ಮೋರಟಗಿ: ರಾಜ್ಯ ಸರ್ಕಾರದ ಮಹತ್ತರ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಆಲಮೇಲ್ ತಾಲೂಕು ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಸಲೀಮ್ ಕಣ್ಣಿ ಮತ್ತು ಪ್ರಕಾಶ ಅಡಗಲ ಹಾಗೂ ಕೆಡಿಪಿ ಸದಸ್ಯರಾಗಿ ಆಯ್ಕೆಯಾದ ನಿಂಗನಗೌಡ ಪಾಟೀಲ್ ಅವರನ್ನು ಮಂಗಳವಾರ ಗ್ರಾಮ ಪಂಚಾಯತಿಯ ಸಂಯುಕ್ತ ಆಶ್ರಯದಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಕೆಡಿಪಿ ಸದಸ್ಯ ನಿಂಗನಗೌಡ ಪಾಟೀಲ್ ಮಾತನಾಡಿ, ರಾಜಕೀಯ ಇತಿಹಾಸದಲ್ಲೇ ಮೋರಟಗಿ ಗ್ರಾಮದಲ್ಲಿ ಸರ್ಕಾರ ಅನುಷ್ಠಾನ ಯೋಜನೆಗಳ ಸದಸ್ಯರನ್ನಾಗಿ ಮೂರು ಜನರನ್ನು ಏಕಕಾಲಕ್ಕೆ ಆಯ್ಕೆ ಮಾಡಿದ್ದು ಇತಿಹಾಸ, ಸರ್ಕಾರದ ಯೋಜನೆಗಳ ಮೇಲೆ ನಿಗಾ ವಹಿಸಿ ಸರಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಾಲೂಸಿಸಲು ನಿಗಾ ವಹಿಸಬೇಕು ಮತ್ತು ತ್ರೈಮಾಸಿಕ ಸಭೆಯಲ್ಲಿ ಗ್ರಾಮದ ಮೂಲ ಸೌಕರ್ಯಗಳ ಕುರಿತು ದ್ವನಿ ಎತ್ತಿ ಗ್ರಾಮಗಳನ್ನು ಅಭಿವೃದ್ಧಿ ಪಡಿಸಲು ಶ್ರಮ ವಹಿಸಲು ಶಾಸಕ ಅಶೋಕ ಮನಗೂಳಿ ಅವರು ಜವಾಬ್ದಾರಿ ನೀಡಿದ್ದಾರೆ ಆ ಜವಾಬ್ದಾರಿಯನ್ನು ನಿಬಾಯಿಸಿಕೊಂಡು ಹೋಗುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿ ನಮ್ಮನ್ನು ಆಯ್ಕೆ ಮಾಡಿದ ಸರಕಾರದ ಎಲ್ಲ ಪ್ರತಿನಿದಿಗಳಿಗೆ ಗ್ರಾಮದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.
ಸನ್ಮಾನ ಸಮಾರಾಭದಲ್ಲಿ ಗ್ರಾ. ಪಂ. ಅಧ್ಯಕ್ಷರ ಪ್ರತಿನಿಧಿ ರವಿಕಾಂತ ನಡುವಿನಕೇರಿ, ಉಪಾಧ್ಯಕ್ಷ ಇಸುಫ್ ಮುಲ್ಲಾ, ತಮ್ಮಣ್ಣಸಾಹು ಬೋನಾಳ, ಇನಾಯತ ದೊಡಮನಿ, ಮಲ್ಲು ದುದ್ದಗಿ, ಅಬ್ಬಾಸಲಿ ಬಂಟನೂರ, ಚನ್ನು ಬಳಗಾನೂರ, ರಾಜು ಮಳಗಿ, ನಾಗು ತಳವಾರ, ಭೀಮಾಶಂಕರ ವಿಭೂತಿ, ಜಾವಿದ ಕಣ್ಣಿ, ಸಾಜಿದ ಬಾಗವಾನ, ಸೇರಿದಂತೆ ಗ್ರಾ. ಪಂ. ಸಿಬ್ಬಂದಿ ಗ್ತಾಮಸ್ಥರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

