ಸ್ತುತಿಸಿ ಶಿವನಾಮದಿಂದ ಭಜಿಸಿ ಜಾಗರಣೆ ಮಾಡುವ ಸಂಪ್ರದಾಯಕ್ಕೆ ಮೌಲ್ಯ ಇದೆ. ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿ ವಿಶ್ವ ವಿದ್ಯಾಲಯ ಸ್ಥಾಪನೆಯಾಗಿ ೮೮ ವರ್ಷಗಳಾಗಿದೆ.ಆ ಪ್ರಯುಕ್ತ ಸೃಷ್ಟಿಕರ್ತನ ೮೮ನೇ ಶಿವ ಜಯಂತಿ ಆಚರಿಸಲಾಗಿದೆ ಎಂದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀ ರುದ್ರಮುನಿ ಶಿವಾಚಾರ್ಯ ಧ್ವಜಾರೋಹಣ ನೆರವೇರಿಸಿದರು. ಮುದ್ದೇಬಿಹಾಳ ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ,ರಾಜಯೋಗಿನಿ ಮಂಜುಳಾ ಅಕ್ಕವನರು ಅಧ್ಯಕ್ಷತೆ ವಹಿಸಿ ಹಿತೋಪದೇಶ ನೀಡಿದರು.
ಮುಖ್ಯ ಅತಿಥಿಗಳಾಗಿ ಪ್ರಗತಿಪರ ರೈತ ಮುಖಂಡ ಬಸವರಾಜ ಕುಂಬಾರ, ಸಮಾಜ ಸೇವಕ ಸಂಗಣ್ಣ ಕೊಳ್ಳೂರ, ಭೀಮನಗೌಡ ಪಾಟೀಲ, ಅಜ್ಜಪ್ಪ ಹಡಪದ, ಡಾ,ಸನ್ಮತಿಕುಮಾರ, ಎನ್.ಎಸ್.ರೇವಡಿ, ಬಸವರಾಜ ಗೌಡರ, ಅಶೋಕ ಉಳ್ಳಿ, ಲಕ್ಷ್ಮಣ ಬಿರಾದಾರ, ಜೀವನ ಕೆ.ಬಿ. ಗುಳೇದಗುಡ್ಡ, ಯೋಗಗುರು ಗಂಗಾಧರ ಹಿರೇಮಠ ಮೊದಲಾದವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

