ಮುದ್ದೇಬಿಹಾಳ: ಕರ್ನಾಟಕದಲ್ಲಿಯೇ ಅತೀ ಹಿಂದುಳಿದ ತಾಲೂಕುಗಳಲ್ಲಿ ಮುದ್ದೇಬಿಹಾಳ ಕೂಡ ಒಂದು ಎಂದು ಕರೆಸಿಕೊಳ್ಳುತ್ತಿದೆ. ಆಲಮಟ್ಟಿ ನಾರಾಯಣಪುರ ಅಣೆಕಟ್ಟು ಇದ್ದರೂ ನೀರಾವರಿ ಸಂಪೂರ್ಣ ಆಗಿಲ್ಲ, ಉದ್ಯಮಗಳು ಸ್ಥಾಪನೆಯಾಗಿಲ್ಲ. ಕಾರಣ ಚುನಾವಣೆಗಳಲ್ಲಿ ಮತದಾರರು ಜಾಗೃತಿಯಾಗುವ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಬೇಕು ಎಂದು ನ್ಯಾಯವಾದಿ ಎನ್.ಬಿ.ಮುದ್ನಾಳ ಹೇಳಿದರು.
ಪಟ್ಟಣದ ಫಕೀರೇಶ್ವರ ಡೈಗ್ನೋಸ್ಟಿಕ್ ಸೆಂಟರ್ ನಲ್ಲಿ ವಿವಿಧ ಸಂಘಟನೆಗಳ ಅಡಿ ನೂತನ ತಾಲೂಕು ಮತದಾರ ಜಾಗೃತಿ ವೇದಿಕೆಯ ನಿರ್ಮಾಣ ಕುರಿತು ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸಂವಿಧಾನದ ಅನುಚ್ಛೇದ ೩೭೧ಜೆ ಅಡಿಯಲ್ಲಿ ವಿಜಯಪುರ ಜಿಲ್ಲೆಯ ಅಭಿವೃದ್ಧಿಯನ್ನು ಮಾಡುವುದು, ಆಲಮಟ್ಟಿ ಯಾದಗಿರಿ ರೈಲು ಮಾರ್ಗ ನಿರ್ಮಾಣ, ಜಿಲ್ಲೆಯಿಂದ ೮೦ ಕಿ.ಮೀ ದೂರವಿರುವ ತಾಲೂಕು ಕೇಂದ್ರವನ್ನು ಜಿಲ್ಲಾ ಕೇಂದ್ರವನ್ನಾಗಿಸುವುದು ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಲಾಭವನ್ನು ಪಡೆದುಕೊಳ್ಳುವಂತಾಗಲು ಬರುವ ಲೋಕಸಭೆಯ ಸ್ಪರ್ಧಾಳುಗಳಿಗೆ ನಮ್ಮ ಬೇಡಿಕೆಗಳನ್ನು ಮುಂದಿಟ್ಟು ಯೋಜಿತವಾಗಿ ಕೆಲಸ ಮಾಡಲು ಸಾಧ್ಯವಾಗುವಂತೆ ಮತದಾರರನ್ನು ಜಾಗೃತಿಗೊಳಿಸುವ ಉದ್ದೇಶದಿಂದ ಹೋರಾಟ ವೇದಿಕೆಯನ್ನು ರಚಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ವಿರುಪಾಕ್ಷಿ ಪತ್ತಾರ, ಮುಸ್ತಾಕ ಬಾಗವಾನ, ಶಂಕರಗೌಡ ರಾಯಗೊಂಡ ಎಲ್.ಎಸ್.ಮೇಟಿ ವಕೀಲರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಇದೇ ವೇಳೆ ಶಿವಾಜಿ ಬಿಜಾಪುರ್ ಅವರನ್ನು ಸಂಘಟನೆಯ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು. ಡಾ. ಚಂದ್ರಶೇಖರ್ ಶಿವಯೋಗಿಮಠ, ಲೋಹಿತ್ ನಾಲತವಾಡ, ರವೀಂದ್ರ ನಂದೆಪ್ಪನವರ, ಬಡ್ಡಾ ಕುಂಟೋಜಿ, ಸಂಗಣ್ಣ ಮೇಲಿನಮನಿ, ಮಹೇಶ ಕೆಂದೂಳಿ, ಮಹೇಶ ಹೂಗಾರ, ಚಂದ್ರು ಪ್ಯಾಟಿಗೌಡರ, ಆನಂದ ಜಂಬಗಿ, ಪುಟ್ಟು ಪಾಟೀಲ, ಅಶೋಕ್ ಕುಲಕರ್ಣಿ, ಮುತ್ತು ಪತ್ತಾರ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

