Author: editor.udayarashmi@gmail.com

ಕಲ್ಲಂಗಡಿ ಹಣ್ಣಿನ ಬೆಲೆಯಲ್ಲಿ ಹೆಚ್ಚಳ | ಎಲ್ಲೆಡೆ ತಲೆಎತ್ತಿರುವ ಲಸ್ಸಿ, ಶರಬತ್ತು, ಜ್ಯೂಸ್ & ಎಳೆನೀರು ಅಂಗಡಿಗಳು – ಬಸವರಾಜ ನಂದಿಹಾಳಬಸವನಬಾಗೇವಾಡಿ: ದೇಶದಲ್ಲಿ ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಕಾವು ಏರುತ್ತಿದ್ದರೆ ಇನ್ನೊಂದೆಡೆ ಬೇಸಿಗೆ ಬಿಸಿಲಿನ ಪ್ರಖರತೆಯಿಂದಾಗಿ ಜನರು ತಂಪು ಪಾನೀಯ ಕಡೆಗೆ ಹೋಗುತ್ತಿರುವುದು ಕಂಡುಬರುತ್ತಿದೆ. ಬಸವನಬಾಗೇವಾಡಿ ಪಟ್ಟಣದಲ್ಲಿ ಬುಧವಾರ ೩೩ ಡಿಗ್ರಿ ಸೆಲ್ಸಿಯಸ್ ಬಿಸಿಲು ಇತ್ತು.ಶಿವರಾತ್ರಿ ಅಮವಾಸ್ಯೆ ಕಳೆದ ನಂತರ ಬಿಸಿಲು ಆರಂಭವಾಗುತ್ತದೆ. ಇನ್ನೂ ಏಪ್ರೀಲ್ ತಿಂಗಳು ಬಂದಿಲ್ಲ. ಈಗ ಬಿಸಿಲಿನ ಪ್ರಖರತೆ ಜೋರಾಗಿದೆ. ಏಪ್ರೀಲ್-ಮೇ ತಿಂಗಳಲ್ಲಿ ಬಿಸಿಲಿನ ಪ್ರಖರತೆ ಇನ್ನೂ ಹೆಚ್ಚಾಗುತ್ತದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ವರ್ಷ ಮುಂಗಾರು-ಹಿಂಗಾರು ಮಳೆ ಪ್ರಮಾಣ ಕಡಿಮೆಯಾಗಿದೆ. ಈಗಾಗಲೇ ಬಿರು ಬಿಸಿಲಿನಿಂದ ಕೆರೆ-ಕಟ್ಟೆಗಳು ಖಾಲಿಯಾಗಿ ಹೋಗಿರುತ್ತಿದ್ದವು. ಆದರೆ ಅಖಂಡ ತಾಲೂಕಿನಲ್ಲಿ ಕಾಲುವೆ ಮೂಲಕ ನೀರು ಬಿಟ್ಟಿದ್ದರಿಂದಾಗಿ ಕೆರೆಯಲ್ಲಿ ನೀರು ಕಾಣುತ್ತಿವೆ. ಇದೇ ರೀತಿಯಲ್ಲಿ ಬಿರು ಬಿಸಿಲು ಮುಂದುವರಿದರೆ ಮುಂಬರುವ ದಿನಗಳಲ್ಲಿ ಈ ನೀರು ಖಾಲಿಯಾಗುವ ಸಾಧ್ಯತೆ. ಈ ಸಲ ಸಾಮಾನ್ಯಕ್ಕಿಂತಲೂ…

Read More

ಸಿಂದಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ಯಾಪ್ತಿಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷರಾಗಿ ಸಿಂದಗಿಯ ಹಿರಿಯ ಸಾಹಿತಿ, ಕಥೆಗಾರ, ನಿವೃತ್ತ ಪ್ರಾಚಾರ್ಯ ಡಾ. ಚನ್ನಪ್ಪ ಕಟ್ಟಿ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದ ಜಾನಪದ ವಿದ್ವಾಂಸ, ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಎಂ.ಪಡಶೆಟ್ಟಿ ಅವರನ್ನು ಮಾಜಿ ಎಂಎಲ್ಸಿ ಅರುಣ ಶಹಾಪುರ ಸನ್ಮಾನಿಸಿ ಗೌರವಿಸಿದರು.ಈ ವೇಳೆ ಮಾತನಾಡಿದ ಅರುಣ ಶಹಾಪುರ, ಸಿಂದಗಿಗೆ ನಿಮ್ಮಿಂದ ಒಂದು ದೊಡ್ಡ ಹೆಸರು ಬಂದಿದೆ. ನಿಮ್ಮ ನೇತೃತ್ವದಲ್ಲಿ ಹೀಗೆ ಸಾಗಲಿ ಎಂದು ಶುಭ ಹಾರೈಸಿದರು.ಸನ್ಮಾನವನ್ನು ಸ್ವೀಕರಿಸಿದ ಪ್ರಾಧಿಕಾರ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ಮಾತನಾಡಿ, ಸರಕಾರ ಈ ಬಾರಿ ಒಂದು ಹೊಸ ಜವಾಬ್ದಾರಿ ನೀಡಿದೆ. ನಾನು ಮತ್ತು ನನ್ನ ೭ಜನ ಸದಸ್ಯರು ಸೇರಿಕೊಂಡು ೩ವರ್ಷಗಳ ಅವಧಿಯೊಳಗೆ ಪ್ರಾಧಿಕಾರದ ಕಾರ್ಯಗಳು ಎಲ್ಲಿಗೆ ಬಂದು ನಿಂತಿವೆ ಮುಂದೇನು ಮಾಡಬೇಕು ಎಂದು ಯೋಚಿಸುವೆವು ಎಂದರು.ಈ ವೇಳೆ ಜಾನಪದ ಅಕಾಡೆಮಿ ಸದಸ್ಯ ಡಾ.ಎಂ.ಎಂ.ಪಡಶೆಟ್ಟಿ ಮಾತನಾಡಿ, ಸಿಂದಗಿ ತಾಲೂಕಿನಲ್ಲಿ ಜಾನಪದ ಸಂಸ್ಕೃತಿ ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಜವಾಬ್ದಾರಿಯನ್ನು…

Read More

ಮಾಧ್ಯಮಿಕ ಶಿಕ್ಷಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಅರುಣ ಶಹಾಪೂರ ಶಿಕ್ಷಣ ಇಲಾಖೆ ವಿರುದ್ದ ಕಿಡಿ ಸಿಂದಗಿ: ಶಿಕ್ಷಣ ವಲಯದಲ್ಲಿ ಯಾವುದೇ ಚರ್ಚೆ ಮಾಡದೇ ಈ ಬಾರಿಯ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ೩ ಮುಖ್ಯ ಪರೀಕ್ಷೆಗಳನ್ನಾಗಿ ಮಾಡಿರುವ ಕಾರ್ಯದಿಂದ ಶಿಕ್ಷಕ ವರ್ಗ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಕಾರ್ಯಾಧ್ಯಕ್ಷ ಅರುಣ ಶಹಾಪೂರ ಶಿಕ್ಷಣ ಇಲಾಖೆಯ ವಿರುದ್ದ ಕಿಡಿ ಕಾರಿದರು.ಅವರು ಬುಧವಾರ ತಮ್ಮ ಸ್ವಗೃಹದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅವರು ೩ಮುಖ್ಯ ಪರೀಕ್ಷೆಗಳನ್ನು ಮಾಡಲು ನಿರ್ಧಾರ ಮಕ್ಕಳ ಹಿತವನ್ನು ಕಾಪಾಡುವಂತದ್ದಾಗಿದ್ದರೆ ಶಿಕ್ಷಕರ ಹಿತ ಕಾಪಾಡುವವರು ಯಾರು ಎಂದು ಪ್ರಶ್ನಿಸಿದ ಅವರು ೫,೮,೯ ಮಕ್ಕಳ ಪಬ್ಲಿಕ್ ಪರೀಕ್ಷೆಗಳು ಕೋರ್ಟ ಮೆಟ್ಟಿಲೇರಿರುವುದರಿಂದ ಇನ್ನೂ ಸೂಕ್ತವಾದ ಯಾವುದೇ ಆದೇಶ ಬಂದಿಲ್ಲ. ಇದರಿಂದ ಮಕ್ಕಳು ಆತಂಕದ ಸ್ಥಿತಿಯಲ್ಲಿದ್ದಾರೆ. ಇದು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬಿರುತ್ತಿದೆ. ಹೀಗಾದರೆ ನಮ್ಮ…

Read More

ಸಿಂದಗಿ: ಪಟ್ಟಣದ ಊರಿನ ಹಿರಿಯ ಮಠದ ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ೪೪ ನೇ ಪುಣ್ಯ ಸ್ಮರಣೆಯ ನಿಮಿತ್ಯ ಶ್ರೀಗಳ ರಜತಮೂರ್ತಿಯ ಮೆರವಣಿಗೆ ಬುಧವಾರ ಪಟ್ಟಣದ ವಿವಿಧ ಬಡಾವಣೆಯ ಮೂಲಕ ವಾದ್ಯ ವೈಭವದೊಂದಿಗೆ ಸಂಚರಿಸಿತು.ಬುಧವಾರ ಬೆಳಗ್ಗೆ ೯ ಗಂಟೆಗೆ ಪಲ್ಲಕ್ಕಿಯಲ್ಲಿ ವಿರಾಜಮಾನವಾದ ಶ್ರೀಗಳ ರಜತ ಮೂರ್ತಿಗೆ ಊರನ ಹಿರಿಯ ಮಠದ ಶ್ರೀ ಶಿವಾನಂದ ಶಿವಾಚಾರ್ಯರು ಪೂಜೆಯನ್ನು ನೆರವೇರಿಸಿ ಮೆರವಣಿಗೆಗೆ ಚಾಲನೆಯನ್ನು ನೀಡಿ ಮಾತನಾಡಿ, ಲಿಂ ಶ್ರೀ ಶಾಂತವೀರ ಪಟ್ಟಾಧ್ಯಕ್ಷರು ಬಡವರಲ್ಲಿ ಭಗವಂತನನ್ನು ಕಂಡಂತವರು. ಅವರ ಬದುಕಿನುದ್ದಕ್ಕೂ ಬಡ ಮಕ್ಕಳಿಗಾಗಿ ಸೇವೆಗೈದ ಸನ್ಯಾಸಿ. ಹಾನಗಲ್ಲ ಕುಮಾರೇಶ್ವರರ ಹೆಸರಿನಲ್ಲಿ ಅನೇಕ ಕಡೆಗಳಲ್ಲಿ ಸಂಸ್ಕೃತ ಪಾಠ ಶಾಲೆಗಳನ್ನು ತೆರೆದು ಅನೇಕ ಸ್ವಾಮಿಗಳಿಗೆ ಬೆಳಕಾದವರು ಎಂದರು. ಮೆರವಣಿಗೆಯುದ್ದಕ್ಕೂ ಸುಮಂಗಲೆಯರು ಆರತಿ ಹಿಡಿದು ಸಾಗಿದರು. ಮೆರವಣಿಗೆಯ ಮಾರ್ಗ ಮಧ್ಯದಲ್ಲಿ ಅನೇಕ ಭಕ್ತರು ತಂಪು ಪಾನಿಯಗಳನ್ನು ನೀಡಿ ಸೇವೆಗೈದರು. ಶ್ರೀಮಠದಿಂದ ಪ್ರಾರಂಭಗೊಂಡ ಶ್ರೀಗಳ ಮೆರವಣಿಗೆ ಹಳೆ ಬಜಾರ, ಅರಳಗುಂಡಗಿಯವರ ಓಣಿ, ಲಿಂ.ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ರಸ್ತೆ, ಶ್ರೀ ಸ್ವಾಮಿ ವಿವೇಕಾನಂದ ವೃತ್ತ,…

Read More

ನಬಿರೋಷನ್ ಪ್ರಕಾಶನದಿಂದ ವಿಶ್ವ ಮಹಿಳಾ ದಿನಾಚರಣೆ | ವೀರನಾರಿ ಪ್ರಶಸ್ತಿ ಪ್ರಧಾನ | ಮಹಿಳಾ ಕವಿಗೋಷ್ಠಿ ಸಿಂದಗಿ: ಮಹಿಳೆಯರು ಸಮಾಜದ ಎಲ್ಲ ಕ್ಷೇತ್ರದಲ್ಲಿಯೂ ಮಹೋನ್ನತ ಸಾಧನೆಗೈದು, ದೇಶಕ್ಕೆ ತಮ್ಮದೆಯಾದ ಕೊಡುಗೆ ನೀಡಿ ಭಾರತದ ಘನತೆ, ಗೌರವವನ್ನು ಮುಗಿಲೆತ್ತರಕ್ಕೆ ಕೊಂಡೊಯ್ಯುತ್ತಿರುವುದು ಶ್ಲಾಘನೀಯ ಎಂದು ಇನ್ನರ್ ವೀಲ್ ಕ್ಲಬ್‌ನ ಮಾಜಿ ಅಧ್ಯಕ್ಷೆ ನಾಗರತ್ನ ಮನಗೂಳಿ ಅವರು ಹೇಳಿದರು.ಪಟ್ಟಣದ ಲೊಯೋಲ ಶಾಲೆಯಲ್ಲಿ ನಬಿರೋಷನ್ ಪ್ರಕಾಶನ, ಬೋರಗಿ ಹಮ್ಮಿಕೊಂಡ ವಿಶ್ವ ಮಹಿಳಾ ದಿನಾಚರಣೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರಿಗೆ ವೀರನಾರಿ ಪ್ರಶಸ್ತಿ ಪ್ರಧಾನ ಹಾಗೂ ಮಹಿಳಾ ಕವಿಗೋಷ್ಠಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಉಜ್ವಲ ಭವಿಷ್ಯ ರೂಪಿಸುವಲ್ಲಿ ಮತ್ತು ಕುಟುಂಬವನ್ನು ಮುನ್ನಡೆಸುವಲ್ಲಿ ಮಹಿಳೆಯರ ಪಾತ್ರ ಅಪಾರ ಎಂದರು.ಈ ವೇಳೆ ಕಸಾಪ ನಿಕಟಪೂರ್ವ ತಾಲೂಕಾಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿ, ಅಂದು ಹೆಣ್ಣು ಹುಟ್ಟಿದರೆ ಹೊರೆ, ಗಂಡು ಹುಟ್ಟಿದರೆ ದೊರೆ, ಹೆಣ್ಣು ಹುಣ್ಣು ಗಂಡು ಹೊನ್ನು ಎನ್ನುತ್ತಿದ್ದರು. ಆದರೆ ಇಂದು ಡಾ.ಬಿ.ಆರ್ ಅಂಬೇಡ್ಕರ್ ಅವರ ಸಂವಿಧಾನದಿಂದಾಗಿ ಮಹಿಳೆಯರು…

Read More

ಸಿಂದಗಿ: ತಾಲೂಕಿನ ೧೧೦/೧೧ಕೆವಿ ವಿದ್ಯುತ್ ವಿತರಣಾ ಕೇಂದ್ರ ಸಿಂದಗಿಯಲ್ಲಿ ಪರಿವರ್ತಕ ಬದಲಾವಣೆ ಮಾಡುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಕಾರಣ ಮಾ.೨೨ ರಿಂದ ೨೫ರವರೆಗೆ ಸದರಿ ವಿದ್ಯುತ್ ವಿತರಣಾ ಕೇಂದ್ರ ಸಿಂದಗಿಯಿಂದ ಸರಬರಾಜಾಗುವ ಯಂಕಂಚಿ, ಮನ್ನಾಪೂರ, ಸಿಂದಗಿ ಹತ್ತಿರದ ಅಡವಿ ವಸ್ತಿ, ಸೋಂಪುರ, ಬಂದಾಳ, ಚಿಕ್ಕಸಿಂದಗಿ, ಬ್ಯಾಕೋಡ, ರಾಂಪುರ, ಬೆನಕೊಟಗಿ, ಯರಗಲ್ ಮಾಡಬಾಳ, ಮತ್ತು ಅಂತರಗಂಗಿ ಗ್ರಾಮಗಳ ನೀರಾವರಿ ಪಂಪಸೆಟ್ಟಗಳಿಗೆ ಅನಿರ್ಧಿಷ್ಟಾವಧಿ ದಿನಕ್ಕೆ ಕೇವಲ ಎರಡು ಗಂಟೆ ಮಾತ್ರ ವಿದ್ಯುತ್ ಪೂರೈಕೆ ಮಾಡಲಾಗುವುದು. ಆದ್ದರಿಂದ ಸದರಿ ಗ್ರಾಮಗಳ ಗ್ರಾಹಕರು ಸಹಕರಿಸಲು ಸಿಂದಗಿ ಹೆಸ್ಕಾಂ ಉಪ ವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಸಿಂದಗಿ: ತಾಲೂಕಿನ ಚಾಂದಕವಟೆ ಗ್ರಾಮದ ನೂರಅಹ್ಮದ ಅತ್ತಾರ ಅವರನ್ನು ವಿಜಯಪುರ ಜಿಲ್ಲಾ ಮಟ್ಟಡ ತ್ರೈಮಾಸಿಕ ಪರಿಶೀಲನಾ ಕೆಡಿಪಿ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರಾಗಿ ನೇಮಕ ಮಾಡಿ ಸರ್ಕಾರದ ಆಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.ತಮ್ಮ ನೇಮಕಕ್ಕೆ ಕಾರಣರಾದ ಶಾಸಕ ಅಶೋಕ ಮನಗೂಳಿ ಅವರಿಗೆ ನೂರಅಹ್ಮದ ಅತ್ತಾರ ಕೃತಜ್ಞತೆ ಸಲ್ಲಿಸಿದ್ದಾರೆ.

Read More

ಮೋರಟಗಿ: ರಾಜ್ಯ ಸರ್ಕಾರದ ಮಹತ್ತರ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಆಲಮೇಲ್ ತಾಲೂಕು ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಸಲೀಮ್ ಕಣ್ಣಿ ಮತ್ತು ಪ್ರಕಾಶ ಅಡಗಲ ಹಾಗೂ ಕೆಡಿಪಿ ಸದಸ್ಯರಾಗಿ ಆಯ್ಕೆಯಾದ ನಿಂಗನಗೌಡ ಪಾಟೀಲ್ ಅವರನ್ನು ಮಂಗಳವಾರ ಗ್ರಾಮ ಪಂಚಾಯತಿಯ ಸಂಯುಕ್ತ ಆಶ್ರಯದಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಸನ್ಮಾನಿಸಿದರು.ಸನ್ಮಾನ ಸ್ವೀಕರಿಸಿ ಕೆಡಿಪಿ ಸದಸ್ಯ ನಿಂಗನಗೌಡ ಪಾಟೀಲ್ ಮಾತನಾಡಿ, ರಾಜಕೀಯ ಇತಿಹಾಸದಲ್ಲೇ ಮೋರಟಗಿ ಗ್ರಾಮದಲ್ಲಿ ಸರ್ಕಾರ ಅನುಷ್ಠಾನ ಯೋಜನೆಗಳ ಸದಸ್ಯರನ್ನಾಗಿ ಮೂರು ಜನರನ್ನು ಏಕಕಾಲಕ್ಕೆ ಆಯ್ಕೆ ಮಾಡಿದ್ದು ಇತಿಹಾಸ, ಸರ್ಕಾರದ ಯೋಜನೆಗಳ ಮೇಲೆ ನಿಗಾ ವಹಿಸಿ ಸರಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಾಲೂಸಿಸಲು ನಿಗಾ ವಹಿಸಬೇಕು ಮತ್ತು ತ್ರೈಮಾಸಿಕ ಸಭೆಯಲ್ಲಿ ಗ್ರಾಮದ ಮೂಲ ಸೌಕರ್ಯಗಳ ಕುರಿತು ದ್ವನಿ ಎತ್ತಿ ಗ್ರಾಮಗಳನ್ನು ಅಭಿವೃದ್ಧಿ ಪಡಿಸಲು ಶ್ರಮ ವಹಿಸಲು ಶಾಸಕ ಅಶೋಕ ಮನಗೂಳಿ ಅವರು ಜವಾಬ್ದಾರಿ ನೀಡಿದ್ದಾರೆ ಆ ಜವಾಬ್ದಾರಿಯನ್ನು ನಿಬಾಯಿಸಿಕೊಂಡು ಹೋಗುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿ ನಮ್ಮನ್ನು ಆಯ್ಕೆ ಮಾಡಿದ ಸರಕಾರದ ಎಲ್ಲ…

Read More

ಅಫಜಲಪುರ: ವಿಜಯಪುರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ಜನ ಜಾನುವಾರುಗಳಿಗೆ ಜೀವನದಿಯಾಗಿರುವ ಭೀಮಾ ನದಿಗೆ ಮಹಾರಾಷ್ಟçದ ಉಜನಿ ಜಲಾಶಯದಿಂದ ನಮ್ಮ ಪಾಲಿನ ನೀರು ಬಿಡುವಂತೆ ಆಗ್ರಹಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೋಂಡಿರುವ ಜೆಡಿಎಸ್ ಮುಖಂಡ ಹೋರಾಟಗಾರ ಶಿವಕುಮಾರ ನಾಟಿಕಾರ ಅವರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು ನಮಗೆ ಅವರ ಆರೋಗ್ಯವು ಬಹಳ ಮುಖ್ಯ ಎಂದು ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ ಕಳವಳ ವ್ಯಕ್ತ ಪಡಿಸಿದರು.ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತ ಪಡಿಸಿ ಮಾತನಾಡುತ್ತಾ ಮಳೆಗಾಲದಲ್ಲಿ ಮಳೆ ಹೆಚ್ಚಾದಾಗ ತಮ್ಮಲ್ಲಿನ ಜಲಾಶಯಗಳನ್ನು ಭರ್ತಿ ಮಾಡಿಕೋಂಡು ಹೆಚ್ಚಾದ ನೀರನ್ನು ಭೀಮಾ ನದಿಗೆ ಹರಿಬಿಡುವ ಮಹಾರಾಷ್ಟçದವರು ಬಚಾವತ್ ಆಯೋಗದ ತಿರ್ಪಿನ ಪ್ರಕಾನ ಇಂತಹ ಕಷ್ಟದ ಸಮಯದಲ್ಲಿ ನಮ್ಮ ಹಕ್ಕಿನ ನೀರನ್ನು ಸಹ ಬಿಡಬೇಕಾಗುತ್ತದೆ. ಇಡೀ ನದಿ ಒಣಗಿ ಹೋಗಿದ್ದರು ಕೂಡ ಹನಿ ನೀರು ಬಿಡದಿರುವುದು ಸರಿಯಲ್ಲ. ಕೂಡಲೇ ಜಿಲ್ಲಾಧಿಕಾರಿಗಳ ಮೂಲಕ ಜಲಸಂಪನ್ಮೂಲ ಸಚಿವರೊಂದಿಗೆ ಮಾತನಾಡಿಸಿ ಮಹಾರಾಷ್ಟ್ರ ಸರ್ಕಾರದಿಂದ ನೀರು…

Read More

ಅಫಜಲಪುರ ಸಂಪೂರ್ಣ ಸ್ಥಬ್ದ | ರಸ್ತೆ ತಡೆ | ಸಂಚಾರ ಅಸ್ತವ್ಯಸ್ತ | ಮುಂದುವರೆದ ಉಪವಾಸ ಸತ್ಯಾಗ್ರಹ ಅಫಜಲಪುರ: ಭೀಮಾ ನದಿಗೆ ಮಹಾರಾಷ್ಟದ ಉಜನಿ ಜಲಾಶಯದಿಂದ ನೀರು ಬಿಡುಗಡೆಗೆ ಆಗ್ರಹಿಸಿ ಪಟ್ಟಣದಲ್ಲಿ ಶಿವಕುಮಾರ ನಾಟಿಕಾರ ನೇತೃತ್ವದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದು ಸತ್ಯಾಗ್ರಹ ೬ನೇ ದಿನವಾದ ಬುದವಾರ ಅಫಜಲಪುರ ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಲಾಗಿತ್ತು.ಅಫಜಲಪುರ ಸಂಪೂರ್ಣವಾಗಿ ಬಂದ್ ಗೆ ಕರೆ ನೀಡಿದರಿಂದ ವಿವಿಧ ಮಠಗಳ ಮಠಾಧೀಶರು, ರೈತರು, ವ್ಯಾಪಾರಸ್ಥರು, ಮಹಿಳಾ ಸಂಘಟನೆ, ರೈತ ಸಂಘಟನೆ ಸೇರಿದಂತೆ ಪಕ್ಷಾತೀತವಾಗಿ ಎಲ್ಲರೂ ಬಂದ್ ನಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತ ಪಡಿಸಿದರುಆದ್ದರಿಂದ ಎಲ್ಲ ಅಂಗಡಿ ಮುಂಗಟ್ಟುಗಳು ಬಂದಾಗಿದ್ದವು, ಬಸ್ ಸಂಚಾರ ಬಂದ್ ನಿಂದಾಗಿ ಪ್ರಯಾಣಿಕರು ಪರದಾಡಿದರು. ವಿಜಯಪುರ ಮಾರ್ಗದ ಬಸ್ ಸಂಚಾರವನ್ನು ಕರಜಗಿ ಕ್ರಾಸ್ ನಲ್ಲಿಯೇ ಸ್ಥಗಿತಗೊಳಿಸಿದ ಪ್ರಯುಕ್ತ ಎರಡು ಕಿ ಮಿ ನಡೆದುಕೊಂಡು ಹೋಗುವಂತಾಗಿ ಮಹಿಳೆಯರು, ವೃದ್ದರು ಪರದಾಡಿದರು.ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ರಾಯಪ್ಪ ಹುಣಸಗಿ ಭೇಟಿ ನೀಡಿ ಭೀಮಾ ನದಿಗೆ ನೀರು ಹರಿಸುವ…

Read More